Keerthy Suresh: ʻರೌಡಿ ಜನಾರ್ದನ್‌ʼ ಚಿತ್ರದ ಮೂಲಕ ವಿಜಯ್‌ ದೇವರಕೊಂಡಗೆ ಜೋಡಿಯಾಗಲಿದ್ದಾರೆ ಕೀರ್ತಿ ಸುರೇಶ್‌?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Keerthy Suresh: ʻರೌಡಿ ಜನಾರ್ದನ್‌ʼ ಚಿತ್ರದ ಮೂಲಕ ವಿಜಯ್‌ ದೇವರಕೊಂಡಗೆ ಜೋಡಿಯಾಗಲಿದ್ದಾರೆ ಕೀರ್ತಿ ಸುರೇಶ್‌?

Keerthy Suresh: ʻರೌಡಿ ಜನಾರ್ದನ್‌ʼ ಚಿತ್ರದ ಮೂಲಕ ವಿಜಯ್‌ ದೇವರಕೊಂಡಗೆ ಜೋಡಿಯಾಗಲಿದ್ದಾರೆ ಕೀರ್ತಿ ಸುರೇಶ್‌?

ರವಿ ಕಿರಣ್‌ ಕೋಲಾ ನಿರ್ದೇಶನದ ವಿಜಯ್‌ ದೇವರಕೊಂಡ ನಾಯಕನಾಗಿ ನಟಿಸಲಿರುವ ʻರೌಡಿ ಜನಾರ್ದನ್‌ʼ ಸಿನಿಮಾಕ್ಕೆ ನಾಯಕಿ ಯಾರು? ಟಾಲಿವುಡ್‌ ಅಂಗಳದಲ್ಲಿ ಈ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಕೆಲ ಮೂಲಗಳ ಪ್ರಕಾರ, ಕೀರ್ತಿ ಸುರೇಶ್‌ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಟಾಲಿವುಡ್‌ ನಟ ವಿಜಯ್‌ ದೇವರಕೊಂಡ ನಾಯಕನಾಗಿ ನಟಿಸಲಿರುವ ರೌಡಿ ಜನಾರ್ದನ್‌ ಚಿತ್ರಕ್ಕೆ ನಾಯಕಿ ಯಾರು? ಈ ಪ್ರಶ್ನೆಗೀಗ ಉತ್ತರವೊಂದು ಸಿಕ್ಕಿದೆ. ಕೀರ್ತಿ ಸುರೇಶ್ ಈ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಮಾಹಿತಿ ಇದೆ.
icon

(1 / 5)

ಮಹಾನಟಿ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ಕೀರ್ತಿ ಸುರೇಶ್ ಒಟ್ಟಿಗೆ ನಟಿಸಿದ್ದರು.  ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಸಾವಿತ್ರಿಯಾಗಿ, ವಿಜಯ್ ದೇವರಕೊಂಡ ಮತ್ತು ಸಮಂತಾ ಪತ್ರಕರ್ತರಾಗಿ ಕಾಣಿಸಿಕೊಂಡಿದ್ದರು.
icon

(2 / 5)

ಕೀರ್ತಿ ಸುರೇಶ್ ಕೊನೆಯದಾಗಿ ತೆಲುಗಿನಲ್ಲಿ 'ಭೋಲಾ ಶಂಕರ್' ಚಿತ್ರದಲ್ಲಿ ನಟಿಸಿದ್ದರು. ಸುಮಾರು ಎರಡು ವರ್ಷಗಳ ಬಳಿಕ 'ರೌಡಿ ಜನಾರ್ದನ್' ಚಿತ್ರದ ಮೂಲಕ ಟಾಲಿವುಡ್‌ಗೆ ಮರಳುತ್ತಿದ್ದಾರೆ ಕೀರ್ತಿ.
icon

(3 / 5)

ಇತ್ತೀಚೆಗೆ 'ಬೇಬಿ ಜಾನ್' ಚಿತ್ರದ ಮೂಲಕ ಬಾಲಿವುಡ್‌ಗೆ ಮರು ಪ್ರವೇಶ ಪಡೆದಿದ್ದರು. ತೇರಿ ಚಿತ್ರದ ರಿಮೇಕ್ ಆಗಿದ್ದ ಈ ಚಿತ್ರ ನಿರೀಕ್ಷೆಯಂತೆ ಯಶಸ್ವಿಯಾಗಲಿಲ್ಲ.
icon

(4 / 5)

ಸದ್ಯ ರಿವಾಲ್ವರ್‌ ರೀಟಾ, ಕನ್ನಿವೇಡಿ ಸಿನಿಮಾಗಳಲ್ಲಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿ ರಣಬೀರ್‌ ಕಪೂರ್‌ ಅವರ ಜತೆಗಿನ ಚಿತ್ರದಲ್ಲಿಯೂ ನಾಯಕಿಯಾಗಿದ್ದಾರೆ ಎಂಬ ಟಾಕ್‌ ಇದೆ.
icon

(5 / 5)

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು