ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಎರಡು ಮೂರಾಗಲು ಗೌತಮ್‌ ದಿವಾನ್‌-ಭೂಮಿಕಾ ಹನಿಮೂನ್‌; ಗೆದ್ದು ಬಾ ಗೆಳೆಯ ಎಂದು ಹಾರೈಸಿದ ಆನಂದ್‌, ಅಮೃತಧಾರೆ ಸೀರಿಯಲ್‌ ಸ್ಟೋರಿ

ಎರಡು ಮೂರಾಗಲು ಗೌತಮ್‌ ದಿವಾನ್‌-ಭೂಮಿಕಾ ಹನಿಮೂನ್‌; ಗೆದ್ದು ಬಾ ಗೆಳೆಯ ಎಂದು ಹಾರೈಸಿದ ಆನಂದ್‌, ಅಮೃತಧಾರೆ ಸೀರಿಯಲ್‌ ಸ್ಟೋರಿ

  • Amruthadhaare Today Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಗೌತಮ್‌ ದಿವಾನ್‌ ಮತ್ತು ಭೂಮಿಕಾರನ್ನು ಹನಿಮೂನ್‌ಗೆ ಕಳುಹಿಗಸುವ ಯೋಜನೆಯನ್ನು ಅಜ್ಜಮ್ಮ ವ್ಯಕ್ತಪಡಿಸಿದ್ದಾರೆ. ಇಬ್ಬರು ಮೂವರಾಗಲೇಬೇಕು ಎಂದು ಅಜ್ಜಿ ಹೇಳಿದ್ದಾರೆ. ಗೆಳೆಯನಿಗೆ ಗುಡ್‌ ಲಕ್‌ ಹೇಳಿದ್ದಾನೆ ಗೆಳೆಯ ಆನಂದ್‌.

ಅಮೃತಧಾರೆ ಧಾರಾವಾಹಿಯಲ್ಲಿ ಕೆಂಚ ಎಂಬಾತ ದಿವಾನ್‌ ಕುಟುಂಬದ ಜಮೀನನ್ನು ತನ್ನ ಹೆಸರಿಗೆ ಬರೆದುಕೊಳ್ಳಲು ಸಂಚು ರೂಪಿಸಿದ್ದಾನೆ. ಸಮಸ್ಯೆ ಇರುವ ಈ ಚಿಕ್ಕಮಗಳೂರು ಎಸ್ಟೇಟ್‌ಗೆ ಶಕುಂತಲಾದೇವಿ ಗೌತಮ್‌ ಮತ್ತು ಭೂಮಿಕಾರನ್ನು ಕಳುಹಿಸಲು ಯೋಜಿಸಿದ್ದಾರೆ.
icon

(1 / 9)

ಗೌತಮ್‌ ಮತ್ತು ಭೂಮಿಕಾ ಹನಿಮೂನ್‌ ಮೂಡ್‌ನಲ್ಲಿದ್ದಾರೆ. ನೀವು ಇಬ್ಬರು ಇದ್ದದ್ದು ಮೂವರು ಆಗಲೇಬೇಕು ಎಂದು ಅಜ್ಜಮ್ಮ ಫರ್ಮಾನು ಹೊರಡಿಸಿದ್ದಾರೆ. ಈ ಮೂಲಕ ಇವರಿಬ್ಬರನ್ನು ಹನಿಮೂನ್‌ಗೆ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ. 
icon

(2 / 9)

ಇನ್ನೊಂದೆಡೆ ಗೌತಮ್‌ ಮತ್ತು ಭೂಮಿಕಾ ಬಲೂನ್‌ಗಳ ಜತೆ ಆಡುತ್ತ ಇದ್ದಾರೆ. ಬಲೂನ್‌ ನೋಡುತ್ತ ಭೂಮಿಕಾಳಿಗೆ ಗೌತಮ್‌ನ ಹೊಟ್ಟೆ ನೆನಪಿಗೆ ಬಂದು ಜೋರಾಗಿ ನಕ್ಕಿದ್ದಾಳೆ. 
icon

(3 / 9)

ನನ್ನನ್ನು ಡುಮ್ಮ ಅನ್ನೋದ್ಯಾಕೆ ನಾನು ಸಿಕ್ಸ್‌ ಪ್ಯಾಕ್‌ ಮಾಡ್ತಿನಿ ಎಂದು ಗೌತಮ್‌ ಹೇಳಿದಾಗ "ನೀವು ಇದೇ ರೀತಿ ಇದ್ದರೆ ಚೆನ್ನ" ಎಂದು ಭೂಮಿಕಾ ಹೇಳುತ್ತಾರೆ. 
icon

(4 / 9)

ಇನ್ನೊಂದೆಡೆ ಗೌತಮ್‌ ಮತ್ತು ಭೂಮಿಕಾ ಬಲೂನ್‌ ಜತೆ ಆಡುವ ದೃಶ್ಯವೂ ಇದೆ. ಈ ಸಮಯದಲ್ಲಿ ಗೌತಮ್‌ ಭೂಮಿಕಾರನ್ನು ಮೇಲಕ್ಕೆ ಎತ್ತುತ್ತಾರೆ. ಈ ಸಮಯದಲ್ಲಿ ಈ ದೃಶ್ಯ ಆನಂದ್‌ ನೋಡುತ್ತಾನೆ. ಇದು ಬರೀ ಟ್ರೇಲರ್‌ ಅಷ್ಟೇ, ಮಾಡಬೇಕಿರುವುದು  ಬೇರೆಯದ್ದೇ ಇದೆ ಅನ್ನುತ್ತಾನೆ.
icon

(5 / 9)

ಗೆದ್ದು ಬಾ ಗೆಳೆಯ ಆಲ್‌ ದಿ ಬೆಸ್ಟ್‌ ಎಂದು ಆನಂದ್‌ ಹೇಳುತ್ತಾನೆ. ಈ ನನ್ನ ಮಗ ಏನು ಹೇಳ್ತಾನೆ ಎನ್ನೋದೇ ಅರ್ಥ ಆಗೋದಿಲ್ಲ ಎಂದು ಗೌತಮ್‌ ಅಂದುಕೊಳ್ಳುತ್ತಾರೆ.
icon

(6 / 9)

ಒಟ್ಟಾರೆ ಭೂಮಿಕಾ ಮತ್ತು ಗೌತಮ್‌ ಮಗುವನ್ನು  ನೋಡಲು ಎಲ್ಲರೂ ಕಾತರರಾಗಿದ್ದಾರೆ. ಪ್ರೇಕ್ಷಕರೂ ಈ ಎಪಿಸೋಡ್‌ ಕುರಿತು ಸಾಕಷ್ಟು ಕುತೂಹಲಗೊಂಡಿದ್ದಾರೆ.  
icon

(7 / 9)

ಇದೇ ಸಮಯದಲ್ಲಿ ರೌಡಿ ಕೆಂಚನಿಂದ ಇವರಿಗೆ ಏನಾದರೂ ತೊಂದರೆಯಾಗಬಹುದೇ? ರೌಡಿಯ ತೊಂದರೆಯನ್ನು ಗೌತಮ್‌ ಹೇಗೆ ನಿಭಾಯಿಸ್ತಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ. ಹೆಚ್ಚಿನ ವಿವರ ತಿಳಿಯಲು ಇಂದು ಸಂಜೆ ಝೀ ಕನ್ನಡದಲ್ಲಿ ಪ್ರಸಾರವಾಗುವ ಅಮೃತಧಾರೆ ಸೀರಿಯಲ್‌ ನೋಡಬಹುದು. 
icon

(8 / 9)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು
icon

(9 / 9)

IPL_Entry_Point

ಇತರ ಗ್ಯಾಲರಿಗಳು