Amruthadhaare: ನಾನೀಗ ಅಪೇಕ್ಷಾ ಪಾರ್ಥ ದಿವಾನ್‌, ಅಮೃತಧಾರೆಯಲ್ಲಿ ಅಕ್ಕತಂಗಿ ಜಗಳ ಶುರು; ಗೌರಿಶಂಕರ ಅಗ್ನಿಸಾಕ್ಷಿ ಆಗ್ತಿದೆ ಎಂದ ಪ್ರೇಕ್ಷಕ-televison news amruthadhare serial episode today sisters fighting started bhumika apeksha gowrishankra agnisakhsi pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amruthadhaare: ನಾನೀಗ ಅಪೇಕ್ಷಾ ಪಾರ್ಥ ದಿವಾನ್‌, ಅಮೃತಧಾರೆಯಲ್ಲಿ ಅಕ್ಕತಂಗಿ ಜಗಳ ಶುರು; ಗೌರಿಶಂಕರ ಅಗ್ನಿಸಾಕ್ಷಿ ಆಗ್ತಿದೆ ಎಂದ ಪ್ರೇಕ್ಷಕ

Amruthadhaare: ನಾನೀಗ ಅಪೇಕ್ಷಾ ಪಾರ್ಥ ದಿವಾನ್‌, ಅಮೃತಧಾರೆಯಲ್ಲಿ ಅಕ್ಕತಂಗಿ ಜಗಳ ಶುರು; ಗೌರಿಶಂಕರ ಅಗ್ನಿಸಾಕ್ಷಿ ಆಗ್ತಿದೆ ಎಂದ ಪ್ರೇಕ್ಷಕ

  • Amruthadhaare Serial: ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನಲ್ಲಿ ಈಗ ಅಕ್ಕತಂಗಿ ಜಗಳ ಶುರುವಾಗಿದೆ. ಹೌದು, ಭೂಮಿಕಾಳ ಕುರಿತು ಅಪೇಕ್ಷಾಳ ಮನಸ್ಸಲ್ಲಿ ವಿಷಬೀಜ ಬಿತ್ತುವಲ್ಲಿ ಶಕುಂತಲಾದೇವಿ ಟೀಮ್‌ ಯಶಸ್ವಿಯಾಗಿದೆ. ನಾನೀಗ ಅಪೇಕ್ಷಾ ಸದಾಶಿವ್‌ ಅಲ್ಲ, ನಾನೀಗ ಅಪೇಕ್ಷಾ ಪಾರ್ಥ ದಿವಾನ್‌ ಎಂದು ಹೇಳುವಷ್ಟು ಧಿಮಾಕು ಅಪ್ಪಿ ಮನಸ್ಸಲ್ಲಿ ಮೂಡಿದೆ.

Amruthadhaare Serial Today Episode: ಅಮೃತಧಾರೆ ಸೀರಿಯಲ್‌ನ ಇಂದಿನ ಎಪಿಸೋಡ್‌ನಲ್ಲಿ ಭೂಮಿಕಾಳ ವಿರುದ್ಧವೇ ಅಪೇಕ್ಷಾ ಮಾತನಾಡುತ್ತಾಳೆ. "ನಾನು ಈ ಮನೆಗೆ ಸೊಸೆಯಾಗಿ ಬಂದದ್ದು ನಿನಗೆ ಶಾಕ್‌ ಆಗಿದೆಯಲ್ವ ಎಂದು ಅಪ್ಪಿ ಕೇಳುತ್ತಾಳೆ. ಇದನ್ನು ಕೇಳಿ ಭೂಮಿಕಾಗೆ ಅಚ್ಚರಿಯಾಗುತ್ತದೆ. ತನ್ನನ್ನು ಎರಡನೇ ಅಮ್ಮ ಎಂದುಕೊಂಡ ಅಪ್ಪಿ ಇವಳೇನ ಎಂಬ ಭಾವ ಮೂಡುತ್ತದೆ.
icon

(1 / 10)

"ನನಗೆ ಎಲ್ಲಾ ಗೊತ್ತು ಅಕ್ಕ. ಬೆನ್ನ ಹಿಂದೆ ಯಾರು ಏನೆಲ್ಲ ಮಾತನಾಡಿದ್ರು. ಏನೆಲ್ಲ ಮಾಡಿದ್ರು ಎಂದು ನನಗೆ ಗೊತ್ತು ಅಕ್ಕ" ಎಂದು ಅಪೇಕ್ಷಾ ಹೇಳುತ್ತಾಳೆ. "ಅಲ್ಲ ಅಪ್ಪಿ, ನೀನು ಮತ್ತು ಪ್ರೀತಿಸ್ತಾ ಇದ್ದೀರಿ ಎಂದು ಗೊತ್ತಾದಗ ಎಲ್ಲರಿಗಿಂತ ಖುಷಿಪಟ್ಟವಳು ನಾನು" ಎಂದು ಭೂಮಿಕಾ ಹೇಳುತ್ತಾಳೆ.  
icon

(2 / 10)

"ನಾಟಕ ಮಾಡೋದನ್ನು ಯಾವತ್ತು ಕಲಿತೆ ಅಕ್ಕಾ" ಎಂದು ಅಪೇಕ್ಷಾ ಹೇಳುತ್ತಾಳೆ. "ನಿನ್ನ ಮೇಲೆ ಇಷ್ಟು ನಂಬಿಕೆ ಇಟ್ಟ  ನನಗೆ ನೀನು ಈ ರೀತಿ ಮಾಡಬಾರದಿತ್ತು" ಎಂದು ಹೇಳುತ್ತಾಳೆ. "ಅಪ್ಪಿ ಪ್ಲೀಸ್‌" ಎಂದು ಭೂಮಿಕಾ ಹೇಳಿದಾಗ "ಬೇಡಕ್ಕ, ನೀನು ಎಷ್ಟು ತೇಪೆ ಹಚ್ಚಿದ್ರು ನೋ ಯೂಸ್‌. ಬೈದವೇ ನಾನೀಗ ಅಪೇಕ್ಷಾ ಸದಾಶಿವ ಅಲ್ಲ, ಅಪೇಕ್ಷಾ ಪಾರ್ಥ ದಿವಾನ್‌" ಎಂದು ಧಿಮಾಕಿನಿಂದ ಹೇಳುತ್ತಾಳೆ. 
icon

(3 / 10)

ಇದೆಲ್ಲ ಶಕುಂತಲಾ ಆಡುತ್ತಿರುವ ನಾಟಕ ಎಂದು ಅಪೇಕ್ಷಾಗೆ ಗೊತ್ತಿಲ್ಲ. ಅಕ್ಕ ತಂಗಿ ನಡುವೆ ಜಗಳ ತಂದು ಖುಷಿ ಪಡ್ತಾ ಇದ್ದಾರೆ ಶಕುಂತಲಾ. ಯಾಕೆ ಇವರಿಬ್ಬರ ಮದುವೆ ಮಾಡಿದ್ರಿ ಎಂದು ಭೂಮಿಕಾ ಕೇಳಿದಾಗ "ಪಾರ್ಥನ ನೋವು ನೋಡಲಾಗಲಿಲ್ಲ" ಎಂದು ಶಕುಂತಲಾ ಹೇಳುತ್ತಾರೆ. ಇದೇ ಸಮಯದಲ್ಲಿ ಈ ಹಿಂದೆ ರೆಕಾರ್ಡ್‌ ಮಾಡಿದ ವಿಡಿಯೋವನ್ನು ಅಪೇಕ್ಷಾ ನೋಡುವಂತೆ ಮಾಡು ಎಂದು ಸಹೋದರನಿಗೆ ಹೇಳುತ್ತಾರೆ.
icon

(4 / 10)

"ನಿಮ್ಮಿಬ್ಬರ ಮದುವೆ ನಡೆದದ್ದು ನಿನ್ನ ಅಕ್ಕನಿಗೆ ಇಷ್ಟವಿಲ್ಲ. ಇದೆಲ್ಲ ಆದದ್ದು ನಿನ್ನ ಅತ್ತೆಯ ಸಪೋರ್ಟ್‌ನಿಂದ ಎಂದು ಹೇಳು" ಎಂದು ಶಕುಂತಲಾದೇವಿ ಲಕ್ಷ್ಮಿಕಾಂತ್‌ಗೆ ಹೇಳುತ್ತಾರೆ. ಪೆನ್‌ಡ್ರೈವ್‌ ರಾಜಕಾರಣ ಮಾಡಲು ಸಹೋದರ ಮುಂದಾಗುತ್ತಾನೆ.
icon

(5 / 10)

ಮನೆಹಾಳ ಮಾವ ಅಪೇಕ್ಷಾಳನ್ನು ಭೇಟಿಯಾಗುತ್ತಾನೆ. "ನೀವಿಬ್ಬರು ಜೋಡಿಯಾಗಲು ಅತ್ತೆಯೇ ಕಾರಣ. ಅತ್ತೆ ಜಾಗದಲ್ಲಿ ಯಾರೇ ಇದ್ರು ಈ ಮದುವೆ ನಡೆಯುತ್ತಿರಲಿಲ್ಲ. ಯಾಕೆಂದ್ರೆ ನಿನ್ನ ಮನೆಯಲ್ಲಿ ನಿನ್ನ ಅಪ್ಪನಿಗೆ ಇಷ್ಟ ಇರಲಿಲ್ಲ. ನೀನು ತುಂಬಾ ಪ್ರೀತಿಸುವ ನಿನ್ನ ಅಕ್ಕನಿಗೂ ಈ ಮದುವೆ ಇಷ್ಟ ಇರಲಿಲ್ಲ" ಎಂದು ಹೇಳುತ್ತಾನೆ. ಇದಾದ ಬಳಿಕ ಪೆನ್‌ಡ್ರೈವ್‌ ವಿಚಾರದ ಮೂಲಕ ಆಕೆಯ ಮನಸ್ಸನ್ನು ಇನ್ನಷ್ಟು ಹಾಳು ಮಾಡುತ್ತನೆ. ಇದಾದ ಬಳಿಕವೇ ಭೂಮಿಕಾಳ ಮುಂದೆ ಅಪೇಕ್ಷಾ ನಿಂತು "ನಾನು ಅಪೇಕ್ಷಾ ಪಾರ್ಥ ದಿವಾನ್‌" ಹೇಳುವಷ್ಟು ಆಗುತ್ತಾಳೆ.
icon

(6 / 10)

"ಎಲ್ಲಾ ಸೀರಿಯಲ್‌ ಒಂದೇ" "ಎರಡನೇ ಅಗ್ನಿಸಾಕ್ಷಿಯಾಗ್ತಿದೆ" "ಇದು ಅಗ್ನಿಸಾಕ್ಷಿ 2" "ಅದಕ್ಕೆ ಹೇಳೋದ್ ಒಂದೇ ಮನೆಗೆ  ಅಕ್ಕ ತಂಗಿನ ಕೊಡಬಾರದು" "ಗೌರಿಶಂಕರ್ ಮತ್ತು ಅಮೃತದಾರೆ ಅಲ್ಲಿ ಅಕ್ಕ ತಂಗಿ ನಡುವೆ ಜಗಳ" "ಕರ್ಮ ಇನ್ನ ಶುರು ಅಕ್ಕ ತಂಗಿ ಜಗಳ, ಎಲ್ಲಾ ಸೀರಿಯಲ್ ಅಲ್ಲಿ ಇದೆ ಸ್ಟೋರಿ" ಎಂದೆಲ್ಲ ಸೋಷಿಯಲ್‌ ಮೀಡಿಯಾದಲ್ಲಿ ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ. 
icon

(7 / 10)

ಇನ್ನೊಂದೆಡೆ ಜೈದೇವ್‌ಗೆ ಶಕುಂತಲಾ ಎಚ್ಚರಿಕೆ ನೀಡುತ್ತಾಳೆ. ಇನ್ನು ಮುಂದೆ ಅಪೇಕ್ಷಾ ಮತ್ತು ಪಾರ್ಥನ ತಂಟೆಗೆ ಹೋಗಬೇಡ ಎಂದು ಹೇಳುತ್ತಾಳೆ. ಇವರ ವಿರುದ್ಧ ರೌಡಿಗಳನ್ನು ಬಿಟ್ಟದ್ದು ಇದೇ ಜೈದೇವ್‌ ಎಂದು ಶಕುಂತಲಾದೇವಿಗೆ ತಿಳಿದಿರುತ್ತದೆ.
icon

(8 / 10)

(9 / 10)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(10 / 10)

ಇತರ ಗ್ಯಾಲರಿಗಳು