ಬಿಗ್‌ಬಾಸ್ ಒಟಿಟಿ ವಿವಾದಗಳಿಗೆ ಕೊನೆಯುಂಟೆ? ಆಕಾಂಕ್ಷ ಪುರಿ ಲಿಪ್‌ಲಾಕ್, ಉರ್ಫಿ ಆಕ್ರೋಶ; ಇಲ್ಲಿದೆ ವಿವಾದಗಳ ಪಟ್ಟಿ
- Bigg boss ott controversy: ಬಿಗ್‌ಬಾಸ್ ಒಟಿಟಿ ಸೀಸನ್ 3 ಆರಂಭವಾಗಿದೆ. ಈ ವರ್ಷ ಸಲ್ಮಾನ್ ಖಾನ್ ಬದಲು ಅನಿಲ್ ಕಪೂರ್ ಬಿಗ್‌ಬಾಸ್ ಒಟಿಟಿ ನಿರೂಪಕರಾಗಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಈ ಹಿಂದೆ ಬಿಗ್‌ಬಾಸ್ ಒಟಿಟಿಯಲ್ಲಿ ಆಕಾಂಕ್ಷ ಲಿಪ್‌ಲಾಲ್, ಸಲ್ಮಾನ್ ಎಲ್ವಿಸ್ ಚರ್ಚೆಯವರೆಗೆ ಹಲವು ವಿವಾದಗಳು ನಡೆದಿವೆ. ಈ ಕುರಿತು ಒಂದಿಷ್ಟು ವಿವರ ಇಲ್ಲಿದೆ.
- Bigg boss ott controversy: ಬಿಗ್‌ಬಾಸ್ ಒಟಿಟಿ ಸೀಸನ್ 3 ಆರಂಭವಾಗಿದೆ. ಈ ವರ್ಷ ಸಲ್ಮಾನ್ ಖಾನ್ ಬದಲು ಅನಿಲ್ ಕಪೂರ್ ಬಿಗ್‌ಬಾಸ್ ಒಟಿಟಿ ನಿರೂಪಕರಾಗಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಈ ಹಿಂದೆ ಬಿಗ್‌ಬಾಸ್ ಒಟಿಟಿಯಲ್ಲಿ ಆಕಾಂಕ್ಷ ಲಿಪ್‌ಲಾಲ್, ಸಲ್ಮಾನ್ ಎಲ್ವಿಸ್ ಚರ್ಚೆಯವರೆಗೆ ಹಲವು ವಿವಾದಗಳು ನಡೆದಿವೆ. ಈ ಕುರಿತು ಒಂದಿಷ್ಟು ವಿವರ ಇಲ್ಲಿದೆ.
(1 / 7)
ಬಿಗ್‌ಬಾಸ್ ಒಟಿಟಿ ಸೀಸನ್ 3 ಆರಂಭವಾಗಿದ್ದು, ಜಿಯೋ ಸಿನಿಮಾ ಒಟಿಟಿಯಲ್ಲಿ ದಿನದ 24 ಗಂಟೆಯೂ ದೊಡ್ಮನೆಯೊಳಗಿನ ಆಟವನ್ನು ಪ್ರೇಕ್ಷಕರು ನೋಡಬಹುದು. ಈ ಬಾರಿ ಶೋನಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಸ್ಪರ್ಧಿಗಳನ್ನು ಆಯ್ಕೆ ಮಾಡುವ ರೀತಿಯೂ ಭಿನ್ನವಾಗಿದೆ. ಈ ಬಾರಿ ಬಿಗ್‌ಬಾಸ್ ಮನೆಯೊಳಗೆ ಹೈಡ್ರಾಮಾ ಇರುವುದು ಖಾತ್ರಿ. ಈ ಹಿಂದೆ ಯಾವೆಲ್ಲ ವಿವಾದಗಳು, ಪ್ರಮುಖ ಘಟನೆಗಳು ಬಿಗ್ಬಾಸ್ ಒಟಿಟಿ ಮನೆಯೊಳಗೆ ನಡೆದಿದೆ ಎಂದು ನೋಡೋಣ.
(2 / 7)
ಉರ್ಫಿ ಜಾವೇದ್ ಬಿಗ್‌ಬಾಸ್ ಒಟಿಟಿ ಕಾರ್ಯಕ್ರಮದ ಮೊದಲ ಸೀಸನ್‌ನಲ್ಲಿ ಸ್ಪರ್ಧಿಯಾಗಿದ್ದರು. ಜೀಶನ್ ಖಾನ್ ಮತ್ತು ದಿವ್ಯಾ ಅಗರ್‌ವಾಲ್ ಅವರ ಮೇಲೆ ಕೋಪಗೊಂಡಿದ್ದ ಇವರು "ಇಬ್ಬರನ್ನೂ ಕೊಲ್ಲಲು ಬಯಸಿದ್ದೆ" ಎಂದು ಹೇಳಿದ್ದರು. ಆ ಸೀಸನ್‌ನಲ್ಲಿ ಆ ಇಬ್ಬರು ಸ್ಪರ್ಧಿಗಳ ಜತೆ ಉರ್ಫಿ ಕಾದಾಟ ದೊಡ್ಡ ಸುದ್ದಿಯಾಗಿತ್ತು.
(3 / 7)
ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಅವರು ಬಿಗ್‌ಬಾಸ್‌ನಲ್ಲಿ ಹೆಚ್ಚು ಮಾತನಾಡುತ್ತಿದ್ದರು. ಅವರು ತಮ್ಮ ವಯಸ್ಸು ಮತ್ತು ಇತರೆ ವಿಷಯಗಳ ಕುರಿತು ಮಾತನಾಡಿದ್ದರು. ಇತರೆ ಸ್ಪರ್ಧಿಗಳ ಜತೆ ಇವರ ಜಗಳ, ಈಕೆಯ ವರ್ತನೆ ಇಂಟರ್‌ನೆಟ್‌ನಲ್ಲಿ ದೊಡ್ಡಮಟ್ಟದ ಚರ್ಚೆಗೆ ಗ್ರಾಸವಾಗಿತ್ತು.
(4 / 7)
ನೇಹಾ ಭಾಸಿನ್ ಮತ್ತು ಪ್ರತೀಕ್ ಸಹಜಪಾಲ್ ನಡುವಿನ ಫೈಟ್ ಕೂಡ ಹೆಚ್ಚು ಚರ್ಚೆಯಾಗಿತ್ತು. ನೇಹಾ ಪ್ರತೀಕ್ ಅವರು ಸಹಜಪಾಲ್ ಅವರ ಕಾಲರ್ ಅನ್ನು ಹಿಡಿದಿದ್ದರು. ಇವರಿಬ್ಬರ ನಡುವೆ ಸಾಕಷ್ಟು ಜಗಳ ನಡೆದಿದೆ. ಈ ಜಗಳದ ನಂತರ ಅವರ ಸ್ನೇಹ ಕೊನೆಗೊಂಡಿತು. ಇದಲ್ಲದೇ ಟಾಸ್ಕ್ ಒಂದರಲ್ಲಿ ರಿದ್ಧಿಮಾ ಪಂಡಿತ್‌ಗೆ ಕಿಸ್ ಮಾಡಿದ್ದರು.
(5 / 7)
ಎಲ್ವಿಶ್ ಯಾದವ್ ಅವರ ಫ್ಯಾನ್ ಫಾಲೋಯಿಂಗ್ ಹೇಗಿತ್ತು ಎಂದರೆ ಸಲ್ಮಾನ್ ಖಾನ್ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗಳು ಆರಂಭವಾದವು. ತಪ್ಪು ಪದಗಳನ್ನು ಬಳಸಿದ್ದಕ್ಕಾಗಿ ಸಲ್ಮಾನ್ ಖಾನ್ ಎಲ್ವಿಶ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ ಇದು ಸಲ್ಮಾನ್‌ಗೆ ಹಿನ್ನಡೆಯಾಯಿತು.
(6 / 7)
ಆಕಾಂಕ್ಷಾ ಪುರಿ ಮತ್ತು ಜೇಡ್ ಹದಿದ್ ನಡುವಿನ ಕಿಸ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿತ್ತು. ಈ ವಿಚಾರವಾಗಿ ಸಲ್ಮಾನ್ ಖಾನ್ ಸ್ಪರ್ಧಿಗಳ ಜತೆ ಮಾತನಾಡಿದ್ದರು. ಪರಿಣಾಮವಾಗಿ ಆಕಾಂಕ್ಷ ಪುರಿ ಸ್ಪರ್ಧೆಯಿಂದ ಹೊರಕ್ಕೆ ನಡೆಯಬೇಕಾಯಿತು.
ಇತರ ಗ್ಯಾಲರಿಗಳು