Ramcharan meets Amit Shah: ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿದ ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ತೇಜ
ಆರ್‌ಆರ್‌ಆರ್ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಕ್ಕ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ ರಾಮ್‌ಚರಣ್ ತೇಜ ಮತ್ತು ಮೆಗಾಸ್ಟಾರ್ ಚಿರಂಜೀವಿ. ದೆಹಲಿಯ ಕಚೇರಿಗೆ ತೆರಳಿದ ರಾಮ್‌ಚರಣ್‌ಗೆ ಶಾಲು ಹೊದಿಸಿ ಸನ್ಮಾನಿಸಿದ್ದಾರೆ. ಈ ವೇಳೆ ಕೆಲ ಹೊತ್ತು ಸಿನಿಮಾ ಆಗುಹೋಗುಗಳ ಬಗ್ಗೆಯೂ ಮಾತನಾಡಿದ್ದಾರೆ.
(1 / 5)
95ನೇ ಅಕಾಡೆಮಿ ಪ್ರಶಸ್ತಿ ಸಮಾರಂಭಕ್ಕೆ ಇತ್ತೀಚೆಗಷ್ಟೇ ತೆರೆಬಿದಿತ್ತು. ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡಿಗೆ ಅತ್ಯುತ್ತಮ ಒರಿಜಿನಲ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಲಭಿಸಿತ್ತು. (twitter/ Amit Shah)
(2 / 5)
ಸಂಗೀತ ನಿರ್ದೇಶಕ ಕೀರವಾಣಿ ಮತ್ತು ಸಾಹಿತ್ಯ ಬರೆದಿದ್ದ ಚಂದ್ರಬೋಸ್‌ಗೆ ಆಸ್ಕರ್ ಲಭಿಸಿತ್ತು. ರಾಜಮೌಳಿ, ಜೂ. ಎನ್‌ಟಿಆರ್, ರಾಮ್ ಚರಣ್ ತೇಜ ಸೇರಿ ಚಿತ್ರತಂಡದ ಹಲವರು ಪ್ರಶಸ್ತಿ ಸಮಾರಂಭದಲ್ಲಿದ್ದರು. (twitter/ Amit Shah)
(3 / 5)
ಚಿತ್ರದ ಹಾಡಿಗೆ ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆ, ಇಡೀ ಭಾರತ ಸಂಭ್ರಮಿಸಿತ್ತು. ಆರ್‌ಆರ್‌ಆರ್ ಚಿತ್ರತಂಡಕ್ಕೆ ಶುಭಾಶಯಗಳ ಸುರಿಮಳೆಯನ್ನೇ ಸುರಿಸಿತ್ತು. (twitter/ Amit Shah)
(4 / 5)
ಇದೀಗ ಪ್ರಶಸ್ತಿ ಸ್ವೀಕರಿಸಿದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ ನಟ ರಾಮ್‌ಚರಣ್ ಮತ್ತವರ ತಂದೆ ಮೆಗಾಸ್ಟಾರ್ ಚಿರಂಜೀವಿ. (twitter/ Amit Shah)
(5 / 5)
ಅಮಿತ್ ಶಾ ಅವರ ದೆಹಲಿ ಕಚೇರಿಗೆ ತೆರಳಿದ ವೇಳೆಯಲ್ಲಿ ರಾಮ್‌ಚರಣ್‌ಗೆ ಅಭಿನಂದಿಸಿದ್ದಾರೆ. ಇದೇ ವೇಳೆ ಆಸ್ಕರ್ ಪ್ರಶಸ್ತಿಯ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. (twitter/ Amit Shah)
ಇತರ ಗ್ಯಾಲರಿಗಳು