IPL 2023: ಈ ಬಾರಿಯ ಐಪಿಎಲ್ ಬಳಿಕ ನಿವೃತ್ತಿ ಘೋಷಿಸಬಹುದಾದ ಆಟಗಾರರಿವರು
these five cricketer may retire after IPL 2023 : ಐಪಿಎಲ್ 16ನೇ ಆವೃತ್ತಿಯು ಮಾರ್ಚ್ 31ರಿಂದ ಆರಂಭವಾಗಲಿದೆ. ಐಪಿಎಲ್‌ನ ಪ್ರತಿ ಸೀಸನ್ ಕೂಡಾ ಅಭಿಮಾನಿಗಳಲ್ಲಿ ಉತ್ಸಾಹ ಇಮ್ಮಡಿಗೊಳಿಸಿತ್ತು. ಅದೇ ಮನರಂಜನೆ ಅಭಿಮಾನಿಗಳಿಗೆ ಈ ಬಾರಿಯೂ ಸಿಗಬಹುದು. ಆದರೆ ಈ ಐಪಿಎಲ್ ಋತುವಿನ ನಂತರ ಕೆಲವು ದಿಗ್ಗಜ ಆಟಗಾರರು ನಿವೃತ್ತಿಯಾಗುವ ಸಾಧ್ಯತೆ ಇದೆ. ಅವರಲ್ಲಿ ಎಂಎಸ್ ಧೋನಿ ಮತ್ತು ದಿನೇಶ್ ಕಾರ್ತಿಕ್ ಅವರಂತಹ ದಿಗ್ಗಜ ಆಟಗಾರರಿದ್ದಾರೆ.
(1 / 6)
M S Dhoni - ಈ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲ ಸ್ಥಾನದಲ್ಲಿದ್ದಾರೆ. ಈ ಬಗ್ಗೆ ಹಲವು ಮಾಜಿ ಹಾಗೂ ಹಿರಿಯ ಕ್ರಿಕೆಟಿಗರು ಈಗಾಗಲೇ ಸುಳಿವು ನೀಡಿದ್ದಾರೆ. 41ರ ಹರೆಯದ ಧೋನಿಗೆ ಇದು ಕೊನೆಯ ಐಪಿಎಲ್ ಟೂರ್ನಿಯಾಗಿರಬಹುದು. ಚಪಾಕ್ ಸ್ಟೇಡಿಯಂನಲ್ಲಿ ಧೋನಿ ಬೀಳ್ಕೊಡುಗೆಗೆ ಸಿಎಸ್‌ಕೆ ಫ್ರಾಂಚೈಸಿ ಕೂಡ ವಿಶೇಷ ತಯಾರಿ ನಡೆಸಿದೆ ಎಂದು ಹೇಳಲಾಗುತ್ತಿದೆ.
(2 / 6)
Ambati Rayudu - ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಅಂಬಟಿ ರಾಯುಡು ಈ ಪಟ್ಟಿಯಲ್ಲಿರುವ ಎರಡನೇ ಆಟಗಾರರಾಗಿದ್ದಾರೆ. 38 ವರ್ಷದ ರಾಯುಡು ಅವರ ಫಾರ್ಮ್ 2022ರ ಐಪಿಎಲ್ ಋತುವಿನಲ್ಲಿ ಉತ್ತಮವಾಗಿಲ್ಲ. ಅವರು 13 ಪಂದ್ಯಗಳಲ್ಲಿ ಕೇವಲ 274 ರನ್ ಗಳಿಸಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್ ಬಳಿಕ ಅವರು ಮತ್ತೆ ಕಣಕ್ಕಿಳಿಯುವುದು ಅನುಮಾನ.
(3 / 6)
Amit Mishra - ಲಖನೌ ಸೂಪರ್ ಜೈಂಟ್ಸ್ ಪರ ಈ ವರ್ಷದ ಐಪಿಎಲ್‌ನಲ್ಲಿ ಅಮಿತ್ ಮಿಶ್ರಾ ಕಾಣಿಸಿಕೊಳ್ಳಲಿದ್ದಾರೆ. 40ರ ಹರೆಯದ ಅಮಿತ್ ಮಿಶ್ರಾ ಅವರಿಗೆ ಇದು ಕೊನೆಯ ಐಪಿಎಲ್ ಆಗುವ ನಿರೀಕ್ಷೆಯಿದೆ. ಈ ಋತುವಿನ ನಂತರ ಅವರು ಟೂರ್ನಿಗೆ ನಿವೃತ್ತಿ ಘೋಷಿಸಬಹುದು.
(4 / 6)
David Warner - ಈ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಹೆಸರೂ ಇದೆ. ಐಪಿಎಲ್‌ನ ಯಶಸ್ವಿ ವಿದೇಶಿ ಆಟಗಾರರಲ್ಲಿ ಇವರ ಹೆಸರು ಮೇಲಿದೆ. ರಿಷಬ್ ಪಂತ್ ಅನುಪಸ್ಥಿತಿಯಲ್ಲಿ, ವಾರ್ನರ್ ಈ ವರ್ಷ ಡೆಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಅದೇ ಸಮಯದಲ್ಲಿ, ಪಂತ್ ಪುನರಾಗಮನದ ನಂತರ, ಅವರನ್ನು ನಾಯಕತ್ವದಿಂದ ತೆಗೆದುಹಾಕಬಹುದು. ಇಂತಹ ಪರಿಸ್ಥಿತಿಯಲ್ಲಿ 36ರ ಹರೆಯದ ವಾರ್ನರ್ ಈ ವರ್ಷದ ಐಪಿಎಲ್ ಬಳಿಕ ದುಬಾರಿ ಟೂರ್ನಿಗೆ ವಿದಾಯ ಹೇಳಬಹುದು.
(5 / 6)
Dinesh Karthik - ಈ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಕೂಡ ಸೇರಿದ್ದಾರೆ. ಐಪಿಎಲ್ 2022ರ ಆವೃತ್ತಿಯಲ್ಲಿ ಕಾರ್ತಿಕ್ ಅದ್ಭುತ ಪ್ರದರ್ಶನ ನೀಡಿದ್ದರು. ಕಾರ್ತಿಕ್‌ಗೆ ಈಗ 37 ವರ್ಷ. ಇಂತಹ ಪರಿಸ್ಥಿತಿಯಲ್ಲಿ ಈ ವರ್ಷ ಅವರ ಸಾಧನೆ ಮಹತ್ವದ್ದಾಗಿದೆ. ಈ ವರ್ಷ ಉತ್ತಮ ಪ್ರದರ್ಶನ ನೀಡದಿದ್ದರೆ, ಮುಂದಿನ ಋತುವಿನಲ್ಲಿ ಆರ್‌ಸಿಬಿ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆ ತುಂಬಾ ಕಡಿಮೆ.
ಇತರ ಗ್ಯಾಲರಿಗಳು