Serial Review: ಬಾಡಿ ಶೇಮಿಂಗ್ ಅನ್ನೋದು ತಮಾಷೆಯ ವಿಷಯವೇ? ಅಣ್ಣಯ್ಯ ಧಾರಾವಾಹಿ ನಿರ್ದೇಶಕರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು-televison news body shaming in new annayya kannada serial mocking rashmi sister gundamma marigudi shiva sisters story ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Serial Review: ಬಾಡಿ ಶೇಮಿಂಗ್ ಅನ್ನೋದು ತಮಾಷೆಯ ವಿಷಯವೇ? ಅಣ್ಣಯ್ಯ ಧಾರಾವಾಹಿ ನಿರ್ದೇಶಕರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು

Serial Review: ಬಾಡಿ ಶೇಮಿಂಗ್ ಅನ್ನೋದು ತಮಾಷೆಯ ವಿಷಯವೇ? ಅಣ್ಣಯ್ಯ ಧಾರಾವಾಹಿ ನಿರ್ದೇಶಕರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು

  • Annayya kannada serial: ಝೀ ಕನ್ನಡ ವಾಹಿನಿಯಲ್ಲಿ ಅಣ್ಣಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಆರಂಭವಾಗಿದೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ಆದರೆ, ಈ ಸೀರಿಯಲ್‌ನಲ್ಲಿ ತಂಗಿಯೊಬ್ಬಳ ದೇಹದ ಗಾತ್ರವನ್ನೇ ಹಾಸ್ಯದ ಸರಕಾಗಿ ಮಾಡಿಕೊಂಡಿರುವುದು ಮಾತ್ರ ಅಸಹನೀಯವಾಗಿದೆ.

Annayya kannada serial: ಝೀ ಕನ್ನಡ ವಾಹಿನಿಯಲ್ಲಿ ಅಣ್ಣಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಆರಂಭವಾಗಿದೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ಆದರೆ, ಈ ಸೀರಿಯಲ್‌ನಲ್ಲಿ ತಂಗಿಯೊಬ್ಬಳ ದೇಹದ ಗಾತ್ರವನ್ನೇ ಹಾಸ್ಯದ ಸರಕಾಗಿ ಮಾಡಿಕೊಂಡಿರುವುದು ಮಾತ್ರ ಅಸಹನೀಯವಾಗಿದೆ.    ಅಣ್ಣಯ್ಯ ಸೀರಿಯಲ್‌ನಲ್ಲಿ ಬಾಡಿ ಶೇಮಿಂಗ್‌ ಅಂಶಗಳು ಏನಿವೆ ಎಂದು ನೋಡೋಣ.
icon

(1 / 11)

 ಅಣ್ಣಯ್ಯ ಸೀರಿಯಲ್‌ನ ಪ್ರಮೋಷನ್‌ಗೆ ಕಾಂತಾರ ಖ್ಯಾತಿಯ ರಿಷಬ್‌ ಶೆಟ್ಟಿ ಬಂದಿದ್ರು.  ಅವರೇ ವಿಡಿಯೋದಲ್ಲಿ "ಹೋಯ್‌ ಇದು ಕಾಡುಬೆಟ್ಟು ಶಿವನ ಕಥೆಯಲ್ಲ, ಇದು ಮಾರಿಗುಡಿ ಶಿವಣ್ಣನ ಕಥೆ" ಎಂದು ಸೀರಿಯಲ್‌ ಕುರಿತು ತಿಳಿಸುತ್ತಾ ಹೋಗುತ್ತಾರೆ. ಮುದ್ದಾದ ತಂಗಿಯರ ಇಂಟ್ರೊಡಕ್ಷನ್‌ ಇರುತ್ತದೆ. ತುಂಬಾ ಲವಲವಿಕೆಯಿಂದ ತಂಗಿಯರ ಪರಿಚಯ ನಡೆಯುತ್ತದೆ.
icon

(2 / 11)

ಗಂಧದ ಗುಡಿಯಲ್ಲಿ ಶಿವರಾಜ್‌ ಕುಮಾರ್‌ ಹೇಗೆ ಫೇಮಸ್ಸೋ ಅದೇ ರೀತಿ ಮಾರಿಗುಡಿಯಲ್ಲಿ ಈ ಶಿವಣ್ಣ ಫೇಮಸ್‌. ಅವನಿಗೆ ತಂಗಿಯರೆಂದರೆ ಅಚ್ಚುಮೆಚ್ಚು ಎಂದು ರಿಷಬ್‌ ಶೆಟ್ಟಿ ಕಥೆ ಹೇಳುತ್ತಾರೆ. ಊರಲ್ಲೊಂದು ದಿನಸಿ ಅಂಗಡಿ ಇಟ್ಟುಕೊಂಡು ಅಮ್ಮ ಬಿಟ್ಟು ಹೋದ ಮನೆಯನ್ನು ನಿಭಾಯಿಸುವ ಶಿವಣ್ಣನಿಗೆ ತನ್ನ ನಾಲ್ಕು ಜನರು ತಂಗಿಯರ ಕುರಿತು ಪ್ರೀತಿ ಜಾಸ್ತಿ. 
icon

(3 / 11)

ಮೊದಲ ತಂಗಿ ಕನ್ನಡ ಟೀಚರ್‌. ಸರ್ವಜ್ಞನ ಪ್ರಕಾರ ಇಲ್ಲಿ ಯಾರೂ ಮೇಲೂ ಅಲ್ಲ, ಕೀಳು ಅಲ್ಲ ಎಂಬ ಸಂದೇಶದೊಂದಿಗೆ ಈಕೆಯ ಪರಿಚಯವಾಗುತ್ತದೆ. ಆದರೆ, ಮೇಲು ಕೀಳು ಪಾಠ ಮಾಡಿದ ಈ ಸೀರಿಯಲ್‌ನಲ್ಲಿ ಬಾಡಿ ಶೇಮಿಂಗ್‌ ನುಸುಳಿರುವುದು ಅಚ್ಚರಿಯ ವಿಷಯ. 
icon

(4 / 11)

ಶಿವಣ್ಣನ ಮೊದಲ ತಂಗಿಯ ಹೆಸರು ರತ್ನ. ಈಕೆ ಮಾರಿಗುಡಿ ಶಾಲೆಯಲ್ಲಿ ಕನ್ನಡ ಟೀಚರ್‌. ಬಾಡಿ ಶೇಮಿಂಗ್‌ ಆರಂಭವಾಗುವುದು ಮುಂದಿನ ತಂಗಿಯನ್ನು ಪರಿಚಯಿಸುವ ಸಂದರ್ಭದಲ್ಲಿ. ಇವರ ರಿಕ್ಷಾ ಡ್ರೈವರ್‌ ಬಾಯಲ್ಲಿ ಸಾಕಷ್ಟು ಬಾಡಿ ಶೇಮಿಂಗ್‌ ಪದಗಳು ಬರುತ್ತವೆ. 
icon

(5 / 11)

ರತ್ನಾಳ ತಂಗಿ ಇಂಗ್ಲಿಷ್‌ ವಿದ್ಯಾರ್ಥಿನಿ. ಜಾಣೆಯಲ್ಲ. ಶಿವಣ್ಣನ ಎರಡನೇ ತಂಗಿಯ ಹೆಸರು ರಶ್ಮಿ. ಸ್ಕೂಲ್‌ನಲ್ಲಿ ಜೋರಾಗಿ ಚಿಪ್ಸ್‌ ಪ್ಯಾಕೆಟ್‌ ಹೊಡೆದು ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಾಳೆ. "ಇವಳನ್ನು ಎಲ್ಲರೂ ಗುಂಡಮ್ಮ ಅಂತಾನೇ ಕರೆಯೋದು" ಎಂದು ರಿಷಬ್‌ ಶೆಟ್ಟಿ ಪರಿಚಯಸಿಸುತ್ತಾರೆ. ಈ ಮೂಲಕ ಈ ಸೀರಿಯಲ್‌ನಲ್ಲಿ ಗುಂಡಮ್ಮ ಎಂಬ ಹೆಸರಿನ ಮೂಲಕ ತೂಕ ಹೆಚ್ಚಿರುವ, ಗುಂಡಗೆ ಇರುವ ಈಕೆಗೆ ಬಾಡಿ ಶೇಮಿಂಗ್‌ ಮುಂದುವರೆಯುವ ಸೂಚನೆ ದೊರಕಿದೆ.
icon

(6 / 11)

ರಶ್ಮಿ ರಿಕ್ಷಾ ಹತ್ತಿದಾಗ ಸೀರಿಯಲ್‌ ಒಂದು ಚಕ್ರ ಮೇಲಕ್ಕೆ ಏಳುತ್ತದೆ. ರಿಕ್ಷಾ ಒಂದು ಕಡೆಗೆ ವಾಲುತ್ತದೆ. ತೂಕ ಹೆಚ್ಚಿರುವ ವ್ಯಕ್ತಿಗಳನ್ನು ಯಾವ ರೀತಿ ಅಪಹಾಸ್ಯ ಮಾಡಿದ್ದಾರೆ ನೋಡಿ. "ಅಯ್ಯೋ ಈ ಮಾರಿಗುಡಿ ಬಂಡೆ ಹತ್ತಿದಾಗ ನನ್ನ ಆಟೋ ಒಂದು ಕಡೆ ವಾಲ್ತಾ ಇದೆ" ಎಂದು ಚಾಲಕ ಬೊಬ್ಬೆ ಹೊಡೆಯುತ್ತಾನೆ.  ಸೀರಿಯಲ್‌, ಸಿನಿಮಾಗಳಲ್ಲಿ ಹಾಸ್ಯಕ್ಕಾಗಿ ದಪ್ಪಗಿರುವವರನ್ನು ಹಾಸ್ಯ ಮಾಡುವುದು ಸರಿಯೇ?
icon

(7 / 11)

ಮತ್ತೊಬ್ಬಳು ತಂಗಿ ಹೆಸರು ರಮ್ಯಾ. ಈ ಪುಟ್ಟ ತಂಗಿಯ ಕುರಿತು ಶಿವಣ್ಣನಿಗೆ ಮುದ್ದು ಜಾಸ್ತಿ. ಈಕೆಯ ಗೆಳತಿಯ ಅಣ್ಣನೂ "ಎಲ್ಲಿ ನಿಮ್ಮ ಸಪ್ಲಿಮೆಂಟರಿ ಸಣ್ಣ.... ಅಕ್ಕಾ" ಎಂದು ರಶ್ಮಿಯನ್ನು ನೆನಪಿಸಿ ಹಾಸ್ಯ ಮಾಡುತ್ತಾನೆ.
icon

(8 / 11)

 ಇದಾದ ಬಳಿಕ ರಶ್ಮಿ ಮುಂದೆಯೇ "ಆಟೋದಿಂದ ಕೆಳಗೆ ಇಳಿದು ಮಾತನಾಡು. ಆಟೋ ಟಯರ್‌ ಬ್ಲಾಸ್ಟ್‌ ಆಗಬಹುದು" ಎಂದು ಹೇಳುತ್ತಾನೆ. "ಯಾಕಣ್ಣ ಆಟೋ ಒಂದು ಸೈಡ್‌ಗೆ ಬೆಂಡ್‌ ಆಗಿದೆ" ಎಂದು ಹೇಳುತ್ತಾನೆ. "ನೀನು ಹಾಕಿರುವ ಅನ್ನ ತಿಂದಿಲ್ಲ. ಇದು  ನಮ್ಮ ಅಣ್ಣ ಬೆಳೆಸಿರುವುದು" ಎಂದು ರಶ್ಮಿ ತನ್ನ ದೇಹದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ. ಇವಳು ಅಲ್ಲದೆ ಇನ್ನೂ ಒಬ್ಬಳು ತಂಗಿ ಇದ್ದಾಳೆ. ಅವಳ ಹೆಸರು ರಾಣಿ. 
icon

(9 / 11)

ರಾಣಿ ರಿಕ್ಷಾ ಬಾಡಿಗೆ ಕೊಡುವಾಗ "ಡುಮ್ಮಿ ರಶ್ಮಿಯಿಂದಾಗಿ ರಿಕ್ಷಾದ ಟಯರ್‌ ಆಗಾಗ ಬದಲಾಯಿಸ್ತಾ ಇದ್ದೀನಿ. ಬೇಗ ಸವೆದು ಹೋಗುತ್ತದೆ" ಎಂದು ರಿಕ್ಷಾ ಚಾಲಕ ಹೇಳುತ್ತಾನೆ. ಒಟ್ಟಾರೆ ಈ ಅಣ್ಣಯ್ಯ ಎಂಬ ಸೀರಿಯಲ್‌ನಲ್ಲಿ ಮುದ್ದಾದ ತಂಗಿಯರ ಸೊಗಸಾದ ಕಥೆ ಇರಲಿದೆ. ಇದೇ ಸಮಯದಲ್ಲಿ ರಶ್ಮಿ ಎಂಬ ತಂಗಿಗೆ ಹಾಸ್ಯದ ಹೆಸರಿನಲ್ಲಿ ಅವ್ಯಾಹತವಾಗಿ ಬಾಡಿ ಶೇಮಿಂಗ್‌ ಮುಂದುವರೆಯುವ ಸೂಚನೆ ಇದೆ.  
icon

(10 / 11)

ಸಾಕಷ್ಟು ಜನರು ನೋಡುವ ಸೀರಿಯಲ್‌ ಸಮಾಜದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ಈ ರಶ್ಮಿಯಂತೆ ಇರುವ ಇನ್ನಿತರರ ಮೇಲೆ ಈ ಸಮಾಜ ಯಾವ ರೀತಿ ವರ್ತಿಸಲಿದೆ? ಈ ರೀತಿ ವರ್ತಿಸಲು ಪ್ರೋತ್ಸಾಹ ನೀಡುವಲ್ಲಿ ಈ ಸೀರಿಯಲ್‌ನ ಪಾಲು ಎಷ್ಟು ಇರಲಿದೆ? ಯೋಚಿಸೋಣ. 
icon

(11 / 11)

ಇತರ ಗ್ಯಾಲರಿಗಳು