ವಿಚ್ಛೇದನ ಪಡೆದ ಕನ್ನಡ ಕಿರುತೆರೆ ನಟನಟಿಯರು: ಪದ್ಮಜಾ ರಾವ್, ಕಿರಿಕ್ ಕೀರ್ತಿ ಸೇರಿದಂತೆ ಇಲ್ಲಿದೆ ಡಿವೋರ್ಸ್ ಪಡೆದವರ ವಿವರ
- Kannada TV Artists Divorce News: ಕಳೆದ ಕೆಲವು ವರ್ಷಗಳಲ್ಲಿ ಹಲವು ಕನ್ನಡ ಕಿರುತೆರೆ ನಟನಟಿಯರು ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸಿ ಡಿವೋರ್ಸ್ ಪಡೆದಿದ್ದಾರೆ. ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಕಷ್ಟಗಳು ಇದ್ದರೂ ಕರಿಯರ್‌ನಲ್ಲಿ ಸಾಕಷ್ಟು ಸಾಧನೆ ಮಾಡಿ ಸೈ ಎಣಿಸಿಕೊಂಡಿದ್ದಾರೆ.
- Kannada TV Artists Divorce News: ಕಳೆದ ಕೆಲವು ವರ್ಷಗಳಲ್ಲಿ ಹಲವು ಕನ್ನಡ ಕಿರುತೆರೆ ನಟನಟಿಯರು ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸಿ ಡಿವೋರ್ಸ್ ಪಡೆದಿದ್ದಾರೆ. ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಕಷ್ಟಗಳು ಇದ್ದರೂ ಕರಿಯರ್‌ನಲ್ಲಿ ಸಾಕಷ್ಟು ಸಾಧನೆ ಮಾಡಿ ಸೈ ಎಣಿಸಿಕೊಂಡಿದ್ದಾರೆ.
(1 / 8)
ದೇಶದಲ್ಲಿ ವಿವಾಹ ವಿಚ್ಛೇದನಗಳು ಹೆಚ್ಚುತ್ತಿವೆ. ಕನ್ನಡ ಕಿರುತೆರೆಯೂ ಇದಕ್ಕೆ ಹೊರತಾಗಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಹಲವು ಕನ್ನಡ ಕಿರುತೆರೆ ನಟನಟಿಯರು ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸಿ ಡಿವೋರ್ಸ್ ಪಡೆದಿದ್ದಾರೆ. ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಕಷ್ಟಗಳು ಇದ್ದರೂ ಕರಿಯರ್‌ನಲ್ಲಿ ಸಾಕಷ್ಟು ಸಾಧನೆ ಮಾಡಿ ಸೈ ಎಣಿಸಿಕೊಂಡಿದ್ದಾರೆ.
(2 / 8)
Bhagyalaxmi Serial Padmaja Rao: ಡೈವೋರ್ಸ್ ವಿಚಾರದಲ್ಲಿ ಇತ್ತೀಚಿನ ದಿನಗಳಿಂದ ಸುದ್ದಿಯಲ್ಲಿದ್ದವರು ಭಾಗ್ಯಲಕ್ಷ್ಮಿ ಧಾರಾವಾಹಿ ಖ್ಯಾತಿಯ ನಟಿ ಪದ್ಮಜಾ ರಾವ್. ನಟಿಯಾಗಬೇಕೆಂಬ ಕನಸು ಕಂಡ ಇವರು ವೈಯಕ್ತಿಕ ಕಾರಣಗಳಿಂದ ವಿವಾಹ ವಿಚ್ಛೇದನ ಪಡೆದಿದ್ದರು. ಇವರಿಗೆ ಒಬ್ಬ ಮಗನಿದ್ದಾನೆ.
(3 / 8)
Kirik Keerthi Divorce to Aparna: ಬಿಗ್‌ಬಾಸ್, ಸೋಷಿಯಲ್ ಮೀಡಿಯಾ ಮೂಲಕ ಜನಪ್ರಿಯತೆ ಪಡೆದ ಕಿರಿಕ್ ಕಾರ್ತಕ್ ಅವರು ನಾಗಿಣಿ 2 ಸೀರಿಯಲ್‌ನಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದರು. ಇತ್ತೀಚೆಗೆ ಕಿರಿಕ್ ಕೀರ್ತಿ ಅವರು ತನ್ನ ಪತ್ನಿ ಅಪರ್ಣಾಗೆ ವಿವಾಹ ಡಿವೋರ್ಸ್ ನೀಡಿದ್ದರು.
(Kirik Keerthi Fb photo)(4 / 8)
Gichi gili gili Jahnavi: ಕೆಲವು ತಿಂಗಳ ಹಿಂದೆ ಕಿರುತೆರೆಯ ಜನಪ್ರಿಯ ಕಲಾವಿದೆ ಜಾಹ್ವವಿ ಕೂಡ ತನ್ನ ಪತಿಗೆ ವಿವಾಹ ವಿಚ್ಛೇದನ ನೀಡಿದ್ದರು. ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋನಲ್ಲಿ ಇವರು ರನ್ನರ್ ಅಪ್ ಆಗಿದ್ದರು. ಇವರು ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಅಧಿಪಾತ್ರ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ನಮ್ಮಮ್ಮ ಸೂಪರ್‌ಸ್ಟಾರ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು.
(5 / 8)
Bagyalaxmi Serial Sushma Rao: ಭಾಗ್ಯಲಕ್ಷ್ಮಿ ಸೀರಿಯಲ್‌ನ ಸುಷ್ಮಾ ರಾವ್ ಕೂಡ ಕೆಲವು ವರ್ಷಗಳ ಹಿಂದೆ ತನ್ನ ಪತಿ ಪ್ರೀತಂ ಗುಬ್ಬಿ ಅವರಿಗೆ ವಿವಾಹ ವಿಚ್ಛೇದನ ನೀಡಿದ್ದರು. ಭಾಗೀರಥಿ, ಯಾವ ಜನ್ಮದ ಮೈಥ್ರಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರವಾಹಿಗಳಲ್ಲಿ ಇವರು ನಟಿಸಿದ್ದಾರೆ.
(6 / 8)
Bhagyalaxmi Serial Sunitha Shetty: ಭಾಗ್ಯಲಕ್ಷ್ಮಿ ಧಾರಾವಾಹಿಯ ಭಾಗ್ಯ ತಾಯಿ ಪಾತ್ರದಲ್ಲಿ ನಟಿಸುತ್ತಿದ್ದ ಸುನೀತಾ ಶೆಟ್ಟಿ ಅವರು ಹಲವು ವರ್ಷಗಳ ಹಿಂದೆ ತನ್ನ ಸಂಗಾತಿಯೊಂದಿಗೆ ವಿವಾಹ ವಿಚ್ಛೇದನ ಪಡೆದಿದ್ದಾರೆ.
(7 / 8)
Chaitra Vasudevan: ಬಿಗ್‌ಬಾಸ್ ಮಾಜಿ ಸ್ಪರ್ಧಿ ಚೈತ್ರಾ ವಾಸುದೇವನ್ ಅವರು ಕೂಡ ತನ್ನ ಪತಿ ಸತ್ಯರಿಂದ ವಿವಾಹ ವಿಚ್ಛೇದನ ಪಡೆದಿದ್ದಾರೆ. ಇವರು ಕಿರುತೆರೆಯಲ್ಲಿ ನಿರೂಪಕಿಯಾಗಿಯೂ ಜನಪ್ರಿಯತೆ ಪಡೆದಿದ್ದರು.
ಇತರ ಗ್ಯಾಲರಿಗಳು