ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜವಾನ್‌ ಸಿನಿಮಾ ಕನ್ನಡ ಟಿವಿ ಚಾನೆಲ್‌ನಲ್ಲಿ ಪ್ರಸಾರ; ಶಾರೂಖ್‌ ಖಾನ್‌ ನಟನೆಯ ಬ್ಲಾಕ್‌ಬಸ್ಟರ್‌ ಸಿನಿಮಾವನ್ನು ಮನೆಯಲ್ಲೇ ನೋಡಿ

ಜವಾನ್‌ ಸಿನಿಮಾ ಕನ್ನಡ ಟಿವಿ ಚಾನೆಲ್‌ನಲ್ಲಿ ಪ್ರಸಾರ; ಶಾರೂಖ್‌ ಖಾನ್‌ ನಟನೆಯ ಬ್ಲಾಕ್‌ಬಸ್ಟರ್‌ ಸಿನಿಮಾವನ್ನು ಮನೆಯಲ್ಲೇ ನೋಡಿ

  • Shah Rukh Khan Jawan movie: ಬಾಲಿವುಡ್‌ ಬಾದ್‌ಶಾ ಶಾರೂಖ್‌ ಖಾನ್‌ ನಟನೆಯ ಬ್ಲಾಕ್‌ಬಸ್ಟರ್‌  ಜವಾನ್‌ ಸಿನಿಮಾವು ಈ ಭಾನುವಾರ ಝೀ ಕನ್ನಡದಲ್ಲಿ ಪ್ರಸಾರವಾಗಲಿದೆ. ಚಿತ್ರಮಂದಿರಗಳಲ್ಲಿ ಅಥವಾ ಒಟಿಟಿಯಲ್ಲಿ ನೋಡಿಲ್ಲದೆ ಇರುವವರು ಮನೆಯಲ್ಲೇ ಕುಳಿತು ಸಿನಿಮಾ ನೋಡಬಹುದಾಗಿದೆ.

ಜವಾನ್‌ ಸಿನಿಮಾದ ಟೆಲಿವಿಷನ್‌ ಪ್ರೀಮಿಯರ್‌ ಕುರಿತು ಝೀ ಕನ್ನಡ ಅಪ್‌ಡೇಟ್‌ ನೀಡಿದೆ. "ಇಂಡಿಯನ್ ಸಿನಿಮಾದ ಕಿಂಗ್, ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ & ದಿಗ್ಗಜ ನಟ, ನಟಿಯರ ಬ್ಲಾಕ್ ಬಸ್ಟರ್ 'ಜವಾನ್' ಇದೇ ಭಾನುವಾರ ಮೇ 19 ರಂದು ಪ್ರಸಾರವಾಗಲಿದೆ" ಎಂದು ಝೀ ಕನ್ನಡ ಅಪ್‌ಡೇಟ್‌ ನೀಡಿದೆ. 
icon

(1 / 7)

ಝೀ ಕನ್ನಡ ವಾಹಿನಿಯಲ್ಲಿ ಭಾನುವಾರ ಮೇ 19ರಂದು ಸಂಜೆ 4 ಗಂಟೆಗೆ ಈ ಸಿನಿಮಾ ಪ್ರಸಾರವಾಗಲಿದೆ. ಶ್ರೀ ಕೃಷ್ಣ ಜನ್ಮಾಷ್ಠಮಿಯಂದು ಅಂದರೆ ಸೆಪ್ಟೆಂಬರ್‌ 7ರಂದು ಜವಾನ್‌ ಸಿನಿಮಾವು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ಮೊದಲ ದಿನದಂದು ಭಾರತದಲ್ಲಿ 75 ಕೋಟಿ ರೂಪಾಯಿ ಸಂಗ್ರಹಿಸಿತ್ತು. ಎರಡು ದಿನದ ಬಳಿಕ ಭಾನುವಾರ 80 ಕೋಟಿ ರೂಪಾಯಿ ಸಂಗ್ರಹವಾಗಿತ್ತು. 
icon

(2 / 7)

ಪಠಾಣ್‌, ಬಾಹುಬಲಿ- ದಿ ಕನ್‌ಕ್ಲೂಷನ್‌ ಮತ್ತು ಗದರ್‌ 2 ಬಳಿಕ ಜವಾನ್‌ ಸಿನಿಮಾವು ಭಾರತದಲ್ಲಿ ನಾಲ್ಕನೇ ಅತ್ಯಧಿಕ ಹಣ ಗಳಿಕೆ ಮಾಡಿದ (ಕಡಿಮೆ ಅವಧಿಯಲ್ಲಿ) ಚಿತ್ರವೆಂಬ ಖ್ಯಾತಿಗೆ ಪಾತ್ರವಾಗಿದೆ. ಇದೀಗ ಈ ಚಿತ್ರವು ಟೆಲಿವಿಷನ್‌ನಲ್ಲಿ ಪ್ರೀಮಿಯರ್‌ ಆಗಲಿದೆ. 
icon

(3 / 7)

ಅಟ್ಲಿ ನಿರ್ದೇಶನದ ಜವಾನ್ ಮೂಲಕ ನಯನತಾರಾ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ದೀಪಿಕಾ ಪಡುಕೋಣೆ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 
icon

(4 / 7)

ಸಂಜಯ್‌ ದತ್‌ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ, ರಿಧಿ ಡೋಗ್ರಾ, ಲೆಹರ್ ಖಾನ್, ಗಿರಿಜಾ ಓಕ್, ಸಂಜೀತಾ ಭಟ್ಟಾಚಾರ್ಯ ತಾರಾಗಣದಲ್ಲಿದ್ದಾರೆ.
icon

(5 / 7)

ಝೀ ಕನ್ನಡದಲ್ಲಿ ಜವಾನ್‌ ಸಿನಿಮಾದ ಕನ್ನಡ ಡಬ್ಬಿಂಗ್‌ ಆವೃತ್ತಿ ಪ್ರದರ್ಶನಗೊಳ್ಳುವುದಕ್ಕೆ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಈಗಾಗಲೇ ಥಿಯೇಟರ್‌ನಲ್ಲಿ ನೋಡಿದ್ದೇವೆ, ಇನ್ನೊಮ್ಮೆ ಟಿವಿಯಲ್ಲೂ ನೋಡುತ್ತೇವೆ ಎಂದು ಕಾಮೆಂಟ್‌ ಮಾಡಿದ್ದಾರೆ. 
icon

(6 / 7)

ಮನರಂಜನೆ ಸುದ್ದಿಗಳನ್ನು ಓದಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಭೇಟಿ ನೀಡಿ
icon

(7 / 7)

ಮನರಂಜನೆ ಸುದ್ದಿಗಳನ್ನು ಓದಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಭೇಟಿ ನೀಡಿ

IPL_Entry_Point

ಇತರ ಗ್ಯಾಲರಿಗಳು