ಭೂಮಿಕಾಳ ರಹಸ್ಯ ವಿಡಿಯೋ ರೆಕಾರ್ಡ್‌ ಮಾಡಿದ ಮನೆಹಾಳ ಮಾವ, ಶಕುಂತಲಾ ಮೋಸದ ಜಾಲದಲ್ಲಿ ಸಿಲುಕಿ ವಿಲವಿಲ- ಅಮೃತಧಾರೆ ಇಂದಿನ ಸಂಚಿಕೆ-televison news amruthadhaare serial today episode shakuntala cheats bhumika sadashiva says no to marriage ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭೂಮಿಕಾಳ ರಹಸ್ಯ ವಿಡಿಯೋ ರೆಕಾರ್ಡ್‌ ಮಾಡಿದ ಮನೆಹಾಳ ಮಾವ, ಶಕುಂತಲಾ ಮೋಸದ ಜಾಲದಲ್ಲಿ ಸಿಲುಕಿ ವಿಲವಿಲ- ಅಮೃತಧಾರೆ ಇಂದಿನ ಸಂಚಿಕೆ

ಭೂಮಿಕಾಳ ರಹಸ್ಯ ವಿಡಿಯೋ ರೆಕಾರ್ಡ್‌ ಮಾಡಿದ ಮನೆಹಾಳ ಮಾವ, ಶಕುಂತಲಾ ಮೋಸದ ಜಾಲದಲ್ಲಿ ಸಿಲುಕಿ ವಿಲವಿಲ- ಅಮೃತಧಾರೆ ಇಂದಿನ ಸಂಚಿಕೆ

  • Amruthadhaare serial Today Episode: ಅಪೇಕ್ಷಾ ಮತ್ತು ಪಾರ್ಥನ ಮದುವೆಯ ವಿಷಯದಲ್ಲಿ ಭೂಮಿಕಾ ಮತ್ತು ಇತರರಿಗೆ ಅರಿವಿಲ್ಲದೆ ನಾನಾ ಘಟನೆಗಳು ಘಟಿಸಿವೆ. ಇವೆಲ್ಲವೂ ಶಕುಂತಲಾದೇವಿಯ ಷಡ್ಯಂತ್ರ ಎಂಬ ಅರಿವು ಯಾರಿಗೂ ಇರಲಿಲ್ಲ. ಇಂದಿನ ಅಮೃತಧಾರೆ ಸೀರಿಯಲ್‌ನ ಇಂದಿನ ಸಂಚಿಕೆಯಲ್ಲಿ ಏನೇನಾಗಲಿದೆ ಎನ್ನುವುದನ್ನು ನೋಡೋಣ.

ಝೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರಮೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. ಅಪೇಕ್ಷಾ ಮತ್ತು ಪಾರ್ಥನ ಮದುವೆ ಪ್ರಸಂಗ ಮತ್ತು ಶಕುಂತಲಾ ಷಡ್ಯಂತ್ರ ಇನ್ನೊಂದು ಮಟ್ಟಕ್ಕೆ ತಲುಪಿದೆ. ಭೂಮಿಕಾಳ ವಿಡಿಯೋವೊಂದನ್ನು ಮನೆಹಾಳ ಮಾವ ಚಿತ್ರೀಕರಿಸಿಕೊಂಡಿದ್ದಾನೆ. ಇಂದಿನ  ಸಂಚಿಕೆಯಲ್ಲಿ ಏನೇನಾಗಲಿದೆ ಎನ್ನುವುದನ್ನು ನೋಡೋಣ. 
icon

(1 / 11)

ಅಪೇಕ್ಷಾ ಮತ್ತು ಪಾರ್ಥನ ಮದುವೆ ತಾನು ಅಂದುಕೊಂಡಂತೆ ಆಗಬೇಕೆಂದು ಶಕುಂತಲಾದೇವಿ ಭೂಮಿಕಾ ಬಳಿ ಭಾಷೆ ತೆಗೆದುಕೊಂಡಿದ್ದರು. ತಾನೇ ಮುಂದೆ ನಿಂತು ಹುಡುಗಿ ನೋಡುವ ಕಾರ್ಯವನ್ನು ಮಾಡಿದ್ದರು. ಸಡನ್‌ ಆಗಿ ಪಾರ್ಥನಿಗೆ ಅಪೇಕ್ಷಾಳನ್ನು ತರಬೇಕೆಂದು ನಿರ್ಧರಿಸಿದ್ದರು. ಈ ವಿಷಯದಲ್ಲಿ ಭೂಮಿಕಾಳನ್ನು ತಪ್ಪಿತಸ್ಥೆಯಾಗಿ ಮಾಡುವ ದೂರಾಲೋಚನೆಯನ್ನು ಹೊಂದಿದ್ದರು.
icon

(2 / 11)

ಇಂದಿನ ಸಂಚಿಕೆಯಲ್ಲಿ ಇನ್ನೂ ನಾನಾ ಬೆಳವಣಿಗೆಗಳು ನಡೆಯುವ ಸೂಚನೆ ದೊರಕಿದೆ. ಈ ಮದುವೆಗೆ ನನ್ನ ಒಪ್ಪಿಗೆಯಿಲ್ಲ. ದಯವಿಟ್ಟು ಕ್ಷಮಿಸಿ ಎಂದು ಸದಾಶಿವ ಹೇಳುತ್ತಾರೆ. ಜೈದೇವ್‌ನ ಮದುವೆಯಾಗಬೇಕಿದ್ದವಳು ಈಗ ಪಾರ್ಥನ ಮದುವೆಯಾದರೆ ಊರಲ್ಲಿ ನಮ್ಮ ಘನತೆ, ಗೌರವ ಏನಾಗಬೇಡ ಎಂಬ ಚಿಂತೆ ಅವರದ್ದು. ಈ ಸಂದರ್ಭದಲ್ಲಿ ಶಕುಂತಲಾ ಬೇರೆಯದ್ದೇ ದಾಳ ಉರುಳಿಸಿದ್ದಾಳೆ. 
icon

(3 / 11)

ಸದಾಶಿವ ಈ ಮದುವೆ ಬೇಡ ಎಂದಾಗ ಗೌತಮ್‌, ಅಪೇಕ್ಷಾ, ಪಾರ್ಥ ಸೇರಿದಂತೆ ಎಲ್ಲರೂ ಅಚ್ಚರಿಗೆ ಒಳಗಾಗುತ್ತಾರೆ. ಇದಾದ ಬಳಿಕ ಕೊಠಡಿಯಲ್ಲಿ ಶಕುಂತಲಾದೇವಿ ಭೂಮಿಕಾಳನ್ನು ಭೇಟಿಯಾಗಿ ನೀನೇ ಈ ಮದುವೆಗೆ ಅಪ್ಪನ ಒಪ್ಪಿಸು ಅನ್ನುತ್ತಾಳೆ. ಈ ಮಾತುಕತೆಯನ್ನು ರಹಸ್ಯವಾಗಿ ರೆಕಾರ್ಡ್‌ ಮಾಡುವಂತೆ ಮನೆಹಾಳ ಮಾವ ಅಂದ್ರೆ ತನ್ನ ಸಹೋದರನಿಗೆ ತಿಳಿಸುತ್ತಾಳೆ. 
icon

(4 / 11)

ಈ ಮದುವೆ ನನಗೆ ಇಷ್ಟವಿಲ್ಲ ಎಂದು ಭೂಮಿಕಾ ಶಕುಂತಲಾ ಬಳಿ ಹೇಳುವುದು ವಿಡಿಯೋದಲ್ಲಿ ರೆಕಾರ್ಡ್‌ ಆಗಿದೆ. ಈ ವಿಡಿಯೋವನ್ನು ಇಟ್ಟುಕೊಂಡು ಶಕುಂತಲಾದೇವಿ ನಾನಾ ಆಟ ಆಡುವ ಸೂಚನೆಯಿದೆ. 
icon

(5 / 11)

ಒಟ್ಟಾರೆ, ಅಮೃತಧಾರೆ ಧಾರಾವಾಹಿ ಬೇರೆಯದ್ದೇ ಸ್ವರೂಪ ಪಡೆದಿದೆ. ಭೂಮಿಕಾಳ ಗತ್ತು, ಗಂಭೀರತೆ ಮರೆಯಾಗಿ ಡಲ್‌ ಆಗಿದ್ದಾಳೆ. ಪ್ರೇಕ್ಷಕರು ಈ ಸೀರಿಯಲ್‌ ಕೂಡ ಎಲ್ಲಾ ಸೀರಿಯಲ್‌ನಂತೆ ಆಯ್ತಲ್ವ ಎಂದು ಬೇಸರದಲ್ಲಿದ್ದಾರೆ. 
icon

(6 / 11)

ಜೋಡಿ ಹಕ್ಕಿಗಳಂತೆ ಹಾಯಾಗಿ ಪ್ರೀತಿಸುತ್ತಿದ್ದ ಪಾರ್ಥ ಮತ್ತು ಅಪೇಕ್ಷಾರನ್ನು ಇಟ್ಟುಕೊಂಡು ಶಕುಂತಲಾದೇವಿ ಆಟ ಆಡುತ್ತಿದ್ದಾರೆ. ಗೌತಮ್‌ ದಿವಾನ್‌ ಮನೆಯಲ್ಲಿ ಇನ್ನೊಂದೆಡೆ ಮಲ್ಲಿಗೂ ಭೂಮಿಕಾರ ಮಾತು ಇಷ್ಟವಾಗುವುದಿಲ್ಲ. ಜೈದೇವ್‌ಗೆ ಅಕ್ರಮ ಸಂಬಂಧ ಇರುವ ವಿಚಾರವನ್ನು ಆಕೆ ಒಪ್ಪುವುದಿಲ್ಲ. 
icon

(7 / 11)

ಗ್ರಹಗತಿಗಳೆಲ್ಲ ಭೂಮಿಕಾ ವಿರುದ್ಧವಾಗಿವೆ. ಈ ಸಂದರ್ಭದಲ್ಲಿ ಭೂಮಿಕಾಳ ಮುಂದಿನ ನಡೆಯ ಕುರಿತು ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. ಭೂಮಿಕಾ ತನ್ನ ಆಟ ಯಾವಾಗ ಆರಂಭಿಸುತ್ತಾರೆ ಎಂದು ಎಲ್ಲರೂ ಕಾಯುತ್ತಿದ್ದಾರೆ. 
icon

(8 / 11)

ಅಮೃತಧಾರೆ ಧಾರಾವಾಹಿಯಲ್ಲಿ ಅಪೇಕ್ಷಾ ಮತ್ತು ಪಾರ್ಥ ಬಹಳಷ್ಟು ಸಮಯದಿಂದ ಪ್ರೀತಿಸುತ್ತಿದ್ದರು. ಇವರ ಪ್ರೀತಿಯ ವಿಚಾರ ಗೊತ್ತಿದ್ದರೂ ಈಕೆಯನ್ನು ಮದುವೆಯಾಗಬೇಕೆಂದು ಜೈದೇವ್‌ ನಿರ್ಧರಿಸಿದ್ದ. ಮಲ್ಲಿ ಗರ್ಭಿಣಿಯಾಗಿದ್ದರೂ ಆಕೆಗೆ ಮೋಸ ಮಾಡಿ ಮದುವೆ ಮಾಡಲು ಮುಂದಾಗಿದ್ದ. 
icon

(9 / 11)

ಆದರೆ, ಜೈದೇವ್‌ ಜತೆ ಅಪೇಕ್ಷಾಳ ಮದುವೆಯಾಗಿರಲಿಲ್ಲ. ಅಪೇಕ್ಷಾಳಿಗೆ ಇದರಿಂದ ಒಳ್ಳೆಯದೇ ಆಗಿತ್ತು. ಪಾರ್ಥನ ಜತೆ ಪ್ರೀತಿ ಮುಂದುವರೆದಿತ್ತು. ಆದರೆ, ಈಗ ಇವರ ಪ್ರೀತಿಗೆ ಅಗ್ನಿಪರೀಕ್ಷೆ ಎದುರಾಗಿದೆ. ನಮ್ಮಿಬ್ಬರನ್ನು ಒಂದು ಮಾಡಲು ಶಕುಂತಲಾದೇವಿ ನಾಟಕ ಮಾಡುತ್ತಿದ್ದಾಳೆ ಎಂದು ಅಪೇಕ್ಷಾಗೆ ಗೊತ್ತಿಲ್ಲ. ಸೀರಿಯಲ್‌ ಮುಂದೆ ಯಾವ ತಿರುವು ಪಡೆಯುತ್ತದೆಯೋ ಕಾದು ನೋಡಬೇಕಿದೆ. 
icon

(10 / 11)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(11 / 11)

ಇತರ ಗ್ಯಾಲರಿಗಳು