ಡಬಲ್ ಧಮಾಕಾ! ಶ್ರೀಮುರಳಿ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ನಿರ್ಮಿಸುತ್ತಿದೆ ತೆಲುಗಿನ ಈ ಖ್ಯಾತ ನಿರ್ಮಾಣ ಸಂಸ್ಥೆ
- Golden Star Ganesh Upcoming Movies: ಕೃಷ್ಣಂ ಪ್ರಣಯ ಸಖಿ ಸಿನಿಮಾ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಡಿಮಾಂಡ್ ಹೆಚ್ಚಾಗಿದೆ. ಹೀಗಿರುವಾಗಲೇ ಗಣೇಶ್ ಅವರ ಮುಂಬರುವ ಸಿನಿಮಾವೊಂದರ ಬಗ್ಗೆ ಈಗ ಹೊಸ ಅಪ್‌ಡೇಟ್‌ವೊಂದು ಸಿಕ್ಕಿದೆ. ಈಗಾಗಲೇ ತೆಲುಗಿನಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಸಂಸ್ಥೆ ಇದೀಗ ಕನ್ನಡಕ್ಕೆ ಆಗಮಿಸಿದೆ.

(1 / 5)
ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಜತೆಗೆ ಗೋಲ್ಡನ್ ಸ್ಟಾರ್ ಗಣೇಶ್ ಕೈ ಜೋಡಿಸಿದ್ದಾರೆ. ಅಂದರೆ ಈ ಸಂಸ್ಥೆ ನಿರ್ಮಾಣ ಮಾಡಲಿರುವ #PMF49 ಸಿನಿಮಾದಲ್ಲಿ ನಾಯಕನಾಗಿ ಗಣೇಶ್ ನಟಿಸಲಿದ್ದಾರೆ. ಈಗಾಗಲೇ ತೆಲುಗು ತಮಿಳಿನಲ್ಲಿ ಹಲವು ಸಿನಿಮಾಗಳನ್ನು ಈ ಸಂಸ್ಥೆ ನಿರ್ಮಾಣ ಮಾಡಿದೆ. ಇದೀಗ ಕನ್ನಡಕ್ಕೂ ಆಗಮಿಸಿದೆ.
(2 / 5)
ತೆಲುಗು ತಮಿಳಿನಲ್ಲಿ ಕಾರ್ತಿಕೇಯ 2, ವೆಂಕಿ ಮಾಮ, ನಿಶ್ಯಬ್ದಂ, ಓ ಬೇಬಿ, ಕುಡಿ ಎಡಮಾಟೆ, ನ್ಯೂಸೆನ್ಸ್‌ಮ ಧಮಾಕಾ, ರಾಜ ರಾಜ ಚೋರ, ಬ್ರೋ ದಿ ಅವತಾರ್, ಈಗಲ್, ಮನಮೇಯ್, ಮಿಸ್ಟರ್ ಬಚ್ಚನ್, ಸ್ವ್ಯಾಗ್ ಮತ್ತು ವಿಶ್ವಂ ಸಿನಿಮಾಗಳನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣ ಮಾಡಿದೆ. ಈಗ ಇದೇ ಸಂಸ್ಥೆ ಸ್ಯಾಂಡಲ್‌ವುಡ್‌ಗೆ ಆಗಮಿಸಿದೆ.
(3 / 5)
ಕಳೆದ ಕೆಲ ವಾರಗಳ ಹಿಂದಷ್ಟೇ ಶ್ರೀ ಮುರಳಿ ನಟನೆಯ ಸಿನಿಮಾವನ್ನೂ ನಿರ್ಮಾಣ ಮಾಡುವುದಾಗಿ ಹೇಳಿ, ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿತ್ತು ಈ ಸಂಸ್ಥೆ. ಈಗ ಕನ್ನಡದ ಮತ್ತೋರ್ವ ಸ್ಟಾರ್ ನಟ ಗಣೇಶ್ ಅವರ ಸಿನಿಮಾವನ್ನೂ ಈ ಸಂಸ್ಥೆ ಕೈಗೆತ್ತಿಕೊಂಡಿದೆ.
(4 / 5)
ಪೀಪಲ್ ಮೀಡಿಯಾ ಫ್ಯಾಕ್ಟರಿ ಈ ಸಿನಿಮಾ ನಿರ್ಮಾಣದ ಮೂಲಕ ಕನ್ನಡ ಚಿತ್ರೋದ್ಯಮ ಪ್ರವೇಶಿಸುತ್ತಿದೆ. ಈಗಾಗಲೇ ಕನ್ನಡದ ನಿರ್ಮಾಣ ಸಂಸ್ಥೆಗಳು ಪರಭಾಷೆ ಸಿನಿಮಾ ನಿರ್ಮಾಣದಲ್ಲಿ ತೊಡಗಿವೆ. ಈಗ ಬೇರೆ ಭಾಷೆ ಸಂಸ್ಥೆ ಕನ್ನಡಕ್ಕೆ ಆಗಮಿಸಿದೆ.
ಇತರ ಗ್ಯಾಲರಿಗಳು