ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amruthadhaare: ಗೌತಮ್‌ಗೆ ಕಾಲು ಒತ್ತುವ ನೆಪದಲ್ಲಿ ಕಚಗುಳಿ ಇಟ್ಟ ಭೂಮಿಕಾ; ಅಮೃತಧಾರೆ ಧಾರಾವಾಹಿಯ ಈ ಪ್ರೀತಿ ಒಂಥರ ಕಚಗುಳಿ

Amruthadhaare: ಗೌತಮ್‌ಗೆ ಕಾಲು ಒತ್ತುವ ನೆಪದಲ್ಲಿ ಕಚಗುಳಿ ಇಟ್ಟ ಭೂಮಿಕಾ; ಅಮೃತಧಾರೆ ಧಾರಾವಾಹಿಯ ಈ ಪ್ರೀತಿ ಒಂಥರ ಕಚಗುಳಿ

  • Amruthadhaare Serial Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರಮೋವನ್ನು ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ದೇಗುಲದಲ್ಲಿ ಉರುಳು ಸೇವೆ ಮಾಡಿ ಮೈಕೈ ನೋವು ಮಾಡಿಕೊಂಡು ಬಂದ ಗೌತಮ್‌ನ ಕಾಲು ಒತ್ತುವ ಸಂದರ್ಭದಲ್ಲಿ ಒಂದಿಷ್ಟು ಕಚಗುಳಿ ಸನ್ನಿವೇಶ ನಡೆದಿರುವುದು ಪ್ರಮೋದಲ್ಲಿ ಗೊತ್ತಾಗಿದೆ.

ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರಮೋವನ್ನು ಝೀ ಕನ್ನಡ ವಾಹಿನಿ ತನ್ನ ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಂಡಿದೆ. ಅಮೃತಧಾರೆ ಸೀರಿಯಲ್‌ನ ಇಂದಿನ ಸಂಚಿಕೆಯಲ್ಲಿ ಏನೇನೂ ನಡೆಯಲಿದೆ ಎಂಬ ಮುನ್ನೋಟ ದೊರಕಿದೆ. ಭೂಮಿಕಾ ಮತ್ತು ಗೌತಮ್‌ ರೂಂನಲ್ಲಿದ್ದಾರೆ. ಗೌತಮ್‌ ಮೈಕೈ ನೋವಿನಿಂದ ಹಾಸಿಗೆಯಲ್ಲಿ ಮಲಗಿದ್ದಾನೆ. ಆತನ ಸೇವೆ ಮಾಡುತ್ತಿದ್ದಾಳೆ ಭೂಮಿಕಾ. ಈ ಸಂದರ್ಭದಲ್ಲಿ ಗೌತಮ್‌ಗೆ ಕಚಗುಳಿಯಾಗಿದೆ. 
icon

(1 / 12)

ಶಕುಂತಲಾದೇವಿ ಹುನ್ನಾರದಿಂದ ಗೌತಮ್‌ ಮತ್ತು ಭೂಮಿಕಾ ಬದುಕಿನಲ್ಲಿ ಮತ್ತೆ ಸಮಸ್ಯೆ ಆರಂಭವಾಗಿದೆ. ಗುರುಗಳ ಮೂಲಕ ಶಕುಂತಲಾದೇವಿ ಸುಳ್ಳು ಹೇಳಿಸಿದ್ದರು. ಭೂಮಿಕಾ ಮತ್ತು ಗೌತಮ್‌ ಯಾವುದೇ ಕಾರಣಕ್ಕೂ ಒಂದಾಗಬಾರದು, ಹೀಗೆ ಆದ್ರೆ ಭೂಮಿಕಾಳ ಜೀವಕ್ಕೆ ಅಪಾಯ ಎಂದು ಗುರುಗಳ ಮೂಲಕ ಗೌತಮ್‌ಗೆ ಹೇಳಿಸಿದ್ದರು. 
icon

(2 / 12)

ಭೂಮಿಕಾಳನ್ನು ಅಪಾರವಾಗಿ ಪ್ರೀತಿಸುವ ಗೌತಮ್‌ ಇದರಿಂದ ದಿಗಿಲುಗೊಂಡಿದ್ದಾನೆ. ಕಳೆದ ಹಲವು ದಿನಗಳ ಸಂಚಿಕೆಗಳಲ್ಲಿ ಇವರಿಬ್ಬರು ತುಂಬಾ ಹತ್ತಿರವಾಗಿದ್ದರು. ತಕ್ಷಣ ಇವರನ್ನು ಶಕುಂತಲಾ ದೂರಕ್ಕೆ ತಳ್ಳಿದಂತೆ ಆಗಿತ್ತು. 
icon

(3 / 12)

ಗೌತಮ್‌ ಭೂಮಿಕಾಳಿಗೆ ಪ್ರೇಮ ನಿವೇದನೆ ಮಾಡಬೇಕೆಂದು ಪ್ರ್ಯಾಕ್ಟೀಸ್‌ ಮಾಡುತ್ತಿದ್ದ. ಭೂಮಿಕಾ ತನ್ನ ಮನದ ಭಾವನೆಯನ್ನು ಕಾಗದದಲ್ಲಿ ಬರೆದಿದ್ದಳು. ಈ ಪ್ರೇಮಪತ್ರವನ್ನು ಅಶ್ವಿನಿ ನೋಡಿದ್ದಳು. ಗೌತಮ್‌ ಪ್ರ್ಯಾಕ್ಟೀಸ್‌ ಮಾಡುವುದನ್ನು ಶಕುಂತಲಾ ನೋಡಿದ್ದರು.
icon

(4 / 12)

ಇವರಿಬ್ಬರು ಹತ್ತಿರವಾಗುವುದನ್ನು ತಡೆಯಲು ಶಕುಂತಲಾದೇವಿ ಸಡನ್‌ ಅನಾರೋಗ್ಯದ ನಾಟಕವಾಡಿದ್ದರು. ಜ್ಯೋತಿಷಿ ಗುರು ಮೂಲಕ ಗೌತಮ್‌ ಮತ್ತು ಭೂಮಿಕಾರ ಬಗ್ಗೆ ಸುಳ್ಳು ಭವಿಷ್ಯ ಹೇಳಿಸಿದ್ದರು.
icon

(5 / 12)

ಆದರೆ, ಶಕುಂತಲಾ ಏನೇ ಮಾಡಿದರೂ ಇವರಿಬ್ಬರ ಪ್ರೀತಿ ಕಡಿಮೆಯಾಗುವ ಸೂಚನೆ ಇಲ್ಲ. ಭೂಮಿಕಾಳಿಗೆ ಅಪಾಯವಾಗುತ್ತದೆ ಎಂದು ಗೌತಮ್‌ ದೇಗುಲದಲ್ಲಿ ಉರುಳು ಸೇವೆ ಮಾಡುತ್ತಾನೆ. ಬರೀ ನೆಲದ ಮೇಲೆ ತಟ್ಟೆ ಇಲ್ಲದೆ ಊಟ ಮಾಡುತ್ತಾನೆ. ಹಲವು ಹರಕೆ ತೀರಿಸುತ್ತಾನೆ.
icon

(6 / 12)

ಈ ಹರಕೆಯಿಂದ ಗೌತಮ್‌ಗೆ ಒಂದಿಷ್ಟು ಮೈಕೈ ನೋವಾಗಿದೆ. ಹಾಸಿಗೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾನೆ. ಅಲ್ಲಿಗೆ ಬಂದ ಭೂಮಿಕಾ ಬಲವಂತದಿಂದ ಪತಿಯ ಸೇವೆ ಮಾಡುತ್ತಾಳೆ.
icon

(7 / 12)

ಕಾಲು ಒತ್ತುವಾಗ ಕಚುಗುಳಿಯಾಗುತ್ತದೆ ಎಂದು ಗೌತಮ್‌ ಹೇಳುತ್ತಾನೆ. ಬೇಕೆಂದೇ ಭೂಮಿಕಾ ಮತ್ತೆ ಮತ್ತೆ ಕಚಗುಳಿ ಇಡುತ್ತಾಳೆ. 
icon

(8 / 12)

ಈ ಕಚಗುಳಿಯಾಟದ ಬಳಿಕ ಒಂದಿಷ್ಟು ಮಾತುಗಳು ನಡೆಯುತ್ತವೆ. ಗೌತಮ್‌ನ ಸ್ಥಿತಿ ನೋಡಿ ಭೂಮಿಕಾಳಿಗೆ ಅಯ್ಯೋ ಎನಿಸುತ್ತದೆ. 
icon

(9 / 12)

ಇದಾದ ಬಳಿಕ ಶಾಖ ಕೊಡುತ್ತೇನೆ ಎಂದಾಗ ಬೇಡ ಅನ್ತಾನೆ. ಕಷಾಯ ಮಾಡಿಕೊಂಡು ಬರುತ್ತೇನೆ ಎಂದು ಭೂಮಿಕಾ ಹೇಳುತ್ತಾರೆ. 
icon

(10 / 12)

ಆಕೆ ಹೋದಾಗ ಎದ್ದೇಳಲು ಗೌತಮ್‌ ಪ್ರಯತ್ನಿಸುತ್ತಾರೆ. ಆಗ ತಲೆ ತಿರುಗಿದಂತೆ ಆಗಿ ನಡೆಯಲಾಗದೆ ಮತ್ತೆ ಹಾಸಿಗೆಗೆ ಬೀಳುತ್ತಾನೆ. ಭೂಮಿಕಾ ಓಡೋಡಿ ಬಂದು ಆರೈಕೆ ಮಾಡುತ್ತಾಳೆ. ಹೀಗೆ ಇಂದಿನ ಎಪಿಸೋಡ್‌ನಲ್ಲಿ ಗೌತಮ್‌ ಮತ್ತು ಭೂಮಿಕಾರ ನಡುವಿನ ಕಾಳಜಿಯ ಸ್ಟೋರಿ ಇರಲಿದೆ.
icon

(11 / 12)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು.  
icon

(12 / 12)

IPL_Entry_Point

ಇತರ ಗ್ಯಾಲರಿಗಳು