Tirumala Darshana Tickets: ತಿರುಮಲ ಭಕ್ತರಿಗೆ ಇಲ್ಲಿದೆ ಮುಖ್ಯ ಮಾಹಿತಿ; ಮೇ ತಿಂಗಳ ದರ್ಶನ ಟಿಕೆಟ್ ಬಿಡುಗಡೆ ಮಾಡಿದ ಟಿಟಿಡಿ
Tirumala Darshana Tickets: ತಿರುಮಲ ತಿರುಪತಿ ದೇವಸ್ಥಾನದ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನದ ಟಿಕೆಟ್‌ಗಳನ್ನು ಟಿಟಿಡಿ ನವೀಕರಣಗೊಳಿಸಿದೆ. ಮೇ ತಿಂಗಳ ದರ್ಶನ ಟಿಕೆಟ್‌ಗಳು ಮಂಗಳವಾರದಿಂದ (ಫೆ 18) ಫೆ 24 ರವರೆಗೆ ಆನ್‌ಲೈನ್‌ನಲ್ಲಿ ಲಭ್ಯವಿರಲಿದೆ.
(1 / 6)
ಮೇ ತಿಂಗಳ ಶ್ರೀವಾರಿ (ಶ್ರೀನಿವಾಸ) ದರ್ಶನ ಟಿಕೆಟ್‌ಗಳನ್ನು ಫೆ 18 ರಿಂದ 24ರ ವರೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುವುದಾಗಿ ಟಿಟಿಡಿ ಘೋಷಿಸಿದೆ.
(2 / 6)
ಫೆಬ್ರವರಿ 18ರ ಮಂಗಳವಾರ ಬೆಳಗ್ಗೆ 10 ಗಂಟೆಗೆ ಅರ್ಜಿ ಸೇವಾ ಟಿಕೆಟ್ ವಿತರಣೆ, ಅರ್ಜಿತ ಸೇವಾ ಕಲ್ಯಾಣೋತ್ಸವ, ಉಂಜಲ್ ಸೇವಾ ಟಿಕೆಟ್‌ಗಳು ಬಿಡುಗಡೆ ಆಗಿವೆ. ಅರ್ಜಿತ ಬ್ರಹ್ಮೋತ್ಸವ ಮತ್ತು ಸಹಸ್ರ ದೀಪಲಂಕಾರ ಸೇವಾ ಟಿಕೆಟ್‌ಗಳನ್ನು ಈ ತಿಂಗಳ 21ರಂದು ಬೆಳಗ್ಗೆ ಬಿಡುಗಡೆ ಮಾಡಲಾಗುವುದು. ವರ್ಚುವಲ್ ಸೇವಾ ಟಿಕೆಟ್‌ಗಳನ್ನು ಅದೇ ದಿನ ಮಧ್ಯಾಹ್ನ 3 ಗಂಟೆಗೆ ಬಿಡುಗಡೆ ಮಾಡಲಾಗುವುದು.
(3 / 6)
ಫೆಬ್ರುವರಿ 22 ರಂದು ಬೆಳಿಗ್ಗೆ 10 ಗಂಟೆಗೆ ಅಂಗಪ್ರದಕ್ಷಿಣೆ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗುವುದು. ಅದೇ ದಿನ ಬೆಳಿಗ್ಗೆ 11 ಗಂಟೆಗೆ ಶ್ರೀವಾರಿ ದರ್ಶನದ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗುವುದು. ಫೆ 22 ರಂದು ಮಧ್ಯಾಹ್ನ 3 ಗಂಟೆಗೆ ವೃದ್ಧರು ಮತ್ತು ಅಂಗವಿಕಲರ ದರ್ಶನ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗುವುದು.
(4 / 6)
300 ರೂಪಾಯಿಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳನ್ನು ಈ ತಿಂಗಳ 24 ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುವುದು. 24 ರಂದು ಮಧ್ಯಾಹ್ನ 3 ಗಂಟೆಗೆ ವಸತಿ ಸ್ಲಾಟ್‌ಗಳ ಕೋಟಾ ಬಿಡುಗಡೆ ಮಾಡಲಾಗುವುದು ಎಂದು ಟಿಟಿಡಿ ಘೋಷಿಸಿದೆ. ಟಿಟಿಡಿಯ ಅಧಿಕೃತ ವೆಬ್‌ಸೈಟ್ ಮತ್ತು ಟಿಟಿಡಿ ದೇವಸ್ಥಾನಮ್ಸ್ ಅಪ್ಲಿಕೇಶನ್‌ನಲ್ಲಿ ಟಿಕೆಟ್ ಕಾಯ್ದಿರಿಸಲು ಭಕ್ತರಿಗೆ ಸೂಚಿಸಲಾಗಿದೆ.
(5 / 6)
ಮಾರ್ಚ್ 9 ರಿಂದ 13 ರವರೆಗೆ ತಿರುಮಲದಲ್ಲಿ ಶ್ರೀವಾರಿ ಸಲಕಟ್ಲಾ ತೆಪ್ಪೋತ್ಸವ ನಡೆಯಲಿದೆ. ಈ ದಿನಗಳಲ್ಲಿ ಸಂಜೆ 7 ರಿಂದ ರಾತ್ರಿ 8 ರವರೆಗೆ, ಭಕ್ತರು ದೇವರು ಮತ್ತು ದೇವಿಯ ದರ್ಶನವನ್ನು ಪುಷ್ಕರಿಣಿಯಲ್ಲಿ ಕಣ್ತುಂಬಿಕೊಳ್ಳಬಹುದು. ಮಾರ್ಚ್ 9 ಮತ್ತು 10 ರಂದು ಸಹಸ್ರದೀಪಾಲಂಕಾರ ಸೇವೆ, ಮಾರ್ಚ್ 11, 12 ಮತ್ತು 13 ರಂದು ನಡೆಯುವ ಅರ್ಜಿತ ಬ್ರಹ್ಮೋತ್ಸವ ಮತ್ತು ಸಹಸ್ರದೀಪಾಲಂಕಾರ ಸೇವೆಗಳನ್ನು ಟಿಟಿಡಿ ರದ್ದುಗೊಳಿಸಿದೆ.
(6 / 6)
ತೆಪ್ಪೋತ್ಸವದ ಮೊದಲ ದಿನವಾದ ಮಾರ್ಚ್ 9 ರಂದು ರಾಮಚಂದ್ರ ಮೂರ್ತಿಯ ತೆಪ್ಪದ ಮೇಲೆ ಸೀತಾ, ಲಕ್ಷ್ಮಣ ಆಂಜನೇಯ ಮತ್ತು ಶ್ರೀ ರಾಮಚಂದ್ರ ಮೂರ್ತಿಯನ್ನು ಭಕ್ತರು ಕಣ್ತುಂಬಿಕೊಳ್ಳಲಿದ್ದಾರೆ. ಎರಡನೇ ದಿನ ಮಾರ್ಚ್ 10ರಂದು ರುಕ್ಮಿಣಿ, ಶ್ರೀ ಕೃಷ್ಣ ದೇವರ ಮೂರು ದಿನ ತೆಪ್ಪೋತ್ಸವ ಇರಲಿದೆ. ಮೂರನೇ ದಿನವಾದ ಮಾರ್ಚ್ 11 ರಂದು ಶ್ರೀದೇವಿ, ಭೂದೇವಿ ಸಹಿತ ಮಲಯಪ್ಪ ಸ್ವಾಮಿಯು ಮೂರು ಬಾರಿ ಪುಷ್ಕರಿಣಿಯಲ್ಲಿ ಸುತ್ತಿ ಭಕ್ತರನ್ನು ಆಶೀರ್ವದಿಸಲಾಗುವುದು. ಅದೇ ರೀತಿ ಮಾರ್ಚ್ 12ರ ನಾಲ್ಕನೇ ದಿನ ಶ್ರೀಮಲಯಪ್ಪ ಸ್ವಾಮಿ ಐದು ಬಾರಿ ಭಕ್ತರಿಗೆ ದರ್ಶನ ನೀಡಲಿದ್ದಾರೆ.
ಇತರ ಗ್ಯಾಲರಿಗಳು