ಕನ್ನಡ ಸುದ್ದಿ  /  Photo Gallery  /  These 5 Australia Players Dangerous For India In Test Series

India vs Australia Test: ಟೆಸ್ಟ್‌ ಸರಣಿಯಲ್ಲಿ ಭಾರತವನ್ನು ಕಾಡಲಿರುವ ಆಸೀಸ್‌ ಆಟಗಾರರಿವರು

  • Ind Vs Aus Test Series : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿಯು ಫೆಬ್ರವರಿ 9ರಿಂದ ಪ್ರಾರಂಭವಾಗಲಿದೆ. ವಿಶ್ವದ ಎರಡು ಬಲಿಷ್ಠ ತಂಡಗಳ ನಡುವಣ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಪ್ರಸ್ತುತ ವಿಶ್ವದ ಪ್ರಮುಖ ಟೆಸ್ಟ್ ಸರಣಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ನಡುವೆ ಭಾರತ ತಂಡವು ಸರಣಿಯನ್ನು ಗೆಲ್ಲುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಇರಾದೆಯಲ್ಲಿದೆ.

ಭಾರತದಲ್ಲಿ ಭಾರತ ತಂಡವನ್ನು ಸೋಲಿಸುವ ಸಾಮರ್ಥ್ಯ ಆಸ್ಟ್ರೇಲಿಯಾ ತಂಡಕ್ಕಿದೆ. ಹೀಗಾಗಿ ಈ ಸರಣಿಯನ್ನು ಗೆಲ್ಲುವುದು ಟೀಮ್ ಇಂಡಿಯಾಗೆ ಇದು ಸುಲಭದ ತುತ್ತಲ್ಲ. ಆದರೆ, ಕಳೆದ 18 ವರ್ಷಗಳಲ್ಲಿ ಭಾರತದಲ್ಲಿ ಟೆಸ್ಟ್‌ನಲ್ಲಿ ಭಾರತವನ್ನು ಸೋಲಿಸಲು ಆಸ್ಟ್ರೇಲಿಯಾಗೆ ಸಾಧ್ಯವಾಗಿಲ್ಲ ಅನ್ನೋದು ಅಷ್ಟೇ ಸತ್ಯ.
icon

(1 / 8)

ಆದರೂ, ಆಸ್ಟ್ರೇಲಿಯಾದ ಕೆಲ ಆಟಗಾರರು ಟೀಮ್ ಇಂಡಿಯಾಕ್ಕೆ ದೊಡ್ಡ ಸವಾಲಾಗಲಿದ್ದಾರೆ. ಆಸ್ಟ್ರೇಲಿಯಾವು ಅತ್ಯುತ್ತಮ ಬ್ಯಾಟರ್‌ಗಳು ಹಾಗೂ ಬೌಲರ್‌ಗಳ ಪಡೆಯನ್ನು ಹೊಂದಿದೆ. ಹೀಗಾಗಿ ಯಾರನ್ನೂ ಲಘುವಾಗಿ ಪರಿಗಣಿಸುವಂತಿಲ್ಲ.
icon

(2 / 8)

David Warner: ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಭಾರತದಲ್ಲಿ ಕ್ರಿಕೆಟ್ ಆಡಿ ಸಾಕಷ್ಟು ಅನುಭವ ಹೊಂದಿದ್ದಾರೆ. ಐಪಿಎಲ್‌ನಲ್ಲೂ ಇವರು ಸಾಕಷ್ಟು ಪಂದ್ಯಗಳನ್ನಾಡಿದ್ದಾರೆ. ಒಂದು ಬಾರಿ ಕ್ರೀಸ್‌ಕಚ್ಚಿ ಆಡಿದರೆ, ಇವರ ಆರ್ಭಟವನ್ನು ತಡೆಯೋದು ಕಷ್ಟ. ಆದ್ದರಿಂದ ಡೇವಿಡ್ ವಾರ್ನರ್ ದೊಡ್ಡ ಸ್ಕೋರ್ ಮಾಡುವುದನ್ನು ತಡೆಯುವ ಸವಾಲು ಭಾರತಕ್ಕೆ ಎದುರಾಗಿದೆ. ವಾರ್ನರ್ ಇದುವರೆಗೆ ಭಾರತದ ವಿರುದ್ಧ 18 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 1148 ರನ್ ಗಳಿಸಿದ್ದಾರೆ.
icon

(3 / 8)

Steve Smith: ಸ್ಟೀವ್ ಸ್ಮಿತ್ ಕೂಡಾ ಅಪಾಯಕಾರಿ ಬ್ಯಾಟರ್‌. ಇದುವರೆಗೆ ಇವರು ಭಾರತದ ವಿರುದ್ಧ ಕೇವಲ 14 ಟೆಸ್ಟ್‌ಗಳಲ್ಲಿ 1,742 ರನ್ ಗಳಿಸಿದ್ದಾರೆ. ಅವರು 70ರ ಸರಾಸರಿ ಹೊಂದಿದ್ದು, ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಸ್ಮಿತ್ ಟೆಸ್ಟ್‌ನಲ್ಲಿ ದೊಡ್ಡ ಇನ್ನಿಂಗ್ಸ್ ಆಡುವುದರಲ್ಲಿ ಪರಿಣತಿ ಹೊಂದಿದ್ದಾರೆ, ಅವರಿಗೆ ಭಾರತದಲ್ಲಿ ಆಡಿದ ಅನುಭವವೂ ಇದೆ.
icon

(4 / 8)

Pat Cummins : ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ವಿಶ್ವದ ನಂಬರ್ ವನ್ ಟೆಸ್ಟ್ ಬೌಲರ್. ಹೀಗಾಗಿ ಇವರ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸುವುದು ಭಾರತಕ್ಕಿರುವ ಸವಾಲು. ಪ್ಯಾಟ್ ಕಮಿನ್ಸ್ ಭಾರತದ ವಿರುದ್ಧ ಕೇವಲ 10 ಟೆಸ್ಟ್ ಪಂದ್ಯಗಳನ್ನಾಡಿದ್ದು 43 ವಿಕೆಟ್ ಪಡೆದಿದ್ದಾರೆ. ಅವರು ಭಾರತದಲ್ಲಿ 2 ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದಾರೆ. ಅಲ್ಲದೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ತಂಡಕ್ಕೆ ರನ್‌ ಮಳೆ ಹರಿಸಲುವಲ್ಲೂ ಇವರು ಚಾಣಾಕ್ಷ.
icon

(5 / 8)

Mitchell Starc : ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ತಮ್ಮ ತೀಕ್ಷ್ಣವಾದ ಬೌಲಿಂಗ್‌ನಿಂದ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಅಡ್ಡಿಯಾಗಲಿದ್ದಾರೆ. ಮಿಚೆಲ್ ಸ್ಟಾರ್ಕ್ ಇದುವರೆಗೆ ಭಾರತದ ವಿರುದ್ಧ 15 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಈ ಅವಧಿಯಲ್ಲಿ ತಮ್ಮ ಹೆಸರಿಗೆ 42 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದೇ ವೇಳೆ ಭಾರತದಲ್ಲಿ ಆಡಿದ 4 ಟೆಸ್ಟ್ ಪಂದ್ಯಗಳಲ್ಲಿ 7 ವಿಕೆಟ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
icon

(6 / 8)

Nathan Lyon: ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ಟೆಸ್ಟ್ ಬೌಲರ್‌ಗಳಲ್ಲಿ ಒಬ್ಬರಾದ ನಥನ್ ಲಿಯಾನ್, ಭಾರತದ ಪಿಚ್‌ಗಳಲ್ಲಿ ಬಹಳ ಪರಿಣಾಮಕಾರಿಯಾಗಬಲ್ಲರು. ಭಾರತದ ವಿರುದ್ಧ ಇದುವರೆಗೆ 22 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು ಬರೋಬ್ಬರಿ 94 ವಿಕೆಟ್ ಪಡೆದಿದ್ದಾರೆ. ಅವರು ಭಾರತದಲ್ಲಿ 4 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 34 ವಿಕೆಟ್‌ಗಳನ್ನು ಪಡೆದಿದ್ದಾರೆ.
icon

(7 / 8)

ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೂನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್‌ಚಾಗ್ನೆ, ನಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಟ್ ರೆನ್‌ಶಾ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್
icon

(8 / 8)

ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೂನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್‌ಚಾಗ್ನೆ, ನಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಟ್ ರೆನ್‌ಶಾ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್(instagram)

IPL_Entry_Point

ಇತರ ಗ್ಯಾಲರಿಗಳು