ಕನ್ನಡ ಸುದ್ದಿ  /  Photo Gallery  /  Televison News Amruthadhaare Serial Today Episode Police Entry To Arrest Jaidev Who Complaint Pcp

Amruthadhaare: ಮಲ್ಲಿ ಮೇಲೆ ದೌರ್ಜನ್ಯ, ಪೊಲೀಸ್‌ ಎಂಟ್ರಿ; ಭೂಮಿಕಾ ಹೆಸರಲ್ಲಿ ಕಂಪ್ಲೆಟ್‌ ನೀಡಿದ್ಯಾರು? ಜೈಲು ಸೇರ್ತಾನ ಕೇಡಿ ಜೈದೇವ್‌

  • Amruthadhaare Serial today episode: ಒಂದೆಡೆ ಮಲ್ಲಿ ಮೇಲೆ ದೌರ್ಜನ್ಯ ಎಸಗಿದ ಗೌತಮ್‌ ವಿರುದ್ಧ ಭೂಮಿಕಾ ಕಿಡಿಕಾರುತ್ತಾಳೆ. ಇದೇ ಸಮಯದಲ್ಲಿ ಮನೆಗೆ ಪೊಲೀಸರ ಎಂಟ್ರಿ ಆಗುತ್ತದೆ. ಭೂಮಿಕಾ ಹೆಸರಲ್ಲಿ ಶಕುಂತಲಾದೇವಿ ಪೊಲೀಸರಿಗೆ ದೂರು ನೀಡಿದ್ರ? ಎಂಬ ಅನುಮಾನದಲ್ಲಿ ಪ್ರೇಕ್ಷಕರಿದ್ದಾರೆ.

Amruthadhaare Serial today episode: ಝೀ ಕನ್ನಡವು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರಮೋ ಬಿಡುಗಡೆ ಮಾಡಿದೆ. ಒಂದೆಡೆ ಮಲ್ಲಿ ಮೇಲೆ ದೌರ್ಜನ್ಯ ಎಸಗಿದ ಗೌತಮ್‌ ವಿರುದ್ಧ ಭೂಮಿಕಾ ಕಿಡಿಕಾರುತ್ತಾಳೆ. ಇದೇ ಸಮಯದಲ್ಲಿ ಮನೆಗೆ ಪೊಲೀಸರ ಎಂಟ್ರಿ ಆಗುತ್ತದೆ. ಭೂಮಿಕಾ ಹೆಸರಲ್ಲಿ ಶಕುಂತಲಾದೇವಿ ಪೊಲೀಸರಿಗೆ ದೂರು ನೀಡಿದ್ರ? ಎಂಬ ಅನುಮಾನದಲ್ಲಿ ಪ್ರೇಕ್ಷಕರಿದ್ದಾರೆ.
icon

(1 / 13)

ಮಲ್ಲಿ ಕೆನ್ನೆಗೆ ಜೈದೇವ್‌ ಹೊಡೆಯುತ್ತಾನೆ. ಮಲ್ಲಿ ಅಳುತ್ತಾ ಇರುತ್ತಾಳೆ. ಆಗ ಅಲ್ಲಿಗೆ ಬಂದ ಭೂಮಿಕಾಳಿಗೆ ಮಲ್ಲಿಯ ಕೆನ್ನೆ ಮೇಲಿರುವ ಗಾಯ ಕಾಣಿಸುತ್ತದೆ. ರಣಚಂಡಿಯಾಗುತ್ತಾಳೆ ಮಲ್ಲಿ. ತಕ್ಷಣ ಮಲ್ಲಿಯ ಕೈ ಹಿಡಿದುಕೊಂಡು ಹಾಲ್‌ಗೆ ಬಂದು ಜೈದೇವ್‌ ಅವರೇ ಎಂದು ಕರೆಯುತ್ತಾಳೆ.  ಜೈದೇವ್‌ ಮತ್ತು ಇತರರು ಬರುತ್ತಾರೆ.  
icon

(2 / 13)

"ಎಷ್ಟು ಧೈರ್ಯ ನಿಮಗೆ ಮಲ್ಲಿ ಮೇಲೆ ಕೈ ಮಾಡೋಕ್ಕೆ" ಎಂದು ಭೂಮಿಕಾ ಅಬ್ಬರಿಸುತ್ತಾಳೆ. "ಮಲ್ಲಿ ಮೇಲೆ ಕೈ ಮಾಡೋಕ್ಕೆ ನಿಮಗೆ ಯಾರು ರೈಟ್ಸ್‌ ಕೊಟ್ಟೋರು?" ಎಂದು ಕೋಪದಿಂದ ಕೇಳುತ್ತಾಳೆ ಭೂಮಿಕಾ.
icon

(3 / 13)

"ಸಾಕು... ನಾನು ನೋಡ್ತಾ ಇದ್ದೇನೆ. ಅತ್ತಿಗೆ ಎಂಬ ಒಂದೇ ಕಾರಣಕ್ಕೆ ಸುಮ್ಮನಿದ್ದೀನಿ ಇಲ್ಲಾಂದ್ರೆ..." ಎಂದು ಜೈದೇವ್‌ ಅಬ್ಬರಿಸುತ್ತಾನೆ.
icon

(4 / 13)

"ನಾನೂ ಕೂಡ, ಮೈದುನ ಅನ್ನೋ ಕಾರಣಕ್ಕೆ ಸುಮ್ಮನೆ ಬಿಟ್ಟಿದ್ದೇನೆ. ಇಲ್ಲಾಂದ್ರೆ ಪೊಲೀಸ್‌ ಕಂಪ್ಲೆಟ್‌ ಕೊಡ್ತಾ ಇದ್ದೆ" ಎಂದು ಭೂಮಿಕಾಳು ಜೋರಾಗಿ ಹೇಳುತ್ತಾಳೆ. ಒಟ್ಟಾರೆ ಇವರಿಬ್ಬರ ನಡುವೆ ಇಂದು ಕಠಿಣವಾದ ಮಾತುಕತೆ ನಡೆದಿದೆ. 
icon

(5 / 13)

ಆದರೆ, ಅಂತಿಮವಾಗಿ ಒಂದು ಟ್ವಿಸ್ಟ್‌ ಇದೆ. ಮನೆಗೆ ಪೊಲೀಸರು ಎಂಟ್ರಿ ನೀಡಿದ್ದಾರೆ. "ಇಲ್ಲಿ ಜೈದೇವ್‌ ಅನ್ನೋರು ಯಾರು?" ಎಂದು ಪೊಲೀಸರು ಕೇಳುತ್ತಾರೆ.  
icon

(6 / 13)

"ಜೈದೇವ್‌ ಅನ್ನೋರು ಮಲ್ಲಿ ಎಂಬವರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂಬ ದೂರು ಬಂದಿದೆ" ಎಂದು ಪೊಲೀಸರು ಹೇಳುತ್ತಾರೆ. 
icon

(7 / 13)

ಶಕುಂತಾಲದೇವಿ ಅದಕ್ಕೆ "ಏನು ಹೇಳ್ತಾ ಇದ್ದೀರ ಇನ್‌ಸ್ಪೆಕ್ಟರ್‌, ನಿಮಗೆ ಕಂಪ್ಲೆಟ್‌ ನೀಡಿದ್ದು ಯಾರು" ಎಂದು ಕೇಳುತ್ತಾರೆ. 
icon

(8 / 13)

ಭೂಮಿಕಾ ಅನ್ನೋರು ಕಂಪ್ಲೆಟ್‌ ನೀಡಿದ್ದಾರೆ ಎಂದು ಪೊಲೀಸರು ಹೇಳಿದಾಗ ಸ್ವತಃ ಭೂಮಿಕಾ ಅಚ್ಚರಿಗೆ ಒಳಗಾಗುತ್ತಾಳೆ. ಗೌತಮ್‌ ಮುಖದಲ್ಲೂ ಆತಂಕ ಕಾಡುತ್ತದೆ. 
icon

(9 / 13)

ಗೌತಮ್‌ಗೆ ಭೂಮಿಕಾಳ ಬಗ್ಗೆ ದ್ವೇಷ ಬರುವಂತೆ ಮಾಡಲು ಪೊಲೀಸರಿಗೆ ಸ್ವತಃ ಶಕುಂತಲಾದೇವಿಯೇ ಭೂಮಿಕಾಳ ಹೆಸರಲ್ಲಿ ಪೊಲೀಸರಿಗೆ ಫೋನ್‌ ಮಾಡಿರಬಹುದೇ ಎಂಬ ಸಂದೇಹ ಪ್ರೇಕ್ಷಕರನ್ನು ಕಾಡುತ್ತಿದೆ. 
icon

(10 / 13)

ಪ್ರೇಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ ಈ ಕುರಿತು ಚರ್ಚಿಸುತ್ತಿದ್ದಾರೆ. "ಪಕ್ಕ ಈ ಕುತಂತ್ರ ನಾ ಭೂಮಿ  ಅತ್ತೆ  ಕಾರಣ. ಕಂಪ್ಲೇಟ್ ಮಾಡಿ ಭೂಮಿನಾ ಕೆಟ್ಟೊಳು ಅಂತಾ ಪ್ರೂವ್‌ ಮಾಡೋಕ್ಕೆ ಪ್ಲಾನ್ ಮಾಡಿದ್ದಾಳೆ" "ಭೂಮಿನ ಅವರ ಅತ್ತೆನೇ ಟಾರ್ಗೆಟ್‌ ಮಾಡ್ತಾ ಇರೋದು ಗೌತಮ್ ಮುಂದೆ ಕೆಟ್ಟೋಲ್ ಮಾಡೋಕೆ ಶಕುಂತಲೇ ನೀನು ಏನ್ ಮಾಡಿದ್ರು ಭೂಮಿನೇ ಗೆಲ್ಲೋದು" ಎಂದೆಲ್ಲ ಸೋಷಿಯಲ್‌ ಮೀಡಿಯಾದಲ್ಲಿ ಜನರು ಕಾಮೆಂಟ್‌ ಮಾಡಿದ್ದಾರೆ.  
icon

(11 / 13)

ಮಲ್ಲಿ ಮತ್ತು ಜೈದೇವ್‌ ಮದುವೆಯಾದ ಬಳಿಕವೂ ಅಮೃತಧಾರೆ ರೋಚಕತೆ ಹೆಚ್ಚಿಸಿಕೊಳ್ಳುತ್ತಿದೆ. ಅತ್ತೆ ಸೊಸೆ ಜಗಳ ಮಾತ್ರ ಇರುತ್ತದೆ ಎಂದುಕೊಂಡವರಿಗೆ ಅಮೃತಧಾರೆ ಧಾರಾವಾಹಿಯಲ್ಲಿ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ದೊರಕುತ್ತಿದೆ.
icon

(12 / 13)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(13 / 13)

IPL_Entry_Point

ಇತರ ಗ್ಯಾಲರಿಗಳು