BBK 10: ಬಿಗ್‌ಬಾಸ್ ಮನೆಯಲ್ಲಿ ಇಂದು ರಾಗಿ ಮುದ್ದೆ; ಗ್ಯಾಸ್ ಖಾಲಿ, ಊಟ ಸಿಗ್ಲಿಲ್ಲ ಅಂದ್ರೆ ಸುಮ್ನಿರಲ್ಲ ಎಂದು ಅವಾಜ್ ಹಾಕಿದ ವಿನಯ್
- Bigg boss kannada season 10 today episode: ಇಂದು ಬಿಗ್‌ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಎಲ್ಲರಿಗೂ ರಾಗಿ ಮುದ್ದೆ ಮಾಡಿ ಬಡಿಸಿದ್ದಾರೆ. ಇದೇ ಸಮಯದಲ್ಲಿ ಗ್ಯಾಸ್ ಸರಬರಾಜು ನಿಂತಿದೆ. ಈವಾಗ ಊಟ ಬರ್ಬೇಕು ಅಷ್ಟೆ. ರಾತ್ರಿ ಊಟ ಆಗ್ಲಿಲ್ಲ ಅಂದ್ರೆ ದೇವ್ರಾಣೆ ನಾನ್ ಸುಮ್ನಿರಲ್ಲ ಎಂದು ಈ ಸಂದರ್ಭದಲ್ಲಿ ವಿನಯ್ ಅವಾಜ್ ಹಾಕಿದ್ದಾರೆ.
- Bigg boss kannada season 10 today episode: ಇಂದು ಬಿಗ್‌ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಎಲ್ಲರಿಗೂ ರಾಗಿ ಮುದ್ದೆ ಮಾಡಿ ಬಡಿಸಿದ್ದಾರೆ. ಇದೇ ಸಮಯದಲ್ಲಿ ಗ್ಯಾಸ್ ಸರಬರಾಜು ನಿಂತಿದೆ. ಈವಾಗ ಊಟ ಬರ್ಬೇಕು ಅಷ್ಟೆ. ರಾತ್ರಿ ಊಟ ಆಗ್ಲಿಲ್ಲ ಅಂದ್ರೆ ದೇವ್ರಾಣೆ ನಾನ್ ಸುಮ್ನಿರಲ್ಲ ಎಂದು ಈ ಸಂದರ್ಭದಲ್ಲಿ ವಿನಯ್ ಅವಾಜ್ ಹಾಕಿದ್ದಾರೆ.
(1 / 7)
ಈ ಇಡೀ ವಾರ ಬಿಗ್‌ಬಾಸ್ ಮನೆಯ ಸದಸ್ಯರು ಶಾಲೆಯಲ್ಲಿ ಮಕ್ಕಳಾಗಿ ನಲಿದಿದ್ದರು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಹೊರತುಪಡಿಸಿದರೆ, ಯಾವುದೇ ಜಗಳಗಳಿಲ್ಲದೆ, ಅನಾಹುತಗಳಿಲ್ಲದೆ ಸುವ್ಯವಸ್ಥಿತವಾಗಿಯೇ ಕಳೆಯಿತು. ಇನ್ನೇನು ಇದೇ ರೀತಿ ಈ ವಾರ ಸುಖಾಂತ್ಯವನ್ನು ಕಾಣಲಿದೆ ಎನ್ನುವ ಹೊತ್ತಿಗೇ ಬಿಗ್‌ಬಾಸ್ ಮನೆಯಲ್ಲಿ ಕೋಲಾಹಲವೆದ್ದಿದೆ. ‘ಆಲ್ರೆಡಿ ಅವ್ರೆಲ್ಲ ರಾಕ್ಷಸರಾಗ್ತಿದಾರೆ’ ಎಂದು ತುಕಾಲಿ ಸಂತೋಷ್ ಕಳವಳದಿಂದ ಕ್ಯಾಮೆರಾ ಎದುರು ನಿಂತು ಅಲವತ್ತುಕೊಳ್ಳುತ್ತಿದ್ದಾರೆ. ಹಾಗಾದ್ರೆ ನಿಜಕ್ಕೂ ನಡೆದಿದ್ದೇನು? ಮನೆಯೊಳಗೆ ನಡೆದಿದ್ದರ ಸಣ್ಣ ಸುಳಿವು ಇಂದು ಜಿಯೋಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸಿಕ್ಕಿದೆ.
(2 / 7)
ರಾಗಿ ಹಿಟ್ಟನ್ನು ನೋಡಿ, ಪ್ರತಾಪ್‌ಗೆ ಯಾಕೋ ಮುದ್ದೆ ತಿನ್ನುವ ಮನಸ್ಸಾಗಿದೆ. ‘ಯಾರಿಗೆಲ್ಲ ಮುದ್ದೆ ಬೇಕು?’ ಎಂದು ಮನೆಯ ಸದಸ್ಯರನ್ನು ಕೇಳಿದ್ದಾರೆ. ಕಾರ್ತಿಕ್, ‘ತಿಂತೀನಿ ಕಣೋ ಮಾಡೋ’ ಎಂದು ಪ್ರತಾಪ್‌ಗೆ ಪ್ರೋತ್ಸಾಹ ಕೊಟ್ಟಿದ್ದಾರೆ.
(3 / 7)
ರಾಗಿ ಹಿಟ್ಟನ್ನು ನೋಡಿ, ಪ್ರತಾಪ್‌ಗೆ ಯಾಕೋ ಮುದ್ದೆ ತಿನ್ನುವ ಮನಸ್ಸಾಗಿದೆ. ‘ಯಾರಿಗೆಲ್ಲ ಮುದ್ದೆ ಬೇಕು?’ ಎಂದು ಮನೆಯ ಸದಸ್ಯರನ್ನು ಕೇಳಿದ್ದಾರೆ. ಕಾರ್ತಿಕ್, ‘ತಿಂತೀನಿ ಕಣೋ ಮಾಡೋ’ ಎಂದು ಪ್ರತಾಪ್‌ಗೆ ಪ್ರೋತ್ಸಾಹ ಕೊಟ್ಟಿದ್ದಾರೆ. ತುಕಾಲಿ ಅವರೂ, ‘ಮಾಡೋದ್ ಮಾಡ್ತಿದೀಯಾ. ಸ್ವಲ್ಪ ದಪ್ಪ ಮಾಡೋ’ ಎಂದು ಕೇಳಿದ್ದಾರೆ. ಪ್ರತಾಪ್ ಉತ್ಸಾಹದಿಂದಲೇ ಎಲ್ಲರಿಗೂ ಮುದ್ದೆ ಮಾಡಿ ಬಡಿಸಿದ್ದಾರೆ. ಎಲ್ಲರೂ ಖುಷಿಯಿಂದ ತಿಂದಿದ್ದಾರೆ ಕೂಡ.
(4 / 7)
ಆದರೆ ಮಧ್ಯದಲ್ಲಿ ಎಲ್ಲೋ ತಾಳ ತಪ್ಪಿದೆ. ಮನೆಯ ಗ್ಯಾಸ್ ನಿಂತುಹೋಗಿದೆ. ‘ಮಾಡಿರೋ ಜವಾಬ್ದಾರಿ ನಾನು ಹೊತ್ಕೋತೀನಿ’ ಎಂದು ಪ್ರತಾಪ್ ಹೇಳಿದ್ರೂ ನಮ್ರತಾ, ‘ಮನೆಗೆ ಶಿಕ್ಷೆಯಾದ್ರೆ ನೀನೇನ್ ಮಾಡ್ತೀಯಾ?’ ಎಂದು ಕೇಳಿದ್ದಾರೆ.
(5 / 7)
ಪ್ರತಾಪ್ ಕ್ಯಾಮೆರಾ ಎದುರಿಗೆ ಹೋಗಿ, ‘ಬಿಗ್‌ಬಾಸ್ ದಯವಿಟ್ಟು ಕೊಟ್ಬಿಡಿ ಬಿಗ್‌ಬಾಸ್’ ಎಂದು ಕೇಳಿಕೊಳ್ಳುತ್ತಿದ್ದಾರೆ. ಅತ್ತ ವಿನಯ್ ಕೋಪದಿಂದ, ‘ಈವಾಗ ಊಟ ಬರ್ಬೇಕು ಅಷ್ಟೆ. ರಾತ್ರಿ ಊಟ ಆಗ್ಲಿಲ್ಲ ಅಂದ್ರೆ ದೇವ್ರಾಣೆ ನಾನ್ ಸುಮ್ನಿರಲ್ಲ’ ಎಂದು ಅವಾಜ್ ಹಾಕಿದ್ದಾರೆ.
(6 / 7)
ಹಾಗಾದ್ರೆ ಮನೆಯೊಳಗೆ ನಿಜವಾಗಿಯೂ ನಡೆದಿದ್ದು ಏನು? ರಾಗಿ ಮುದ್ದೆ ಮಾಡಿದ್ದೇ ಅಪರಾಧವಾಯ್ತೆ? ಅಥವಾ ಮುದ್ದೆ ಮಾಡುವ ಹಂತದಲ್ಲಿ ಏನಾದರೂ ಪ್ರಮಾದವಾಗಿದೆಯಾ? ಮನೆಮಂದಿ ಉಪವಾಸದಲ್ಲಿಯೇ ಮಲಗಬೇಕಾಯ್ತಾ? ಈ ಎಲ್ಲ ಪ್ರಶ್ನೆಗೆ ಉತ್ತರ ಸಿಗಲು ಬಿಗ್‌ಬಾಸ್ ನೋಡಬೇಕಷ್ಟೆ.
(7 / 7)
ನಾಳೆ ಕಿಚ್ಚನ ಪಂಚಾಯಿತಿ ನಡೆಯಲಿದೆ. ಇಂದಿನ ಮುದ್ದೆಯ ಊಟದ ಬಳಿಕದ ಜಗಳ, ಈ ವಾರದ ಶಾಲಾ ಮಕ್ಕಳ ಆಟೋಟ ಕುರಿತು ಸುದೀಪ್ ಚರ್ಚಿಸಲಿದ್ದಾರೆ. ಜತೆಗೆ, ಈ ವಾರ ಮನೆಯಿಂದ ಹೊರಹೋಗುವವರು ಯಾರು ಎಂಬ ಪ್ರಶ್ನೆಗೂ ಉತ್ತರ ದೊರಕಲಿದೆ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು ಜಿಯೋಸಿನೆಮಾದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದು.
ಇತರ ಗ್ಯಾಲರಿಗಳು