Laxmi Nivas Serial: ಜಾಹ್ನವಿಯನ್ನು ಮುಟ್ಟಿ ಟೆಸ್ಟ್ ಮಾಡಿದ ಡಾಕ್ಟರ್‌ನ ಕೈ ಮುರಿದ ಸೈಕೋ ಜಯಂತ್; ಇವ್ನದು ಅತಿಯಾಯ್ತು ಅಂದ್ರು ಪ್ರೇಕ್ಷಕರು
- Laxmi nivasa serial Today Episode: ಲಕ್ಷ್ಮಿ ನಿವಾಸ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರಮೋವನ್ನು ಝೀ ಕನ್ನಡ ವಾಹಿನಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಪತ್ನಿಯ ಆರೋಗ್ಯ ತಪಾಸಣೆ ಮಾಡಿದ ವೈದ್ಯರ ಕೈಯನ್ನೇ ಸೈಕೋ ಜಯಂತ್ ಮುರಿದಿದ್ದಾನೆ. ಈ ಮೆಂಟಲ್‌ನ ಆಟ ಅತಿಯಾಯ್ತು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
- Laxmi nivasa serial Today Episode: ಲಕ್ಷ್ಮಿ ನಿವಾಸ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರಮೋವನ್ನು ಝೀ ಕನ್ನಡ ವಾಹಿನಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಪತ್ನಿಯ ಆರೋಗ್ಯ ತಪಾಸಣೆ ಮಾಡಿದ ವೈದ್ಯರ ಕೈಯನ್ನೇ ಸೈಕೋ ಜಯಂತ್ ಮುರಿದಿದ್ದಾನೆ. ಈ ಮೆಂಟಲ್‌ನ ಆಟ ಅತಿಯಾಯ್ತು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
(1 / 12)
ಲಕ್ಷ್ಮಿ ನಿವಾಸ ಸೀರಿಯಲ್‌ನಲ್ಲಿ ಜಯಂತ್ ಸೈಕೊ ನಡವಳಿಕೆ ಕಳೆದ ಹಲವು ಸಂಚಿಕೆಗಳಲ್ಲಿ ವೀಕ್ಷಕರಿಗೆ ಗೊತ್ತಾಗಿದೆ. ತನ್ನ ಪತ್ನಿ ಕುರಿತು ವಿಪರೀತ ಪೊಸೆಸಿವ್‌ನೆಸ್ ಬೆಳೆಸಿಕೊಂಡಿದ್ದಾನೆ ಜಯಂತ್.
(2 / 12)
ಇಂದಿನ ಸಂಚಿಕೆಯಲ್ಲಿ ಜಯಂತ್ ತನ್ನ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ಡಾಕ್ಟರ್ ಜಾಹ್ವವಿಯ ಮೈ ಮುಟ್ಟುವುದು ಜಯಂತ್‌ಗೆ ಅಸಹನೀಯ ಎಂದೆನಿಸಿದೆ.
(4 / 12)
ಇದೇ ಸಮಯದಲ್ಲಿ ನಾಡಿ ಮಿಡಿತ ಟೆಸ್ಟ್ ಮಾಡಲು ಡಾಕ್ಟರ್ ಜಾಹ್ನವಿ ಕೈ ಹಿಡಿದುಕೊಂಡಾಗ ವಿಪರೀತ ಹಿಂಸೆ ಅನುಭವಿಸಿದ್ದಾನೆ ಜಯಂತ್.
(5 / 12)
ಎಲ್ಲಾ ಟೆಸ್ಟ್ ಮಾಡಿದ ಬಳಿಕ "ನಾನು ಪ್ರಿಸ್ಕ್ರಿಪ್ಷನ್ ಬರೆದುಕೊಡ್ತಿನಿ, ಅದನ್ನ ಫಾಲೋ ಮಾಡಿ" ಎಂದು ವೈದ್ಯರು ಹೇಳುತ್ತಾರೆ.
(7 / 12)
ಹೊರಗೆ ಪತ್ನಿಯನ್ನು ಕುಳ್ಳಿರಿಸಿದ ಜಯಂತ್ "ನಾನು ಹೋಗಿ ಮಾತ್ರೆಗಳನ್ನು ತೆಗೆದುಕೊಂಡು ಬರ್ತೇನೆ" ಎಂದು ನೇರವಾಗಿ ಡಾಕ್ಟರ್ ರೂಂಗೆ ನುಗ್ಗಿದ್ದಾನೆ.
(9 / 12)
ಝೀ ಕನ್ನಡ ವಾಹಿನಿ ಹಂಚಿಕೊಂಡ ಈ ಪ್ರಮೋಗೆ ನೂರಾರು ಕಾಮೆಂಟ್‌ಗಳು, ಸಾವಿರಾರು ಲೈಕ್‌ಗಳು ಬಂದಿವೆ. ಬಹುತೇಕರು "ಸೈಕೋ ಜಯಂತ್‌ದು ಅತಿಯಾಯ್ತು" ಎನ್ನುತ್ತಿದ್ದಾರೆ.
(10 / 12)
ಇದೇ ಸಮಯದಲ್ಲಿ ಜಯಂತ್ ನಟನೆಯನ್ನೂ ಸಾಕಷ್ಟು ಜನರು ಮೆಚ್ಚಿಕೊಂಡಿದ್ದಾರೆ. "ಸ್ಫುರದ್ರೂಪಿ ನಟ ಭಯಂಕರ" ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.
(11 / 12)
"ಲೇಡಿ ಡಾಕ್ಟರ್ ಹತ್ರ ಕರ್ಕೊಂಡು ಹೋಗ್ಬೇಕಿತ್ತು" "ಇದು ಅತಿಯಾಯ್ತು, ಡಾಕ್ಟರ್ ದೇವರ ತರಹ" " ಇವ ಪಕ್ಕಾ ಮೆಂಟಲ್" "ಸೈಕೋ ಇವನಿಗೆ ಮೊದಲು ಟ್ರೀಟ್ಮೆಂಟ್ ಕೊಡಿ" ಎಂದೆಲ್ಲ ಪ್ರೇಕ್ಷಕರು ಕಾಮೆಂಟ್ ಮಾಡಿದ್ದಾರೆ.
ಇತರ ಗ್ಯಾಲರಿಗಳು

