ಟಿಟಿಡಿ ಇತಿಹಾಸದಲ್ಲೇ ದೊಡ್ಡದುರಂತ; ವೈಕುಂಠದ್ವಾರ ದರ್ಶನ ಟೋಕನ್ ವಿತರಣೆ ಅವ್ಯವಸ್ಥೆ, ತಿರುಪತಿ ಕಾಲ್ತುಳಿತಕ್ಕೆ ನೂಕುನುಗ್ಗಲು ಕಾರಣ, ಫೋಟೋಸ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟಿಟಿಡಿ ಇತಿಹಾಸದಲ್ಲೇ ದೊಡ್ಡದುರಂತ; ವೈಕುಂಠದ್ವಾರ ದರ್ಶನ ಟೋಕನ್ ವಿತರಣೆ ಅವ್ಯವಸ್ಥೆ, ತಿರುಪತಿ ಕಾಲ್ತುಳಿತಕ್ಕೆ ನೂಕುನುಗ್ಗಲು ಕಾರಣ, ಫೋಟೋಸ್‌

ಟಿಟಿಡಿ ಇತಿಹಾಸದಲ್ಲೇ ದೊಡ್ಡದುರಂತ; ವೈಕುಂಠದ್ವಾರ ದರ್ಶನ ಟೋಕನ್ ವಿತರಣೆ ಅವ್ಯವಸ್ಥೆ, ತಿರುಪತಿ ಕಾಲ್ತುಳಿತಕ್ಕೆ ನೂಕುನುಗ್ಗಲು ಕಾರಣ, ಫೋಟೋಸ್‌

Tirupati Stampede: ತಿರುಮಲ ತಿರುಪತಿ ದೇವಸ್ಥಾನಮ್ಸ್‌ನ ಇತಿಹಾಸದಲ್ಲೇ ದೊಡ್ಡ ದುರಂತ ಇದಾಗಿದ್ದು, ವೈಕುಂಠ ದ್ವಾರ ದರ್ಶನ ಟಿಕೆಟ್ ವಿತರಣೆ ಅವ್ಯವಸ್ಥೆ ಈಗ ಜನಾಕ್ರೋಶಕ್ಕೆ ಕಾರಣವಾಗಿದೆ. ತಿರುಪತಿ ಕಾಲ್ತುಳಿತಕ್ಕೆ ಕನಿಷ್ಠ 6 ಭಕ್ತರು ಮೃತಪಟ್ಟಿದ್ಧಾರೆ. ಘಟನಾ ಸ್ಥಳದ ಚಿತ್ರಣ ಒದಗಿಸುವ ಕೆಲವು ಫೋಟೋಸ್ ಇಲ್ಲಿವೆ.

ವೈಕುಂಠ ದ್ವಾರ ದರ್ಶನ  ಟೋಕನ್ ವಿತರಣೆ ಅವ್ಯವಸ್ಥೆ ಕಾರಣ ಟಿಟಿಡಿ ಇತಿಹಾಸದಲ್ಲೇ ದೊಡ್ಡ ದುರಂತ ಸಂಭವಿಸಿದೆ. ಕನಿಷ್ಠ 6 ಜನ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ. ದುರಂತ ಸ್ಥಳದ ಚಿತ್ರಣ ಒದಗಿಸುವ ಚಿತ್ರನೋಟ ಇಲ್ಲಿದೆ.
icon

(1 / 9)

ವೈಕುಂಠ ಏಕಾದಶಿ ಟಿಕೆಟ್ ವಿತರಣೆ ಗುರುವಾರ (ಜನವರಿ 9) ಮುಂಜಾನೆ 5 ಕ್ಕೆ ಶುರುವಾಗಲಿದೆ ಎಂಬ ಕಾರಣಕ್ಕೆ ಭಕ್ತರು ತಿರುಮಲದ 90ಕ್ಕೂ ಹೆಚ್ಚು ಕೌಂಟರ್‌ಗಳ ಬಳಿ ಬುಧವಾರ (ಜನವರಿ 8) ಮುಂಜಾನೆ 5 ರಿಂದಲೇ ಸರದಿ ನಿಂತಿದ್ದರು. ಬುಧವಾರ ರಾತ್ರಿಯಾಗುತ್ತಿದ್ದಂತೆ ಪೊಲೀಸರು ಕೌಂಟರ್‌ಗಳ ಗೇಟ್ ತೆರೆದು ಬಿಟ್ಟ ಕಾರಣ ಒಮ್ಮೆಲೇ ಭಕ್ತರು ಒಳನುಗ್ಗಿದ್ದರು. ಇದರಿಂದಾಗಿ ನೂಕುನುಗ್ಗಲು ಸಂಭವಿಸಿತ್ತು.
icon

(2 / 9)

(ANI)

ವಿಶೇಷವಾಗಿ ವಿಷ್ಣು ನಿವಾಸಂ, ಶ್ರೀನಿವಾಸಂ ಸೇರಿ ಕೆಲವು ಕೌಂಟರ್‌ಗಳ ಬಳಿಕ ಇಂತಹ ನೂಕು ನುಗ್ಗಲು ಉಂಟಾಗಿತ್ತು. ಈ ನೂಕು ನುಗ್ಗಲಿನ ವೇಳೆ ಕೆಳಕ್ಕೆ ಬಿದ್ದ ಮಹಿಳೆಯರು, ವಯೋವೃದ್ಧರು ಮೇಲೇಳಲಾಗದೇ ಇದ್ದ ಕಾರಣ, ಓಡಿದ ಭಕ್ತರ ಕಾಲಿಗೆ ಸಿಲುಕಿ ಪ್ರಜ್ಞಾಹೀನರಾದರು, ಕನಿಷ್ಠ 6 ಭಕ್ತರು ಮೃತಪಟ್ಟರು.
icon

(3 / 9)

(ANI Twitter)

ತಿರುಪತಿ ಕಾಲ್ತುಳಿತಕ್ಕೆ ಸಿಲುಕಿ ಗಾಯಗೊಂಡವರನ್ನು ಕೂಡಲೇ ತಿರುಮಲದ ರುಯಾ ಆಸ್ಪತ್ರೆಗೆ ಸಾಗಿಸಲಾಯಿತು.
icon

(4 / 9)

(ANI Grab)

ಟಿಟಿಡಿ ಅಧಿಕಾರಿಗಳು ಮತ್ತು ಪೊಲೀಸರ ನಡುವೆ ಸಮನ್ವಯದ ಕೊರತೆ ಕಾಡಿದ್ದರಿಂದ ಈ ದುರಂತ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ. ಟಿಟಿಡಿ ಅಧಿಕಾರಿಗಳು ಮುಂಜಾಗ್ರತಾ ಕ್ರಮ ತೆಗೆದುಕೊಂಡಿರಲಿಲ್ಲ. ಪೊಲೀಸರ ಜತೆಗೆ ಸರಿಯಾಧ ಮಾಹಿತಿ ನೀಡದೇ ಇರುವುದೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
icon

(5 / 9)

ವೈಕುಂಠ ದ್ವಾರ ದರ್ಶನ ಟಿಕೆಟ್‌ಗಾಗಿ ನಿಂತಿದ್ದವರ ಪೈಕಿ ಕೆಳಕ್ಕೆ ಬಿದ್ದು ಕಾಲ್ತುಳಿತಕ್ಕೆ ಸಿಲುಕಿ ಗಾಯಗೊಂಡ ಮಹಿಳೆಯನ್ನು ಭದ್ರತಾ ಸಿಬ್ಬಂದಿ ಮತ್ತು ನಾಗರಿಕರು ಕೂಡಲೇ ವೈದ್ಯಕೀಯ ಚಿಕಿತ್ಸೆಗಾಗಿ ಸಾಗಿಸಿದರು.
icon

(6 / 9)

(PTI)

ತಿರುಪತಿ ಕಾಲ್ತುಳಿತಕ್ಕೆ ಸಿಲುಕಿ ಬಿದ್ದುಬಿಟ್ಟಿದ್ದ ವ್ಯಕ್ತಿಗೆ ಸಿಪಿಆರ್ ಮತ್ತು ಪ್ರಥಮ ಚಿಕಿತ್ಸೆ ನೀಡುವ ಕೆಲಸದಲ್ಲಿ ಪೊಲೀಸರು ಮತ್ತು ಸ್ವಯಂಸೇವಕರು ನಿರತರಾಗಿದ್ದರು
icon

(7 / 9)

ತಿರುಪತಿ ಕಾಲ್ತುಳಿತದ ವೇಳೆ ಗಾಯಗೊಂಡು ನೆಲದ ಮೇಲೆ ಬಿದ್ದುಹೋದ ಮಹಿಳೆ, ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ನಡೆಯಿತು. 
icon

(8 / 9)

ಆಂಬುಲೆನ್ಸ್ ಚಾಲಕರು ಸ್ಥಳದಲ್ಲಿ ಲಭ್ಯರಿಲ್ಲದೇ ಇದ್ದ ಕಾರಣ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ತಡವಾಯಿತು ಎಂಬ ಆರೋಪವೂ ಕೇಳಿಬಂತು. 
icon

(9 / 9)

ಇತರ ಗ್ಯಾಲರಿಗಳು