Hansika 105 Minutes: 34 ನಿಮಿಷ ಸಿಂಗಲ್ ಶಾಟ್, 105 ಮಿನಿಟ್ಸ್ ಸಿನಿಮಾದ ಭಯಾನಕ ಅನುಭವ ಬಿಚ್ಚಿಟ್ಟ ಹನ್ಸಿಕಾ ಮೋಟ್ವಾನಿ
Hansika 105 Minutes Movie: ಹನ್ಸಿಕಾ ಮೋಟ್ವಾನಿ ನಟನೆಯ 105 ಮಿನಿಟ್ಸ್ ಎಂಬ ಸಿನಿಮಾ ಇದೇ ಜನವರಿ 26ರಂದು ಚಿತ್ರಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಹನ್ಸಿಕಾ ಒಬ್ಬರೇ ನಟಿಸಿದ್ದಾರೆ. ಬೆನ್ನಹುರಿಯಲ್ಲಿ ನಡುಕ ಹುಟ್ಟಿಸುವ ಈ ಸಿನಿಮಾದ ಕುರಿತು ಮತ್ತು 34 ನಿಮಿಷದ ಸಿಂಗಲ್ ಶಾಟ್ನ ಶೂಟಿಂಗ್ ಅನುಭವವನ್ನು ಹನ್ಸಿಕಾ ಹೇಳಿದ್ದಾರೆ.
(1 / 6)
ರಾಜು ದೂಸ್ಸಾ ನಿರ್ದೇಶನದ ಹನ್ಸಿಕಾ ನಟನೆಯ 105 ಮಿನಿಟ್ಸ್ ಎಂಬ ಸಿನಿಮಾ ಇದೇ ಜನವರಿ 26ರಂದು ಬಿಡುಗಡೆಯಾಗಲಿದೆ. ಎದೆ ಝಿಲ್ಲೆನಿಸುವ ಹಾರರ್ ಸಿನಿಮಾ ಬಯಸುವವರು ಈ ಭಯಾನಕ ಸಿನಿಮಾ ನೋಡಬಹುದು.
(2 / 6)
ಈಗಾಗಲೇ ಈ ಸಿನಿಮಾದ ಟ್ರೈಲರ್ಲರ್ ಬಿಡುಗಡೆಯಾಗಿದ್ದು, ಭಯಾನಕ ಘಟನೆಗಳ ದೃಶ್ಯಗಳನ್ನು ತೋರಿಸಲಾಗಿದೆ. ಈ ಸಿನಿಮಾದ ಕ್ಯಾರೆಕ್ಟರ್ನಲ್ಲೇ ಟ್ರೇಲರ್ ಬಿಡುಗಡೆ ಮಾಡಿರುವುದು ವಿಶೇಷ. ಈ ಸಿನಿಮಾದ ಶೂಟಿಂಗ್ ಅನುಭವವನ್ನು ಹನ್ಸಿಕಾ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
(3 / 6)
ಒಂದೇ ಟೇಕ್ನಲ್ಲಿ 34 ನಿಮಿಷ ನಟಿಸಿರುವುದು ವಿಭಿನ್ನ ಅನುಭವ ನೀಡಿದೆ. ಇದು ಹಾರರ್ ಸಿನಿಮಾ. ಭಯಾನಕ ಅನುಭವ ಗ್ಯಾರಂಟಿ. ಒಬ್ಬಳೇ ನಟಿ, ಸಿಂಗಲ್ ಶಾಟ್ನಂತಹ ಅನುಭವ ನನಗೆ ಇದೇ ಮೊದಲು ಆಗಿದೆ. ಇನ್ನೊಂದು ವಾರದಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ ಎಂದು ಹನ್ಸಿಕಾ ಹೇಳಿದ್ದಾರೆ.
(4 / 6)
ಈ ಸಿನಿಮಾ ಹಾರರ್ ಘಟನೆಯನ್ನು ಹೊಂದಿದೆ. ಕೊಠಡಿಯೊಂದರಲ್ಲಿ ನಾಯಕಿಯನ್ನು ಯಾವುದೋ ಕಾಣದ ಶಕ್ತಿ ಪೀಡಿಸುತ್ತಿರುವುದು, ಆಕೆಯ ಕಾಲುಗಳಿಗೆ ಸರಪಣಿ ಹಾಕಿರುವುದು ಇತ್ಯಾದಿ ಅಂಶಗಳು ಈಗಾಗಲೇ ಟ್ರೈಲರ್ನಲ್ಲಿ ಕಾಣಿಸಿದೆ.
(5 / 6)
105 ಮಿನಿಟ್ಸ್ ಸಿನಿಮಾವು ಎದೆ ಝಿಲ್ಲೆನಿಸುವ ಹಾರರ್ ಸಿನಿಮಾವಾಗಿದೆ. ರಕ್ತಪಾತ, ಕ್ರೌರ್ಯ ಹೆಚ್ಚಿರುವ ಸಾಧ್ಯತೆಯಿದೆ. ಇಂಗ್ಲಿಷ್ ಹಾರರ್ ಸಿನಿಮಾಗಳನ್ನು ಇಷ್ಟಪಡುವವರು ಈ ತೆಲುಗು ಸಿನಿಮಾ ನೋಡಬಹುದು.
ಇತರ ಗ್ಯಾಲರಿಗಳು