BBK 11: ಕ್ಷಮಿಸಿ, ನಾವು ಬರೋಲ್ಲ; ಬಿಗ್‌ಬಾಸ್‌ ಕನ್ನಡ ಆಫರ್‌ ನಿರಾಕರಿಸಿದ ಸಿನಿಮಾ ಸೀರಿಯಲ್‌ ನಟಿ-ನಟರು-televison news bigg boss kannada 11 tentative contestants list who will participate bbk 11 pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bbk 11: ಕ್ಷಮಿಸಿ, ನಾವು ಬರೋಲ್ಲ; ಬಿಗ್‌ಬಾಸ್‌ ಕನ್ನಡ ಆಫರ್‌ ನಿರಾಕರಿಸಿದ ಸಿನಿಮಾ ಸೀರಿಯಲ್‌ ನಟಿ-ನಟರು

BBK 11: ಕ್ಷಮಿಸಿ, ನಾವು ಬರೋಲ್ಲ; ಬಿಗ್‌ಬಾಸ್‌ ಕನ್ನಡ ಆಫರ್‌ ನಿರಾಕರಿಸಿದ ಸಿನಿಮಾ ಸೀರಿಯಲ್‌ ನಟಿ-ನಟರು

  • Bigg boss kannada 11: ಬಿಗ್‌ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಭಾಗವಹಿಸುವವರ "ವದಂತಿ ಲಿಸ್ಟ್‌ನಲ್ಲಿ" ಸಾಕಷ್ಟು ಕಲಾವಿದರ ಹೆಸರು ಇದೆ. ಈ ಹಿಂದೆ ವಿಜಯ್‌ ಸೂರ್ಯ, ದೀಪಕ್‌ ಗೌಡ,  ತ್ರಿವಿಕ್ರಮ್‌, ಅಶ್ವಿನಿ, ರಾಗಿಣಿ ದ್ವಿವೇದಿ, ಅನಿರುದ್ಧ್‌ ಜಟ್ಕರ್‌ ಮುಂತಾದವರು ಬಿಬಿಕೆಯಲ್ಲಿ ಭಾಗವಹಿಸುವ ಆಫರ್‌ ಅನ್ನು ನಿರಾಕರಿಸಿದ್ದರು.

ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಸೆಪ್ಟೆಂಬರ್‌ 3ನೇ ವಾರ ಆರಂಭವಾಗಲಿದೆ. ಇದೇ ಸಮಯದಲ್ಲಿ ಈ ಬಾರಿ ಯಾರೆಲ್ಲ ಸ್ಪರ್ಧಿಗಳಾಗಿ ಭಾಗವಹಿಸಲಿದ್ದಾರೆ ಎಂಬ ಕುರಿತು ಗುಸುಗುಸು ಹರಿದಾಡುತ್ತಿದೆ. ಬಿಬಿಕೆ 11ನಲ್ಲಿ ಈ ಬಾರಿ ಮುಕ್ತಾಯಗೊಳ್ಳುವ ಸೀರಿಯಲ್‌ ನಟಿಯರು, ನಟರ ದರ್ಬಾರ್‌ ಹೆಚ್ಚಿರಲಿದೆ. ಬಿಗ್‌ಬಾಸ್‌ ಆಟ ಮುಗಿಯುವ ಸಮಯದಲ್ಲಿ ಹಲವು ಕನ್ನಡ ಸೀರಿಯಲ್‌ಗಳು ಕೊನೆಗೊಳ್ಳಲಿವೆ. ಈ ಸಂದರ್ಭದಲ್ಲಿ ಯಾವೆಲ್ಲ ಸೀರಿಯಲ್‌ ನಟಿಯರು, ನಟರು ಬಿಗ್‌ಬಾಸ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಹಲವು ಊಹೆಗಳು ಆರಂಭವಾಗಿವೆ. ಬಿಗ್‌ಬಾಸ್‌ ಆಫರ್‌ ನಿರಾಕರಿಸಿದವರ ವಿವರ ಇಲ್ಲಿದೆ. 
icon

(1 / 9)

ಅಶ್ವಿನಿ: ಈ ಹಿಂದೆ ನಟಿ ಅಶ್ವಿನಿ ಅವರಿಗೂ ಬಿಬಿಕೆಯಿಂದ ಆಫರ್‌ ಬಂದಿತ್ತು. ಈ ಬಾರಿ ಇವರು ಕೂಡ ಭಾಗವಹಿಸಬಹುದೆಂಬ ವದಂತಿ ಇದೆ. ಇವರು ಗಟ್ಟಿಮೇಳ ಸೀರಿಯಲ್‌ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಆದರೆ, ಈ ಹಿಂದೆ ಇವರು ಬಿಬಿಕೆ ನಿರಾಕರಿಸಿದ್ದರು.  
icon

(2 / 9)

ತ್ರಿವಿಕ್ರಮ್‌: ಈ ಬಾರಿ ತ್ರಿವಿಕ್ರಮ್‌ ಕೂಡ ಬಿಗ್‌ಬಾಸ್‌ನಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಇವರು ಪದ್ಮಾವತಿ ಸೀರಿಯಲ್‌ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.
icon

(3 / 9)

ಅನಿರುದ್ಧ ಜಟ್ಕರ್‌: ಈ ಬಾರಿ ಜೊತೆಜೊತೆಯಲ್ಲಿ ಸೀರಿಯಲ್‌ ಖ್ಯಾತಿಯ ಅನಿರುದ್ಧ್‌ ಜಟ್ಕರ್‌ ಅವರು ಭಾಗವಹಿಸಲಿದ್ದಾರೆಯೇ ಎಂದು ಚರ್ಚೆಗಳು ಆರಂಭವಾಗಿವೆ. ಸದ್ಯ ಇವರು ಉದಯ ಟಿವಿಯ ಸೀರಿಯಲ್‌ನಲ್ಲಿ ಬಿಝಿ ಇದ್ದಾರೆ.  ಹೀಗಾಗಿ ಬಿಬಿಕೆಯಲ್ಲಿ ಪಾಲ್ಗೊಳ್ಳುವುದು ಡೌಟ್‌. 
icon

(4 / 9)

ರಂಜನಿ ರಾಘವನ್‌: ಸೋಷಿಯಲ್‌ ಮೀಡಿಯಾ ವದಂತಿಗಳ ಪ್ರಕಾರ ಈ ಬಾರಿ ರಂಜನಿ ರಾಘವನ್‌ ಕೂಡ ಬಿಗ್‌ಬಾಸ್‌ನಲ್ಲಿ ಭಾಗವಹಿಸಬಹುದು. ಆದರೆ, ಸದ್ಯ ತೆಲುಗು ಸಿನಿಮಾದ ಶೂಟಿಂಗ್‌ನಲ್ಲಿ ಬಿಝಿ ಇರುವುದರಿಂದ ದೊಡ್ಮನೆಗೆ ಹೋಗುವುದು ಡೌಟ್‌ ಎನ್ನುವ ಅಭಿಪ್ರಾಯ ಇದೆ. 
icon

(5 / 9)

ವಿಜಯ್‌ ಸೂರ್ಯ: ಅಗ್ನಿಸಾಕ್ಷಿ ಸೀರಿಯಲ್‌ ಖ್ಯಾತಿಯ ವಿಜಯ್‌ ಸೂರ್ಯ ಅವರು ಈಗ ದೃಷ್ಟಿಬೊಟ್ಟು ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಇವರು ಈ ಬಾರಿ ದೊಡ್ಮನೆಗೆ ಆಗಮಿಸುವ ಸೂಚನೆಗಳಿವೆ.
icon

(6 / 9)

ದೀಪಕ್‌ ಗೌಡ: ನಮ್ಮನೆ ಯುವರಾಣಿ ಸೀರಿಯಲ್‌ನಲ್ಲಿ ನಟಿಸಿದ್ದ ದೀಪಕ್‌ ಗೌಡ ಕೂಡ ಬಿಗ್‌ಬಾಸ್‌ ಆಫರ್‌ ರಿಜೆಕ್ಟ್‌ ಮಾಡಿದ್ದರು. 
icon

(7 / 9)

ರಾಗಿಣಿ ದ್ವಿವೇದಿ: ಕನ್ನಡದ ಜನಪ್ರಿಯ ನಟಿ, ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಕೂಡ ಈ ಬಾರಿ ಬಿಗ್‌ಬಾಸ್‌ ಕನ್ನಡದಲ್ಲಿ ಭಾಗವಹಿಸಲಾರರು. ಈ ಹಿಂದೆ ಇಂತಹ ವದಂತಿ ಇದ್ದಾಗ ನಾನು ಹೋಗೋಲ್ಲ ಎಂದು ಹೇಳಿದ್ದರು. 
icon

(8 / 9)

. ಕಲರ್ಸ್‌ ಕನ್ನಡವು ಪ್ರತಿವರ್ಷವೂ ತನ್ನ ಸ್ಪರ್ಧಿಗಳ ಕುರಿತು ಗುಟ್ಟು ಬಿಟ್ಟುಕೊಡುವುದಿಲ್ಲ. ಈ ಬಾರಿಯೂ ಯಾರು ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿಲ್ಲ. ಹೀಗಿದ್ದರೂ ಕೆಲವು ಹೆಸರುಗಳು ಓಡಾಡುತ್ತಿವೆ. ಅಂತಿಮವಾಗಿ ಬಿಗ್‌ಬಾಸ್‌ ಕನ್ನಡ ಸೀಸನ್‌ ಆರಂಭದ ದಿನ ಭಾಗವಹಿಸುವವರ ಹೆಸರು ಹೊರಬೀಳಲಿದೆ. 
icon

(9 / 9)

ಇತರ ಗ್ಯಾಲರಿಗಳು