ಇದು ಭಾರತದ ಅತ್ಯಂತ ಸಂತೋಷದ ರಾಜ್ಯ; ಇಲ್ಲಿನ ಜನರ ಮುಖದಲ್ಲಿ ನಗುವಿದೆ, ಖುಷಿಯಿದೆ
- ಭಾರತದ ಅತ್ಯಂತ ಸಂತೋಷದ ರಾಜ್ಯ: ಹೌದು, ನೀವು ಸರಿಯಾಗಿಯೇ ಓದಿದ್ದೀರಿ. ಇಲ್ಲಿ ಭಾರತದಲ್ಲಿ ಅತ್ಯಂತ ಸಂತೋಷವಾಗಿರುವ ರಾಜ್ಯದ ಬಗ್ಗೆ ಹೇಳುತ್ತಿದ್ದೇವೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಜ್ಯ ಯಾವುದು ಎಂಬುದನ್ನು ನೋಡೋಣ.
- ಭಾರತದ ಅತ್ಯಂತ ಸಂತೋಷದ ರಾಜ್ಯ: ಹೌದು, ನೀವು ಸರಿಯಾಗಿಯೇ ಓದಿದ್ದೀರಿ. ಇಲ್ಲಿ ಭಾರತದಲ್ಲಿ ಅತ್ಯಂತ ಸಂತೋಷವಾಗಿರುವ ರಾಜ್ಯದ ಬಗ್ಗೆ ಹೇಳುತ್ತಿದ್ದೇವೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಜ್ಯ ಯಾವುದು ಎಂಬುದನ್ನು ನೋಡೋಣ.
(1 / 5)
ಭಾರತದಲ್ಲಿ ಅನೇಕ ಸುಂದರ ಹಾಗೂ ಅದ್ಭುತ ಸ್ಥಳಗಳಿವೆ. ಪ್ರವಾಸಿಗರು ಕೂಡಾ ವರ್ಷಪೂರ್ತಿ ಬರುತ್ತಾರೆ. ಇದು ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಭಾರತ ಶ್ರೀಮಂತ ಮತ್ತು ಸಾಂಸ್ಕೃತಿಕ ಪರಂಪರೆಯ ಏನೇ ಇದ್ದರೂ, ಜೀವನದಲ್ಲಿ ಸಂತೋಷ ಬಹಳ ಮುಖ್ಯ. ನೆಮ್ಮದಿ ಇಲ್ಲದ ಜಗತ್ತು ಅಪೂರ್ಣ ಮತ್ತು ಅರ್ಥಹೀನ.
(2 / 5)
ಇಂಡಿಯನ್ ಹ್ಯಾಪಿನೆಸ್ ಇಂಡೆಕ್ಸ್ ವರದಿ ಮತ್ತು ಹ್ಯಾಪಿನೆಸ್ ಕನ್ಸಲ್ಟಿಂಗ್ ನಡೆಸಿದ ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, ಭಾರತದ ಅಗ್ರ 10 ಸಂತೋಷದ ರಾಜ್ಯಗಳ ಪಟ್ಟಿ ಹೊರಬಂದಿದೆ. ಇದರ ಪ್ರಕಾರ, ದೇಶದ ಅತ್ಯಂತ ಸಂತೋಷದ ರಾಜ್ಯವೆಂದರೆ ಹಿಮಾಚಲ ಪ್ರದೇಶ.
(3 / 5)
ಹಿಮಾಚಲವು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿ. ದೇಶದ ಆರ್ಥಿಕ ಸ್ಥಿತಿಗೆ ಈ ಪ್ರಕೃತಿ ರಮಣೀಯತೆಯೂ ಮುಖ್ಯ. ಬೇಸಿಗೆ ಅಥವಾ ಚಳಿಗಾಲವಾಗಿರಲಿ, ಪ್ರವಾಸಿಗರು ಪ್ರತಿ ಋತುವಿನಲ್ಲಿ ಇಲ್ಲಿಗೆ ಬರುತ್ತಾರೆ. ವಿಶಿಷ್ಟ ಅನುಭವವನ್ನು ಪಡೆಯುತ್ತಾರೆ. ಹಿಮಾಚಲದ ಸ್ಥಳೀಯ ಸಂಸ್ಕೃತಿ, ಆಹಾರ, ಬಟ್ಟೆ ಎಲ್ಲವೂ ಇತರ ಎಲ್ಲ ರಾಜ್ಯಗಳಿಗಿಂತ ಭಿನ್ನವಾಗಿದೆ.
(4 / 5)
ಹಿಮಾಚಲ ಪ್ರದೇಶವು ಅತ್ಯಂತ ಸಂತೋಷದ ರಾಜ್ಯವಾಗಲು ಕಾರಣವೆಂದರೆ ಪ್ರಕೃತಿಯೊಂದಿಗಿನ ಅನಿರ್ಬಂಧಿತ ಸಂಪರ್ಕ. ಇಲ್ಲಿನ ಜನರು ಪ್ರಕೃತಿಗೆ ಬಹಳ ಹತ್ತಿರವಾಗಿದ್ದಾರೆ. ಶಿಮ್ಲಾ, ಹಿಮಾಚಲ ಪ್ರದೇಶದ ರಾಜಧಾನಿ. ಈ ಪ್ರದೇಶವನ್ನು ಪ್ರಸಿದ್ಧ ಪ್ರವಾಸಿ ಕೇಂದ್ರಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಗುಡ್ಡಗಾಡು ಕಣಿವೆಯಲ್ಲಿರುವ ಈ ರಾಜ್ಯವು ವಿಶಿಷ್ಟ ಇತಿಹಾಸವನ್ನು ಹೊಂದಿದೆ.
ಇತರ ಗ್ಯಾಲರಿಗಳು