ಕನ್ನಡ ಸುದ್ದಿ  /  Photo Gallery  /  The Ideals Of Kempegowda And Basaveshwara Are The Foundation Of Our Governance Says Cm Bommai

Basavaraj Bommai: ಕೆಂಪೇಗೌಡರು ಮತ್ತು ಬಸವೇಶ್ವರರ ಆದರ್ಶಗಳೇ ನಮ್ಮ ಆಡಳಿತದ ಅಡಿಪಾಯ: ಬಸವರಾಜ ಬೊಮ್ಮಾಯಿ‌ ಅಭಿಮತ

ಬೆಂಗಳೂರು: ನಾಡಪ್ರಭು ಕೇಂಪೆಗೌಡರು ಮತ್ತು ಬಸವೇಶ್ವರರ ಆದರ್ಶಗಳೇ, ನಮ್ಮ ಆಡಳಿತದ ಅಡಿಪಾಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಂದು ವಿಧಾನಸೌಧದ ಮುಂದೆ ಪ್ರತಿಮೆಗಳ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..

ಬಸವೇಶ್ವರರು ನಮಗೆ ಕಾಯಕದ ಮಹತ್ವ ತಿಳಿಸಿದವರು. ಅಂತಹ ಮಹಾನ್‌ ಚಿಂತಕರ ಪ್ರತಿಮೆಯನ್ನು ವಿಧಾನಸೌಧದ ಮುಂಭಾಗ ಅನಾವರಣಗೊಳಿಸಿರುವುದು ಸಂತಸ ತಂದಿದೆ. ಅದೇ ರೀತಿ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪ್ರತಿಮೆ ಕೂಡ ಅನಾವರಣಗೊಂಡಿರುವುದು ಸಂತಸದ ಸಂಗತಿ. ಈ ಇಬ್ಬರು ಮಹಾನ್‌ ನಾಯಕರ ಪ್ರತಿಮೆಗಳು ಬಹಳ ಹಿಂದೆಯೇ ವಿಧಾನಸೌಧದಲ್ಲಿ ಅನಾವರಣಗೊಳ್ಳಬೇಕಿತ್ತು. ಆದರೆ ನಾನು ಇದಕ್ಕೆ ಯಾರನ್ನೂ ದೂಷಿಸುವುದಿಲ್ಲ ಎಂದು ಸಿಎಂ ಬೊಮ್ಮಾಯಿ ನುಡಿದರು.
icon

(1 / 5)

ಬಸವೇಶ್ವರರು ನಮಗೆ ಕಾಯಕದ ಮಹತ್ವ ತಿಳಿಸಿದವರು. ಅಂತಹ ಮಹಾನ್‌ ಚಿಂತಕರ ಪ್ರತಿಮೆಯನ್ನು ವಿಧಾನಸೌಧದ ಮುಂಭಾಗ ಅನಾವರಣಗೊಳಿಸಿರುವುದು ಸಂತಸ ತಂದಿದೆ. ಅದೇ ರೀತಿ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪ್ರತಿಮೆ ಕೂಡ ಅನಾವರಣಗೊಂಡಿರುವುದು ಸಂತಸದ ಸಂಗತಿ. ಈ ಇಬ್ಬರು ಮಹಾನ್‌ ನಾಯಕರ ಪ್ರತಿಮೆಗಳು ಬಹಳ ಹಿಂದೆಯೇ ವಿಧಾನಸೌಧದಲ್ಲಿ ಅನಾವರಣಗೊಳ್ಳಬೇಕಿತ್ತು. ಆದರೆ ನಾನು ಇದಕ್ಕೆ ಯಾರನ್ನೂ ದೂಷಿಸುವುದಿಲ್ಲ ಎಂದು ಸಿಎಂ ಬೊಮ್ಮಾಯಿ ನುಡಿದರು.(Verified Twitter)

ಬಸವೇಶ್ವರರು ಅನುಭವ ಮಂಟಪದ ಮೂಲಕ  ಸಮಾಜಕ್ಕೆ ಸಮಾನತೆಯ ಸಂದೇಶ ಸಾರಿದ್ದಾರೆ. ಬಸವೇಶ್ವರರ ಪ್ರತಿಮೆ ವಿಧಾನಸೌಧದ ಮುಂದೆ ಅಷ್ಟೆ ಅಲ್ಲ, ಹೈಕೋರ್ಟ್ ಎದುರಿಗಿದೆ. ನಾಡ ಪ್ರಭು ‌ಕೆಂಪೇಗೌಡರು ಯಾವುದೇ ನದಿ ಇಲ್ಲದ ಪ್ರದೇಶದಲ್ಲಿ ನಗರ ನಿರ್ಮಾಣ ಮಾಡಿದ್ದಾರೆ. ಎಲ್ಲ ಸಮುದಾಯಗಳಿಗೆ ಮಾರುಕಟ್ಟೆ ನಿರ್ಮಿಸಿ, ನಿಜವಾಗಿ ಬಸವಣ್ಣನವರ ಆದರ್ಶಗಳನ್ನು ಜಾರಿಗೆ ತಂದವರು ಕೆಂಪೇಗೌಡರು ಎಂದು ಸಿಎಂ ಬೊಮ್ಮಾಯಿ ಹೇಳಿದರು.
icon

(2 / 5)

ಬಸವೇಶ್ವರರು ಅನುಭವ ಮಂಟಪದ ಮೂಲಕ  ಸಮಾಜಕ್ಕೆ ಸಮಾನತೆಯ ಸಂದೇಶ ಸಾರಿದ್ದಾರೆ. ಬಸವೇಶ್ವರರ ಪ್ರತಿಮೆ ವಿಧಾನಸೌಧದ ಮುಂದೆ ಅಷ್ಟೆ ಅಲ್ಲ, ಹೈಕೋರ್ಟ್ ಎದುರಿಗಿದೆ. ನಾಡ ಪ್ರಭು ‌ಕೆಂಪೇಗೌಡರು ಯಾವುದೇ ನದಿ ಇಲ್ಲದ ಪ್ರದೇಶದಲ್ಲಿ ನಗರ ನಿರ್ಮಾಣ ಮಾಡಿದ್ದಾರೆ. ಎಲ್ಲ ಸಮುದಾಯಗಳಿಗೆ ಮಾರುಕಟ್ಟೆ ನಿರ್ಮಿಸಿ, ನಿಜವಾಗಿ ಬಸವಣ್ಣನವರ ಆದರ್ಶಗಳನ್ನು ಜಾರಿಗೆ ತಂದವರು ಕೆಂಪೇಗೌಡರು ಎಂದು ಸಿಎಂ ಬೊಮ್ಮಾಯಿ ಹೇಳಿದರು.(Verified Twitter)

ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಇಡೀ ದೇಶವನ್ನು ಮತ್ತೆ ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ನಮ್ಮ ರಾಜ್ಯ, ಆಂಧ್ರಪ್ರದೇಶ, ಓರಿಸ್ಸಾಗಳಲ್ಲಿ ನಕ್ಸಲರ ಹಾವಳಿ ಇತ್ತು. ಅಲ್ಲದೇ ಅನೇಕ‌ ವಿಚಿದ್ರಕಾರಿ ಶಕ್ತಿಗಳನ್ನು ದಮನ ಮಾಡಿ, ಇಡಿ ದೇಶವನ್ನು ಅಭಿವೃದ್ಧಿಪಥದಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಮೆಚ್ಚುಗೆಯ ಮಾತುಗಳನ್ನಾಡಿದರು.
icon

(3 / 5)

ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಇಡೀ ದೇಶವನ್ನು ಮತ್ತೆ ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ನಮ್ಮ ರಾಜ್ಯ, ಆಂಧ್ರಪ್ರದೇಶ, ಓರಿಸ್ಸಾಗಳಲ್ಲಿ ನಕ್ಸಲರ ಹಾವಳಿ ಇತ್ತು. ಅಲ್ಲದೇ ಅನೇಕ‌ ವಿಚಿದ್ರಕಾರಿ ಶಕ್ತಿಗಳನ್ನು ದಮನ ಮಾಡಿ, ಇಡಿ ದೇಶವನ್ನು ಅಭಿವೃದ್ಧಿಪಥದಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಮೆಚ್ಚುಗೆಯ ಮಾತುಗಳನ್ನಾಡಿದರು.(Verified Twitter)

ಇಂದಿನ ಯುವ ಪೀಳಿಗೆ ಬಸವಣ್ಣ ಮತ್ತು ಕೆಂಪೇಗೌಡ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಅಂದಾಗ ಮಾತ್ರ ಕಲ್ಯಾಣ ರಾಜ್ಯವನ್ನು ನಾವು ನಿರ್ಮಿಸಲು ಸಾಧ್ಯ ಎಂದು ಸಿಎಂ ಬೊಮ್ಮಾಯಿ ಇದೇ ವೇಳೆ ಸಲಹೆ ನೀಡಿದರು.
icon

(4 / 5)

ಇಂದಿನ ಯುವ ಪೀಳಿಗೆ ಬಸವಣ್ಣ ಮತ್ತು ಕೆಂಪೇಗೌಡ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಅಂದಾಗ ಮಾತ್ರ ಕಲ್ಯಾಣ ರಾಜ್ಯವನ್ನು ನಾವು ನಿರ್ಮಿಸಲು ಸಾಧ್ಯ ಎಂದು ಸಿಎಂ ಬೊಮ್ಮಾಯಿ ಇದೇ ವೇಳೆ ಸಲಹೆ ನೀಡಿದರು.(Verified Twitter)

ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಾ. ನಿರ್ಮಾಲಾನಂದ ಸ್ವಾಮೀಜಿ, ತುಮಕೂರು ಶಿವಕುಮಾರ ಸ್ವಾಮೀಜಿ, ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ಸಚಿವರಾದ ಆರ್. ಅಶೋಕ, ಗೋವಿಂದ ಕಾರಜೋಳ, ಮುರಗೇಶ ನಿರಾಣಿ, ಸಿ.ಸಿ ಪಾಟೀಲ, ಅಶ್ವಥ್ ನಾರಾಯಣ ಸೇರಿದಂತೆ ಇತರರು ಉಪಸ್ಥಿತರಿದ್ದರು
icon

(5 / 5)

ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಾ. ನಿರ್ಮಾಲಾನಂದ ಸ್ವಾಮೀಜಿ, ತುಮಕೂರು ಶಿವಕುಮಾರ ಸ್ವಾಮೀಜಿ, ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ಸಚಿವರಾದ ಆರ್. ಅಶೋಕ, ಗೋವಿಂದ ಕಾರಜೋಳ, ಮುರಗೇಶ ನಿರಾಣಿ, ಸಿ.ಸಿ ಪಾಟೀಲ, ಅಶ್ವಥ್ ನಾರಾಯಣ ಸೇರಿದಂತೆ ಇತರರು ಉಪಸ್ಥಿತರಿದ್ದರು(Verified Twitter)


ಇತರ ಗ್ಯಾಲರಿಗಳು