Signs of Heart Disease: ಈ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಾ? ಅವು ಹೃದ್ರೋಗದ ಲಕ್ಷಣವಿರಬಹುದು
- Signs of Heart Disease: ನಲವತ್ತು ವರ್ಷಗಳ ಬಳಿಕ, ಹೃದ್ರೋಗದ ಅಪಾಯ ಹೆಚ್ಚಾಗುತ್ತದೆ. ಈ ವಯಸ್ಸಿನಲ್ಲಿ ಹೃದಯಕ್ಕೆ ಸಂಬಂಧಿಸಿದ ಸಾಮಾನ್ಯ ರೋಗಲಕ್ಷಣಗಳನ್ನು ಸಹ ನಿರ್ಲಕ್ಷಿಸಬಾರದು. ಹೀಗಾಗಿ ಯಾವ ರೋಗಲಕ್ಷಣಗಳು ಸಂಭವಿಸಬಹುದು ಎಂಬುದನ್ನು ತಿಳಿದುಕೊಳ್ಳಿ.
- Signs of Heart Disease: ನಲವತ್ತು ವರ್ಷಗಳ ಬಳಿಕ, ಹೃದ್ರೋಗದ ಅಪಾಯ ಹೆಚ್ಚಾಗುತ್ತದೆ. ಈ ವಯಸ್ಸಿನಲ್ಲಿ ಹೃದಯಕ್ಕೆ ಸಂಬಂಧಿಸಿದ ಸಾಮಾನ್ಯ ರೋಗಲಕ್ಷಣಗಳನ್ನು ಸಹ ನಿರ್ಲಕ್ಷಿಸಬಾರದು. ಹೀಗಾಗಿ ಯಾವ ರೋಗಲಕ್ಷಣಗಳು ಸಂಭವಿಸಬಹುದು ಎಂಬುದನ್ನು ತಿಳಿದುಕೊಳ್ಳಿ.
(1 / 6)
ತಂತ್ರಜ್ಞಾನ ಬೆಳೆದಂತೆ ದೈಹಿಕ ಶ್ರಮ ಕಡಿಮೆಯಾಗಿದೆ. ಕುಳಿತುಕೊಳ್ಳುವ ಜೀವನಶೈಲಿಯು ನಲವತ್ತರ ದಶಕದಲ್ಲಿ ತೀವ್ರ ಹೃದಯ ಕಾಯಿಲೆಗೆ ಕಾರಣವಾಗುತ್ತದೆ, ಚಳಿಗಾಲದಲ್ಲಿ ಹೃದ್ರೋಗದ ಅಪಾಯವು ತುಂಬಾ ಹೆಚ್ಚಾಗುತ್ತದೆ.(Freepik)
(2 / 6)
ನಲವತ್ತು ವರ್ಷಗಳ ನಂತರ, ಹೃದ್ರೋಗದ ಅಪಾಯವು ಹೆಚ್ಚಾಗುತ್ತದೆ. ಹೃದ್ರೋಗದ ಪ್ರಸ್ತುತ ಹೆಚ್ಚಳಕ್ಕೆ ಕೋವಿಡ್‌ನ ಅಡ್ಡಪರಿಣಾಮಗಳು ಸಹ ಕಾರಣ ಎಂದು ಹೇಳಲಾಗಿದೆ. ಕೆಲವು ಲಕ್ಷಣಗಳ ಮೂಲಕ ಹೃದ್ರೋಗವನ್ನು ಮೊದಲೇ ಪತ್ತೆ ಹಚ್ಚಬಹುದು.(Pixabay)
(3 / 6)
ಯಾವುದೇ ಶ್ರಮದಾಯಕ ಚಟುವಟಿಕೆ ಅಥವಾ ವ್ಯಾಯಾಮದ ಬಳಿಕ ಉಸಿರಾಟದ ತೊಂದರೆ ಅಥವಾ ಉಸಿರಾಡಲು ಆಗದಂತಹ ತೊಂದರೆಯು ಹೃದ್ರೋಗದ ಆರಂಭಿಕ ಲಕ್ಷಣಗಳಾಗಿವೆ.(Pixabay)
(4 / 6)
ಮಧ್ಯರಾತ್ರಿಯಲ್ಲಿ ಉಸಿರಾಟದ ತೊಂದರೆಯಾಗಿ ಅನೇಕ ಜನರು ರಾತ್ರಿ ಮಲಗಿದ ಬಳಿಕ ಎಚ್ಚರಗೊಳ್ಳುತ್ತಾರೆ. ಸ್ವಲ್ಪ ಹೊತ್ತು ಕುಳಿತ ನಂತರ ಉಸಿರಾಟ ಸುಲಭವಾಗುತ್ತದೆ. ಇಂತಹ ಸಂದರ್ಭದಲ್ಲಿ, ಹೃದ್ರೋಗದ ಅಪಾಯವನ್ನು ಸಂಪೂರ್ಣವಾಗಿ ತಳ್ಳಿಹಾಕಲಾಗುವುದಿಲ್ಲ.(Freepik)
(5 / 6)
ಸಣ್ಣ ಪುಟ್ಟ ಕೆಲಸ ಮಾಡಿದರೆ ಕೂಡಾ ಆಯಾಸ ಮತ್ತು ಉಸಿರಾಟದ ತೊಂದರೆಯಾಗುವುದು ಹೃದ್ರೋಗದ ಲಕ್ಷಣಗಳಾಗಿರಬಹುದು. ಅಲ್ಲದೆ, ಎದೆಯ ಮಧ್ಯದಲ್ಲಿ ಭಾರವಾಗುವುದು, ಉರಿ, ನೋವು ಕೂಡಾ ಹೃದಯಾಘಾತದ ಲಕ್ಷಣಗಳಾಗಿರಬಹುದು.(Unsplash)
ಇತರ ಗ್ಯಾಲರಿಗಳು