Annayya Serial: ಶಿವು ಮಾಮನ ಜತೆ ಬಂದದ್ದು ಪಾರ್ವತಿ, ಶಿಕ್ಷೆ ಮಾತ್ರ ಆಕೆಯ ಅಮ್ಮನಿಗೆ; ಅಣ್ಣಯ್ಯ ಸೀರಿಯಲ್ ಸ್ಟೋರಿ
- Annayya Serial Kannada Today Episode: ಝೀ ಕನ್ನಡ ವಾಹಿನಿಯಲ್ಲಿ ಹೊಸ ಸೀರಿಯಲ್ ಅಣ್ಣಯ್ಯ ಆರಂಭದಿಂದಲೂ ಕುತೂಹಲ ಕೆರಳಿಸುತ್ತಿದೆ. ನಾಲ್ವರು ತಂಗಿಯರ ಮುದ್ದಿನ ಅಣ್ಣಯ್ಯನಿಗೆ ವೀರಭದ್ರನ ಮಗಳು ಪಾರ್ವತಿ ಜತೆ ಪ್ರೀತಿಯಿದೆ. ಆದರೆ, ಶ್ರೀಮಂತ ಮತ್ತು ಬಡವ ಅಂತರ ಇವರ ಪ್ರೀತಿಗೆ ದೊಡ್ಡ ತಡೆಯಾಗುವ ಸೂಚನೆ ಇದೆ.
- Annayya Serial Kannada Today Episode: ಝೀ ಕನ್ನಡ ವಾಹಿನಿಯಲ್ಲಿ ಹೊಸ ಸೀರಿಯಲ್ ಅಣ್ಣಯ್ಯ ಆರಂಭದಿಂದಲೂ ಕುತೂಹಲ ಕೆರಳಿಸುತ್ತಿದೆ. ನಾಲ್ವರು ತಂಗಿಯರ ಮುದ್ದಿನ ಅಣ್ಣಯ್ಯನಿಗೆ ವೀರಭದ್ರನ ಮಗಳು ಪಾರ್ವತಿ ಜತೆ ಪ್ರೀತಿಯಿದೆ. ಆದರೆ, ಶ್ರೀಮಂತ ಮತ್ತು ಬಡವ ಅಂತರ ಇವರ ಪ್ರೀತಿಗೆ ದೊಡ್ಡ ತಡೆಯಾಗುವ ಸೂಚನೆ ಇದೆ.
(1 / 8)
Annayya Serial Kannada Today Episode: ಈಗಾಗಲೇ ಕಿರುತೆರೆ ಪ್ರೇಕ್ಷಕರು ಅಣ್ಣಯ್ಯ ಸೀರಿಯಲ್‌ನ ಆರಂಭಿಕ ಎಪಿಸೋಡ್‌ಗಳನ್ನು ನೋಡಿ ಖುಷಿಪಟ್ಟಿದ್ದಾರೆ. ತನ್ನ ಮುದ್ದಿನ ತಂಗಿಯರನ್ನು ತುಂಬಾ ಪ್ರೀತಿಸುವ ಅಣ್ಣಯ್ಯನನ್ನು ಇಷ್ಟಪಟ್ಟಿದ್ದಾರೆ. ಇದೇ ಸಮಯದಲ್ಲಿ ಈ ಮುದ್ದಾದ ತಂಗಿಯರೂ ಇಷ್ಟವಾಗಿದ್ದಾರೆ. ಇದೇ ಸಮಯದಲ್ಲಿ ಮಾರಿಗುಡಿ ಶಿವನಿಗೆ ಲವರ್ ಒಬ್ಬಳ ಎಂಟ್ರಿಯೂ ಆಗಿದ್ದಾಳೆ. ಅವಳೇ ಪಾರ್ವತಿ.
(2 / 8)
ನಿನ್ನೆಯ ಸಂಚಿಕೆಯಲ್ಲಿ ರಸ್ತೆಯಲ್ಲಿ ಆಕ್ಸಿಡೆಂಟ್ ರೀತಿ ಪಾರ್ವತಿ ಮತ್ತು ಶಿವನ ಭೇಟಿಯಾಗಿತ್ತು. ಮಾವನ ಮಗಳ ಮೇಲೆ ಅಣ್ಣಯ್ಯನಿಗೆ ಪ್ರೀತಿ ಇರುವುದು ಸುಳ್ಳಲ್ಲ. ಇದೇ ಸಮಯದಲ್ಲಿ ಅಣ್ಣಯ್ಯನಿಗೆ ತನ್ನ ತಂಗಿಯರ ಮೇಲೆ ಎಂತಹ ಪ್ರೀತಿ ಇದೆ ಎನ್ನುವುದೂ ಗೊತ್ತಿತ್ತು. ಜಾತ್ರೆಯಲ್ಲಿ ತಂಗಿಯರ ಸುದ್ದಿಗೆ ಬಂದವರಿಗೆ ಸಖತ್ ಪೆಟ್ಟು ಬಿದ್ದಿತ್ತು. ಮಾತಿನ ಪೆಟ್ಟೂ ಬಿದ್ದಿತ್ತು. ಇಂದಿನ ಸಂಚಿಕೆಯಲ್ಲಿ ಏನಾಗಲಿದೆ ಎಂಬ ಕುತೂಹಲದ ಕಥೆಯನ್ನು ಅಣ್ಣಯ್ಯ ನಿನ್ನೆ ಉಳಿಸಿತ್ತು.
(3 / 8)
ಅಣ್ಣಯ್ಯ ಸೀರಿಯಲ್‌ನ ಇಂದಿನ ಸಂಚಿಕೆಯಲ್ಲಿ ಏನೇನಾಗಲಿದೆ ಎಂಬ ಸುಳಿವನ್ನು ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರಮೋ ನೀಡಿದೆ. ಇಂದಿನ ಸಂಚಿಕೆಯಲ್ಲಿ ಮಾರಿಗುಡಿ ಶಿವ ತನ್ನ ಬೈಕ್‌ನಲ್ಲಿ ಪಾರ್ವತಿಯನ್ನು ಕೂರಿಸಿಕೊಂಡು ವೀರಭದ್ರನ ಮನೆಗೆ ಬರುತ್ತಾನೆ.
(4 / 8)
ಈ ಸೀರಿಯಲ್‌ನಲ್ಲಿ ವೀರಭದ್ರನ ಮನೆಯ ಸೆಟಪ್ ಮತ್ತು ವೀರಭದ್ರನ ಪತ್ನಿಯನ್ನು ನೋಡಿದಾಗ ಕೆಲವು ಪ್ರೇಕ್ಷಕರಿಗೆ ಕಾಂತಾರ ಸಿನಿಮಾ ನೆನಪಾಗಿದೆ. ಇಲ್ಲೂ ವೀರಭದ್ರನ ಪತ್ನಿ ಪಾಪದ ಹೆಂಗಸು. ಶಿವು ಪ್ರೀತಿಯಿಂದ ಅತ್ತೆ ಎಂದಾಗ ಖುಷಿಯಾಗುತ್ತಾರೆ. ಮಗಳ ಮೇಲಿನ ಕೋಪವನ್ನು ವೀರಭದ್ರ ತನ್ನ ಪತ್ನಿಯ ಮೇಲೆ ತೋರಿಸುತ್ತಾನೆ.
(5 / 8)
ಪಾರ್ವತಿಗೊಬ್ಬ ಖಡಕ್ ಅಣ್ಣನಿದ್ದಾನೆ. ಅವನಿಗೆ ಪಾರ್ವತಿ ಶಿವನ ಜತೆ ಬಂದಿರುವುದು ಇಷ್ಟವಾಗಿಲ್ಲ. "ಅಷ್ಟೆಲ್ಲ ಆಟೋ ಇದ್ದಾಗ ಅವನ ಜತೆ ಯಾಕೆ ಬಂದೆ" ಎನ್ನುತ್ತಾನೆ. ಶಿವನ ಜತೆ ಈಕೆ ಬಂದಿರುವುದು ಅಪ್ಪ ವೀರಭದ್ರನಿಗೂ ಇಷ್ಟವಾಗುವುದಿಲ್ಲ. ಅದೇ ಕೋಪವನ್ನು ತನ್ನ ಪತ್ನಿ ಮೇಲೆ ತೀರಿಸಿಕೊಳ್ಳುತ್ತಾನೆ.
(6 / 8)
"ನೇಗಿಲು ಸರಿಯಾಗಿ ಕೆಲಸ ಮಾಡದೆ ಇದ್ದರೆ ಪೆಟ್ಟು ಬೀಳೋದು ಎತ್ತಿಗೆ" ಎಂಬ ಗಾದೆ ಮಾತನ್ನೂ ವೀರಭದ್ರ ಈ ಸಂದರ್ಭದಲ್ಲಿ ಹೇಳುತ್ತಾನೆ. ಈ ಮೂಲಕ ಮುದ್ದಿನ ಮಗಳು ಏನಾದರೂ ಮಾಡಿದ್ರೆ ಅಮ್ಮನಿಗೆ ಪೆಟ್ಟು ಬೀಳುತ್ತದೆ. ಶಿವು ಮಾವನ ಜತೆ ಪಾರ್ವತಿ ಬಂದರೆ ಆಕೆಯ ಅಮ್ಮನಿಗೆ ಪೆಟ್ಟು ಬೀಳುತ್ತದೆ.
(7 / 8)
ಹೊಸದಾಗಿ ಆರಂಭವಾದ ಅಣ್ಣಯ್ಯ ಸೀರಿಯಲ್ ಒಳ್ಳೆಯ ಸಿನಿಮಾದಂತೆ ಭರ್ಜರಿಯಾಗಿ ಆರಂಭವಾಗಿದೆ. ಒಂದೊಳ್ಳೆಯ ಕಥೆ, ಅಣ್ಣ ತಂಗಿಯರ ಬಾಂಧವ್ಯ, ಪ್ರೀತಿಪ್ರೇಮ, ಆಸ್ತಿ ಅಂತಸ್ತಿನ ಗತ್ತು ಇತ್ಯಾದಿಗಳನ್ನು ತೋರಿಸಿದೆ.
ಇತರ ಗ್ಯಾಲರಿಗಳು