Amruthadhaare: ಮಾನ್ಯಳನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬಂದ ಭೂಮಿಕಾ; ಅಮೃತಧಾರೆ ಸೀರಿಯಲ್‌ನಲ್ಲಿ ಭೂಮಿಕಾ ರಾಕ್, ಶಕುಂತಲಾ ಶಾಕ್
- Amruthadhaare serial today episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆ ರೋಚಕವಾಗಿರುವ ಸೂಚನೆಯನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರಮೋ ನೀಡಿದೆ. ಆಸ್ಪತ್ರೆಯಲ್ಲಿ ಪ್ರಜ್ಞೆ ತಪ್ಪಿರುವ ಮಾನ್ಯಳನ್ನು ಭೂಮಿಕಾ ಮನೆಗೆ ಕರೆದುಕೊಂಡು ಬಂದಿದ್ದಾಳೆ.
- Amruthadhaare serial today episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆ ರೋಚಕವಾಗಿರುವ ಸೂಚನೆಯನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರಮೋ ನೀಡಿದೆ. ಆಸ್ಪತ್ರೆಯಲ್ಲಿ ಪ್ರಜ್ಞೆ ತಪ್ಪಿರುವ ಮಾನ್ಯಳನ್ನು ಭೂಮಿಕಾ ಮನೆಗೆ ಕರೆದುಕೊಂಡು ಬಂದಿದ್ದಾಳೆ.
(1 / 11)
Amruthadhaare serial today episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆ ರೋಚಕವಾಗಿರುವ ಸೂಚನೆಯನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರಮೋ ನೀಡಿದೆ. ಆಸ್ಪತ್ರೆಯಲ್ಲಿ ಪ್ರಜ್ಞೆ ತಪ್ಪಿರುವ ಮಾನ್ಯಳನ್ನು ಭೂಮಿಕಾ ಮನೆಗೆ ಕರೆದುಕೊಂಡು ಬಂದಿದ್ದಾಳೆ. ಆಸ್ಪತ್ರೆಯಲ್ಲಿಯೇ ಆಕೆಯನ್ನು ಕೋಮಕ್ಕೆ ಜಾರಿಸಬೇಕೆಂದುಕೊಂಡಿದ್ದ ಶಕುಂತಲಾದೇವಿಗೆ ಇದು ದೊಡ್ಡ ಹೊಡೆತವಾಗಿದೆ. ಈ ವಿಷಯ ಕೇಳಿ ಗೌತಮ್‌ಗೂ ಆತಂಕವಾಗಿದೆ.
(2 / 11)
ಇತ್ತೀಚೆಗೆ ಗೌತಮ್ ಮತ್ತು ಭೂಮಿಕಾ ಡೇಟಿಂಗ್‌ಗೆ ಎಂದು ಹೊರಕ್ಕೆ ಹೋಗಿದ್ದರು. ಪಾರ್ಕ್‌ನಲ್ಲಿದ್ದ ವೇಳೆ ಕಾರಿಗೆ ಬಂದು ಆನಂದ್‌ನಲ್ಲಿ ಲವ್ ಟಿಪ್ಸ್ ಪಡೆಯುತ್ತ ಇದ್ದ ಸಂದರ್ಭದಲ್ಲಿ ಸಾರ್ವಜನಿಕರೊಬ್ಬರು ಕಾರನ್ನು ಸ್ವಲ್ಪ ಹಿಂದೆ ಪಾರ್ಕ್ ಮಾಡುವಂತೆ ತಿಳಿಸುತ್ತಾರೆ.
(3 / 11)
ಈ ಸಮಯದಲ್ಲಿ ಕಾರು ಚಾಲು ಮಾಡುವ ಸಮಯದಲ್ಲಿ ರೌಡಿ ಕೈಯಿಂದ ತಪ್ಪಿಸಿಕೊಂಡು ಓಡಿಕೊಂಡು ಬರುತ್ತಿದ್ದ ಮಾನ್ಯ ಈ ಕಾರಿಗೆ ಡಿಕ್ಕಿ ಹೊಡೆದು ಬಿದ್ದು ಪ್ರಜ್ಞೆ ತಪ್ಪುತ್ತಾಳೆ. ಅಲ್ಲಿ ಮಾನ್ಯಳನ್ನು ನೋಡಿ ಗೌತಮ್‌ಗೆ ದಿಗ್ಭಮೆಯಾಗುತ್ತದೆ. ಮಾನ್ಯ ಮತ್ತು ಗೌತಮ್‌ಗೆ ಸಂಬಂಧಪಟ್ಟ ಹಳೆಯ ಸ್ಟೋರಿ ಯಾವುದೋ ಇದೆ.
(4 / 11)
ಈ ಮಾನ್ಯಳನ್ನು ಶಕುಂತಲಾದೇವಿ ಬಂಧನಲ್ಲಿಟ್ಟಿರುತ್ತಾರೆ. ಈ ವಿಷಯ ಗೌತಮ್‌ಗೆ ತಿಳಿದಿರುವುದಿಲ್ಲ. ಆ ಬಂಧನದಿಂದ ಪಾರಾಗಿ ಬರುವ ಸಮಯದಲ್ಲಿ ಮಾನ್ಯ ಗೌತಮ್ ಕಾರಿಗೆ ಡಿಕ್ಕಿ ಹೊಡೆಯುತ್ತಾಳೆ. ಈ ಮೂಲಕ ಮತ್ತೆ ಗೌತಮ್ ಮತ್ತು ಮಾನ್ಯ ಮುಖಾಮುಖಿಯಾಗುತ್ತಾರೆ. ಶಕುಂತಲಾದೇವಿ ಸ್ಟೋರಿ ತಿಳಿಯುವ ಸಮಯವಿದು.
(5 / 11)
ಈ ರೀತಿ ಆಸ್ಪತ್ರೆಗೆ ಸೇರಿದ ಮಾನ್ಯಳಿಗೆ ಪ್ರಜ್ಞೆ ಬರುವ ಮೊದಲೇ ಶಕುಂತಲಾದೇವಿ ಗೌತಮ್ ಮತ್ತು ಭೂಮಿಕಾಳನ್ನು ಆಸ್ಪತ್ರೆಯಿಂದ ಹೊರಕ್ಕೆ ಕಳುಹಿಸುತ್ತಾರೆ. ಮಾನ್ಯಳಿಗೆ ಏನಾದರೂ ಗತಿ ಕಾಣಿಸಬೇಕು ಎಂದು ಶಕುಂತಲಾದೇವಿ ಪ್ಲಾನ್ ಮಾಡುತ್ತಾರೆ.
(6 / 11)
ಅಮೃತಧಾರೆ ಧಾರಾವಾಹಿಯಲ್ಲಿ ಇಂದು ಮತ್ತೊಂದು ತಿರುವು ಎದುರಾಗಿದೆ. ಆಸ್ಪತ್ರೆಯಲ್ಲಿದ್ದ ಮಾನ್ಯಳನ್ನು ಭೂಮಿಕಾ ಮನೆಗೆ ಕರೆದುಕೊಂಡು ಬಂದಿದ್ದಾಳೆ. ಇದನ್ನು ನೋಡಿ ಗೌತಮ್ ಮತ್ತು ಶಕುಂತಲಾದದೇವಿಗೆ ದಿಗ್ಭಮೆಯಾಗುತ್ತದೆ.
(7 / 11)
ಆಸ್ಪತ್ರೆಯ ಬೆಡ್‌ನಲ್ಲಿರುವ ಮಾನ್ಯ ಕಾಣಿಸುವುದಿಲ್ಲ. ಆಸ್ಪತ್ರೆಯವರಲ್ಲಿ ಶಕುಂತಲಾದೇವಿ ವಿಚಾರಿಸುತ್ತಾರೆ. "ಅವರು ಆಗಲೇ ಡಿಸ್‌ಚಾರ್ಜ್ ಆಗಿ ಹೋದ್ರು" ಎಂದು ಆಸ್ಪತ್ರೆಯವರು ಮಾಹಿತಿ ನೀಡುತ್ತಾರೆ. ಹೆಂಗೋ ಪೀಡೆ ತಪ್ಪಿತ್ತು ಎಂದು ಶಕುಂತಲಾದೇವಿ ಖುಷಿಯಾಗುತ್ತಾರೆ.
(8 / 11)
ಆದರೆ, ಮನೆಗೆ ಬಂದಾಗ ಅಚ್ಚರಿ. ಅಲ್ಲಿ ಭೂಮಿಕಾ ಒಂದು ವಿಷಯ ಹೇಳುತ್ತಾಳೆ. "ಆಸ್ಪತ್ರೆಯಲ್ಲಿರುವ ಭೂಮಿಕಾಳಿಗೆ ಪ್ರಜ್ಞೆ ಬಂದಿದೆ" ಎಂದು ಭೂಮಿಕಾ ಹೇಳುತ್ತಾರೆ. "ಹೌದು ಅದು ನಮಗೆ ಗೊತ್ತು, ಆಕೆ ಡಿಸ್‌ಚಾರ್ಜ್ ಕೂಡ ಆಗಿದ್ದಾಳೆ" ಎಂದು ಶಕುಂತಲಾದೇವಿ ಹೇಳುತ್ತಾರೆ.
(9 / 11)
"ಸರ್ ಪ್ರೈಸ್ ಏನಂದ್ರೆ ಡಿಸ್‌ಚಾರ್ಜ್ ಆಗಿರುವುದು ಮಾತ್ರವಲ್ಲ, ಆಕೆ ಈಗ ಇದೇ ಮನೆಯಲ್ಲಿದ್ದಾಳೆ" ಎಂದು ಭೂಮಿಕಾ ಹೇಳಿದಾಗ ಶಕುಂತಲಾದೇವಿ ಆಶ್ಚರ್ಯಗೊಳ್ಳುತ್ತದೆ. ಗೌತಮ್‌ಗೂ ಇದು ಶಾಕಿಂಗ್ ವಿಷಯ. ಇದೇ ಸಮಯದಲ್ಲಿ ಮಾನ್ಯ ಹೊರಕ್ಕೆ ಬರುತ್ತಾಳೆ. ಆಕೆ ಬರುವ ಗತ್ತು ನೋಡಿದರೆ ಮುಂದೆ ಎಲ್ಲರಿಗೂ ಕಾದಿದೆ ಮಾರಿಹಬ್ಬ ಎನ್ನುವ ರೀತಿ ಇದೆ.
(10 / 11)
ಈ ಮಾನ್ಯ ಯಾರು? ಗೌತಮ್‌ಗೆ ಮಾನ್ಯಳನ್ನು ಕಂಡರೆ ದ್ವೇಷ ಏಕೆ? ಹಳೆಯ ಪ್ರೇಮಿಯಾ? ಶಕುಂತಲಾದೇವಿ ಮಾನ್ಯಳನ್ನು ಬಂಧನದಲ್ಲಿಟ್ಟಿರುವುದು ಏಕೆ? ಭೂಮಿಕಾ ಮುಂದೆನು ಮಾಡ್ತಾರೆ? ಹೀಗೆ ಹಲವು ಪ್ರಶ್ನೆಗಳನ್ನು ಅಮೃತಧಾರೆ ಸೀರಿಯಲ್ ಹುಟ್ಟು ಹಾಕಿದೆ.
ಇತರ ಗ್ಯಾಲರಿಗಳು