ಕನ್ನಡ ಸುದ್ದಿ  /  Photo Gallery  /  Televison News Amruthadhaare Serial Today Episode Manya Ready To Share Truth With Bhumika Pcp

Amruthadhaare: ಭೂಮಿಕಾಳ ಮುಂದೆ ಸತ್ಯ ಹೇಳೋಕ್ಕೆ ಮುಂದಾದ ಮಾನ್ಯ; ಶಾಸ್ತ್ರಿಗಳು ಹೇಳಿದ ಗಂಡಾಂತರದ ಕುರಿತು ಪ್ರೇಕ್ಷಕರಿಗೆ ಆತಂಕ

  • Amruthadhaare Serial Today Episode: ಗೌತಮ್‌ ಮನೆಗೆ ಈಗ ಮಾನ್ಯಳ ಪ್ರವೇಶ ಆಗಿದೆ. ಶಕುಂತಲಾದೇವಿಯಿಂದ ಆಗಿರುವ ತೊಂದರೆ ಕುರಿತು ಮತ್ತು ಇತರೆ ಎಲ್ಲಾ ವಿಚಾರವನ್ನು ಭೂಮಿಕಾ ಮುಂದೆ ಮಾನ್ಯ ಹೇಳಲು ಮುಂದಾಗಿರುವ ವಿಷಯ ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಅಮೃತಧಾರೆ ಸೀರಿಯಲ್‌ ಪ್ರಮೋದಿಂದ ಗೊತ್ತಾಗಿದೆ.

ಮಾನ್ಯ ಇಲ್ಲಿಗೆ ಯಾಕೆ ಬಂದೆ. ಇಲ್ಲಿಂದ ಹೊರಟೋಗು ಎಂದು ಶಕುಂತಲಾದೇವಿ ಹೇಳುತ್ತಾರೆ. ಅದಕ್ಕೆ ಮಾನ್ಯ "ನಾನು ಇಲ್ಲಿಂದ ಹೋಗಲು ಬಂದದ್ದಲ್ಲ. ಗೋಡಾನ್‌ನಲ್ಲಿ ಕೂಡಿ ಹಾಕಿ ಕೊಡಬಾರದ ಟಾರ್ಚರ್‌ ಎಲ್ಲಾ ಕೊಟ್ಟಿದ್ದೀರಿ" ಎಂದು ಮಾನ್ಯ ಹೇಳುತ್ತಾಳೆ.
icon

(1 / 10)

"ನನಗೆ ಸಾಕಷ್ಟು ಕಷ್ಟ ಕೊಟ್ಟಿದ್ದೀರಿ. ಈ ವಿಷಯ ಗೌತಮ್‌ನಲ್ಲಿ ಹೇಳುತ್ತೇನೆ ಎಂದುಕೊಂಡಿದ್ದೀರಾ? ಆತನಲ್ಲಿ ಹೇಳಿದರೆ ಏನು ಪ್ರಯೋಜನವಿಲ್ಲ" ಎಂದು ಮಾನ್ಯ ಹೇಳುತ್ತಾಳೆ. "ಹಾಗಾದರೆ, ಏನೇ ಮಾಡ್ತಿಯಾ" ಎಂದು ಶಕುಂತಲಾದೇವಿ ಕೇಳುತ್ತಾರೆ. 
icon

(2 / 10)

ನಾನು ಈ ವಿಷಯವನ್ನು ಗೌತಮ್‌ನಲ್ಲಿ ಹೇಳೋದಿಲ್ಲ. ಭೂಮಿಕಾಳ ಬಳಿ ಹೇಳುತ್ತೇನೆ ಎಂದು ಮಾನ್ಯ ಹೇಳಿದಾಗ ಶಕುಂತಲಾದೇವಿಗೆ ಭಯವಾಗುತ್ತದೆ. ಇವಿಷ್ಟು ವಿಚಾರ ಜೀಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರಮೋದಿಂದ ತಿಳಿದುಬಂದಿದೆ.
icon

(3 / 10)

ಇದೇ ಸಮಯದಲ್ಲಿ ಈ ಹಿಂದಿನ ಸಂಚಿಕೆಯಲ್ಲಿ ಸದಾಶಿವ ಅವರು ಶಾಸ್ತ್ರಿಗಳ ಬಳಿಗೆ ಹೋಗಿದ್ದರು. ಭೂಮಿಕಾಳ ಗ್ರಹಾಗತಿ ಚೆನ್ನಾಗಿಲ್ಲ ಎಂದು ಶಾಸ್ತ್ರಿಗಳು ಹೇಳಿರುವುದರಿಂದ ಸದಾಶಿವ ಆತಂಕ್ಕೆ ಒಳಗಾಗಿದ್ದರು.
icon

(4 / 10)

ಇಲ್ಲಿ ಮಾನ್ಯಳ ವಿಷಯ ಭೂಮಿಕಾಳಿಗೆ ತಿಳಿದರೆ ಏನಾಗಲಿದೆ? ಗೌತಮ್‌ ಮತ್ತು ಶಕುಂತಲಾದೇವಿ ಈಕೆಯ ವಿರುದ್ಧಕ್ಕೆ ನಿಲ್ಲಲಿದ್ದಾರೆಯೇ? ಎಂಬ ಪ್ರಶ್ನೆಯೂ ಇದೆ.
icon

(5 / 10)

ಇದೇ ಸಮಯದಲ್ಲಿ ಭೂಮಿಕಾಳಿಗೆ ಗಂಡಾಂತರ ಇದೆ ಎಂದು ಶಾಸ್ತ್ರಿಗಳು ಹೇಳಿರುವುದರಿಂದ ಭೂಮಿಕಾಳನ್ನು ಸಾಯಿಸಲು ಶಕುಂತಲಾದೇವಿ ಪ್ರಯತ್ನಿಸಲಿದ್ದಾರ ಎನ್ನುವ ಪ್ರಶ್ನೆಯೂ ಎದ್ದಿದೆ. 
icon

(6 / 10)

ಈ ಪ್ರಮೋಗೆ ಪ್ರೇಕ್ಷಕರು ನಾನಾ ಬಗೆಯ ಕಾಮೆಂಟ್‌ ಮಾಡಿದ್ದಾರೆ. ನೀವೇನೋ ಸತ್ಯವನ್ನು ಹೇಳುತ್ತೀರ, ಆದರೆ, ಹೇಳಲು ಡೈರೆಕ್ಟರ್‌ ಬಿಡಬೇಕಲ್ವ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. 
icon

(7 / 10)

ಮಾನ್ಯ ನಿನ್ನಿಂದ ಆದರೂ ಈ ಅತ್ತೆ ಅನ್ನೋ ಕ್ಯಾರೆಕ್ಟರ್‌ ಬದ್ಲಾಗಿ ಒಳ್ಳೆ  ಕ್ಯಾರೆಕ್ಟರ್‌ ಇರುವ ಅತ್ತೆಯಾಗ್ಲಿ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. "ಸೂಪರ್‌ ಮಾನ್ಯ ಭೂಮಿಕಾಳಲ್ಲಿ ಹೇಳೋದೇ ಸರಿ" "ವಿಲನ್‌ಗೆ ವಿಲನ್‌" "ಇಷ್ಟು ಬೇಗ ಹೇಳಲ್ಲ, ಸ್ವಲ್ಪ ದಿನ ಕಾಯಿಸ್ತಾರೆ" "ಮಾನ್ಯ ಅವರೇ ಭೂಮಿಕಾಳಿಗೆ ಏನೂ ತೊಂದರೆಗೆ ಸಿಲುಕಿಸಬೇಡಿ" ಎಂದೆಲ್ಲ ಪ್ರೇಕ್ಷಕರು ಕಾಮೆಂಟ್‌ ಮಾಡಿ ಸೀರಿಯಲ್‌ ಕುರಿತು ತಮ್ಮ ಕಾತರ ಹೆಚ್ಚಿಸಿಕೊಂಡಿದ್ದಾರೆ. 
icon

(8 / 10)

ಇದೇ ಸಮಯದಲ್ಲಿ ಸಾಕಷ್ಟು ಪ್ರೇಕ್ಷಕರು "ಭೂಮಿಕಾಳಿಗೆ ಗಂಡಾಂತರ ಇದೆ. ಇನ್ನೇನು ಸಮಸ್ಯೆ ಕಾದಿದೆಯೋ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಅಮೃತಧಾರೆ ಸೀರಿಯಲ್‌ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸಿಕೊಂಡು ಮುಂದುವರೆಯುತ್ತಿದೆ.
icon

(9 / 10)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(10 / 10)

IPL_Entry_Point

ಇತರ ಗ್ಯಾಲರಿಗಳು