ಬಜೆಟ್, ಸಂಭಾವನೆ, ಟಿಕೆಟ್, ಪ್ರಮೋಷನ್; ಪುಷ್ಪ 2 ದಿ ರೂಲ್ ಚಿತ್ರದ 8 ಆಸಕ್ತಿದಾಯಕ ಅಂಶಗಳು
- ಪುಷ್ಪ 2: ದಿ ರೂಲ್ ಚಿತ್ರ ಬಿಡುಗಡೆಯಾಗಿದೆ. ಪುಷ್ಟ: ದಿ ರೈಸ್‌ನ ಮುಂದುವರಿದ ಭಾಗವೇ ಪುಷ್ಪ 2. ಇದು ಪುಷ್ಪ (ಅಲ್ಲು ಅರ್ಜುನ್) ಮತ್ತು ಭನ್ವರ್ ಸಿಂಗ್ ನಡುವಿನ ಪೈಪೋಟಿಯ ಕಥೆಯಾಗಿ ಮುಂದುವರೆಯುತ್ತದೆ. ಚಿತ್ರಕ್ಕೆ ಜಾಗತಿಕವಾಗಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಲವು ಹೊಸತನಗಳಿಗೆ ಕಾರಣವಾದ ಚಿತ್ರದ ಆಸಕ್ತಿಕರ ಅಂಶಗಳನ್ನು ನೋಡೋಣ.

(1 / 8)
ಪುಷ್ಟ 2 ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹದ್ ಫಾಸಿಲ್, ಧನಂಜಯ್, ರಾವ್ ರಮೇಶ್, ಸುನಿಲ್ ಮತ್ತು ಅನಸೂಯಾ ಭಾರದ್ವಾಜ್ ನಟಿಸಿದ್ದಾರೆ. ಎಲ್ಲರೂ ಮೊದಲ ಭಾಗದ ತಮ್ಮ ಪಾತ್ರಗಳನ್ನು ಪುನರಾವರ್ತಿಸುತ್ತಿದ್ದಾರೆ.
(2 / 8)
500 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನೊಂದಿಗೆ, ಚಿತ್ರ ನಿರ್ಮಿಸಲಾಗಿದೆ. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದಾಗಿದೆ.
(3 / 8)
ಮೊದಲ ಭಾಗದಂತೆ, ಪುಷ್ಪ 2 ತನ್ನ ಥಯೇಟರ್ ರನ್ ಮುಗಿಸಿದ ನಂತರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಡಿಜಿಟಲ್ ಆಗಿ ಬಿಡುಗಡೆಯಾಗಲಿದೆ.
(4 / 8)
ನಟ ಅಲ್ಲು ಅರ್ಜುನ್ ಪುಷ್ಪ 3 ಬಗ್ಗೆ ಸುಳಿವು ನೀಡಿದ್ದಾರೆ. ಅದನ್ನು ಫ್ರಾಂಚೈಸಿಯಾಗಿ ಪರಿವರ್ತಿಸುವ ಗುರಿ ಹೊಂದಿದ್ದಾರೆ.
(5 / 8)
ಪಾಟ್ನಾದಲ್ಲಿ ಪುಷ್ಪಾ 2ರ ಟ್ರೈಲರ್ ಲಾಂಚ್ ಆಗಿತ್ತು. ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಚಲನಚಿತ್ರವು ಉತ್ತರ ಭಾರತದಲ್ಲಿ ತನ್ನ ಟ್ರೇಲರ್ ಅನ್ನು ಪ್ರಚಾರ ಮಾಡಿದೆ.
(6 / 8)
ಚಿತ್ರವು ಆಂಧ್ರಪ್ರದೇಶದಲ್ಲಿ ಅತ್ಯಧಿಕ ಟಿಕೆಟ್ ದರದ (944 ರೂಪಾಯಿ) ದಾಖಲೆಯನ್ನು ನಿರ್ಮಿಸಿತು. ರಾಜ್ಯ ಸರ್ಕಾರವು ಪ್ರಥಮ ಪ್ರದರ್ಶನಕ್ಕೆ ಈ ಬೆಲೆಯನ್ನು ಅನುಮೋದಿಸಿದೆ.
(HT_PRINT)(7 / 8)
ಗಣೇಶ್ ಆಚಾರ್ಯ ಅವರ ನೃತ್ಯ ನಿರ್ದೇಶನದ "ಕಿಸ್ಸಿಕ್" ಎಂಬ ವಿಶಿಷ್ಟ ಹಾಡಿನಲ್ಲಿ ಕನ್ನಡದ ನಟಿ ಶ್ರೀಲೀಲಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇತರ ಗ್ಯಾಲರಿಗಳು