Amruthadhaare: ಅಪೇಕ್ಷಾನ ಮನೆ ತುಂಬಿಸಿಕೊಳ್ತಾರ ಅಜ್ಜಮ್ಮ; ತಲೆ ತಗ್ಗಿಸಿದ್ರು ಗೌತಮ್‌ ದಿವಾನ್‌- ಅಮೃತಧಾರೆ ಸೀರಿಯಲ್‌ ಇಂದಿನ ಕಥೆ-televison news amruthadhare serial today episode apeksha partha marriage ajjamma reaction angry ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amruthadhaare: ಅಪೇಕ್ಷಾನ ಮನೆ ತುಂಬಿಸಿಕೊಳ್ತಾರ ಅಜ್ಜಮ್ಮ; ತಲೆ ತಗ್ಗಿಸಿದ್ರು ಗೌತಮ್‌ ದಿವಾನ್‌- ಅಮೃತಧಾರೆ ಸೀರಿಯಲ್‌ ಇಂದಿನ ಕಥೆ

Amruthadhaare: ಅಪೇಕ್ಷಾನ ಮನೆ ತುಂಬಿಸಿಕೊಳ್ತಾರ ಅಜ್ಜಮ್ಮ; ತಲೆ ತಗ್ಗಿಸಿದ್ರು ಗೌತಮ್‌ ದಿವಾನ್‌- ಅಮೃತಧಾರೆ ಸೀರಿಯಲ್‌ ಇಂದಿನ ಕಥೆ

  • Amruthadhare Serial Today Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಹೊಸದಾಗಿ ಮದುವೆಯಾದ ಪಾರ್ಥ ಮತ್ತು ಅಪೇಕ್ಷಾಳನ್ನು ನೋಡಿ ಅಜ್ಜಮ್ಮ ಆಘಾತಕ್ಕೆ ಒಳಗಾಗುತ್ತಾರೆ. ಇವರಿಬ್ಬರಿಗೆ ಮನೆಗೆ ಎಂಟ್ರಿ ನೀಡಲು ಅಜ್ಜಮ್ಮ ಹಿಂದೇಟು ಹಾಕಿದ್ದಾರೆ.

Amruthadhare Serial Today Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರಮೋ ಬಿಡುಗಡೆ ಮಾಡಿದೆ. ಮಾಗಡಿ ರಸ್ತೆಯ ಶಿವನ ದೇಗುಲದಲ್ಲಿ ಮದುವೆಯಾದ ಅಪೇಕ್ಷಾ ಮತ್ತು ಪಾರ್ಥ ಮನೆಗೆ ಬಂದಿದ್ದಾರೆ. ಅವರಿಗೆ ಈಗ ಅಜ್ಜಮ್ಮನನ್ನು ಎದುರಿಸುವ ಸವಾಲು ಬಂದಿದೆ.
icon

(1 / 9)

ಶಕುಂತಲಾದೇವಿ ಪ್ರಯತ್ನ, ಭೂಮಿಕಾ  ಸದಾಶಿವನ ಅಸಮ್ಮತಿ, ಜೈದೇವ್‌ನಿಂದ ಕೊಲೆ ಪ್ರಯತ್ನ ಇತ್ಯಾದಿಗಳ ನಡುವೆಯೂ ಅಪೇಕ್ಷಾ ಮತ್ತು ಪಾರ್ಥ ಮದುವೆಯಾಗಿದ್ದಾರೆ. ಶಿವನ ದೇಗುಲದ ಹೊರಗೆ ಗೌತಮ್‌ ದಿವಾನ್‌ ಅವರು ಜೈದೇವ್‌ ರೌಡಿಗಳ ಜತೆ ಫೈಟಿಂಗ್‌ ಮಾಡುತ್ತ ಇರುತ್ತಾರೆ. ಜೈದೇವ್ ಅಲ್ಲಿಂದ ಎಸ್ಕೆಪ್‌ ಆಗುತ್ತಾನೆ. ದೇಗುಲದ ಒಳಗೆ ಬಂದು ನೋಡಿದಾಗ ಪಾರ್ಥ ಮತ್ತು ಅಪ್ಪಿ ಮದುವೆಯಾಗಿರುತ್ತದೆ.
icon

(2 / 9)

ಇದನ್ನು ನೋಡಿ ಗೌತಮ್‌ ಮತ್ತು ಆನಂದ್‌ಗೆ ಶಾಕ್‌ ಆಗುತ್ತದೆ. ಕೊನೆಗೆ ಅನಿವಾರ್ಯವಾಗಿ ಇವರನ್ನು  ಒಪ್ಪಿಕೊಳ್ಳುತ್ತಾರೆ. ಹೀಗೆ ಅವರನ್ನು ಮನೆಗೆ ಕರೆದುಕೊಂಡು ಬಂದಾಗ ಅಜ್ಜಮ್ಮರಿಗೆ ಆಘಾತವಾಗುತ್ತದೆ. ಯಾಕೋ ಹೀಗೆ ಮಾಡಿದ್ರಿ, ಹೇಳುವವರು ಕೇಳುವವರು ಯಾರು ಇಲ್ವಾ ಎಂದು ಕೇಳುತ್ತಾರೆ.
icon

(3 / 9)

ಈ ಸಮಯದಲ್ಲಿ ಗೌತಮ್‌ ಈ ಮದುವೆ ನಾನೇ ಮಾಡಿಸಿದ್ದು. ಇವರಿಬ್ಬರನ್ನು ಈ ಸ್ಥಿತಿಯಲ್ಲಿ ನೋಡಲು ಆಗಲಿಲ್ಲ ಎನ್ನುತ್ತಾರೆ. ಇದನ್ನೆಲ್ಲ ನೋಡಲು ನಾನು ಬದುಕಿದ್ದೇನಾ ಎಂದು ಅಜ್ಜಮ್ಮ ಗೋಳೋ ಅನ್ತಾರೆ.
icon

(4 / 9)

ಇವರಿಬ್ಬರು ಮದುವೆಯಾಗಿ ಬಂದಿರುವುದನ್ನು ನೋಡಿದ ಭೂಮಿಕಾಳಿಗೆ ಅಚ್ಚರಿಯಾಗುತ್ತದೆ. ತಾನು ಬೇಡ ಎಂದರೂ ತನ್ನ ಮಾತು ಕೇಳದೆ ಇವರಿಬ್ಬರು ಮದುವೆಯಾಗಿರುವುದು ಅವಳ ಅಚ್ಚರಿಗೆ ಕಾರಣವಾಗಿದೆ. ಮಲ್ಲಿ ಕೂಡ ಅಚ್ಚರಿಯಿಂದ ನೋಡಿದ್ದಾಳೆ.
icon

(5 / 9)

ಮದುವೆ ತಾನು ಮಾಡಿಸಿದಂತೆ ಆಗಬೇಕು ಎಂದು ಶಕುಂತಲಾದೇವಿ ಅಂದುಕೊಳ್ಳುತ್ತಾರೆ. ಆದರೆ, ಈ ಸಮಯದಲ್ಲಿ ಈ ಕ್ರೆಡಿಟ್‌ ಗೌತಮ್‌ಗೆ ಹೋಗುತ್ತದೆ. ಭೂಮಿಕಾ ಗೆಲ್ಲದೆ ಇದ್ದರೂ ಶಕುಂತಲಾದೇವಿ ಸೋತಂತೆ ಆಗಿದೆ.
icon

(6 / 9)

ಮುಂದಿನ ದಿನಗಳಲ್ಲಿ ಭೂಮಿಕಾ ಮತ್ತು ಅಪೇಕ್ಷಾ ಹೇಗಿರಲಿದ್ದಾರೆ. ಒಂದೇ ಮನೆಯಲ್ಲಿ ಅಕ್ಕತಂಗಿ ಅನ್ಯೋನ್ಯವಾಗಿರಬಹುದೇ? ಅಪೇಕ್ಷಾಳಿಗೆ ಅಕ್ಕನ ಮೇಲೆ ಕೋಪ ಇರಬಹುದೇ? ಮದುವೆಗೆ ಒಪ್ಪೊಲ್ಲ ಎಂದು ಭೂಮಿಕಾ ಹೇಳಿರುವ ವಿಡಿಯೋ ಇಟ್ಕೊಂಡು ಶಕುಂತಲಾದೇವಿ ಆಟ  ಆಡಬಹುದೇ? ಹೀಗೆ ಈ ಸೀರಿಯಲ್‌ ವಿಸ್ತರಿಸಲು ನಿರ್ದೇಶಕರಿಗೆ ಸಾಕಷ್ಟು ಅವಕಾಶವಿದೆ.
icon

(7 / 9)

ಒಟ್ಟಾರೆ, ಕಳೆದ ಕೆಲವು ದಿನಗಳಿಂದ ಅಮೃತಧಾರೆಯಲ್ಲಿ ಪಾರ್ಥ ಮತ್ತು ಅಪೇಕ್ಷಾರ ಮದುವೆ ವಿಷಯವೇ ದೊಡ್ಡ ಚಿಂತೆಯಾಗಿತ್ತು. ಇವರಿಬ್ಬರು ಮದುವೆಯಾಗುವುದನ್ನು ತಪ್ಪಿಸುವ ಸಾಕಷ್ಟು ಪ್ರಯತ್ನಗಳು  ಆಗಿದ್ದವು. ಈ ಸಮಯದಲ್ಲಿ ಏನೇಲ್ಲ ವಿದ್ಯಮಾನಗಳಾಗಿದ್ದವು. ಸೀರಿಯಲ್‌ ಈಗ ಮತ್ತೆ ಲಯಕ್ಕೆ ಮರಳುವ ಸೂಚನೆಯಿದೆ.  
icon

(8 / 9)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(9 / 9)

ಇತರ ಗ್ಯಾಲರಿಗಳು