ಮಗುವಿಗೆ ಜನ್ಮ ನೀಡಿದ 2 ತಿಂಗಳಲ್ಲಿ ರಿಯಾಲಿಟಿ ಶೋಗೆ ಅದಿತಿ ಪ್ರಭುದೇವ ಎಂಟ್ರಿ; ಸೃಜನ್‌ ಲೋಕೇಶ್‌, ತಾರಾ ಜತೆ ರಾಜಾರಾಣಿಯಾಟ-televison news colors kannada rajarani reality show reloaded june 8 with aditi prabhudeva srujan lokesh tara pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಗುವಿಗೆ ಜನ್ಮ ನೀಡಿದ 2 ತಿಂಗಳಲ್ಲಿ ರಿಯಾಲಿಟಿ ಶೋಗೆ ಅದಿತಿ ಪ್ರಭುದೇವ ಎಂಟ್ರಿ; ಸೃಜನ್‌ ಲೋಕೇಶ್‌, ತಾರಾ ಜತೆ ರಾಜಾರಾಣಿಯಾಟ

ಮಗುವಿಗೆ ಜನ್ಮ ನೀಡಿದ 2 ತಿಂಗಳಲ್ಲಿ ರಿಯಾಲಿಟಿ ಶೋಗೆ ಅದಿತಿ ಪ್ರಭುದೇವ ಎಂಟ್ರಿ; ಸೃಜನ್‌ ಲೋಕೇಶ್‌, ತಾರಾ ಜತೆ ರಾಜಾರಾಣಿಯಾಟ

  • Rajarani Reality Show: ಕಲರ್ಸ್‌ ಕನ್ನಡದಲ್ಲಿ ಇದೇ ಜೂನ್‌ 8ರಿಂದ ರಾಜಾರಾಣಿ ರಿಯಾಲಿಟಿ ಶೋ ಮತ್ತೆ ಆರಂಭವಾಗಲಿದೆ. ಈ ಬಾರಿ ಸೃಜನ್‌ ಲೋಕೇಶ್‌ ಮತ್ತು ತಾರಾ ಜತೆ ನಟಿ ಅದಿತಿ ಪ್ರಭುದೇವ ಕೂಡ ಇರಲಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ಅದಿತಿ ಇದೀಗ ಕಿರುತೆರೆ ಪ್ರೇಕ್ಷಕರನ್ನು ರಂಜಿಸಲು ಆಗಮಿಸುತ್ತಿದ್ದಾರೆ.

ಕಲರ್ಸ್‌ ಕನ್ನಡದಲ್ಲಿ ಇದೇ ಜೂನ್‌ 8ರಿಂದ ರಾಜಾರಾಣಿ ರಿಯಾಲಿಟಿ ಶೋ ಮತ್ತೆ ಆರಂಭವಾಗಲಿದೆ. ಈ ಬಾರಿ ಸೃಜನ್‌ ಲೋಕೇಶ್‌ ಮತ್ತು ತಾರಾ ಜತೆ ನಟಿ ಅದಿತಿ ಪ್ರಭುದೇವ ಕೂಡ ಇರಲಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ಅದಿತಿ ಇದೀಗ ಕಿರುತೆರೆ ಪ್ರೇಕ್ಷಕರನ್ನು ರಂಜಿಸಲು ಆಗಮಿಸುತ್ತಿದ್ದಾರೆ.  ಈ ಶೋದ ಪ್ರಮೋವನ್ನು ಕಲರ್ಸ್‌ ಕನ್ನಡ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. 
icon

(1 / 9)

ಈ ಪ್ರಮೋದಲ್ಲಿ ಸೃಜನ್‌ ಲೋಕೇಶ್‌ ಮತ್ತು ತಾರಾ ಮಾತನಾಡುತ್ತ ಇದ್ದಾರೆ. ಈ ಬಾರಿ ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಏನೋ ಹೊಸತನ ತೋರಿಸುತ್ತೀರಿ ಎಂದು ಹೇಳಿದ್ರಿ ಎಂದು ಸೃಜನ್‌ನಲ್ಲಿ ತಾರಾ ಕೇಳುತ್ತಾರೆ.
icon

(2 / 9)

ಅದಕ್ಕೆ ಸೃಜನ್‌ ಲೋಕೇಶ್‌ "ಎಲ್ಲಾ ಜೋಡಿಗಳನ್ನು ಕುಣಿಸಿ ಬಿಡೋಣ" ಎನ್ನುತ್ತಾರೆ. ಅದಕ್ಕೆ ತಾರಾ ಖುಷಿಯಿಂದ "ಕುಣಿಸಿಬಿಡೋಣ" ಎನ್ನುತ್ತಾರೆ.
icon

(3 / 9)

ನಾನೇನೋ ವರ್ಲ್ಡ್‌ ಬೆಸ್ಟ್‌ ಡ್ಯಾನ್ಸರ್‌ ಎಂದು ಸೃಜನ್‌ ಹೇಳಿದಾಗ ತಾರ "ಹೇ" ಅನ್ತಾರೆ. "ನಾನು ಒಳ್ಳೆಯ ಡ್ಯಾನ್ಸರ್‌, ನೀನೇನೂ ಮಾಡ್ತಿಯಾ" ಎಂದು ತಾರಾ ಬಳಿ ಕೇಳ್ತಾರೆ.
icon

(4 / 9)

ಅದಕ್ಕೆ ತಾರಾ ಮೇಡಂ "ನಾನು ಪ್ರಭುದೇವ್‌ಗೆ ಕಾಲ್‌ ಮಾಡ್ತಿನಿ" ಅಂತಾರೆ. ಮೊಬೈಲ್‌ ತೆಗೆದುಕೊಂಡು ಪ್ರಭುದೇವ ನಂಬರ್‌ಗೆ ಕಾಲ್‌ ಮಾಡುತ್ತಾರೆ.  ಪ್ರಭುದೇವನಾ ಎಂದು ಸೃಜನ್‌ ಖುಷಿಯಿಂದ "ಕಾಲ್‌ ಮಾಡು ಮಾಡು" ಎನ್ನುತ್ತಾರೆ. 
icon

(5 / 9)

ಬಳಿಕ ಜಾಕಿ ಜಾಕಿ ಹಾಡು ಕೇಳುತ್ತದೆ. ಸ್ಟೇಜ್‌ನಲ್ಲಿ ಡ್ಯಾನ್ಸ್‌ ನಡೆಯುತ್ತ ಇರುತ್ತದೆ. ಅಲ್ಲಿ ಪ್ರಭುದೇವ್‌ ಬದಲು ನಮ್ಮ ಕನ್ನಡದ ಪ್ರತಿಭಾನ್ವಿತ ನಟಿ ಅದಿತಿ ಪ್ರಭುದೇವ ಇರುತ್ತಾರೆ. ಡ್ಯಾನ್ಸ್‌ ಬಳಿಕ ಅದಿತಿ ಪ್ರಭುದೇವ ಅವರು ಸೃಜನ್‌ ತಾರಾ ಬಳಿ ಬಂದು ಹಾಯ್‌ ಹೇಳುತತಾರೆ. 
icon

(6 / 9)

ತಕ್ಷಣ ಮೆಲ್ಲಗೆ ತಾರಾ ಬಳಿ ಸೃಜನ್‌ "ನಾನು ಆ ಪ್ರಭುದೇವ್"‌ ಎಂದುಕೊಂಡೆ ಎನ್ನುತ್ತಾರೆ. ಸೀರಿಯಸ್‌ ಡ್ಯಾನ್ಸ್‌ಗೆ ಆ ಪ್ರಭುದೇವ ಸೂಪರ್‌. ನಮ್ಮ ರಾಜಾರಾಣಿಯರು ಮಾಡೋ ತರ್ಲೆ ಡ್ಯಾನ್ಸ್‌ಗೆ  ಈ ಪ್ರಭುದೇವ ಸರಿ ಎನ್ನುತ್ತಾರೆ ತಾರಾ. ಸರಿ ಅನ್ತಾರೆ ಸೃಜನ್‌. 
icon

(7 / 9)

ಹಲೋ ನನ್ನನ್ನು ಹಿಡ್ಕೊಂಡು ಕಾಮಿಡಿ ಮಾಡೋದಿಲ್ಲ ಅಲ್ವಾ? ಎಂದು ಅದಿತಿ ಕೇಳುತ್ತಾರೆ. ಇದು ಜಸ್ಟ್‌ ಬಿಗಿನಿಂಗ್‌ ಅಷ್ಟೇ, ಮುಂದೆ ಟಾಪ್‌ ಇರುತ್ತೆ ಎಂದು ಸೃಜನ್‌ ಹೇಳುತ್ತಾರೆ. ಈ ಮೂಲಕ ಈ ಬಾರಿಯ ರಾಜಾರಾಣಿ ಶೋ ಕುರಿತು ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಲಾಗಿದೆ.
icon

(8 / 9)

ಏಪ್ರಿಲ್‌ 4ರಂದು ಅದಿತಿ ಪ್ರಭುದೇವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ನಟಿ ಅದಿತಿ ಪ್ರಭುದೇವ ಮತ್ತು ಕೊಡಗಿನ ಯಶಸ್‌ ಪಟ್ಲ 2022ರಲ್ಲಿ ಮದುವೆಯಾಗಿದ್ದರು.  ಇತ್ತೀಚೆಗೆ ಬಿಡುಗಡೆಯಾದ ಮ್ಯಾಟ್ನಿ ಸಿನಿಮಾದಲ್ಲಿ ಅದಿತಿ ನಟಿಸಿದ್ದಾರೆ. 2017ರಲ್ಲಿ ಧೈರಂ ಸಿನಿಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ನೀಡಿದ್ದರು. ಬಳಿಕ ಬಜಾರ್‌, ಆಪರೇಷನ್‌ ನಕ್ಷತ್ರ, ಸಿಂಗ, ರಂಗನಾಯಕಿ, ಬ್ರಹ್ಮಚಾರಿ, ಆನ, ಒಂಬತ್ತನೇ ದಿಕ್ಕು, ಓಲ್ಡ್‌ ಮಾಂಕ್‌ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ಗಜಾನನ ಆಂಡ್‌ ಗ್ಯಾಂಗ್‌, ತೋತಾಪುರಿ, ಚಾಂಪಿಯನ್‌ ,ಟ್ರಿಪಲ್‌ ರೈಡಿಂಗ್‌, ಒನ್ಸ್‌ ಅಪಾನ್‌ ಎ ಟೈಮ್‌ ಇನ್‌ ಜಮಾಲಿಗುಡ್ಡ, ಚೋಸ್‌, ತೋತಾಪುರಿ ಚಾಪ್ಟರ್‌ 2 ಮುಂತಾದ ಸಿನಿಮಾಗಳಲ್ಲಿ ಅದಿತಿ ಪ್ರಭುದೇವ ನಟಿಸಿದ್ದಾರೆ. 
icon

(9 / 9)

ಇತರ ಗ್ಯಾಲರಿಗಳು