Priyanka Chincholi: ಬೆಂಗಳೂರಿನಲ್ಲಿ ಹೊಸ ಮನೆಗೆ ಗೃಹಪ್ರವೇಶ ಮಾಡಿದ್ರು ಹರಹರ ಮಹಾದೇವ ಸೀರಿಯಲ್ ನಟಿ ಪ್ರಿಯಾಂಕ ಚಿಂಚೋಳಿ
- ಹರಹರ ಮಹಾದೇವ ಸೀರಿಯಲ್‌ನಲ್ಲಿ ಪಾರ್ವತಿ ದೇವಿಯ ಪಾತ್ರದಲ್ಲಿ ನಟಿಸಿದ್ದ ಪ್ರಿಯಾಂಕ ಚಿಂಚೋಳಿ ವಿವಾಹವಾದ ಬಳಿಕ ಪತಿಯ ಜತೆ ಲಂಡನ್‌ನಲ್ಲಿ ನೆಲೆಸಿದ್ದರು. ಇದೀಗ ಇವರು ಉದ್ಯಾನನಗರಿಗೆ ವಾಪಸ್ ಆಗಿದ್ದಾರೆ. ಬೆಂಗಳೂರಿನಲ್ಲಿ ಹೊಸ ಮನೆಗೆ ಗೃಹಪ್ರವೇಶ ಮಾಡಿದ್ದಾರೆ. ಬೆಂಗಳೂರಿನ ಬಿಳೇಶಿವಲೇಯಲ್ಲಿರುವ ಅಥಿನಾ ಟಿಡಬ್ಲ್ಯುಪಿಯಲ್ಲಿ ಇವರು ಮನೆ ಮಾಡಿದ್ದಾರೆ.

(1 / 10)
ಕನ್ನಡ ನಟಿ ಪ್ರಿಯಾಂಕ ಚಿಂಚೋಳಿ ಅವರು ತಮ್ಮ ಬೆಂಗಳೂರಿನ ಹೊಸ ಮನೆಗೆ ಗೃಹ ಪ್ರವೇಶ ಮಾಡಿದ್ದು, ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
(2 / 10)
ಕಲಬುರಗಿಯ ಚಿಂಚೋಳಿ ಮೂಲದ ಪ್ರಿಯಾಂಕ ಚಿಂಚೋಳಿ ಅವರು ಹರಹರ ಮಹಾದೇವ ಸೇರಿದಂತೆ ಕೆಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಒಂದು ಸಿನಿಮಾದಲ್ಲೂ ನಟಿಸಿದ್ದಾರೆ.
(3 / 10)
ವಿವಾಹವಾದ ಬಳಿಕ ತನ್ನ ಪತಿಯೊಂದಿಗೆ ಲಂಡನ್‌ಗೆ ಹೋಗಿ ಅಲ್ಲೇ ಸೆಟಲ್ ಆಗಿದ್ದರು. ಇದೀಗ ಬೆಂಗಳೂರಿನಲ್ಲಿ ಹೊಸ ಮನೆಗೆ ಗೃಹ ಪ್ರವೇಶ ಮಾಡಿದ್ದಾರೆ.
(4 / 10)
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಮನಸಾರೆ ಧಾರಾವಾಹಿಯಲ್ಲಿ ಪ್ರಿಯಾಂಕಾ, ಪ್ರಾರ್ಥನಾ ಪಾತ್ರದಲ್ಲಿ ನಟಿಸಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು.
(5 / 10)
ಹರ ಹರ ಮಹಾದೇವ ಧಾರಾವಾಹಿಯಲ್ಲಿ ಪ್ರಿಯಾಂಕಾ ಪಾರ್ವತಿ ಪಾತ್ರದಲ್ಲಿ ನಟಿಸಿದ್ದರು. ಈ ಸೀರಿಯಲ್ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು.
(6 / 10)
ಸ್ಯಾಂಡಲ್‌ವುಡ್‌ನಲ್ಲಿ ಕೌಟಿಲ್ಯ ಎಂಬ ಸಿನಿಮಾದಲ್ಲೂ ನಟಿಸಿದ್ದರು. ಆದರೆ, ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯತೆ ಪಡೆದರು.
(7 / 10)
2021ರಲ್ಲಿ ಪ್ರಿಯಾಂಕ ಚಿಂಚೋಳಿಗೆ ರಾಕೇಶ್ ಕುಮಾರ್ ಎಂಬ ಉದ್ಯಮಿಯ ಜತೆ ವಿವಾಹವಾಗಿತ್ತು. ರಾಕೇಶ್ ಲಂಡನ್‌ನಲ್ಲಿ ಇದ್ದ ಕಾರಣ ಅವರೊಂದಿಗೆ ವಿದೇಶದಲ್ಲಿ ನೆಲೆಸಿದ್ದರು.
ಇತರ ಗ್ಯಾಲರಿಗಳು