Radha Bhagavathi: ಈ ಬಾರ್ಬಿ ಡಾಲ್ ಮನೆ ಕೆಲಸದಾಕೆ ಅಂದ್ರೆ ನಂಬ್ತೀರಾ? ರಾಧಾ ಭಗವತಿಯ ಚಂದಕ್ಕಿಂತ ಚಂದದ ಫೋಟೋಗಳು
- Serial Actress Radha Bhagavathi: ರಾಧಾ ಭಗವತಿ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತ ಹೆಸರು. ರಾಮಚಾರಿ ಸೀರಿಯಲ್‌ನಲ್ಲಿ ಸೀತಾ ಆಗಿದ್ದ ರಾಧಾ ಭಗವತಿ ಈಗ ಅಮೃತಧಾರೆ ಧಾರಾವಾಹಿಯಲ್ಲಿ ಮನೆ ಕೆಲಸದಾಕೆ ಮಲ್ಲಿ. ಈ ಸುಂದರ ಫೋಟೋಗಳನ್ನು ನೋಡಿದರೆ "ಯಾವ ಸೈಡ್‌ನಿಂದ ನೋಡಿದರೂ ಮನೆ ಕೆಲಸದಾಕೆ" ರೀತಿ ಕಾಣಿಸೋದಿಲ್ಲ ಎಂದು ಅಭಿಮಾನಿಗಳು ಹೇಳಬಹುದು.
- Serial Actress Radha Bhagavathi: ರಾಧಾ ಭಗವತಿ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತ ಹೆಸರು. ರಾಮಚಾರಿ ಸೀರಿಯಲ್‌ನಲ್ಲಿ ಸೀತಾ ಆಗಿದ್ದ ರಾಧಾ ಭಗವತಿ ಈಗ ಅಮೃತಧಾರೆ ಧಾರಾವಾಹಿಯಲ್ಲಿ ಮನೆ ಕೆಲಸದಾಕೆ ಮಲ್ಲಿ. ಈ ಸುಂದರ ಫೋಟೋಗಳನ್ನು ನೋಡಿದರೆ "ಯಾವ ಸೈಡ್‌ನಿಂದ ನೋಡಿದರೂ ಮನೆ ಕೆಲಸದಾಕೆ" ರೀತಿ ಕಾಣಿಸೋದಿಲ್ಲ ಎಂದು ಅಭಿಮಾನಿಗಳು ಹೇಳಬಹುದು.
(1 / 10)
ಅಮೃತಧಾರೆಯ ಮಲ್ಲಿ ನಿಜಜೀವನದ ರಾಧಾ ಭಗವತಿ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಹೊಸ ಫೋಟೋಗಳನ್ನು ಅಪ್ಲೋಡ್ ಮಾಡುತ್ತ ಇರುತ್ತಾರೆ. ಇದೀಗ ಬಾರ್ಬಿ ಡಾಲ್‌ನಂತೆ ಕಾಣಿಸುವ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
(2 / 10)
ರಾಮಾಚಾರಿ ಸೀರಿಯಲ್‌ನಲ್ಲಿ ನಾಯಕನ ತಂಗಿಯಾಗಿ ನಟಿಸಿದ್ದರು. ಅಮೃತಧಾರೆಯಲ್ಲಿ ಮನೆ ಕೆಲಸದಾಕೆಯಾಗಿದ್ದಳು. ಆದರೆ, ಇತ್ತೀಚೆಗೆ ಅಮೃತಧಾರೆ ಧಾರಾವಾಹಿಯಲ್ಲಿ ಮಹಾ ತಿರುವು ಸಂಭವಿಸಿ ಜೈದೇವ್‌ನ ಪತ್ನಿಯಾಗಿ ದಿವಾನ್ ಕುಟುಂಬದ ಸೊಸೆಯಾಗಿದ್ದಾಳೆ.
(3 / 10)
ರಾಧಾ ಭಗವತಿ ಮೂಲತಃ ಬಿಜಾಪುರದವರು. ಇವರು ಸ್ಯಾಂಡಲ್‌ವುಡ್ ನಟಿಯೂ ಹೌದು. ಅಪಾಯವಿದೆ ಎಚ್ಚರಿಕೆ, ವಸಂತ ಕಾಲದ ಹೂಗಳು ಎಂಬ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಎಸ್ ನಾರಾಯಣ್ ನಿರ್ದೇಶನದ ಒಂದ್ಸಲ ಮೀಟ್ ಮಾಡೋಣ ಸಿನಿಮಾದಲ್ಲಿ ನಾಯಕಿಯ ತಂಗಿಯಾಗಿ ನಟಿಸಿದ್ದಾರೆ.
(4 / 10)
ಅಮೃತಧಾರೆಯಲ್ಲಿ ಮನೆಕೆಲಸದಾಕೆಯಾಗಿದ್ದ ಮಲ್ಲಿ ನಿಜಜೀವನದಲ್ಲಿ ಸ್ಯಾಂಡಲ್‌ವುಡ್ ನಟಿ ಮಾತ್ರವಲ್ಲ, ಇವರು ಕಂಠದಾನ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ. ಎರಡು ಸಿನಿಮಾಗಳಲ್ಲಿ ಇವರು ಹಾಡಿದ್ದಾರೆ. ಮದುಮಗಳು ಸೀರಿಯಲ್‌ನಲ್ಲಿ ನಾಯಕಿಯ ಪಾತ್ರಕ್ಕೆ ಇವರು ಧ್ವನಿಯಾಗಿದ್ದಾರೆ.
(5 / 10)
ರಾಧಾ ಭಗವತಿ ಕುಟುಂಬಕ್ಕೂ ಕಲೆಗೂ ನಂಟಿದೆ. ಇವರ ತಾತ ರಂಗಭೂಮಿ ಕಲಾವಿದರು. ಹರಿಕಥೆ ದಾಸರೂ ಆಗಿದ್ದರು. ಅಮ್ಮನೂ ಜಾನಪದ ಹಾಡುಗಾರ್ತಿ. ಇದೇ ಕಾರಣಕ್ಕೆ ರಾಧಾ ಭಗವತಿಗೂ ಕಲೆಗೂ ನಂಟಿದೆ.
(6 / 10)
ಇನ್‌ಸ್ಟಾಗ್ರಾಂನಲ್ಲಿ ಅದ್ಭುತವಾದ ಫೋಟೋಗಳನ್ನು ಹಂಚಿಕೊಳ್ಳುವ ಇವರಿಗೆ ಅಭಿಮಾನಿಗಳ ಸಂಖ್ಯೆಯೂ ದೊಡ್ಡದಿದೆ. ಆಗಾಗ ಫೋಟೋಗಳನ್ನು, ವಿಡಿಯೋಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ.
(7 / 10)
ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಯಾಗಿ ಇವರು ವೀಕ್ಷಕರಿಗೆ ಹತ್ತಿರವಾಗಿದ್ದಾರೆ. ತಾತಾನ ಜತೆ ಕ್ವಾಟ್ರಸ್‌ನಲ್ಲಿದ್ದ ಇವಳ ಮೇಲೆ ಕೇಡಿ ಜೈದೇವ್ ಕಣ್ಣು ಬಿದ್ದಿತ್ತು. ಪ್ರೀತಿಯ ನಾಟಕವಾಡಿದ್ದ ಜೈದೇವ್‌ನಿಂದ ಈಕೆ ಬಸುರಿಯಾಗಿದ್ದಳು.
(8 / 10)
ಮಲ್ಲಿ ಬಸುರಿಯಾದ ಬಳಿಕ ಜೈದೇವ್ ಅಪೇಕ್ಷಾಳನ್ನು ಮದುವೆಯಾಗಲು ಮುಂದಾಗಿದ್ದ. ಈ ಸಮಯದಲ್ಲಿ ಭೂಮಿಕಾ ಮಧ್ಯಪ್ರವೇಶಿಸಿದ ಕಾರಣ ಮಲ್ಲಿಗೂ ಜೈದೇವ್‌ಗೂ ಮದುವೆಯಾಗಿತ್ತು. ಮನೆಯಲ್ಲಿ ಈಕೆಯನ್ನು ಕೊಲ್ಲುವ ಪ್ರಯತ್ನವನ್ನು ಜೈದೇವ್ ಮತ್ತು ಶಕುಂತಲಾದೇವಿ ಮಾಡುತ್ತಿದ್ದರೂ ಅದು ಸಫಲವಾಗಿಲ್ಲ.
(9 / 10)
ಒಟ್ಟಾರೆ ಮನೆ ಕೆಲಸದಾಕೆಯ ಪಾತ್ರದ ಮೂಲಕ ಅಮೃತಧಾರೆಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಈಗ ದಿವಾನ್ ಕುಟುಂಬದ ಸೊಸೆಯಾದರೂ ಒಂದಿಷ್ಟು ಅಳಕು ಸ್ವಭಾವದ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ ರಾಧಾ ಭಗವತಿ.
ಇತರ ಗ್ಯಾಲರಿಗಳು