ಹಣಕಾಸಿನ ವಿಚಾರದಲ್ಲಿ ನೆಮ್ಮದಿ ಬಯಸುವವರು ಈ 5 ವಸ್ತುಗಳನ್ನು ಎಂದಿಗೂ ಮನೆಯಲ್ಲಿ ಇಟ್ಟುಕೊಳ್ಳಬಾರದು
- ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಬಿದ್ದಿರುವ ಕೆಲವು ವಸ್ತುಗಳು ವಾಸ್ತು ದೋಷಗಳನ್ನು ಉಂಟುಮಾಡುತ್ತವೆ ಮತ್ತು ಹಣದ ಹರಿವನ್ನು ಕಡಿಮೆ ಮಾಡುತ್ತದೆ.
- ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಬಿದ್ದಿರುವ ಕೆಲವು ವಸ್ತುಗಳು ವಾಸ್ತು ದೋಷಗಳನ್ನು ಉಂಟುಮಾಡುತ್ತವೆ ಮತ್ತು ಹಣದ ಹರಿವನ್ನು ಕಡಿಮೆ ಮಾಡುತ್ತದೆ.
(1 / 7)
ಇದಿನ ದಿನಮಾನದಲ್ಲಿ ಹಣ ಎಲ್ಲರಿಗೂ ಬೇಕು. ಎಷ್ಟು ಹಣ ಇದ್ದರೂ ಸಾಲದು ಎಂಬ ಪರಿಸ್ಥಿತಿ ನಿರ್ಮಾಣವಾಗಿರುವ ಈ ದಿನಗಳಲ್ಲಿ ನೀವು ಕೆಲ ಅಂಶಗಳನ್ನು ಗಮನಿಸಬೇಕು. ನಿಮ್ಮ ಮನೆಯಲ್ಲಿ ಈ ಕೆಳಕಂಡ ವಸ್ತುಗಳಿದ್ದಲ್ಲಿ, ಅವುಗಳನ್ನು ಇಲ್ಲದಂತೆ ಮಾಡಿ.
(Canva)(2 / 7)
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಹರಿದ ಮತ್ತು ಹಳೆಯ ಬಟ್ಟೆಗಳನ್ನು ಇಡುವುದು ಅಶುಭ. ಹಳೆಯ ಬಟ್ಟೆಗಳನ್ನು ಮನೆಯಲ್ಲಿಟ್ಟರೆ ಆರ್ಥಿಕ ಅಭಿವೃದ್ಧಿ ಆಗುವುದಿಲ್ಲ.
(Canva)(3 / 7)
ಕೆಲವೊಮ್ಮೆ ಮನೆಯಲ್ಲಿರುವ ನಲ್ಲಿಯಿಂದ ನೀರು ತೊಟ್ಟಿಕ್ಕಲು ಪ್ರಾರಂಭಿಸುತ್ತದೆ. ಹೆಚ್ಚಿನ ಜನರು ಈ ಸಂಗತಿಯನ್ನು ನಿರ್ಲಕ್ಷಿಸುತ್ತಾರೆ ಆದರೆ ವಾಸ್ತು ಪ್ರಕಾರ, ಮನೆಯಲ್ಲಿ ನಲ್ಲಿಯಿಂದ ನೀರು ತೊಟ್ಟಿಕ್ಕುವುದು ಒಳ್ಳೆಯದಲ್ಲ. ಇದರಿಂದ ಹಣದ ಹರಿವು ಕಡಿಮೆಯಾಗುತ್ತದೆ.
(Canva)(4 / 7)
ವಾಸ್ತು ಶಾಸ್ತ್ರದಲ್ಲಿ, ಕಬ್ಬಿಣವು ಶನಿ ಗ್ರಹಕ್ಕೆ ಸಂಬಂಧಿಸಿದೆ ಎಂದು ಪರಿಗಣಿಸಲಾಗಿದೆ. ಮನೆಯಲ್ಲಿ ತುಕ್ಕು ಹಿಡಿದ ಕಬ್ಬಿಣವನ್ನು ಇಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಹೀಗೆ ಮಾಡುವುದರಿಂದ ಮಾನಸಿಕ ತೊಂದರೆಗಳು ಮತ್ತು ಉದ್ಯೋಗದಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ಆರ್ಥಿಕ ಮಾರ್ಗಕ್ಕೆ ಅಡ್ಡಿಯಾಗುತ್ತದೆ.
(Canva)(5 / 7)
ಸಾಮಾನ್ಯವಾಗಿ ಜನರು ಪ್ರತಿದಿನ ತಮ್ಮ ಮನೆಯನ್ನು ಸ್ವಚ್ಛಗೊಳಿಸುತ್ತಾರೆ ಆದರೆ ಛಾವಣಿಯನ್ನು ಸ್ವಚ್ಛಗೊಳಿಸಲು ಮರೆತುಬಿಡುತ್ತಾರೆ. ಇದರಿಂದಾಗಿ ಕಸವು ದೀರ್ಘಕಾಲ ಛಾವಣಿಯ ಮೇಲೆ ಉಳಿಯುತ್ತದೆ. ಕಾಗದ, ಉಕ್ಕು, ಪ್ಲಾಸ್ಟಿಕ್ ಮತ್ತು ಧೂಳಿನ ಕಣಗಳು ಯಾವಾಗಲೂ ಛಾವಣಿ ಮೇಲಿದ್ದರೆ ಸಮೃದ್ದಿಗೆ ಅಡ್ಡಿಯಾಗುತ್ತದೆ.
(Canva)(6 / 7)
ಈ ಮೇಲೆ ತಿಳಿಸಿದ ಯಾವ ಸಂಗತಿಗಳು ನಿಮ್ಮ ಮನೆಯಲ್ಲಿದೆ ಎಂಬುದನ್ನು ಗುರುತಿಸಿ. ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಿ.
(Canva)ಇತರ ಗ್ಯಾಲರಿಗಳು