ಕೆಂಪು ಶಾಯಿಯಲ್ಲಿ ನಿಮ್ಮ ಹೆಸರು ಬರೆಯುವ ಅಭ್ಯಾಸ ಇದೆಯಾ, ಆದರೆ, ಚೀನಾದವರು ಉಸಿರು ಇರೋ ತನಕ ಆ ಕೆಲಸ ಮಾಡಲ್ಲ, ಆಸಕ್ತಿಕರ ವಿಚಾರ ಇದು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೆಂಪು ಶಾಯಿಯಲ್ಲಿ ನಿಮ್ಮ ಹೆಸರು ಬರೆಯುವ ಅಭ್ಯಾಸ ಇದೆಯಾ, ಆದರೆ, ಚೀನಾದವರು ಉಸಿರು ಇರೋ ತನಕ ಆ ಕೆಲಸ ಮಾಡಲ್ಲ, ಆಸಕ್ತಿಕರ ವಿಚಾರ ಇದು

ಕೆಂಪು ಶಾಯಿಯಲ್ಲಿ ನಿಮ್ಮ ಹೆಸರು ಬರೆಯುವ ಅಭ್ಯಾಸ ಇದೆಯಾ, ಆದರೆ, ಚೀನಾದವರು ಉಸಿರು ಇರೋ ತನಕ ಆ ಕೆಲಸ ಮಾಡಲ್ಲ, ಆಸಕ್ತಿಕರ ವಿಚಾರ ಇದು

ಸಾಮಾನ್ಯವಾಗಿ ಎಲ್ಲರೂ ನೀಲಿ ಅಥವಾ ಕಪ್ಪು ಶಾಯಿ ಪೆನ್ ಬಳಸುತ್ತಾರೆ. ಕೆಂಪು ಶಾಯಿ ಪೆನ್ ಬಳಸಿ ಹೆಸರು ಬರೆಯುವ ಅಭ್ಯಾಸ ಇದೆಯಾ, ತಪ್ಪೇನಿಲ್ಲ. ಆದರೆ ಚೀನೀಯರು ಮಾತ್ರ ಉಸಿರು ಇರೋವರೆಗೂ ಆ ಕೆಲಸ ಮಾಡಲ್ಲ. ಅದು ಅವರ ನಂಬಿಕೆ. ಆ ನಂಬಿಕೆಗೆ ಕೆಲವು ಆಸಕ್ತಿದಾಯಕ ರೂಢಿಗತ ಕಾರಣಗಳೂ ಇವೆ ನೋಡಿ.

ಕೆಂಪು ಶಾಯಿಯಲ್ಲಿ ಹೆಸರು ಬರೆಯುವ ಅಭ್ಯಾಸ ಇದೆಯಾ?. ಚೀನೀಯರು ಮಾತ್ರ ಉಸಿರು ಇರೋವರೆಗೂ ಕೆಂಪು ಶಾಯಿಯಲ್ಲಿ ತಮ್ಮ ಹೆಸರು ಬರೆಯೋದಿಲ್ಲ. ಅದು ಅವರ ನಂಬಿಕೆ. ಆ ನಂಬಿಕೆಯ ಹಿಂದೆ ಕುತೂಹಲಕಾರಿ ಅಂಶಗಳೂ ಇವೆ. ಅವುಗಳನ್ನೊಮ್ಮೆ ಗಮನಿಸೋಣ.
icon

(1 / 8)

ಪ್ರಪಂಚದಾದ್ಯಂತದ ದೇಶದಿಂದ ದೇಶಕ್ಕೆ, ಸಮುದಾಯದಿಂದ ಸಮುದಾಯಕ್ಕೆ ಜನರಿಂದ ಜನರಿಗೆ ಆಹಾರ ಮತ್ತು ನಂಬಿಕೆಗಳ ವಿಚಾರದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಈ ವೈವಿಧ್ಯತೆಯು ಜಗತ್ತನ್ನು ವರ್ಣರಂಜಿತ ಮತ್ತು ಆಸಕ್ತಿದಾಯಕವಾಗಿಸುತ್ತದೆ. ಪ್ರತಿಯೊಂದು ಸಂಸ್ಕೃತಿಯು ಅದರ ಕೆಲವು ವಿಶೇಷ ಮೂಢನಂಬಿಕೆಗಳೂ ಇವೆ. ನಂಬಿಕೆಗಳೂ ಇವೆ. ಕೆಲವೊಮ್ಮೆ ರೂಢಿಗತವಾಗಿ ಬಂದ ನಂಬಿಕೆಗಳು ಮೂಢನಂಬಿಕೆಗಳಾದರೂ ನಂಬುವಂತೆ ಮಾಡುತ್ತವೆ. ಅಂತಹ ಒಂದು ನಂಬಿಕೆ ಕೆಂಪು ಶಾಯಿಯಲ್ಲಿ ಚೀನಿಯರು ಹೆಸರು ಬರೆಯದಿರುವುದಕ್ಕೆ ಕಾರಣ. ಅದು ಅವರ ಪಾಲಿಗೆ ನಿಷಿದ್ಧ.
icon

(2 / 8)

(Pic Credit: Shutterstock)

ಚೀನಾದ ಜಾನಪದದ ಪ್ರಕಾರ, ಯಾನ್ ವಾಂಗ್ ನರಕಕ್ಕೆ ಹೋಗುವವರ ಹೆಸರನ್ನು ಕೆಂಪು ಶಾಯಿಯಲ್ಲಿ ಬರೆಯುತ್ತಾರೆ. ಕೆಂಪು ಶಾಯಿಯಲ್ಲಿ ಜೀವಂತ ಜನರ ಹೆಸರನ್ನು ಬರೆದರೆ, ಅದು ಅವರಿಗೆ ಸಾವಿನ ಕರೆ ಎಂದು ಪರಿಗಣಿಸುವುದಕ್ಕೆ ಈ ನಂಬಿಕೆಯೇ ಒಂದು ಕಾರಣ.
icon

(3 / 8)

ಪ್ರಾಚೀನ ಚೀನಾದಲ್ಲಿ, ಮರಣದಂಡನೆ ಅಥವಾ ಸಾವಿನ ಶಿಕ್ಷೆ ವಿಧಿಸುವಾಗ ನ್ಯಾಯಾಧೀಶರು ಅಪರಾಧಿಗಳ ಹೆಸರನ್ನು ಕೆಂಪು ಶಾಯಿಯಲ್ಲಿ ಬರೆಯುತ್ತಿದ್ದರು. ಈ ಕಾರಣದಿಂದಾಗಿ ಕೆಂಪು ಶಾಯಿ ಎಂದರೆ ಅದು ಸಾವಿನ ಸಂಕೇತ ಎಂಬ ನಂಬಿಕೆ ಬೆಳೆಯಿತು.
icon

(4 / 8)

(Pic Credit: boomplay)

ಕೆಂಪು ಶಾಯಿ ಬಳಸಿ ಪತ್ರ ಬರೆದರೆ ಅದು ಸಂಬಂಧ ಮುರಿಯುವ ಸಂಕೇತ ಅಥವಾ ಯಾರನ್ನಾದರೂ ಶಪಿಸುವುದರ ಸಂಕೇತ. ಅದೇ ರೀತಿ ಯಾರದ್ದಾದರೂ ಸಾವಿನ ವರದಿ ಬರೆಯುವುದಕ್ಕೂ ಕೆಂಪು ಶಾಯಿಯನ್ನು ಬಳಸುತ್ತಿದ್ದರು. ಹೀಗಾಗಿ ಕೆಂಪು ಶಾಯಿ ಮತ್ತೆ ಸಾವಿನ ಸಂಕೇತವಾಗಿ, ಅಶುಭವಾರ್ತೆಗಳ ಸಂಕೇತವಾಗಿ ಬಿಂಬಿಸಲ್ಪಟ್ಟಿದೆ.
icon

(5 / 8)

ಕೆಂಪು ಶಾಯಿ ಸಾಮಾನ್ಯವಾಗಿ ಶಿಕ್ಷಕರು ಬಳಸುವುದು. ಪರೀಕ್ಷಾ ಉತ್ತರ ಪತ್ರಿಕೆ, ವಿದ್ಯಾರ್ಥಿಗಳ ಬರವಣಿಗೆಯ ತಪ್ಪು ತಿದ್ದಲು ಅಥವಾ ಅಧಿಕೃತ ದಾಖಲೆಗಳಲ್ಲಿ ಅಧಿಕಾರ ತೋರಿಸುವುದಕ್ಕಾಗಿ ಕೆಂಪು ಶಾಯಿಯಲ್ಲಿ ಬರೆಯಲಾಗುತ್ತದೆ. ಇದು ಸುಧಾರಣೆ ಮಾಡಬೇಕಾದ ವಿಷಯ ಹಾಗೂ ಎಚ್ಚರಿಕೆಯ ಸಂಕೇತವಾಗಿ ಬಳಕೆಯಾಗಿದೆ. ಒಂದೊಮ್ಮೆ ಕೆಂಪು ಶಾಯಿಯಿಂದ ಹೆಸರು ಬರೆದರೆ, ಯಾರ ಹೆಸರು ಕೆಂಪು ಶಾಯಿಯಲ್ಲಿ ಬರೆಯಲಾಗುತ್ತದೋ ಆ ವ್ಯಕ್ತಿ ತಿದ್ದಿಕೊಂಡು ಸುಧಾರಿಸಬೇಕಾದ ಅಂಶ ಯಾವುದೋ ಇದೆ ಎಂದೇ ಅರ್ಥ ಎಂಬ ನಂಬಿಕೆ ಚಾಲ್ತಿಯಲ್ಲಿದೆ.
icon

(6 / 8)

ಕೆಂಪು ಶಾಯಿ ಪೆನ್‌ ಬಳಕೆ ಕೆಲವು ಸಂದರ್ಭಗಳಲ್ಲಿ ಸ್ವೀಕಾರಾರ್ಹ, ಉದಾಹರಣೆಗೆ ಅಧಿಕಾರಿಯಿಂದ ದಾಖಲೆಗಳಿಗೆ ಸಹಿ ಮಾಡುವುದು, ಶಿಕ್ಷಕರ ಸುಧಾರಣೆ ಅಥವಾ ಚೀನಾದ ಹೆಸರಿನ ಮುದ್ರೆ ಕೆಂಪು ಬಣ್ಣದಲ್ಲಿದೆ. ಅದು ಚೀನೀಯರಿಗೆ ಸಮ್ಮತವೇ.
icon

(7 / 8)

ಚೀನೀ ಸಂಸ್ಕೃತಿಯಲ್ಲಿ, ಕೆಂಪು ಶಾಯಿಯಲ್ಲಿ ಹೆಸರುಗಳನ್ನು ಬರೆಯುವುದು ಸಾವು ಮತ್ತು ಅಸಹಜ ಎಂಬ ಭಾವನೆ ಇದೆ. ಇದನ್ನು ಇಂದಿಗೂ ಚೀನಿಯರು ಅನುಸರಿಸುತ್ತಾರೆ. ಅದು ಅಲ್ಲಿನ ಜನರ ನಂಬಿಕೆ. ಕಪ್ಪು ಮತ್ತು ನೀಲಿ ಬಣ್ಣದ ಶಾಯಿ ಬರವಣಿಗೆಗೆ ಅತ್ಯುತ್ತಮ. ಅದು ಎಲ್ಲ ರೀತಿಯಿಂದಲೂ ಸುರಕ್ಷಿತ ಎಂಬ ನಂಬಿಕೆ ಅಲ್ಲಿನ ಜನರಲ್ಲಿದೆ.
icon

(8 / 8)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.

ಇತರ ಗ್ಯಾಲರಿಗಳು