Amruthadhaare Climax: ಪಾರ್ಥನಿಗೆ ಅಪೇಕ್ಷಾ ಜತೆ ಮದುವೆ ಮಾಡಲು ಮುಂದಾದ ಶಕುಂತಲಾದೇವಿ; ಕ್ಲೈಮ್ಯಾಕ್ಸ್ ಹಂತಕ್ಕೆ ಅಮೃತಧಾರೆ ಲವ್‌ಸ್ಟೋರಿ
- Amruthadhaare serial today episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಏನಾಗಲಿದೆ ಎನ್ನುವ ಪ್ರಶ್ನೆಗೆ ಉತ್ತರ ದೊರಕಿದೆ. ವಾಹಿನಿಯು ಬಿಡುಗಡೆ ಮಾಡಿರುವ ಪ್ರಮೋದಲ್ಲಿ ಪಾರ್ಥನ ಪ್ರೀತಿಗೆ ಸ್ವತಃ ಶಕುಂತಲಾದೇವಿ ನೆರವು ನೀಡುವಂತಹ ಅಚ್ಚರಿ ಕಾಣಿಸಿದೆ.
- Amruthadhaare serial today episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಏನಾಗಲಿದೆ ಎನ್ನುವ ಪ್ರಶ್ನೆಗೆ ಉತ್ತರ ದೊರಕಿದೆ. ವಾಹಿನಿಯು ಬಿಡುಗಡೆ ಮಾಡಿರುವ ಪ್ರಮೋದಲ್ಲಿ ಪಾರ್ಥನ ಪ್ರೀತಿಗೆ ಸ್ವತಃ ಶಕುಂತಲಾದೇವಿ ನೆರವು ನೀಡುವಂತಹ ಅಚ್ಚರಿ ಕಾಣಿಸಿದೆ.
(1 / 9)
Amruthadhaare serial today episode: ಪಾರ್ಥ ಮತ್ತು ಅಪೇಕ್ಷಾ ಒಂದಾಗಬಾರದು ಎಂದು ನಿರ್ಧರಿಸಿದ್ದ ಶಕುಂತಲಾದೇವಿ ತನ್ನ ಮಗನಿಗೆ ಬೇರೆ ಹುಡುಗಿಯ ಜತೆ ಮದುವೆ ಮಾಡಲು ಮುಂದಾಗಿದ್ದರು. ಇದೇ ಸಮಯದಲ್ಲಿ ನನ್ನ ಮಗನ ಮದುವೆ ನನ್ನ ಇಷ್ಟದಂತೆ ನಡೆಯಲು ಬಿಡು ಎಂದು ಭೂಮಿಕಾಳ ಬಳಿ ಪ್ರಾಮೀಸ್ ತೆಗೆದುಕೊಂಡಿದ್ದರು.
(2 / 9)
ಪಾರ್ಥ ಮತ್ತು ಅಪ್ಪಿ ಲವ್ ಸ್ಟೋರಿ ತಿಳಿದಿರುವ ಭೂಮಿಕಾಳಿಗೆ ಏನೂ ಮಾಡಲಾಗದ ಪರಿಸ್ಥಿತಿ. ಈ ಪ್ರೇಮಿಗಳ ಪಾಲಿಗೆ ವಿಲನ್‌ನಂತೆ ನಿಲ್ಲುವ ಸಂದಿಗ್ಧತೆ. ಇಬ್ಬರ ಪ್ರೀತಿಗೆ ನೆರವು ನೀಡಲಾಗದ ಇಕ್ಕಟ್ಟಿಗೆ ಭೂಮಿಕಾ ಸಿಲುಕಿದ್ದರು. ಇದರಿಂದ ಅಪೇಕ್ಷಾ ಮತ್ತು ಪಾರ್ಥರ ಲವ್ ಟ್ರಾಜಿಟಿಯಾಗುವ ಹಂತಕ್ಕೆ ತಲುಪಿತ್ತು.
(3 / 9)
ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಇಂದಿನ ಸಂಚಿಕೆಯಲ್ಲಿ ಒಂದು ಟ್ವಿಸ್ಟ್ ಕಾಣಿಸಿದೆ. ಈ ಟ್ವಿಸ್ಟ್ ಪಾರ್ಥನ ಲವ್ ಸ್ಟೋರಿಯ ಕ್ಲೈಮ್ಯಾಕ್ಸ್‌ನಂತೆ ಕಾಣಿಸಿದೆ. ಪಾರ್ಥ ಮತ್ತು ಶಕುಂತಲಾದೇವಿ ಮಾತನಾಡುತ್ತಾರೆ. ನನಗೆ ಈ ಮದುವೆ ಬೇಡ ಎಂಬ ವಿಚಾರವನ್ನು ಪಾರ್ಥ ತಿಳಿಸುತ್ತಾನೆ.
(4 / 9)
ತಾನು ಅಪೇಕ್ಷಾಳನ್ನು ಪ್ರೀತಿಸುವ ಸಂಗತಿ ತಿಳಿಸುತ್ತಾಳೆ. ಈ ಸಮಯದಲ್ಲಿ ಖುದ್ದಾಗಿ ತಾನೇ ಮಂದಾಕಿನಿ ಬಳಿ ಹೆಣ್ಣು ಕೇಳಲು ಹೋಗುವುದಾಗಿ ತಿಳಿಸುತ್ತಾಳೆ. ಇದನ್ನು ಕೇಳಿ ಆಕೆಯ ಸಹೋದರನಿಗೆ ಅಚ್ಚರಿ, ಆಘಾತವಾಗುತ್ತದೆ.
(5 / 9)
ನಾನು ಹೇಳಿದಂತೆ ಮದುವೆ ನಡೆಯಲಿದೆ ಎನ್ನುವ ಖುಷಿಯಲ್ಲಿ ಶಕುಂತಲಾದೇವಿ ಇರುತ್ತಾರೆ. ಇಲ್ಲಿ ನಿಜವಾಗಿಯೂ ಗೆದ್ದವರು ಯಾರು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಆದರೆ, ಪಾರ್ಥ ಮತ್ತು ಅಪೇಕ್ಷಾರ ಪ್ರೀತಿ ಗೆಲ್ಲುವ ಸೂಚನೆಯಿದೆ.
(6 / 9)
ಇನ್ನೊಂದೆಡೆ ಪಾರ್ಥನಿಗೆ ಹುಡುಗಿ ಫೈನಲ್ ಮಾಡಿಟ್ಟ ಗೌತಮ್ ಈ ವಿಚಾರವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಪ್ರಶ್ನೆಯೂ ಮೂಡಿದೆ. ಎಲ್ಲರ ಮುಂದೆ ವಿಲನ್ ಆಗಿದ್ದ ಶಕುಂತಲಾದೇವಿ ಈ ವಿಷಯದಲ್ಲಿ ಹೀರೋಯಿನ್ ಆಗುವ ಸೂಚನೆ ಇದೆ. ಆದರೆ, ಕೊನೆಗೆ ಎಲ್ಲಾ ಗುಟ್ಟು ರಟ್ಟಾಗುವ ಸೂಚನೆಯೂ ಇದೆ.
(7 / 9)
ಕಳೆದ ಕೆಲವು ದಿನಗಳಿಂದ ಭೂಮಿಕಾ ಪೆಚ್ಚಾಗಿ ನಟಿಸುವ ಅನಿವಾರ್ಯತೆ ಇದೆ. ಇಲ್ಲಿಯವರೆಗೆ ಆಕೆಯನ್ನು ಆತ್ಮವಿಶ್ವಾಸದ ಗಣಿಯಂತೆ ನೋಡಿದ್ದ ಪ್ರೇಕ್ಷಕರಿಗೆ ಕಳೆದ ಕೆಲವು ದಿನಗಳಿಂದ ಇರಿಸುಮುರಿಸು ಆಗುತ್ತಿತ್ತು. ಇದೀಗ ಭೂಮಿಕಾ ಮತ್ತೆ ಹಳಿಗೆ ಮರಳುವ ಸೂಚನೆ ಇದೆ.
(8 / 9)
ಒಟ್ಟಾರೆ, ಕಳೆದ ಕೆಲವು ದಿನಗಳಿಂದ ಪಾರ್ಥ ಮತ್ತು ಅಪೇಕ್ಷಾ ಲವ್ ಸ್ಟೋರಿಯಲ್ಲಿ "ಫೀಲಿಂಗ್"ನಿಂದ ತುಂಬಿದ್ದ ಕಥೆಯು ಮತ್ತೆ ಹಳೆಯ ಜೋಶ್‌ಗೆ ಮರಳುವ ಸೂಚನೆ ದೊರಕಿದ್ದು, ಪ್ರೇಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಖುಷಿ ವ್ಯಕ್ತಪಡಿಸಿದ್ದಾರೆ.
ಇತರ ಗ್ಯಾಲರಿಗಳು