Amruthadhaare: ಅಪ್ಪಿ-ಪಾರ್ಥ ಒಂದಾಗಲು ಬೆಂಬಲ ನೀಡ್ತಾರ ಗೌತಮ್ ದಿವಾನ್; ಮತ್ತೊಂದು ಮಹಾ ತಿರುವಿನತ್ತ ಅಮೃತಧಾರೆ ಸೀರಿಯಲ್
- Amruthadhare Serial Today Episode: ಕಳೆದ ಕೆಲವು ದಿನಗಳಿಂದ ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಅಪೇಕ್ಷಾ ಮತ್ತು ಪಾರ್ಥನ ಪ್ರೀತಿಯ ನೋವು, ಗೋಳಿನ ಕಥೆ ಪ್ರೇಕ್ಷಕರಿಗೆ ಬೇಸರ ತರಿಸಿತ್ತು. ಅಮರ ಮಧುರ ಪ್ರೇಮ ಎನ್ನುವ ರೀತಿ ಸಾಗುತ್ತಿದ್ದ ಇವರಿಬ್ಬರ ಪ್ರೀತಿಗೆ ಎಲ್ಲರೂ ಅಡ್ಡಿಯಾಗಿದ್ದರು.
- Amruthadhare Serial Today Episode: ಕಳೆದ ಕೆಲವು ದಿನಗಳಿಂದ ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಅಪೇಕ್ಷಾ ಮತ್ತು ಪಾರ್ಥನ ಪ್ರೀತಿಯ ನೋವು, ಗೋಳಿನ ಕಥೆ ಪ್ರೇಕ್ಷಕರಿಗೆ ಬೇಸರ ತರಿಸಿತ್ತು. ಅಮರ ಮಧುರ ಪ್ರೇಮ ಎನ್ನುವ ರೀತಿ ಸಾಗುತ್ತಿದ್ದ ಇವರಿಬ್ಬರ ಪ್ರೀತಿಗೆ ಎಲ್ಲರೂ ಅಡ್ಡಿಯಾಗಿದ್ದರು.
(1 / 9)
Amruthadhare Serial Today Episode: ಕಳೆದ ಕೆಲವು ದಿನಗಳಿಂದ ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಅಪೇಕ್ಷಾ ಮತ್ತು ಪಾರ್ಥನ ಪ್ರೀತಿಯ ನೋವು, ಗೋಳಿನ ಕಥೆ ಪ್ರೇಕ್ಷಕರಿಗೆ ಬೇಸರ ತರಿಸಿತ್ತು. ಅಮರ ಮಧುರ ಪ್ರೇಮ ಎನ್ನುವ ರೀತಿ ಸಾಗುತ್ತಿದ್ದ ಇವರಿಬ್ಬರ ಪ್ರೀತಿಗೆ ಎಲ್ಲರೂ ಅಡ್ಡಿಯಾಗಿದ್ದರು. ಆದರೆ, ಇದೀಗ ಇವರ ಲವ್ ಸ್ಟೋರಿ ಗೌತಮ್ಗೆ ತಿಳಿಯುವ ಸೂಚನೆ ದೊರಕಿದೆ.
(2 / 9)
ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರಮೋವನ್ನು ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಈ ಪ್ರಮೋದಲ್ಲಿ ತನ್ನ ಪ್ರೇಮಕಥೆಯನ್ನು ಗೌತಮ್ಗೆ ತಿಳಿಸುವಂತಹ ಒಂದು ಅವಕಾಶ ಅಪೇಕ್ಷಾಗೆ ಸೃಷ್ಟಿಯಾಗಿದೆ. "ಅಪೇಕ್ಷಾ ಹೇಳು, ನ್ಯಾಯ ಸಿಗುತ್ತೆ ಮತ್ತೆ ಸಿಗೋಲ್ಲ ಅವಕಾಶ" ಎಂದು ಈ ಪ್ರಮೋಗೆ ಪ್ರೇಕ್ಷಕರು ಕಾಮೆಂಟ್ ಮಾಡಿದ್ದಾರೆ.
(3 / 9)
ಅಪೇಕ್ಷಾ ಮನೆಯಲ್ಲಿ ವಿಚಿತ್ರವಾಗಿ ವರ್ತಿಸ್ತಾ ಇದ್ದಾಳೆ ಎಂದು ಮಂದಾಕಿನಿ ಭೂಮಿಕಾಳಿಗೆ ಕಾಲ್ ಮಾಡಿ ಹೇಳುತ್ತಾಳೆ. ಆ ಸಂದರ್ಭದಲ್ಲಿ ಭೂಮಿಕಾಳ ಪಕ್ಕ ಗೌತಮ್ ಇರುತ್ತಾರೆ. "ನನಗೆ ತುಂಬಾ ತಲೆನೋವಾಗ್ತಾ ಇದೆ. ನಾನು ಇವತ್ತು ಮಾತನಾಡೋಲ್ಲ" ಎಂದು ಅಪೇಕ್ಷಾ ಹೇಳುತ್ತಾಳೆ.
(4 / 9)
ಭೂಮಿಕಾ ಅಪೇಕ್ಷಾಳ ಬಳಿ ಮಾತನಾಡಬೇಕೆಂದುಕೊಂಡಾಗ ಏನು ವಿಷಯ ನಾನು ಮಾತಾಡ್ತಿನಿ ಎಂದು ಗೌತಮ್ ಫೋನ್ ತೆಗೆದುಕೊಳ್ಳುತ್ತಾರೆ. ಅಪೇಕ್ಷಾಳ ಫೋನ್ ಕರೆಗೆ ಗೌತಮ್ ಕಿವಿಯಾಗಿದ್ದಾರೆ. "ವೈ ಯುಆರ್ ಡಲ್" ಎಂದು ಎಂದಿನಂತೆ ವಿಷಯ ಗೊತ್ತಿಲ್ಲದೆ ಗೌತಮ್ ಕೇಳುತ್ತಾರೆ.
(5 / 9)
"ವೈ ಆರ್ ಯು ಸೌಂಡಿಂಗ್ ಸೋ ಡಲ್, ನಿನಗೇನಾದರೂ ಲವ್ ಫೈಲ್ಯೂರ್ ಆಗಿದೆಯಾ? ನನ್ನತ್ರ ಹೇಳ್ಕೊ ಧೈರ್ಯವಾಗಿ. ಯಾರನ್ನಾದರೂ ಲವ್ ಮಾಡ್ತಾ ಇದ್ದೀಯಾ?" ಎಂದು ಗೌತಮ್ ಕೇಳುತ್ತಾರೆ.
(6 / 9)
"ಭಾವ ಇಷ್ಟು ಕೇಳ್ತಾ ಇದ್ದಾರೆ. ಇರೋ ವಿಷಯ ಹೇಳಿಬಿಡ್ಲಾ" ಎಂದುಕೊಳ್ಳುತ್ತಾಳೆ ಅಪೇಕ್ಷಾ. ಈ ಪ್ರಮೋಗೆ ವೀಕ್ಷಕರು "ಹೇಳಿ ಬಿಡುಗ ಅಪೇಕ್ಷಾ. ಮತ್ತೆ ಇಂತಹ ಅವಕಾಶ ದೊರಕದು" ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.
(7 / 9)
ಈ ಸಂದರ್ಭದಲ್ಲಿ ಅಪೇಕ್ಷಾ ಪಾರ್ಥನ ಜತೆಗಿನ ಲವ್ ಸ್ಟೋರಿ ಹೇಳಿಬಿಡಬಹುದೇ? ಇವಳು ಹೇಳುತ್ತಾಳೆ ಎಂದು ಭೂಮಿಕಾ ಫೋನ್ ಕಸಿದುಕೊಳ್ಳಬಹುದೇ? ಏನೋ ಸರಿಯಿಲ್ಲ ಸಮ್ಥಿಂಗ್ ಈಸ್ ರಾಂಗ್ ಎಂದು ಗೌತಮ್ ತಾನೇ ಎಲ್ಲಾ ವಿಷಯ ತಿಳಿದುಕೊಳ್ಳಬಹುದೇ? ಎಂದೆಲ್ಲ ಪ್ರಶ್ನೆಗಳು ಮೂಡಿವೆ.
(8 / 9)
ಒಟ್ಟಾರೆ ಶಕುಂತಾದೇವಿ ಪ್ಲಾನ್ನಂತೆ ಮದುವೆ ನಡೆಯದು ಎನ್ನುವುದು ಪಕ್ಕಾ ಆಗಿದೆ. ಅಪೇಕ್ಷಾ ಮತ್ತು ಪಾರ್ಥನ ಲವ್ ಸ್ಟೋರಿ ಮತ್ತು ಮದುವೆ ವಿಷಯದಲ್ಲಿ ಅಮೃತಧಾರೆ ಸೀರಿಯಲ್ ಮತ್ತೊಂದು ಮಹಾ ತಿರುವು ಪಡೆದುಕೊಳ್ಳಲು ಸಜ್ಜಾಗಿದೆ. ಕಳೆದ ದಿನಗಳಿಂದ ಮಂಕಾಗಿದ್ದ ಈ ಸೀರಿಯಲ್ ಮತ್ತೆ ಮೊದಲ ಜೋಶ್ಗೆ ಬರುವ ನಿರೀಕ್ಷೆಯಿದೆ ಎಂದು ಕಿರುತೆರೆ ಪ್ರೇಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.
ಇತರ ಗ್ಯಾಲರಿಗಳು