ಕನ್ನಡ ಸುದ್ದಿ  /  Photo Gallery  /  Televison News Amruthadhaare Serial Today Sunday Episode Manya Write Letter To Bhumika Shakuntala Goutham In Fear Pcp

Amruthadhaare: ಭೂಮಿಕಾಳಿಗೆ ಮಾನ್ಯ ಬರೆದ ಪತ್ರದಲ್ಲೇನಿದೆ? ಶಕುಂತಲಾದೇವಿ, ಗೌತಮ್‌ಗೆ ತಳಮಳ- ಅಮೃತಧಾರೆ ಧಾರಾವಾಹಿಯ ಇಂದಿನ ಕಥೆ

  • Amruthadhaare Serial Today Episode: ಭೂಮಿಕಾಳಿಗೆ ಸತ್ಯ ಸಂಗತಿ ತಿಳಿಸಲು ಮಾನ್ಯ ಉದ್ದೇಶಿಸಿದ್ದಳು. ಆದರೆ, ಶಕುಂತಲಾದೇವಿಯು ಮಾನ್ಯಳ ತಾಯಿಗೆ ಹಾನಿ ಮಾಡುವ ಭಯ ಸೃಷ್ಟಿಸಿದ್ದರಿಂದ ಸತ್ಯ ಹೇಳಲಾಗಿಲ್ಲ. ಆದರೆ, ಮಾನ್ಯ ಮನೆಯಿಂದ ಹೋಗುವ ಮುನ್ನ ಭೂಮಿಕಾಳಿಗೆ ಪತ್ರ ಬರೆದಿರುವುದು ಇಂದಿನ ಪ್ರಮೋದಿಂದ ತಿಳಿದುಬಂದಿದೆ.

ಭೂಮಿಕಾಳಿಗೆ ಸತ್ಯ ಸಂಗತಿ ತಿಳಿಸಲು ಮಾನ್ಯ ಉದ್ದೇಶಿಸಿದ್ದಳು. ಆದರೆ, ಶಕುಂತಲಾದೇವಿಯು ಮಾನ್ಯಳ ತಾಯಿಗೆ ಹಾನಿ ಮಾಡುವ ಭಯ ಸೃಷ್ಟಿಸಿದ್ದರಿಂದ ಸತ್ಯ ಹೇಳಲಾಗಿಲ್ಲ. ಆದರೆ, ಮಾನ್ಯ ಮನೆಯಿಂದ ಹೋಗುವ ಮುನ್ನ ಭೂಮಿಕಾಳಿಗೆ ಪತ್ರ ಬರೆದಿದ್ದಾಳೆ.
icon

(1 / 10)

ಝೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ  ಸಂಚಿಕೆಯಲ್ಲಿ ಏನಿರಲಿದೆ ಎಂದು ಪ್ರಮೋ ಬಿಡುಗಡೆ ಮಾಡಿದೆ. ಮಾನ್ಯ ಮನೆಯಿಂದ ಹೊರಕ್ಕೆ ಹೋಗುವ ಮುನ್ನ ಭೂಮಿಕಾಳಿಗೆ ನೀಡಲು ಒಂದು ಪತ್ರವನ್ನು ನೀಡಿರುವುದು ಪ್ರಮೋದಲ್ಲಿ ಬಹಿರಂಗವಾಗಿದೆ.
icon

(2 / 10)

ಮಾನ್ಯಳನ್ನು ಶಕುಂತಲಾದೇವಿ ರೌಡಿ ಕೈಯಲ್ಲಿ ಗೋಡಾನ್‌ನಲ್ಲಿ ಬಂಧನದಲ್ಲಿ ಇರಿಸಿದ್ದರು. ಆದರೆ, ರೌಡಿ ತಲೆಗೆ ಹೊಡೆದು ಮಾನ್ಯ ಅಲ್ಲಿಂದ ಓಡಿ ಬಂದಿದ್ದಳು. ಮಾನ್ಯಳನ್ನು ಶಕುಂತಲಾದೇವಿ ಏಕೆ ಬಂಧನಲ್ಲಿ ಇರಿಸಿದ್ದಾರೆ ಎಂಬ ವಿಚಾರ ಇನ್ನೂ ತಿಳಿದಿಲ್ಲ. 
icon

(3 / 10)

ಇದೇ ಸಮಯದಲ್ಲಿ ಮಾನ್ಯಳೆಂದರೆ ಗೌತಮ್‌ ಕೂಡ ಭಯ ಪಡುತ್ತಾನೆ. ಆತನಿಗೆ ಆಕೆಯ ಮೇಲೆ ಹಿಂದೆ ಪ್ರೀತಿ ಇದ್ದ ಸೂಚನೆಯೂ ಇದೆ. ಗೌತಮ್‌ ಮತ್ತು ಮಾನ್ಯಳ ಪ್ರೀತಿಗೆ ಶಕುಂತಲಾದೇವಿ ಅಡ್ಡಿ ಬಂದಿದ್ದರಾ? ಗೌತಮ್‌ಗೆ ಮಾನ್ಯಳ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಿದ್ದಾರ? ಎಂಬ ಸಂದೇಹವೂ ಪ್ರೇಕ್ಷಕರಲ್ಲಿ ಇದೆ.
icon

(4 / 10)

ಆದರೆ, ರೌಡಿಯಿಂದ ತಪ್ಪಿಸಿಕೊಂಡು ಬರುವ ಸಮಯದಲ್ಲಿ ಮಾನ್ಯ ಇದೇ ಗೌತಮ್‌ ಕಾರಿಗೆ ಡಿಕ್ಕಿ ಹೊಡೆದು ಪ್ರಜ್ಞೆ ತಪ್ಪಿದ್ದಳು. ಆಸ್ಪತ್ರೆಯಿಂದ ಮಾನ್ಯಳನ್ನು ಭೂಮಿಕಾಳೇ ಮನೆಗೆ ಕರೆದುಕೊಂಡು ಬಂದಿದ್ದಳು.
icon

(5 / 10)

ಮನೆಗೆ ಬಂದ ಮಾನ್ಯ ಸತ್ಯ ಸಂಗತಿಯನ್ನು ಭೂಮಿಕಾಳಿಗೆ ತಿಳಿಸಬೇಕೆಂದುಕೊಂಡಿದ್ದಳು. ಆದರೆ, ಶಕುಂತಲಾದೇವಿಯ ಕಿರಾತಕ ಬುದ್ದಿಯಿಂದ ಮಾನ್ಯಳ ತಾಯಿಗೆ ಅಪಾಯವಾಗುವ ಸಾಧ್ಯತೆ ಇದೆ. ಹೀಗಾಗಿ, ಸತ್ಯ ಸಂಗತಿ ಹೇಳದೆ ಮಾನ್ಯ ಮನೆಯಿಂದ ಹೊರಕ್ಕೆ ಹೋಗಿದ್ದಾಳೆ.
icon

(6 / 10)

ಆದರೆ, ಹೀಗೆ ಹೋಗುವ ಮೊದಲು ಒಂದು ಪತ್ರ ಬರೆದಿದ್ದಾಳೆ. ಆ ಪತ್ರದಲ್ಲಿ ಗೌತಮ್‌ ಮತ್ತು ಶಕುಂತಲಾ ಬಗ್ಗೆ ಏನಾದರೂ ಬರೆದಿದ್ದಾರೆಯೇ ಎಂಬ ಕೌತುಕ ಎಲ್ಲರಲ್ಲಿಯೂ ಇದೆ. 
icon

(7 / 10)

ಎಲ್ಲರೂ ಊಟ ಮಾಡುತ್ತಿರುವಾಗಲೇ ಅಡುಗೆಯವರು ಈ ಪತ್ರವನ್ನು ಭೂಮಿಕಾಳಿಗೆ ನೀಡುತ್ತಾರೆ. ಊಟ ಮಾಡುತ್ತಿರುವ ಗೌತಮ್‌, ಶಕುಂತಲಾ, ಜೈದೇವ್‌ ಮುಖ ಕಪ್ಪಿಟ್ಟಿದೆ. ಆ ಪತ್ರದಲ್ಲಿ ಏನಿದೆ ಎಂದು ಭೂಮಿಕಾ ಬಹಿರಂಗಪಡಿಸುತ್ತಾರ ಎಂದು ಇಂದಿನ ಸಂಚಿಕೆಯಲ್ಲಿ ತಿಳಿದುಬರಲಿದೆ.
icon

(8 / 10)

ಒಟ್ಟಾರೆ, ಕಳೆದ ಕೆಲವು ದಿನಗಳಿಂದ ಅಮೃತಧಾರೆ ಸೀರಿಯಲ್‌ನಲ್ಲಿ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಇದೆ. ಈ ಮೂಲಕ ಸೀರಿಯಲ್‌ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈಗ ವಾರಾಂತ್ಯದಲ್ಲೂ ಸೀರಿಯಲ್‌ ಪ್ರಸಾರವಾಗುತ್ತಿದೆ.  
icon

(9 / 10)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(10 / 10)

IPL_Entry_Point

ಇತರ ಗ್ಯಾಲರಿಗಳು