ಕನ್ನಡ ಸುದ್ದಿ  /  Photo Gallery  /  Televison News Amruthadhaare Serial Today Episode March 1 Jaidev Slapped Malli, Bhumika Shows Her Power Pcp

Amruthadhaare: ಮಲ್ಲಿ ಕೆನ್ನೆಗೆ ಛಟೀರನೇ ಹೊಡೆದ ಜೈದೇವ್‌ ಚಳಿ ಬಿಡಿಸಿದಳು ಭೂಮಿಕಾ; ಛಾಯಾ ಸಿಂಗ್‌ ಅಭಿನಯ ಸೂಪರ್‌ ಅಂದ್ರು ಪ್ರೇಕ್ಷಕರು

  • Amruthadhaare Today Episode: ಝೀ ಕನ್ನಡ ವಾಹಿನಿ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಜೈದೇವ್‌ ಮಲ್ಲಿಯ ಕೆನ್ನೆಗೆ ಹೊಡೆಯುತ್ತಾನೆ. ಈ ವಿಷಯ ತಿಳಿದ ಭೂಮಿಕಾ ಚಂಡಿಯಾಗುತ್ತಾಳೆ. ಮನೆಯಿಂದ ಮಲ್ಲಿಯನ್ನು ಹೇಗಾದರೂ ಹೊರಕ್ಕೆ ಕಳುಹಿಸಲು ಬಯಸುವ ಶಕುಂತಲಾದೇವಿಯೇ ಭಯಪಡುವಂತೆ ಜೈದೇವ್‌ನ ಚಳಿ ಬಿಡಿಸುತ್ತಾಳೆ.

Amruthadhaare Today Episode: ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಪಾರ್ಥನ ಒತ್ತಾಯಕ್ಕೆ ಮಲ್ಲಿಗೆ ಜೈದೇವ್‌ ಸಿಹಿ ತಿನ್ನಿಸಿದ್ದ. ಮಲ್ಲಿಯೂ ಜೈದೇವ್‌ಗೆ ಸಿಹಿ ತಿನಿಸಿದ್ದಳು. ಹೇಗಾದರೂ ಮಾಡಿ ಮಲ್ಲಿಯನ್ನು ಮನೆಯಿಂದ ಹೊರಕ್ಕೆ ಕಳುಹಿಸು ಎಂದು ರೋಷದಿಂದ ಶಕುಂತಲಾದೇವಿ ಜೈದೇವ್‌ಗೆ ಹೇಳಿರುತ್ತಾಳೆ.
icon

(1 / 10)

ಕೆಲಸದವಳಿಗೆ ನಾನು ಅಡುಗೆ ಮಾಡಿ ಬಡಿಸಬೇಕಾ? ಎಂತಹ ಸ್ಥಿತಿಗೆ ತಂದೆ ಜೈದೇವ್‌, ಅವಳು ಈ ಮನೆಯಲ್ಲಿ ಇರಬಾರದು ಅಷ್ಟೇ ಎಂದು ಜೈದೇವ್‌ಗೆ ಶಕುಂತಲಾದೇವಿ ಹೇಳಿರುತ್ತಾರೆ. ಅಮೃತಧಾರೆ ಸೀರಿಯಲ್‌ನ ಶುಕ್ರವಾರದ ಸಂಚಿಕೆಯಲ್ಲಿ ಜೈದೇವ್‌ ಮಲ್ಲಿ ಮೇಲೆ ದೌರ್ಜನ್ಯ ಎಸಗುತ್ತಾನೆ. ಈ ಕುರಿತು ಝೀ ಕನ್ನಡ  ಬಿಡುಗಡೆ ಮಾಡಿರುವ ಪ್ರಮೋದಲ್ಲಿ ಸಾಕಷ್ಟು ವಿವರ ದೊರಕಿದೆ.
icon

(2 / 10)

"ಬೇಜಾನ್‌ ಖುಷಿಯಲ್ಲಿ ಇರೋ ಆಗಿದೆ. ನನ್ನ ನೋಡಿ ಮಜಾ ತಗೋತಾ ಇದ್ದೀಯಲ್ವ? ನಿನ್ನ ಕುತ್ತಿಗೆಗೆ ನಾನು ತಾಳಿ ಕಟ್ಟಿರಬಹುದು. ನಾವಿಬ್ಬರು ಒಂದಾಗೋ ಛಾನ್ಸೇ ಇಲ್ಲ" ಎಂದು ಜೈದೇವ್‌ ಹೇಳುತ್ತಾನೆ.
icon

(3 / 10)

ಈ ಸಮಯದಲ್ಲಿ ಅಳು ಮುಖದಲ್ಲಿ ಮಲ್ಲಿ "ಎಲ್ಲರೂ ಹೇಳ್ದಂಗೆ..." ಎಂದು ಏನೋ ಹೇಳಲು ಹೊರಟಾಗ ಕೋಪದಿಂದ ಜೈದೇವ್‌ ಮಲ್ಲಿಯ ಕೆನ್ನೆಗೆ ಛಟೀರನೇ ಹೊಡೆಯುತ್ತಾನೆ. ಹೊಡೆತದ ಏಟಿಗೆ ಮಲ್ಲಿ ಹಾಸಿಗೆಯ ಮೇಲೆ ಬೀಳುತ್ತಾಳೆ. ಆಕೆಯ ಕೆನ್ನೆಯ ಮೇಲೆ ದಪ್ಪಗೆ ಆತ ಹೊಡೆದ ಏಟು ಇರುತ್ತದೆ. 
icon

(4 / 10)

ಸ್ವಲ್ಪ ಸಮಯದ ಬಳಿಕ ಮಲ್ಲಿ ಕೋಣೆಗೆ ಭೂಮಿಕಾ ಬರುತ್ತಾಳೆ. "ಮಲ್ಲಿ ನಿನಗೆ ತುಸು ಹಾಲು ತಂದಿದ್ದೇನೆ" ಎಂದು ಭೂಮಿಕಾ ಬಂದಾಗ ಮಲ್ಲಿ ಅಳುತ್ತಾ ಇರುತ್ತಾಳೆ. "ಮಲ್ಲಿ ಏನಾಯ್ತು, ಯಾಕೆ ಅಳ್ತಾ ಇದ್ದೀಯಾ?" ಎಂದು ಕೇಳುತ್ತಾಳೆ. ಈ ಸಮಯದಲ್ಲಿ ಮಲ್ಲಿ ಕೆನ್ನೆ ಮೇಲೆ ಜೈದೇವ್‌ ಹೊಡೆದ ಏಟಿನ ಗುರುತು ಕಾಣಿಸುತ್ತದೆ. 
icon

(5 / 10)

"ಏನಿದು ಕೆನ್ನೆ ಮೇಲೆ ಮಾರ್ಕ್‌? ಮಲ್ಲಿ ಜೈದೇವ್‌ ಹೊಡೆದ್ರ ನಿನ್ನ?" ಎಂದು ರೋಷದಿಂದ ಭೂಮಿಕಾ ಕೇಳುತ್ತಾಳೆ. "ಬಾ ನನ್ನ ಜತೆ ಇವತ್ತೇ, ಇತ್ಯರ್ಥ ಆಗಬೇಕು" ಎಂದು ಮಲ್ಲಿಯನ್ನು ಎಳೆದುಕೊಂಡು ಹಾಲ್‌ಗೆ ಬರುತ್ತಾಳೆ. 
icon

(6 / 10)

ಹಾಲ್‌ನಲ್ಲಿ ಎಲ್ಲರೂ ಇರುತ್ತಾರೆ. "ಜೈದೇವ್‌ ಅವರೇ" ಎಂದು ಭೂಮಿಕಾ ಜೋರಾಗಿ ಕರೆಯುತ್ತಾಳೆ. "ಯಾಕೆ ಏನಾಯ್ತು?" ಎಂದು ಜೈದೇವ್‌ ಹೇಳುತ್ತಾನೆ. ಹಾಲ್‌ನಲ್ಲಿ ಎಲ್ಲರೂ ಸೇರುತ್ತಾರೆ. "ಎಷ್ಟು ಧೈರ್ಯ ನಿಮಗೆ, ಮಲ್ಲಿ ಮೇಲೆ ಕೈ ಮಾಡೋಕ್ಕೆ? ಮಲ್ಲಿ ಮೇಲೆ ಕೈ ಮಾಡುವಷ್ಟು ಅಧಿಕಾರ ಚಲಾಯ್ತಿರ?" ಎಂದು ಭೂಮಿಕಾ ಅಬ್ಬರಿಸುತ್ತಾಳೆ. "ಮಲ್ಲಿ ಮೇಲೆ ಅಧಿಕಾರ ಚಲಾಯಿಸಲು ನಿಮಗೆ ಯಾರು ರೈಟ್ಸ್‌ ಕೊಟ್ಟೋರು?" ಎಂದು ಕೇಳುತ್ತಾಳೆ. 
icon

(7 / 10)

ಮಲ್ಲಿ ಪರ ಭೂಮಿಕಾ ನಿಂತಿರುವುದಕ್ಕೆ ನೆಟ್ಟಿಗರು ಖುಷಿ ವ್ಯಕ್ತಪಡಿಸಿದ್ದಾರೆ. "ಎಲ್ಲರೂ ಭೂಮಿಕಾ ರೀತಿ ಇರಬೇಕು" ಆಕ್ಟಿನ್ಗ್ ಮಾತ್ರ ಸುಪರ್ಬ್ ಛಾಯಾ ಸಿಂಗ್ ಅವರದು" "ಭೂಮಿಕಾ ನಟನೆ ನೋಡಿ ಖುಷಿಯಾಯ್ತು" "ಎಲ್ಲರ ಮನೆಯಲ್ಲೂ ಭೂಮಿಕಾ ರೀತಿ ಇರಬೇಕು, ಅತ್ತೆಯ ಅಧಿಕಾರ ಕಡಿಮೆಯಾಗುತ್ತದೆ" ಎಂದೆಲ್ಲ ಕಿರುತೆರೆ ಪ್ರೇಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡಿದ್ದಾರೆ. 
icon

(8 / 10)

ಅಮೃತಧಾರೆ ಒಳ್ಳೆ ಕಂಟೆಂಟ್‌ ಇರೋ ಸೀರಿಯಲ್‌. ಹೆಣ್ಣು ಮಕ್ಕಳಿಗೆ ಗೌರವ ನೀಡುವ ಕುರಿತು, ಹೆಣ್ಣು ಮಕ್ಕಳು ಹೇಗಿರಬೇಕು ಎಂದೆಲ್ಲ ಕಲಿಯಬಹುದು" ಎಂದೆಲ್ಲ ಪ್ರೇಕ್ಷಕರು ಕಾಮೆಂಟ್‌ ಮಾಡಿದ್ದಾರೆ. ಒಟ್ಟಾರೆ ಮಲ್ಲಿಯನ್ನು ಮದುವೆಯಾದ ಬಳಿಕ ಹೇಗೆ ಬೇಕಾದರೂ ಇರಬಹುದು ಎಂಬ ಜೈದೇವ್‌ ಅಹಂಗೆ ಪೆಟ್ಟು ಬಿದ್ದಿದೆ. ಮನೆಯಲ್ಲಿ ಅತ್ತೆ ಅಧಿಕಾರ ಚಲಾಯಿಸಬಹುದು ಎಂದುಕೊಂಡ ಶಕುಂತಲಾದೇವಿಗೂ ಶಾಸ್ತ್ರಿಯಾಗಿದೆ. ಒಟ್ಟಾರೆ, ಇಂದಿನ ಸಂಚಿಕೆ ಕುತೂಹಲ ಹೆಚ್ಚಿಸಿರುವುದಂತೂ ನಿಜ.
icon

(9 / 10)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(10 / 10)

IPL_Entry_Point

ಇತರ ಗ್ಯಾಲರಿಗಳು