ಬೆಂಗಳೂರಿನಲ್ಲಿದ್ದ ಸ್ಪೇನ್ ಪ್ರಜೆ ನಿವಾಸದಲ್ಲಿ ಕಳ್ಳತನ: ವಿದೇಶಿ ಡ್ರಗ್ ಪೆಡ್ಲರ್ ಬಂಧನ, 48 ಲಕ್ಷ ಮೌಲ್ಯದ ಹೈಡ್ರೋ ಗಾಂಜಾ, MDMA ಜಪ್ತಿ
- ಬೆಂಗಳೂರಿನಲ್ಲಿ ನೆಲೆಸಿರುವ ಸ್ಪೇನ್ ಪ್ರಜೆಯ ನಿವಾಸದಲ್ಲಿ ಕಳ್ಳತನ ನಡೆದಿದೆ. ಮತ್ತೊಂದು ಪ್ರಕರಣದಲ್ಲಿ ವಿದೇಶಿ ಡ್ರಗ್ ಪೆಡ್ಲರ್ ಬಂಧನ ಮಾಡಲಾಗಿದೆ. ಆತನಿಂದ 48 ಲಕ್ಷ ಮೌಲ್ಯದ ಹೈಡ್ರೋ ಗಾಂಜಾ, ಎಂಡಿಎಂಎ ಜಪ್ತಿ ಮಾಡಲಾಗಿದೆ. (ವರದಿ- ಎಚ್. ಮಾರುತಿ)
- ಬೆಂಗಳೂರಿನಲ್ಲಿ ನೆಲೆಸಿರುವ ಸ್ಪೇನ್ ಪ್ರಜೆಯ ನಿವಾಸದಲ್ಲಿ ಕಳ್ಳತನ ನಡೆದಿದೆ. ಮತ್ತೊಂದು ಪ್ರಕರಣದಲ್ಲಿ ವಿದೇಶಿ ಡ್ರಗ್ ಪೆಡ್ಲರ್ ಬಂಧನ ಮಾಡಲಾಗಿದೆ. ಆತನಿಂದ 48 ಲಕ್ಷ ಮೌಲ್ಯದ ಹೈಡ್ರೋ ಗಾಂಜಾ, ಎಂಡಿಎಂಎ ಜಪ್ತಿ ಮಾಡಲಾಗಿದೆ. (ವರದಿ- ಎಚ್. ಮಾರುತಿ)
(1 / 9)
ಬೆಂಗಳೂರು: ನಗರದ ಲ್ಯಾಂಗ್ ಫೋರ್ಡ್ ಟೌನ್ನ ನಾಯ್ಡುಸ್ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ಸ್ಪೇನ್ ಪ್ರಜೆಯೊಬ್ಬರ ನಿವಾಸದಲ್ಲಿ ಕಳ್ಳತನ ನಡೆದಿದೆ.
(Hindustan times)(2 / 9)
ಜನವರಿ 14ರಂದು ತಡರಾತ್ರಿ 2 ಗಂಟೆ ವೇಳೆಗೆ ಸ್ಪೇನ್ ಪ್ರಜೆ ಜೀಸಸ್ ಅಬ್ರಿಲ್ ಅವರು ಬಾಡಿಗೆಗೆ ವಾಸವಿದ್ದ ನಿವಾಸದ ಶೌಚಾಲಯದ ಕಿಟಕಿ ಗಾಜು ಒಡೆದು ಇಬ್ಬರು ಕಳ್ಳರು ಒಳ ನುಗ್ಗಿದ್ದಾರೆ. ಈ ವೇಳೆ ಆತಂಕಗೊಂಡ ಜೀಸಸ್ ಅಬ್ರಿಲ್, ಮತ್ತೊಂದು ಕೊಠಡಿಗೆ ಹೋಗಿ ಚಿಲಕ ಹಾಕಿಕೊಂಡಿದ್ದಾರೆ.
(Canva)(3 / 9)
ಅಷ್ಟರಲ್ಲಿ ಕಳ್ಳರು 10 ಸಾವಿರ ನಗದು, ಲ್ಯಾಪ್‌ಟಾಪ್, ಪ್ಲಾಟಿನಂ ಉಂಗುರ, ಸ್ಪೇನ್‌ನ ಐಡಿ ಕಾರ್ಡ್, ಡಿಎಲ್, ಡೆಬಿಟ್ ಕಾರ್ಡ್, ಇಂಡಿಯನ್ ಡೆಬಿಟ್ ಕಾರ್ಡ್‌ಗಳು ಸೇರಿದಂತೆ 82 ಸಾವಿರ ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.
(Canva)(4 / 9)
ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿರುವ ಜೀಸಸ್ ಅಬ್ರಿಲ್ ಅವರು ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಅಪಾರ್ಟ್ ಮೆಂಟ್ ಮಾಲೀಕ ಸುಧೀರ್ ಅವರಿಗಗೂ ಮೊಬೈಲ್ ಕರೆ ಮಾಡಿ ಕಳ್ಳತನವಾಗಿರುವ ವಿಷಯ ತಿಳಿಸಿದ್ದಾರೆ.
(Canva)(5 / 9)
ಜನವರಿ 15ರ ಬೆಳಿಗ್ಗೆ ಸಹಾಯವಾಣಿ 112ಕ್ಕೆ ಕರೆ ಮಾಡಿ ಯಾವುದೇ ಮಾಹಿತಿ ನೀಡದೆ ಕರೆಯನ್ನು ಸ್ಥಗಿತಗೊಳಿಸಿದ್ದಾರೆ. ನಂತರ ಮತ್ತೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. 10 ಗಂಟೆಗೆ ಜೀಸಸ್ ಅವರ ಪಕ್ಕದ ಮನೆಯ ನಿವಾಸಿ ಸೈಯದ್ ಅಶಫ್ ಅವರು ಪೊಲೀಸರಿಗೆ ಕರೆ ಮಾಡಿ ಕಳ್ಳತನದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
(Hindustan times website)(6 / 9)
ಕೂಡಲೇ ಸ್ಥಳಕ್ಕೆ ಧಾವಿಸಿದ ಹೊಯ್ಸಳ ವಾಹನ ಸಿಬ್ಬಂದಿ ಪರಿಶೀಲನೆ ನಡೆಸಿ ಸಮೀಪದ ಅಶೋಕ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.ಅಲ್ಲಿನ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯ ಪತ್ತೆಗೆ ಹುಡುಕಾಟ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
(Canva)(7 / 9)
ಮತ್ತೊಂದು ಪ್ರಕರಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ವಿದೇಶಿ ಡ್ರಗ್ ಪೆಡ್ಲರ್ವೊಬ್ಬನನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಫ್ರಿಕಾ ದೇಶದ ಕ್ರಿಸ್ಟೋಫರ್ ಒಕ್ವಿಡಿಲಿ ಬಂಧಿತ ಆರೋಪಿ. ಈತನಿಂದ ರೂ. 48 ಲಕ್ಷ ಮೌಲ್ಯದ 250 ಗ್ರಾಂ ತೂಕದ ಹೈಡ್ರೋ ಗಾಂಜಾ ಮತ್ತು 165 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.
(Canva)(8 / 9)
ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ರಸ್ತೆಯ ಚಿಕ್ಕಬಾಣಾವರದ ವಿನಾಯಕ ನಗರ ಬಳಿ ಆರೋಪಿಯು ಆ ಭಾಗದಲ್ಲಿ ವಾಸವಾಗಿದ್ದ ಹೊರ ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ, ಮಾದಕ ವಸ್ತುಗಳ ಸಹಿತ ಆರೋಪಿಯನ್ನು ಬಂಧಿಸಿದ್ದಾರೆ.
(Canva)ಇತರ ಗ್ಯಾಲರಿಗಳು