ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೊದಲ ರಾತ್ರಿ ತಪ್ಪಿಸಲು ಯತ್ನಿಸಿದ ಶಕುಂತಲಾದೇವಿಗೆ ತಕ್ಕ ಶಾಸ್ತಿ ಮಾಡಿದ ಭೂಮಿಕಾ; ಇನ್ನು ನಿಮ್ಮ ಡ್ರಾಮಾ ನಡೆಯೋಲ್ಲ ಅಂದ್ರು ಪ್ರೇಕ್ಷಕರು

ಮೊದಲ ರಾತ್ರಿ ತಪ್ಪಿಸಲು ಯತ್ನಿಸಿದ ಶಕುಂತಲಾದೇವಿಗೆ ತಕ್ಕ ಶಾಸ್ತಿ ಮಾಡಿದ ಭೂಮಿಕಾ; ಇನ್ನು ನಿಮ್ಮ ಡ್ರಾಮಾ ನಡೆಯೋಲ್ಲ ಅಂದ್ರು ಪ್ರೇಕ್ಷಕರು

  • Amruthadhaare Serial Today Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯನ್ನು ನೋಡಲು ಸಾಕಷ್ಟು ಪ್ರೇಕ್ಷಕರು ಕಾಯುತ್ತಿರಬಹುದು. ಭೂಮಿಕಾ ಮತ್ತು ಗೌತಮ್‌ ಒಲವ ಅಮೃತಧಾರೆ ಶುರುವಾಗಿದೆ. ಆದರೆ, ಫಸ್ಟ್‌ ನೈಟ್‌ಗೆ ವಿಘ್ನ ತರಲು ಶಕುಂತಲಾದೇವಿ ಎಂದಿನಂತೆ ಪ್ಲ್ಯಾನ್‌ ಮಾಡಿದ್ದಾಳೆ. ಆದರೆ, ಅದು ಠುಸ್‌ ಆಗಿದೆ.

ಅಮೃತಧಾರೆ ಧಾರಾವಾಹಿಯ ಇಂದಿನ ಪ್ರಮೋ ಬಿಡುಗಡೆಯಾಗಿದೆ. ಇದರಲ್ಲಿ ಸಾಕಷ್ಟು ವಿಚಾರಗಗಳು ತಿಳಿದುಬಂದಿದೆ. ಭೂಮಿಕಾ ಮತ್ತು ಗೌತಮ್‌ ಪ್ರಪೋಸ್‌ ಮಾಡಿರುವ ಸಂಗತಿ ತಿಳಿದ ಶಕುಂತಲಾದೇವಿ ಉರಿದುಬಿದ್ದಿದ್ದಾರೆ. ಇಂದು ಅವರ ಫಸ್ಟ್‌ ನೈಟ್‌ ನಡೆಯಲಿದೆ ಎಂಬ ವಿಚಾರ ಕೇಳಿ ಟೆನ್ಷನ್‌ನಲ್ಲಿದ್ದಾರೆ.
icon

(1 / 11)

ಇವರಿಬ್ಬರ ಫಸ್ಟ್‌ ನೈಟ್‌ ತಪ್ಪಿಸಲು ಎಂದಿನಂತೆ ಅನಾರೋಗ್ಯದ ನಾಟಕ ಮಾಡಲು ಪ್ರಯತ್ನಿಸಿದ್ದಾರೆ. ನನಗೆ ಹುಷಾರಿಲ್ಲ ಎಂದಾಗ ಮಗ ಓಡೋಡಿ ಬರುತ್ತಾನೆ ಎಂಬ ನಂಬಿಕೆ ಅವರದ್ದು. ಅದೇ ರೀತಿ ತಲೆ ತಿರುಗಿ ಬಿದ್ದಂತೆ ನಾಟಕವಾಡಿದ್ದಾರೆ. ಅಣ್ಣ ರಮಾಕಾಂತ ಗೌತಮ್‌ಗೆ ಕಾಲ್‌ ಮಾಡಿದ್ದಾರೆ. 
icon

(2 / 11)

ಎಲ್ಲದಕ್ಕೂ ಕಾರಣ ಈ ರಮಾಕಾಂತ. ಆನಂದ್‌ಗೆ ಕಾಲ್‌ ಮಾಡಿದ ಸಂದರ್ಭದಲ್ಲಿ ಇವರಿಬ್ಬರ ಪ್ರಪೋಸ್‌ ಮತ್ತು ಫಸ್ಟ್‌ ನೈಟ್‌ ವಿಚಾರ ತಿಳಿದುಕೊಂಡಿದ್ದನು. ಈ ವಿಚಾರವನ್ನು ಶಕುಂತಲಾದೇವಿಗೆ ತಿಳಿಸಿದ್ದನು.
icon

(3 / 11)

ಇವರಿಬ್ಬರು ಒಂದಾದರೆ ನಮಗೆ ಚೊಂಬೇ ಗತಿ ಎಂದು ಶಕುಂತಲಾದೇವಿ ಮತ್ತು ರಮಾಕಾಂತ್‌ ಮಾತನಾಡಿಕೊಳ್ಳುತ್ತಿದ್ದರು. ಇದೇ ಸಮಯದಲ್ಲಿ ತನ್ನ ಎಂದಿನ ಟ್ರಿಕ್ಸ್‌ ಉಪಯೋಗಿಸಿ ಅನಾರೋಗ್ಯದ ನಾಟಕವಾಡಿದ್ದಾರೆ ಶಕುಂತಲಾದೇವಿ.
icon

(4 / 11)

ರಮಾಕಾಂತ್‌ ಗೌತಮ್‌ಗೆ ಕಾಲ್‌ ಮಾಡಿದ್ದಾನೆ. ಈ ವಿಚಾರ ತಿಳಿದಾಗ ಎಂದಿನಂತೆ ಸಹಜವಾಗಿ ಗೌತಮ್‌ಗೆ ಬೇಸರವಾಗಿದೆ. ನಾನು ಈಗಲೇ ಹೊರಟು ಬರುತ್ತೇನೆ ಎಂದಿದ್ದಾನೆ.
icon

(5 / 11)

ವೆಕೇಷನ್‌ ಕಂಟಿನ್ಯೂ ಮಾಡಲಾಗುತ್ತಿಲ್ಲ ಎಂದು ಬೇಸರದಲ್ಲೇ ಭೂಮಿಕಾಳಿಗೆ ತಿಳಿಸಿದ್ದಾನೆ. ಬನ್ನಿ ಬ್ಯಾಗ್‌ ಪ್ಯಾಕ್‌ ಮಾಡೋಣ ಎಂದಿದ್ದಾರೆ. ಈ ಸಮಯದಲ್ಲಿ ಯಾಕೋ ಭೂಮಿಕಾಳಿಗೆ ಸಂದೇಹ ಬಂದಿದೆ.
icon

(6 / 11)

ಮಲ್ಲಿಗೆ ಭೂಮಿಕಾ ಕಾಲ್‌ ಮಾಡಿ ಕೇಳುತ್ತಾಳೆ. ಅತ್ತೆಯವರು ಹುಷಾರಿದ್ದಾರ ಎಂದು ಕೇಳುತ್ತಾಳೆ. ಅತ್ತೆ ಆರಾಮಾವಾಗಿ ಓಡಾಡಿಕೊಂಡಿದ್ದಾರೆ ಎಂದು ಮಲ್ಲಿ ಹೇಳುತ್ತಾಳೆ. ಇದು ನಾಟಕ ಎಂದು ಹೇಳುತ್ತಾಳೆ.
icon

(7 / 11)

ನಮ್ಮ ಫಸ್ಟ್‌ ನೈಟ್‌ ಕ್ಯಾನ್ಸಲ್‌ ಮಾಡಲು ಇಷ್ಟೊಂದು ಚೀಪ್‌ ಆಗಿ ವರ್ತಿಸ್ತಾರ ಎಂದು ಭೂಮಿಕಾ ಆಲೋಚಿಸುತ್ತಾರೆ. ಇದೇ ಸಮಯದಲ್ಲಿ ಇವರ ನಾಟಕ ಅಂತ್ಯ ಮಾಡುವ ಕುರಿತು ಯೋಚಿಸುತ್ತಾಳೆ. 
icon

(8 / 11)

ಶಕುಂತಲಾದೇವಿ ಮನೆಯಲ್ಲಿರುವಾಗ ಭೂಮಿಕಾ ಕಳುಹಿಸಿದ ಡಾಕ್ಟರ್‌ ಬರುತ್ತಾರೆ. ಮಲ್ಲಿ ಕೂಡ ಆಸ್ಪತ್ರೆಯಿಂದ ವಾಪಸ್‌ ಬರಲು ಈ ಡಾಕ್ಟರೇ ಕಾರಣ. ಡಾಕ್ಟರ್‌ ಮನೆಗೆ ಬಂದಾಗ ಶಕುಂತಲಾದೇವಿಗೆ ಅಚ್ಚರಿಯಾಗುತ್ತದೆ. 
icon

(9 / 11)

ನಿಮಗೆ ಅನಾರೋಗ್ಯ ಎಂದು ಹೇಳಿದ್ರು. ಚೆಕ್‌ ಮಾಡಲು ಬಂದೆ ಎಂದು ಡಾಕ್ಟರ್‌ ಹೇಳುತ್ತಾರೆ. ಅಲ್ಲಿಯವರೆಗೆ ಆರಾಮವಾಗಿ ಓಡಾಡಿಕೊಂಡಿದ್ದ ಶಕುಂತಲಾದೇವಿ ಹಾಸಿಗೆಯಲ್ಲಿ ಮಲಗುತ್ತಾರೆ. ಡಾಕ್ಟರ್‌ ಚೆಕ್‌ ಮಾಡುತ್ತಾರೆ.
icon

(10 / 11)

ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರಮೋಗಳಲ್ಲಿ ಇಷ್ಟು ವಿಚಾರ ತಿಳಿದುಬಂದಿದೆ. ಈ ಮೂಲಕ ಹನಿಮೂನ್‌ಗೆ ಭಂಗ ತರಲು ಯತ್ನಿಸಿದ ಶಕುಂತಲಾದೇವಿಯ ಪ್ಲ್ಯಾನ್‌ ಅನ್ನು ಉಲ್ಟಾ ಮಾಡಿದ್ದಾರೆ ಭೂಮಿಕಾ. ನಿಮ್ಮ ಈ ನಾಟಕ ನಮ್ಮ ಭೂಮಿಕಾಳ ಮುಂದೆ ಇನ್ನು ಮುಂದೆ ನಡೆಯೋದಿಲ್ಲ ಎಂದೆಲ್ಲ ನೆಟ್ಟಿಗರು ಈ ಪ್ರಮೋಗಳಿಗೆ ಕಾಮೆಂಟ್‌ ಮಾಡಿದ್ದಾರೆ. 
icon

(11 / 11)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು