ಹುಡುಗರು ಹ್ಯಾಂಡ್ಸಮ್-ಸ್ಟೈಲಿಶ್ ಆಗಿ ಕಾಣಬೇಕು ಅಂದ್ರೆ ಈ 5 ಟಿಪ್ಸ್ ಫಾಲೋ ಮಾಡಿ
- Tips to men look handsom and stylish: ಹುಡುಗಿಯರು ಮಾತ್ರ ಸೌಂದರ್ಯಕ್ಕೆ, ಫ್ಯಾಷನ್ಗೆ ಒತ್ತು ಕೊಡಬೇಕು, ಹೊರಗಡೆ ಚಂದ ಕಾಣಿಸಿಕೊಳ್ಳಬೇಕು ಎಂದೇನಿಲ್ಲ. ಎಷ್ಟೋ ಮಂದಿ ಹುಡುಗರಿಗೂ ತಾವು ಹ್ಯಾಂಡ್ಸಮ್ & ಸ್ಟೈಲಿಶ್ ಆಗಿ ಕಾಣಬೇಕು ಅಂತ ಮನಸ್ಸಿನಲ್ಲಿ ಇರುತ್ತೆ. ಆದ್ರೆ ಇದಕ್ಕಾಗಿ ಏನುಮಾಡಬೇಕು ಎಂದು ಐಡಿಯಾ ಇಲ್ಲದವರಿಗಾಗಿ ಇಲ್ಲಿವೆ ಟಿಪ್ಸ್..
- Tips to men look handsom and stylish: ಹುಡುಗಿಯರು ಮಾತ್ರ ಸೌಂದರ್ಯಕ್ಕೆ, ಫ್ಯಾಷನ್ಗೆ ಒತ್ತು ಕೊಡಬೇಕು, ಹೊರಗಡೆ ಚಂದ ಕಾಣಿಸಿಕೊಳ್ಳಬೇಕು ಎಂದೇನಿಲ್ಲ. ಎಷ್ಟೋ ಮಂದಿ ಹುಡುಗರಿಗೂ ತಾವು ಹ್ಯಾಂಡ್ಸಮ್ & ಸ್ಟೈಲಿಶ್ ಆಗಿ ಕಾಣಬೇಕು ಅಂತ ಮನಸ್ಸಿನಲ್ಲಿ ಇರುತ್ತೆ. ಆದ್ರೆ ಇದಕ್ಕಾಗಿ ಏನುಮಾಡಬೇಕು ಎಂದು ಐಡಿಯಾ ಇಲ್ಲದವರಿಗಾಗಿ ಇಲ್ಲಿವೆ ಟಿಪ್ಸ್..
(1 / 5)
1. ಚರ್ಮದ ಕಾಳಜಿ: ಮೊದಲು ನೀವು ನಿಮ್ಮ ಮುಖ ಸೇರಿದಂತೆ ಚರ್ಮದ ಕಾಳಜಿ ವಹಿಸಬೇಕು. ಸಾಬೂನು ಹಚ್ಚಿ ಸ್ನಾನ ಮಾಡಿದರೆ ಸಾಕಾಗುವುದಿಲ್ಲ. ನಿಮ್ಮ ಚರ್ಮದ ಪ್ರಕಾರಕ್ಕೆ (ಎಣ್ಣೆಯುಕ್ತ/ಒಣ/ಸೂಕ್ಷ್ಮ) ತಕ್ಕಂತೆ ಸ್ಕಿನ್ ಕೇರ್ ಪ್ರಾಡಕ್ಟ್ಗಳನ್ನು ಬಳಸಿ. ಹಗಲಿನ ವೇಳೆ ಸೂರ್ಯನ ಕಿರಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸಲು SPF 15 ಸನ್ಸ್ಕ್ರೀನ್ ಲೋಷನ್ ಬಳಸಿ. ಜೊತೆಗೆ ಫೇರ್ನೆಸ್ ಕ್ರೀಮ್ ಬಳಸಿ. ರಾತ್ರಿ ಮಲಗುವ ವೇಳೆ ಮಾಯಿಶ್ಚರೈಸರ್ ಅಥವಾ ರೀಹೈಡ್ರೇಟಿಂಗ್ ಕ್ರೀಮ್ ಬಳಸಿ. ವಾರಕ್ಕೆ 2 ಬಾರಿ ಫೇಸ್ಸ್ಕ್ರಬ್ ಬಳಸಿ.
(2 / 5)
2. ಫಿಟ್ನೆಸ್: ತೀರಾ ಬಡಕಲು ದೇಹ ಎನಿಸಿಕೊಳ್ಳಬಾರದು ಅಥವಾ ಡುಮ್ಮ ಹೊಟ್ಟೆಯ ದೇಹ ಇರಬಾರದು ಅಂದರೆ ನೀವು ನಿಯಮಿತವಾಗಿ ಜಿಮ್ ಮಾಡಬೇಕು. ಹೊರಗಡೆ ಜಿಮ್ಗೆ ಹೋಗಲು ಸಾಧ್ಯವಾಗದಿದ್ದರೆ ಮನೆಯಲ್ಲಿಯೇ ಪ್ರತಿದಿನ ವೇಟ್ ಲಿಫ್ಟ್ ಮಾಡುತ್ತಿರಿ. ಹಾಗೆಯೆ ಪ್ರತಿದಿನ ಮುಂಜಾನೆ ಅಥವಾ ಸಂಜೆ ಜಾಗಿಂಗ್ ಮಾಡಿ.
(3 / 5)
3. ತಲೆ ಕೂದಲು ಮತ್ತು ಗಡ್ಡ: ಮೊದಲೆಲ್ಲ ಹೆಚ್ಚು ಗಡ್ಡ ಬಿಟ್ಟುಕೊಂಡವರನ್ನು ದೇವ್ದಾಸ್ ಎಂದೆಲ್ಲಾ ಕರೆಯುತ್ತಿದ್ದರು. ಆದರೆ ಈಗ ಗಡ್ಡ ಬಿಡುವುದೂ ಒಂದು ಟ್ರೆಂಡ್ ಆಗಿದೆ. ಗಡ್ಡ ಇಲ್ಲದ ಹುಡುಗರಿಗಿಂತ ಗಡ್ಡಧಾರಿ ಹುಡುಗರೇ ಈಗಿನ ಹುಡುಗಿಯರಿಗೆ ಹೆಚ್ಚು ಇಷ್ಟ ಆಗ್ತಾರೆ. ಹಾಗಂತ ಉದ್ದುದ್ದ ಗಡ್ಡ ಬೇಕೆಂದೇನಿಲ್ಲ. ಆಗಾಗ ಟ್ರಿಮ್ ಮಾಡಿಸುತ್ತಾ ಅದಕ್ಕೆ ಉತ್ತಮ ಶೇಪ್ ಕೊಡಿ. ಬಿಯರ್ಡ್ ಆಯಿಲ್ ಹಾಗೂ ಬಿಯರ್ಡ್ ಶ್ಯಾಂಪೂ ಬಳಸಿ. ಪ್ರತಿದಿನ ತಲೆ ಸ್ನಾನ ಮಾಡಿ, ತಲೆ ಕೂದಲಿಗೆ ಶ್ಯಾಂಪೂ ಮತ್ತು ಕಂಡಿಷನರ್ ಬಳಸಿ. ಒಳ್ಳೊಳ್ಳೆ ಹೇರ್ಸ್ಟೈಲ್ ಮಾಡಿ. (istock photo)
(4 / 5)
4. ಯಾವಾಗಲೂ ಒಂದೇ ತರಹದ ಹಾಗೂ ತೀರಾ ಡಲ್ ಎನ್ನಿಸುವ ಬಟ್ಟೆಗಳನ್ನು ಹಾಕಬೇಡಿ. ಕಡಿಮೆ ಬೆಲೆಗೆನೇ ಉತ್ತಮ ಬಟ್ಟೆಗಳು ಸಿಗುತ್ತದೆ. ಟ್ರೆಂಡ್ಗೆ ತಕ್ಕಂತೆ ಉಡುಪು ಬದಲಿಸಿ. ಬಟ್ಟೆಗೆ ತಕ್ಕಂದ ಚಪ್ಪಲಿ-ಶೂ ಬಳಸಿ. ಹಾಗೆಯೇ ಬಿಳಿ ಹಲ್ಲುಗಳಿಗಾಗಿ ಟೀತ್ ವೈಟೆನಿಂಗ್ ಮಾಡಿಸಿ. ಉಗುರುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಉತ್ತಮ ಸುವಾಸನೆಯ ಪರ್ಫ್ಯೂಮ್ ಬಳಸಿ.
(5 / 5)
5. ಆಹಾರ/ಮದ್ಯಪಾನ/ಧೂಮಪಾನ: ಬಾಹ್ಯ ಸೌಂದರ್ಯಕ್ಕಾಗಿ ಏನು ಮಾಡಿದರೂ ಒಳಗಿನ ಆರೋಗ್ಯ ಮುಖ್ಯವಾಗಿರುತ್ತದೆ. ಜಂಕ್ ಫುಡ್ ಕಡಿಮೆ ಮಾಡಿ ತರಕಾರಿ ಸೇರಿದಂತೆ ಆರೋಗ್ಯಕರ ಆಹಾರ, ಮಾಂಸ ಸೇವಿಸಿ. ಎಬಿಸಿ ಜ್ಯೂಸ್ (ಆ್ಯಪಲ್, ಬೀಟ್ರೂಟ್, ಕ್ಯಾರೆಟ್) ಕುಡಿಯಿರಿ. ಮದ್ಯಪಾನವನ್ನು ಚಟವಾಗಿರಿಸಿಕೊಂಡರೆ, ಪ್ರತಿದಿನ ಕುಡಿಯುತ್ತಿದ್ದರೆ ಇದು ನಿಮ್ಮ ಆಂತರಿಕ ಮತ್ತು ಬಾಹ್ಯ ಸೌಂದರ್ಯ ಎರಡನ್ನೂ ಹಾಳುಮಾಡುತ್ತದೆ. ಧೂಮಪಾನ ಮತ್ತು ಗುಡ್ಕಾ ಸೇವನೆ ನಿಮ್ಮ ಹಲ್ಲು-ಬಾಯಿಯ ಅಂದ ಕೆಡಿಸುವ ಜೊತೆ ನಾನಾ ಅನಾರೊಗ್ಯಗಳನ್ನು ತಂದಿಡುತ್ತದೆ.
ಇತರ ಗ್ಯಾಲರಿಗಳು