ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪಾರ್ಥನ ಜತೆ ಮೈಮರೆತಿದ್ದ ಅಪೇಕ್ಷಾಳಿಗೆ ಅಪ್ಪ ಸದಾಶಿವ ಕಪಾಳ ಮೋಕ್ಷ, ಫಲಿಸಿತು ಅಶ್ವಿನಿ ಕುತಂತ್ರ- ಅಮೃತಧಾರೆ ಸೀರಿಯಲ್‌ ಇಂದಿನ ಕಥೆ

ಪಾರ್ಥನ ಜತೆ ಮೈಮರೆತಿದ್ದ ಅಪೇಕ್ಷಾಳಿಗೆ ಅಪ್ಪ ಸದಾಶಿವ ಕಪಾಳ ಮೋಕ್ಷ, ಫಲಿಸಿತು ಅಶ್ವಿನಿ ಕುತಂತ್ರ- ಅಮೃತಧಾರೆ ಸೀರಿಯಲ್‌ ಇಂದಿನ ಕಥೆ

  • Amruthadhaare serial Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರಮೋವನ್ನು ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ತಣ್ಣಗೆ ತನ್ನ ಪಾಡಿಗೆ ನಡೆಯುತ್ತಿದ್ದ ಅತ್ತಿಗೆ ತಂಗಿ ಅಪೇಕ್ಷಾ ಮತ್ತು ಭಾವನ ತಮ್ಮ ಪಾರ್ಥನ ಲವ್‌ ಸ್ಟೋರಿಗೆ ದಿಢೀರ್‌ ತಿರುವು ದೊರಕಿದೆ. ಅಪೇಕ್ಷಾಳ ಅಪ್ಪ ಸದಾಶಿವ ಇವರಿಬ್ಬರನ್ನು ನೋಡಿ ಆಘಾತಗೊಂಡಿದ್ದಾರೆ. 

Amruthadhaare serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಒಂದೆಡೆ ಭೂಮಿಕಾ ಮತ್ತು ಗೌತಮ್‌ ಡೇಟಿಂಗ್‌ನಲ್ಲಿದ್ದಾರೆ. ಡೇಟಿಂಗ್‌ ಅಂದ್ರೆ ಭೂಮಿಕಾ ತನ್ನ ವೇತನದಲ್ಲಿ 3 ಸಾವಿರ ರೂಪಾಯಿ ತೆಗೆದುಕೊಂಡು ಆ ಹಣದಲ್ಲಿ ಗೌತಮ್‌ಗೆ ಪಾರ್ಟಿ ಕೊಡಿಸ್ತಾ ಇದ್ದಾರೆ. ಗೌತಮ್‌ಗೆ ತಾನು ಓದಿರುವ ಶಾಲೆ, ತನ್ನ ಮಿಡಲ್‌ ಕ್ಲಾಸ್‌ ಜೀವನದ ಖುಷಿಯನ್ನು ತೋರಿಸಿದ್ದಾರೆ. ಇಷ್ಟೇ ಅಲ್ಲ ಇವರಿಬ್ಬರೂ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವನ್ನೂ ಜತೆಯಾಗಿ ನೋಡಿದ್ದಾರೆ.  
icon

(1 / 10)

ಗೌತಮ್‌ ಮತ್ತು ಭೂಮಿಕಾ ಪಾರ್ಟಿ ಮಾಡುತ್ತಿರುವಾಗ ಉಳಿದವರಿಗೆ ಏನು ಕೆಲಸ? ಒಂದೆಡೆ ಜೈದೇವ್‌, ಅಶ್ವಿನಿ, ಮನೆಹಾಳ ಮಾವ ಖರ್ಚಿಗೆ ಹಣವಿಲ್ಲದೆ ಪರದಾಡುತ್ತ ಇದ್ದಾರೆ. ಈಗಾಗಲೇ ಭೂಮಿಕಾ ಎಲ್ಲರ ಅಕೌಂಟ್‌ ಲಾಕ್‌ ಮಾಡಿದ್ದಾರೆ. ಏನಾದರೂ ಹಣ ಖರ್ಚಿಗೆ ಬೇಕಿದ್ದರೆ ಭೂಮಿಕಾ ಬಳಿ ಕೇಳಬೇಕಾದ ಪರಿಸ್ಥಿತಿ ಅವರಿಗೆಲ್ಲ ಬಂದಿದ್ದಾರೆ. ಒಟ್ಟಾರೆ ವಿಳವಿಳ ಒದ್ದಾಡುತ್ತಿದ್ದಾರೆ. 
icon

(2 / 10)

ಇದೇ ಸಮಯದಲ್ಲಿ  ಅಶ್ವಿನಿಗೆ ಪಾರ್ಥ ಮತ್ತು ಅಪೇಕ್ಷಾರ ಲವ್‌ ಸ್ಟೋರಿ ತಿಳಿಯುತ್ತದೆ. ಇವರಿಬ್ಬರನ್ನೂ ಒಟ್ಟಿಗೆ ನೋಡಿರುತ್ತಾರೆ. ಈ ವಿಷಯ ಅಮ್ಮನಿಗೆ ಹೇಳಿದಾಗ ನಮಗೆಲ್ಲ ಗೊತ್ತು ಅಂತಾರೆ. ಮಾವನಿಗೂ ವಿಚಾರ ಗೊತ್ತಿದೆ. ಅಣ್ಣ ಮದುವೆಯಾಗಬೇಕಿದ್ದ ಹುಡುಗಿ ಈಗ ತಮ್ಮನ ಜತೆ ಲವ್‌ ಮಾಡ್ತಾ ಇದ್ದಾಳೆ. ಈ ಮೂಲಕ ಈಕೆ ಪಾರ್ಥನ ಪಟಾಯಿಸಿದ್ದಾಳೆ ಎನ್ನೋ ರೀತಿಯಲ್ಲಿ ವರ್ತಿಸ್ತಾಳೆ. 
icon

(3 / 10)

ಬಾಲಸುಟ್ಟ ಬೆಕ್ಕಿನಂತೆ ಇರುವಾಗ ಜೈದೇವ್‌ ಸಾಥ್‌ ದೊರಕುತ್ತದೆ. ಅಪೇಕ್ಷಾ ಮತ್ತು ಪಾರ್ಥನ ಲವ್‌ ಸ್ಟೋರಿಗೆ ಏನಾದರೂ ಮಾಡಬೇಕೆಂದು ಪ್ಲ್ಯಾನ್‌ ಮಾಡುತ್ತಾರೆ. ಅಮ್ಮನಲ್ಲಿ ಹೇಳಿ ಪ್ರಯೋಜನವಿಲ್ಲ. ಗೌತಮ್‌ಗೆ ಹೇಳಿದ್ರೆ ಅವರಿಬ್ಬರ ಮದುವೆ ಮಾಡಿ ಬಿಡ್ತಾರೆ ಅಂದುಕೊಳ್ಳುತ್ತಾರೆ. ಭೂಮಿಕಾಳಿಗೆ ತಿಳಿಸಿದರೂ ಪ್ರಯೋಜನವಿಲ್ಲ ಎಂದುಕೊಳ್ಳುತ್ತಾರೆ. 
icon

(4 / 10)

ಹೀಗಾಗಿ, ಈ ವಿಚಾರವನ್ನು ನೇರವಾಗಿ ಅಪೇಕ್ಷಾ ತಂದೆ ಸದಾಶಿವನಿಗೆ ತಲುಪಿಸುವುದೇ ಒಳ್ಳೆಯದು ಎಂದುಕೊಳ್ಳುತ್ತಾರೆ. ಇವರಿಬ್ಬರು ಜತೆಯಾಗಿರುವ ಲೊಕೆಷನ್‌ ನೋಡಿಕೊಂಡು ಆ ವಿಷಯವನ್ನು ಸದಾಶಿವ ಅವರಿಗೆ ಹೇಳೋಣ ಎಂದುಕೊಳ್ಳುತ್ತಾರೆ.
icon

(5 / 10)

ಅಶ್ವಿನಿ ಸದಾಶಿವ ಅವರನ್ನು ಭೇಟಿಯಾಗುತ್ತಾಳೆ. ಈ ವಿಷಯ ತಿಳಿಸುತ್ತಾಳೆ. ಮೊದಲಿಗೆ ಸದಾಶಿವ ಇದನ್ನು ನಂಬೋದಿಲ್ಲ. ನನ್ನ ಮಗಳು ಅಂತವಳು ಅಲ್ಲ ಎನ್ನುತ್ತಾರೆ. ಇಲ್ಲ ಅಂಕಲ್‌ ಇವರಿಬ್ಬರೂ ಉತ್ತರಹಳ್ಳಿ ಪಾರ್ಕ್‌ನಲ್ಲಿ ಇರುವುದನ್ನು ನಾನು ಈಗಷ್ಟೇ  ನೋಡಿದ್ದೇನೆ ಎನ್ನುತ್ತಾಳೆ.
icon

(6 / 10)

ಇವರಿಬ್ಬರು ಕಳೆದ ಹಲವು ದಿನಗಳಿಂದ ಬೇರೆ ರೀತಿಯೇ ಇದ್ದಾರೆ. ಇಬ್ಬರ ನಡುವೆ ಲವ್‌ ಇರಬಹುದು ಎಂಬ ಅನುಮಾನ ವ್ಯಕ್ತಪಡಿಸುತ್ತಾಳೆ. ಇದೆಲ್ಲ ಸಾಧ್ಯವೇ ಇಲ್ಲ. ನನ್ನ ಮಗಳು ಹಾಗೆ ಮಾಡೋದಿಲ್ಲ ಎಂದುಕೊಂಡು ಉತ್ತರಹಳ್ಳಿ ಪಾರ್ಕ್‌ಗೆ ವೇಗವಾಗಿ, ಟೆನ್ಷನ್‌ನಿಂದ, ಕೋಪಗೊಂಡು ಸದಾಶಿವ ಹೋಗುತ್ತಾರೆ.
icon

(7 / 10)

ಅಲ್ಲಿ  ಪಾರ್ಥ ಮತ್ತು ಅಪೇಕ್ಷಾ ಪ್ರೇಮಧಾರೆಯಲ್ಲಿ ಮುಳುಗಿದ್ದಾರೆ.  ಅಪ್ಪ ಮತ್ತು ಮಾವ ಬಂದಿರೋದನ್ನು ಈ ಪ್ರೇಮ ಹಕ್ಕಿಗಳು ನೋಡಿ ಬೆಚ್ಚಿಬೀಳುತ್ತಾರೆ. ಇವರನ್ನು ಲೈವ್‌ ಆಗಿ ನೋಡಿದ ಸದಾಶಿವ  ಕೋಪಗೊಂಡು ಅಪೇಕ್ಷಾಳ ಕೆನ್ನೆಗೆ ಒಂದೇಟು ಹಾಕುತ್ತಾರೆ. 
icon

(8 / 10)

ಇವರ ಪ್ರೀತಿ ತಿಳಿದ ಸದಾಶಿವ್‌ ಮುಂದೆ ಏನು ಮಾಡುತ್ತಾರೆ. ಅಪೇಕ್ಷಾಳಿಗೆ ಬೇರೆ ಗಂಡು ನೋಡುತ್ತಾರ? ಈ ವಿಷಯದಲ್ಲಿ ಭೂಮಿಕಾ ಮಧ್ಯಪ್ರವೇಶ ಮಾಡುತ್ತಾರ. ಕೆಟ್ಟದ್ದು ಮಾಡಲು ಬಯಸಿದ ಶಕುಂತಲಾ ಟೀಮ್‌ಗೆ ಇದು ತಿರುಗುಬಾಣವಾಗುತ್ತ ಎಂಬ ವಿಚಾರಗಳು ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ. 
icon

(9 / 10)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು
icon

(10 / 10)

ಇತರ ಗ್ಯಾಲರಿಗಳು