ಅಮೃತಧಾರೆ ಧಾರಾವಾಹಿಗೆ 400 ಸಂಚಿಕೆಗಳ ಸಂಭ್ರಮ; ಗುಡ್‌ನ್ಯೂಸ್, ಮಲ್ಲಿಗೆ ಪ್ರಜ್ಞೆ ಬಂತು, ಜೈದೇವ್ ಗಡಗಡ
- Amruthadhaare serial Completes 400 Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಯಶಸ್ವಿಯಾಗಿ 400 ಸಂಚಿಕೆಗಳನ್ನು ಪೂರೈಸಿದೆ. ಕಿರುತೆರೆ ಪ್ರೇಕ್ಷಕರ ನೆಚ್ಚಿನ ಈ ಸೀರಿಯಲ್‌ನಲ್ಲಿ ಇದೀಗ ಮಲ್ಲಿಗೆ ಪ್ರಜ್ಞೆ ಬಂದಿರುವ ಸುದ್ದಿ ಪ್ರೇಕ್ಷಕರಿಗೆ ಖುಷಿತಂದರೆ ಜೈದೇವ್‌ಗೆ ನಡುಕ ಹುಟ್ಟಿಸಿದೆ.
- Amruthadhaare serial Completes 400 Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಯಶಸ್ವಿಯಾಗಿ 400 ಸಂಚಿಕೆಗಳನ್ನು ಪೂರೈಸಿದೆ. ಕಿರುತೆರೆ ಪ್ರೇಕ್ಷಕರ ನೆಚ್ಚಿನ ಈ ಸೀರಿಯಲ್‌ನಲ್ಲಿ ಇದೀಗ ಮಲ್ಲಿಗೆ ಪ್ರಜ್ಞೆ ಬಂದಿರುವ ಸುದ್ದಿ ಪ್ರೇಕ್ಷಕರಿಗೆ ಖುಷಿತಂದರೆ ಜೈದೇವ್‌ಗೆ ನಡುಕ ಹುಟ್ಟಿಸಿದೆ.
(1 / 9)
Amruthadhaare serial Completes 400 Episode: ಜೀ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಅಮೃತಧಾರೆ ಒಂದಾಗಿದೆ. ಈ ಸೀರಿಯಲ್‌ನ ಕಥೆ, ಇತರೆ ಸೀರಿಯಲ್‌ಗಳಂತೆ ಇರದ ಗುಣದಿಂದಾಗಿ ಎಲ್ಲರಿಗೂ ಅಚ್ಚುಮೆಚ್ಚಾಗಿತ್ತು. ಇತ್ತೀಚಿನ ಕೆಲವು ಸಂಚಿಕೆಗಳಲ್ಲಿ ಇತರೆ ಧಾರಾವಾಹಿಗಳಂತೆ ಹಲವು ಘಟನೆಗಳು ನಡೆದಿದ್ದವು. ಈ ಸೀರಿಯಲ್‌ನಲ್ಲಿ ಡುಮ್ಮ ಸರ್ ಮತ್ತು ಭೂಮಿಕಾ ಪ್ರೇಕ್ಷಕರಿಗೆ ಅಚ್ಚುಮೆಚ್ಚಾಗಿದ್ದರು. ಇದೇ ರೀತಿ ಆನಂದ್ ಮತ್ತು ಅಪರ್ಣಾರ ಬಂಧವೂ ಇಷ್ಟವಾಗಿತ್ತು. ಪ್ರೀತಿ, ಸ್ನೇಹದ ಕಥೆಯಾಗಿ ಎಲ್ಲರನ್ನೂ ಸೆಳೆದಿತ್ತು. ಪಾರ್ಥ ಮತ್ತು ಅಪೇಕ್ಷಾ ಜೋಡಿಯೂ ಎಲ್ಲರಿಗೂ ಅಚ್ಚುಮೆಚ್ಚು. ಆದರೆ, ಇದೀಗ ಬದಲಾದ ಅಪೇಕ್ಷಾಳಿಗೆ ಪ್ರೇಕ್ಷಕರು ಬಯ್ಯುತ್ತಿದ್ದಾರೆ.
(2 / 9)
ಅಮೃತಧಾರೆ ಸೀರಿಯಲ್‌ನ ವಿಲನ್ ರೋಲ್‌ಗಳೂ ಅಮೋಘ ಅಭಿನಯದಿಂದ ಗಮನ ಸೆಳೆದಿವೆ. ಶಕುಂತಲಾದೇವಿಯ ಪಾತ್ರ ಈ ಸೀರಿಯಲ್‌ಗೆ ತೂಕ ನೀಡಿದೆ. ಇದೇ ಸಮಯದಲ್ಲಿ ಜೈದೇವ್ ಆಗಾಗ ತನ್ನ ಖಳ ವರ್ತನೆಯಿಂದ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುತ್ತಾನೆ. ಈತನ ನಟನೆಗೆ ಸಾಕಷ್ಟು ಶ್ಲಾಘನೆ ವ್ಯಕ್ತವಾಗಿದೆ. ಮನೆಹಾಳ ಮಾವನ ಪಾತ್ರವೂ ಅಭಿನಯ ಮತ್ತು ಡೈಲಾಗ್‌ಗಳಿಂದಲೇ ಮೆಚ್ಚುಗೆ ಗಳಿಸಿದೆ.
(3 / 9)
ಇನ್ನೊಂದೆಡೆ ಸದಾಶಿವ ಮಂದಾಕಿನಿ ಕುಟುಂಬವೂ ಈ ಸೀರಿಯಲ್‌ನ ತೂಕ ಹೆಚ್ಚಿಸಿದೆ. ಬಡ ಕುಟುಂಬದ ಶ್ರೀಮಂತ ಬದುಕು ಎಲ್ಲರನ್ನೂ ಸೆಳೆದಿತ್ತು. ಜೀವನ್, ಮಹಿಮಾ, ಮಂದಾಕಿನಿ, ಸದಾಶಿವ ಈ ಸೀರಿಯಲ್‌ನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾರೆ. ಅಶ್ವಿನಿ, ದಿಯಾ ಕೂಡ ಸೀರಿಯಲ್‌ಗೆ ಕಳೆ ತಂದಿದ್ದಾರೆ. ಗೌತಮ್ ದಿವಾನ್ ಎಂಬ ಶ್ರೀಮಂತ ವ್ಯಕ್ತಿಯ ಕುಟುಂಬದ ಸುತ್ತ ನಡೆಯುವ ಈ ಕತೆ ತನ್ನದೇ ಶೈಲಿಯಿಂದ ಪ್ರೇಕ್ಷಕರನ್ನು ಸೆಳೆದಿದೆ. ಇದೀಗ 400 ಸಂಚಿಕೆಗೆ ತಲುಪಿದೆ.
(4 / 9)
ವಿಶೇಷವೆಂದರೆ 400ನೇ ಸಂಚಿಕೆಯಲ್ಲಿ ಮಲ್ಲಿಗೆ ಪ್ರಜ್ಞೆ ಬಂದಿಲ್ಲ. 401ನೇ ಸಂಚಿಕೆಯಲ್ಲಿ ಮಲ್ಲಿಗೆ ಪ್ರಜ್ಞೆ ಬರುವುದನ್ನು ಪ್ರಮೋದಲ್ಲಿ ತೋರಿಸಲಾಗಿದೆ. ಇನ್ನೇನೂ ಈಕೆಯನ್ನು ಆಪರೇಷನ್ ಥಿಯೇಟರ್‌ಗೆ ಕರೆದುಕೊಂಡು ಹೋಗಬೇಕೆನ್ನುವಷ್ಟರಲ್ಲಿ ಮಲ್ಲಿಯ ದೇಹದಲ್ಲಿ ಮಿಸುಕಾಟ ಕಾಣಿಸಿದೆ.
(5 / 9)
"ಮಲ್ಲಿಗೆ ಪ್ರಜ್ಞೆ ಬರುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಬೆಟರ್ ಟು ಗೋ ಆಪರೇಷನ್" ಎಂದು ಡಾಕ್ಟರ್ ಇಂದುಮತಿ ಹೇಳುತ್ತಾರೆ. ನನಗೆ ಒಪ್ಪಿಗೆ ಇದೆ ಎಂದು ಜೈದೇವ್ ಸಮ್ಮತಿ ಸೂಚಿಸುತ್ತಾನೆ. ಹೀಗಾಗಿ ಒಲ್ಲದ ಮನಸ್ಸಿನಲ್ಲಿ ಆಪರೇಷನ್ ನಡೆಸಲು ಮುಂದಾಗಿದ್ದಾರೆ.
(6 / 9)
ಎಚ್ಚರಗೊಂಡ ಮಲ್ಲಿ ಮೊದಲಿಗೆ ಅಕ್ಕೋರೆ ಎಂದು ಭೂಮಿಕಾಳನ್ನು ಕರೆದಿದ್ದಾಳೆ. ಈ ಮೂಲಕ ಈಕೆಯ ಮನಸ್ಸಲ್ಲಿ ಭೂಮಿಕಾಳೇ ಇದ್ದಾಳೆ. ಆಕೆಯ ಮಾತುಗಳನ್ನು ನಾನು ಕೇಳಿಸಿಲ್ಲ ಎಂಬ ದುಃಖ ಇದೆ. ಜೈದೇವ್‌ನ ಇನ್ನೊಂದು ಮುಖ ತಿಳಿದ ಇವಳಿಗೆ ಇದೀಗ ಮಗು ಕಳೆದುಕೊಂಡ ಸುದ್ದಿ ಕೇಳಿದರೆ ಏನಾಗಬಹುದು ಎಂಬ ಆತಂಕ ಎಲ್ಲರಿಗೂ ಇದೆ.
(7 / 9)
ಅಮೃತಧಾರೆ ಸೀರಿಯಲ್‌ನಲ್ಲಿ ಮಲ್ಲಿಯನ್ನು ಸಾಯಿಸಬೇಕೆಂದು ಬಯಸಿದ ಜೈದೇವ್‌ಗೆ ಸಹಜವಾಗಿ ಆತಂಕವಾಗಿದೆ. ಈಕೆಗೆ ಪ್ರಜ್ಞೆ ಬಾರದು ಎಂದುಕೊಂಡ ನರ್ಸ್ ನೀಡಿದ್ದ ಔಷಧವೂ ಕೆಲಸ ಮಾಡಿಲ್ಲ. ಕೊನೆಕ್ಷಣದಲ್ಲಿ ಮಲ್ಲಿ ಕಣ್ಣು ತೆರೆದಿದ್ದಾಳೆ. ಕಳೆದ ಹಲವು ಸಂಚಿಕೆಯಿಂದ ಆಸ್ಪತ್ರೆ ನೋಡಿ ಪ್ರೇಕ್ಷಕರಿಗೂ ಬೇಸರವಾಗಿತ್ತು. ಇನ್ನು ಉಳಿದ ಸಂಚಿಕೆಗಳು ದಿವಾನ್ ಮನೆಗೆ ಶಿಫ್ಟ್ ಆಗಲಿದೆ.
(8 / 9)
ಮುಂದಿನ ಸಂಚಿಕೆಗಳಲ್ಲಿ ಶಕುಂತಲಾದೇವಿ, ಜೈದೇವ್ ಕುತಂತ್ರ ಗೌತಮ್ ದಿವಾನ್‌ಗೆ ತಿಳಿಯುವ ನಿರೀಕ್ಷೆಯಿದೆ. ವಿಲನ್ ಪಾತ್ರಗಳಿಗೆ ಶಿಕ್ಷೆ ವಿಧಿಸಬೇಕೆಂದು ಪ್ರೇಕ್ಷಕರು ಬಯಸಿದ್ದಾರೆ. ಇದೇ ಸಮಯದಲ್ಲಿ ಭೂಮಿಕಾ ಮತ್ತು ಡಮ್ಮ ಸರ್‌ಗೆ ಮರಿಡುಮ್ಮ ಆಗಮಿಸುವ ಸಾಧ್ಯತೆಯೂ ಇದೆ. 400 ಸಂಚಿಕೆ ಯಶಸ್ವಿಯಾಗಿ ಮುಗಿಸಿರುವ ಈ ಸೀರಿಯಲ್‌ನ ಕಥೆಯನ್ನು ಇನ್ನೂ ನೂರು ಇನ್ನೂರು ಸಂಚಿಕೆಯಷ್ಟು ನಿರ್ದೇಶಕರು ಎಳೆಯುತ್ತಾರೋ ಕಾದು ನೋಡಬೇಕಿದೆ.
ಇತರ ಗ್ಯಾಲರಿಗಳು