ಆಸ್ಟ್ರೇಲಿಯನ್ ಓಪನ್ 2025: ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಗೆದ್ದ ಮ್ಯಾಡಿಸನ್ ಕೀಸ್ಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?
- Australian Open 2025: ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಯುಎಸ್ನ ಮ್ಯಾಡಿಸನ್ ಕೀಸ್ ಗೆದ್ದು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಹಾಗಾದರೆ ಅವರಿಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?
- Australian Open 2025: ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಯುಎಸ್ನ ಮ್ಯಾಡಿಸನ್ ಕೀಸ್ ಗೆದ್ದು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಹಾಗಾದರೆ ಅವರಿಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?
(1 / 5)
ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ ಅಮೆರಿಕದ ಮ್ಯಾಡಿಸನ್ ಕೀಸ್ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
(AFP)(2 / 5)
ಶನಿವಾರ (ಜನವರಿ 25) ನಡೆದ ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ಮ್ಯಾಡಿಸನ್ ವಿಶ್ವದ ನಂಬರ್ 1 ಆಟಗಾರ್ತಿ ಅರಿಯಾನಾ ಸಬಲೆಂಕಾ ಅವರನ್ನು ಸೋಲಿಸಿ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದರು.
(AFP)(3 / 5)
ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಬೆಲಾರಸ್ನ ಸಬಲೆಂಕಾ ಅವರನ್ನು 6-3, 2-6, 7-5 ಸೆಟ್ಗಳಿಂದ ಮ್ಯಾಡಿಸನ್ ಮಣಿಸಿದರು. ಕಳೆದ ಎರಡು ವರ್ಷಗಳಿಂದ ಆಸ್ಟ್ರೇಲಿಯನ್ ಪ್ರಶಸ್ತಿಯನ್ನು ಗೆದ್ದಿರುವ ಸಬಲೆಂಕಾ ಈ ಬಾರಿ ಫೈನಲ್ನಲ್ಲಿ ಹಿನ್ನಡೆ ಅನುಭವಿಸಿ ಹ್ಯಾಟ್ರಿಕ್ ಕಳೆದುಕೊಂಡರು.
(REUTERS)(4 / 5)
ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ಮ್ಯಾಡಿಸನ್ ಕೀಸ್ 2.22 ಮಿಲಿಯನ್ ಡಾಲರ್ (ಅಂದಾಜು 19 ಕೋಟಿ ರೂ.) ಬಹುಮಾನ ಮೊತ್ತ ಪಡೆದರು. ಆದರೆ ಐಪಿಎಲ್ ಚಾಂಪಿಯನ್ ತಂಡವು 20 ಕೋಟಿ ಬಹುಮಾನ ಪಡೆಯಲಿದೆ. ಈ ಪ್ರಶಸ್ತಿಗಾಗಿ ಸುಮಾರು ಎರಡು ತಿಂಗಳ ಕಾಲ ಕಾದಾಟ ನಡೆಸಬೇಕಿದೆ. ಆದರೆ, ಮ್ಯಾಡಿಸನ್ ಕೇವಲ 20 ದಿನಗಳಲ್ಲಿ ಐಪಿಎಲ್ಗಿಂತ 1 ಕೋಟಿ ಕಡಿಮೆ ಬಹುಮಾನ ಪಡೆದಿದ್ದಾರೆ.
(AFP)ಇತರ ಗ್ಯಾಲರಿಗಳು