Truth or Dare: ಥ್ಯಾಂಕ್ ಯು ಗೌತಮ್ ಅವರೇ ಇದು ಹೂವಲ್ಲ, ನಿಮ್ಮ ಹಾರ್ಟ್; ಅಮೃತಧಾರೆ ಇಂದಿನ ಸಂಚಿಕೆಯಲ್ಲಿ ಹೊರಬೀಳಲಿದೆ ಸತ್ಯ
- Amruthadhaare Today Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರವಾಹಿಯ ಇಂದಿನ ಸಂಚಿಕೆಯಲ್ಲಿ ಟ್ರೂಥ್ ಆರ್ ಡೇರ್ ಆಟ ನಡೆಯಲಿದೆ. ಈ ಸಮಯದಲ್ಲಿ ಆನಂದ್, ಗೌತಮ್, ಭೂಮಿಕಾ, ಅಪರ್ಣಾ, ಅಪೇಕ್ಷಾ, ಪಾರ್ಥ ಕೆಲವೊಂದು ಪ್ರಶ್ನೆಗಳಿಗೆ ಸತ್ಯದ ಮತ್ತು ಧೈರ್ಯದ ಉತ್ತರಗಳನ್ನು ನೀಡಬೇಕಿದೆ. ಈ ಸಮಯದಲ್ಲಿ ಹಲವು ಸತ್ಯಗಳು ಹೊರಬರಲಿವೆ.
- Amruthadhaare Today Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರವಾಹಿಯ ಇಂದಿನ ಸಂಚಿಕೆಯಲ್ಲಿ ಟ್ರೂಥ್ ಆರ್ ಡೇರ್ ಆಟ ನಡೆಯಲಿದೆ. ಈ ಸಮಯದಲ್ಲಿ ಆನಂದ್, ಗೌತಮ್, ಭೂಮಿಕಾ, ಅಪರ್ಣಾ, ಅಪೇಕ್ಷಾ, ಪಾರ್ಥ ಕೆಲವೊಂದು ಪ್ರಶ್ನೆಗಳಿಗೆ ಸತ್ಯದ ಮತ್ತು ಧೈರ್ಯದ ಉತ್ತರಗಳನ್ನು ನೀಡಬೇಕಿದೆ. ಈ ಸಮಯದಲ್ಲಿ ಹಲವು ಸತ್ಯಗಳು ಹೊರಬರಲಿವೆ.
(1 / 10)
ಗೌತಮ್ ಮತ್ತು ಭೂಮಿಕಾರ ಫಸ್ಟ್ ನೈಟ್ ಸುಖಾಂತ್ಯವಾಗಿದೆ. ಇದೇ ಖುಷಿಯಲ್ಲಿ ಆನಂದ್ ಮನೆಯಲ್ಲಿ ಪಾರ್ಟಿ ಅರೇಂಜ್ ಮಾಡಲಾಗಿದೆ. ಪಾರ್ಟಿಗೆ ಗೌತಮ್ ಆನಂದ್, ಅಪರ್ಣಾ ಭೂಮಿಕಾ ಮಾತ್ರವಲ್ಲದೆ ಅಪೇಕ್ಷಾ ಮತ್ತು ಪಾರ್ಥ ಆಗಮಿಸಿದ್ದಾರೆ.
(2 / 10)
ಈ ಪಾರ್ಟಿಯಲ್ಲಿ ಗೌತಮ್‌ಗೆ ಇಷ್ಟವೆಂದು ಇದೇ ಮೊದಲ ಬಾರಿಗೆ ಭೂಮಿಕಾ ನಾನ್ ವೆಜ್ ಅಡುಗೆ ಮಾಡಿದ್ದಾರೆ. ಈ ವಿಷಯ ತಿಳಿಯದ ಗೌತಮ್ ಈಗಾಗಲೇ ಅಪರ್ಣಾರನ್ನು ಹೊಗಳಿದ್ದಾರೆ. ಅಡುಗೆ ಮಾಡಿದ್ದು ನಾನು ಅಪರ್ಣಾರನ್ನು ಹೊಗಳ್ತಾರೆ ಎಂದು ಮನಸ್ಸಲ್ಲಿಯೇ ಭೂಮಿಕಾ ಕೋಪಿಸಿಕೊಂಡಿದ್ದಾರೆ.
(3 / 10)
ನಾನ್ ವೆಜ್ ಅಡುಗೆ ಮಾಡಿದ್ದು ಭೂಮಿಕಾ ಎಂದು ತಿಳಿದಾಗ ಗೌತಮ್‌ಗೆ ಹೃದಯ ತುಂಬಿ ಬಂದಿದೆ. ಒಲವ ಅಮೃತಧಾರೆ ಸುರಿಸಿದ್ದಾರೆ. ಹೀಗೆ, ಪಾರ್ಟಿ ನಡೆಯುತ್ತಿರುವಾಗ "ಯಾಕೋ ಪಾರ್ಟಿ ಬೋರ್ ಅನಿಸ್ತಾ ಇದೆ" ಎಂದು ಎಲ್ಲರಿಗೂ ಅನಿಸಿದೆ.
(4 / 10)
ಈ ಸಮಯದಲ್ಲಿ ಪಾರ್ಥ "ಟ್ರೂಥ್ ಆರ್ ಡೇರ್" ಆಟ ಆಡೋಣ ಎನ್ನುತ್ತಾರೆ. ನೀರಿನ ಬಾಟಲ್ ಅನ್ನು ತಿರುಗಿಸಿದಾಗ ಅದು ಯಾರ ಕಡೆಗೆ ಮುಖ ಮಾಡಿ ನಿಲ್ಲುತ್ತದೆಯೋ ಅವರಿಗೆ ಪ್ರಶ್ನೆ ಕೇಳಲಾಗುತ್ತದೆ. ಟ್ರೂಥ್ ಅಥವಾ ಡೇರ್ ಉತ್ತರ ನೀಡಬೇಕು.
(5 / 10)
ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರಮೋದಲ್ಲಿ ಗೌತಮ್ ಮತ್ತು ಆನಂದ್ ಒಂದೊಂದು ಪ್ರಶ್ನೆಗೆ ಧೈರ್ಯವಾಗಿ ಉತ್ತರ ನೀಡಿದ್ದಾರೆ. ಮೊದಲ ಪ್ರಶ್ನೆ ಆನಂದ್‌ಗೆ ಬಂದಿದೆ.
(6 / 10)
ನೀನು ಕಾಲೇಜಲ್ಲಿ ಎಷ್ಟು ಜನರಿಗೆ ಲವ್ ಲೆಟರ್ ಕೊಟ್ಟಿದ್ದಿ ಎಂಬ ಗೌತಮ್ ಪ್ರಶ್ನೆಗೆ ಆನಂದ್ ಡೇರ್ ಉತ್ತರ ನೀಡುತ್ತಾರೆ. ನಾನು ತುಂಬಾ ಜನರಿಗೆ ಲವ್ ಲೆಟರ್ ನೀಡಿದ್ದೇನೆ. ಕೊನೆಗೆ ಸಿಕ್ಕಿದ್ದು ಇವಳು ಅಪರ್ಣಾ ಎನ್ನುತ್ತಾನೆ.
(7 / 10)
ಇದೇ ಸಮಯದಲ್ಲಿ ಗೌತಮ್‌ಗೂ ಡೇರ್ ಉತ್ತರ ನೀಡುವ ಸಮಯ ಬಂದಿದೆ. ನೀನು ಮಲ್ಲಿಗೆ ಹೂವು ತಂದುಕೊಟ್ಟಾಗ ಭೂಮಿಕಾ ಹೇಗೆ ರಿಯಾಕ್ಟ್ ಮಾಡ್ತಾರೆ ಎಂದು ಗೌತಮ್‌ಗೆ ಆನಂದ್ ಪ್ರಶ್ನೆ ಕೇಳುತ್ತಾನೆ.
(8 / 10)
ಇದಕ್ಕೆ ಡೇರ್ ಉತ್ತರ ನೀಡಿದ್ದಾರೆ ಗೌತಮ್ ದಿವಾನ್. ಭೂಮಿಕಾ ನಾಚಿಕೆಯಿಂದ "ಥ್ಯಾಂಕ್ ಯು ಗೌತಮ್ ಅವರೇ, ಇದು ಹೂವಲ್ಲ ನಿಮ್ಮ ಹಾರ್ಟ್" ಎನ್ನುತ್ತಾರೆ ಎಂದಾಗ ಎಲ್ಲರೂ ನಕ್ಕಿದ್ದಾರೆ.
(9 / 10)
ಇದೇ ರೀತಿ ಉಳಿದವರಿಗೂ ಪ್ರಶ್ನೆಗಳು ಕಾದಿವೆ. ಯಾರು ಏನು ಉತ್ತರ ನೀಡುತ್ತಾರೆ ಎನ್ನುವುದು ಇಂದಿನ ಅಮೃತಧಾರೆ ಧಾರಾವಾಹಿಯಲ್ಲಿ ತಿಳಿಯಲಿದೆ.
ಇತರ ಗ್ಯಾಲರಿಗಳು