Jannik Sinner: ಪ್ಯಾರಿಸ್ ಒಲಿಂಪಿಕ್ಸ್ನಿಂದ ಹಿಂದೆ ಸರಿದ ವಿಶ್ವದ ನಂ 1 ಟೆನಿಸ್ ಆಟಗಾರ ಜಾನಿಕ್ ಸಿನ್ನರ್
- Jannik Sinner Out: ವಿಶ್ವ ನಂ.1 ಟೆನಿಸ್ ತಾರೆ ಜಾನಿಕ್ ಸಿನ್ನರ್ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ. ಅದಕ್ಕೆ ಕಾರಣ ಹೀಗಿದೆ ನೋಡಿ.
- Jannik Sinner Out: ವಿಶ್ವ ನಂ.1 ಟೆನಿಸ್ ತಾರೆ ಜಾನಿಕ್ ಸಿನ್ನರ್ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ. ಅದಕ್ಕೆ ಕಾರಣ ಹೀಗಿದೆ ನೋಡಿ.
(1 / 6)
ಬಾಯಿಯ ಗಾಯಕ್ಕೆ ಗುತ್ತಾಗಿರುವ ಕಾರಣ 2024ರ ಪ್ಯಾರಿಸ್ ಒಲಿಂಪಿಕ್ಸ್ನಿಂದ ಅಗ್ರ ಶ್ರೇಯಾಂಕಿತ ಟೆನಿಸ್ ಆಟಗಾರ ಜಾನಿಕ್ ಸಿನ್ನರ್ ಹಿಂದೆ ಸರಿದಿದ್ದಾರೆ.
(AFP)(2 / 6)
ಕ್ರೀಡಾಕೂಟದಿಂದ ಹೊರಗುಳಿಯುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎಂದು ಇಟಲಿಯ 22 ವರ್ಷದ ಆಟಗಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಅವರ ಚೊಚ್ಚಲ ಒಲಿಂಪಿಕ್ಸ್ ಆಗಿತ್ತು.
(AFP)(3 / 6)
ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದ ಸಿನ್ನರ್ (ಇದು ಅವರ ಚೊಚ್ಚಲ ಗ್ರ್ಯಾಂಡ್ ಸ್ಲಾಮ್), ಫ್ರೆಂಚ್ ಓಪನ್ ಸೆಮಿಫೈನಲ್ ತಲುಪಿದ ನಂತರ ಕಳೆದ ತಿಂಗಳು ಎಟಿಪಿ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದರು.
(AFP)(4 / 6)
ತಮ್ಮ ಅಧಿಕೃತ ಇನ್ಸ್ಟಾಗ್ರಾಂನಲ್ಲಿ ಒಲಿಂಪಿಕ್ಸ್ನಿಂದ ಹಿಂದೆ ಸರಿಯುವ ಮತ್ತು ಒಲಿಂಪಿಕ್ಸ್ನಲ್ಲಿ ಆಡಲು ಸಾಧ್ಯವಾಗದೇ ಇರುವುದಕ್ಕೆ ನಿರಾಶೆ ವ್ಯಕ್ತಪಡಿಸಿದ್ದಾರೆ.
(AFP)(5 / 6)
ಈ ಋತುವಿನಲ್ಲಿ ನನ್ನ ಪ್ರಮುಖ ಗುರಿಗಳಲ್ಲಿ ಒಂದಾದ ಒಲಿಂಪಿಕ್ಸ್ ತಪ್ಪಿಸಿಕೊಳ್ಳುವುದು ದೊಡ್ಡ ನಿರಾಶೆಯಾಗಿದೆ ಎಂದು ಸಿನ್ನರ್ ಇಟಾಲಿಯನ್ ಭಾಷೆಯಲ್ಲಿ ಬರೆದಿದ್ದಾರೆ.
(AFP)ಇತರ ಗ್ಯಾಲರಿಗಳು