ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tiktoker Tharun: ತೆಂಗಿನಗರಿ, ಚಕ್ಕುಲಿ, ಪಾತ್ರೆಗಳೇ ಕಾಸ್ಟ್ಯೂಮ್‌; ಸೋಷಿಯಲ್‌ ಮೀಡಿಯಾದ್ಯಂತ ಕಾಲೇಜು ವಿದ್ಯಾರ್ಥಿ ಟಿಕ್‌ಟಾಕರ್ ತರುಣ್‌ ಹವಾ

Tiktoker Tharun: ತೆಂಗಿನಗರಿ, ಚಕ್ಕುಲಿ, ಪಾತ್ರೆಗಳೇ ಕಾಸ್ಟ್ಯೂಮ್‌; ಸೋಷಿಯಲ್‌ ಮೀಡಿಯಾದ್ಯಂತ ಕಾಲೇಜು ವಿದ್ಯಾರ್ಥಿ ಟಿಕ್‌ಟಾಕರ್ ತರುಣ್‌ ಹವಾ

  • ಸೋಷಿಯಲ್‌ ಮೀಡಿಯಾ ಮೂಲಕ ಅನೇಕ ಪ್ರತಿಭೆಗಳು ಜನರಿಗೆ ಪರಿಚಯವಾಗಿದ್ದಾರೆ. ಅದರಲ್ಲಿ ಅನೇಕರು ಸಿನಿಮಾ, ಕಿರುತೆರೆಯಲ್ಲಿ ಕೂಡಾ ಹೆಸರು ಮಾಡಿರುವ ಉದಾಹರಣೆ ಇದೆ. ಆದರೆ ಕೆಲವರು ತಮ್ಮ ವಿಡಿಯೋಗಳಿಂದ ಆಗ್ಗಾಗ್ಗೆ ಟ್ರೋಲ್‌ ಆಗುತ್ತಲೇ ಇದ್ದಾರೆ.

ಇನ್‌ಸ್ಟಾಗ್ರಾಮ್‌ ಫೇಸ್‌ಬುಕ್‌ ಅಕೌಂಟ್‌ನಲ್ಲಿ ಈ ಯುವಕನ ವಿಡಿಯೋಗಳೇ ಹೆಚ್ಚಾಗಿ ಕಾಣಸಿಗುತ್ತವೆ. ವಿಚಿತ್ರ ವೇಷ ಧರಿಸಿ ರೀಲ್ಸ್‌ ಮಾಡುವ ಈತ ಮೆಚ್ಚುಗೆಗಿಂತ ಹೆಚ್ಚಾಗಿ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ಆದರೆ ಯಾರು ಏನೇ ಹೇಳಿದರೂ ಇವರು ಮಾತ್ರ ರೀಲ್ಸ್‌ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ. 
icon

(1 / 12)

ಇನ್‌ಸ್ಟಾಗ್ರಾಮ್‌ ಫೇಸ್‌ಬುಕ್‌ ಅಕೌಂಟ್‌ನಲ್ಲಿ ಈ ಯುವಕನ ವಿಡಿಯೋಗಳೇ ಹೆಚ್ಚಾಗಿ ಕಾಣಸಿಗುತ್ತವೆ. ವಿಚಿತ್ರ ವೇಷ ಧರಿಸಿ ರೀಲ್ಸ್‌ ಮಾಡುವ ಈತ ಮೆಚ್ಚುಗೆಗಿಂತ ಹೆಚ್ಚಾಗಿ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ಆದರೆ ಯಾರು ಏನೇ ಹೇಳಿದರೂ ಇವರು ಮಾತ್ರ ರೀಲ್ಸ್‌ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ. (PC: Tiktoker Tharun Instagram)

ಅಂದ ಹಾಗೆ ಇವರ ಹೆಸರು ತರುಣ್‌, ಸಾಮಾಜಿಕ ಜಾಲತಾಣದಲ್ಲಿ ಇವರು ಟಿಕ್‌ ಟಾಕರ್‌ ತರುಣ್‌ ಎಂದೇ ಹೆಸರಾಗಿದ್ದಾರೆ. ಕೆಲವರು ಇವರನ್ನು ಕಾಸ್ಟ್ಯೂಮ್‌ ಸ್ಟಾರ್‌ ತರುಣ್‌ ಎಂದೂ ಕರೆಯುತ್ತಾರೆ. 
icon

(2 / 12)

ತರುಣ್‌ ಮೂಲತ: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಂಕರಗೊಂಡ ತಾಂಡಾ ಎಂಬ ಹಳ್ಳಿಯವರು. 
icon

(3 / 12)

ತರುಣ್‌ ಮೂಲತ: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಂಕರಗೊಂಡ ತಾಂಡಾ ಎಂಬ ಹಳ್ಳಿಯವರು. 

ಹೈದರಾಬಾದ್‌ ಬಳಿಯ ಮಾದಾಪುರ್‌ ಕಾಲೇಜೊಂದರಲ್ಲಿ ತರುಣ್‌ ದ್ವಿತೀಯ ವರ್ಷದ ಡಿಗ್ರಿ ಓದುತ್ತಿದ್ದಾರೆ. ತಂದೆ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದು ತರುಣ್‌, ತಾಯಿ ಹಾಗೂ ಅಣ್ಣನೊಂದಿಗೆ ನೆಲೆಸಿದ್ದಾರೆ. 
icon

(4 / 12)

ಆರಂಭದಲ್ಲಿ ನಾನು ಮಾಮೂಲಿಯಾಗೇ ಟಿಕ್‌ ಟಾಕ್‌ ಮಾಡಲು ಆರಂಭಿಸಿದೆ. ಆದರೆ ಆ ವಿಡಿಯೋಗಳಿಗೆ ವ್ಯೂವ್ಸ್‌ ಇರಲಿಲ್ಲ. ಏನಾದರೂ ವಿಭಿನ್ನವಾಗಿ ಟ್ರೈ ಮಾಡೋಣ ಎಂದು ಮೇಕಪ್‌ ಹಾಗೂ ವಿಭಿನ್ನ ಕಾಸ್ಟ್ಯೂಮ್‌ ಧರಿಸಿ ವಿಡಿಯೋ ಮಾಡಲು ಆರಂಭಿಸಿದೆ. ದಿನದಿಂದ ದಿನಕ್ಕೆ ವ್ಯೂವ್ಸ್‌ ಹಾಗೂ ಫಾಲೋವರ್‌ಗಳು ಹೆಚ್ಚಾದರು. 
icon

(5 / 12)

ನನ್ನ ರೀಲ್ಸ್‌ ನೋಡಿ ಮೆಚ್ಚುವವರಿಗಿಂತ ನೆಗೆಟಿವ್‌ ಕಾಮೆಂಟ್‌ ಮಾಡುವವರೇ  ಹೆಚ್ಚು, ಇದು ನನಗೆ ಬಹಳ ನೋವಾಗುತ್ತದೆ. ಕಾಮೆಂಟ್‌ಗಳನ್ನು ನೋಡಿ, ಒಮ್ಮೆ ಇನ್ಮುಂದೆ ಯಾವುದೇ ರೀಲ್ಸ್‌ ಮಾಡಬಾರದು ಎಂದು ನಿರ್ಧರಿಸಿದ್ದೆ. ಆದರೆ ಬೈಯ್ಯುವವರ ನಡುವೆ ನನ್ನ ರೀಲ್ಸ್‌ ಮೆಚ್ಚಿಕೊಂಡವರೂ ಇದ್ದಾರೆ. ಅವರೆಲ್ಲಾ ವಿಡಿಯೋ ಮುಂದುವರೆಸುವಂತೆ ಒತ್ತಾಯಿಸಿದರಿಂದ ಮುಂದುವರೆಸಿದೆ. 
icon

(6 / 12)

ಇದು ನನ್ನ ಲೈಫ್‌ ನನಗೆ ಇಷ್ಟ ಬಂದಾಗೆ ಇರುತ್ತೇನೆ, ಯಾರು ಏನು ಕಾಮೆಂಟ್‌ ಮಾಡಿದರೂ ಇನ್ಮುಂದೆ ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುತ್ತಾರೆ ತರುಣ್‌. 
icon

(7 / 12)

ತರುಣ್‌ ಇನ್‌ಸ್ಟಾಗ್ರಾಮ್‌ನಲ್ಲಿ 4 ಲಕ್ಷಕ್ಕೂ ಅಧಿಕ ಫಾಲೋವರ್‌ಗಳಿದ್ದಾರೆ. 300ಕ್ಕೂ ಹೆಚ್ಚು ವಿಡಿಯೋಗಳನ್ನು ತರುಣ್‌ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. 
icon

(8 / 12)

ಪೊರಕೆ, ಪ್ಲಾಸ್ಟಿಕ್‌ ಕವರ್‌, ಗೋಲ್‌ಗಪ್ಪಾ ಪೂರಿ, ಕಾಫಿ ಕಪ್‌, ತೆಂಗಿನ ಗರಿ, ಪಾತ್ರೆಗಳು, ಪೇಪರ್‌, ಐಸ್‌ ಕ್ರೀಮ್‌ ಕಡ್ಡಿ, ಎಲೆಗಳು, ಹುಣಿಸೆ ಕಾಯಿ, ಊಟದ ಎಲೆ, ಬಾಟಲ್‌ಗಳು ಸೇರಿದಂತೆ ಅನೇಕ ವಸ್ತುಗಳಿಂದ ತಯಾರಿಸಿದ ವಿಚಿತ್ರ ಕಾಸ್ಟ್ಯೂಮ್‌ ಧರಿಸಿ ರೀಲ್ಸ್‌ ಮಾಡಿರುವ ವಿಡಿಯೋಗಳನ್ನು ಅವರ ಇನ್‌ಸ್ಟಾಗ್ರಾಮ್‌ನಲ್ಲಿ ನೋಡಬಹುದು. 
icon

(9 / 12)

ತರುಣ್‌ ವಿಡಿಯೋಗಳನ್ನು ನೋಡಿ, ಅನೇಕರು ನೀವು ಉರ್ಫಿ ಜಾವೇದ್‌ ಅಣ್ಣಾನಾ ಎಂದು ಕಾಮೆಂಟ್‌ ಮಾಡಿ ಕಾಲೆಳೆದಿರುವುದೂ ಉಂಟು. 
icon

(10 / 12)

ಅಕ್ಕ ಪಕ್ಕದ ಊರಿನ ಕಾರ್ಯಕ್ರಮಕ್ಕೆ ತರುಣ್‌ ಆಹ್ವಾನದ ಮೇರೆಗೆ ಹೋಗಿ ಡ್ಯಾನ್ಸ್‌ ಮಾಡಿ ಬರುತ್ತಾರೆ. ತೆಲುಗಿನ ಖ್ಯಾತ ನಟಿ ಮುಮೈತ್‌ ಖಾನ್‌ ಎಂದರೆ ತರುಣ್‌ಗೆ ಬಹಳ ಇಷ್ಟವಂತೆ. ತರುಣ್‌ ಡ್ಯಾನ್ಸ್‌ ಕಲಿಯಲು ಆಕೆಯೇ ಸ್ಫೂರ್ತಿ ಅಂತೆ. 
icon

(11 / 12)

ತಾಯಿ ಜೊತೆ ಟಿಕ್‌ ಟಾಕರ್‌ ತರುಣ್‌
icon

(12 / 12)

ತಾಯಿ ಜೊತೆ ಟಿಕ್‌ ಟಾಕರ್‌ ತರುಣ್‌

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು