ಬಾಲಿವುಡ್‌ನ ಸ್ಟಾರ್ ನಟನ ಜತೆಗಿನ ಬಿಗ್ ಸಿನಿಮಾ ಆಫರ್‌ಅನ್ನು ಮುಲಾಜಿಲ್ಲದೆ ತಿರಸ್ಕರಿಸಿದ ನಟಿ ಶ್ರೀಲೀಲಾ! ಕಾರಣ ಹೀಗಿದೆ PHOTOS
ಈ ಹಿಂದೆ ದಕ್ಷಿಣದ ನಾಯಕಿಯರು ಬಾಲಿವುಡ್ ಕಡೆಗೆ ಹೆಚ್ಚಿನ ಒಲವು ತೋರುತ್ತಿದ್ದರು. ತಮ್ಮ ವೃತ್ತಿಜೀವನದಲ್ಲಿ ಕನಿಷ್ಠ ಒಂದಾದರೂ ಬಾಲಿವುಡ್ ಸಿನಿಮಾ ಮಾಡಬೇಕು ಎಂದು ಕನಸು ಕಟ್ಟಿರುತ್ತಿದ್ದರು. ಆದರೆ ಈಗ ಆ ಕಾಲ ಬದಲಾಗಿದೆ. ದಕ್ಷಿಣದ ನಾಯಕಿಯರು ಬಾಲಿವುಡ್‌ನಿಂದ ಸಿನಿಮಾ ಅವಕಾಶಗಳನ್ನು ನಿರಾಕರಿಸುತ್ತಿದ್ದಾರೆ.
(1 / 5)
ಶ್ರೀಲೀಲಾ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ ಎಂಬ ವದಂತಿಗಳು ಕೆಲವು ಸಮಯದಿಂದ ಕೇಳಿಬರುತ್ತಲೇ ಇವೆ. ನಟ ವರುಣ್ ಧವನ್ ಅವರ ಹೊಸ ಚಿತ್ರದಲ್ಲಿ ನಾಯಕಿಯಾಗಿ ಶ್ರೀಲೀಲಾ ಅವರನ್ನು ನಾಯಕಿಯನ್ನಾಗಿ ಫೈನಲ್ ಮಾಡಲಾಗಿದೆ ಎಂದೂ ಹೇಳಲಾಗುತ್ತಿದೆ.(instagram\ Sreeleela)
(2 / 5)
ಇದೀಗ ಅದೇ ಬಾಲಿವುಡ್ ಆಫರ್‌ಅನ್ನು ಮುಲಾಜಿಲ್ಲದೆ ತಿರಸ್ಕರಿಸಿದ್ದಾರೆ ಶ್ರೀಲೀಲಾ. ಅದಕ್ಕೆ ಕಾರಣ; ಚಿತ್ರದಲ್ಲಿ ಕಥೆ ಮತ್ತು ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲದಿರುವುದು. ಹಾಗಾಗಿ ಚೊಚ್ಚಲ ಬಾಲಿವುಡ್ ಚಿತ್ರದಿಂದ ಹೊರಗುಳಿದಿದ್ದಾರವರು.
(3 / 5)
ಕಳೆದ ಒಂದು ವರ್ಷದ ಅವಧಿಯಲ್ಲಿ ಸಾಲು ಸಾಲು ಸೋಲಿನ ರುಚಿ ಕಂಡಿರುವ ಶ್ರೀಲೀಲಾ, ಗಟ್ಟಿ ಕಥೆಯ ಹುಡುಕಾಟದಲ್ಲಿದ್ದಾರೆ. ಅದು ಟಾಲಿವುಡ್ ಆಗಲಿ, ಬಾಲಿವುಡ್ ಆಗಿರಲಿ. ಅದರಂತೆ, ಹಿಂದಿ ಸಿನಿಮಾದಲ್ಲಿ ಹೆಚ್ಚು ಪ್ರಾಮುಖ್ಯತೆ ಇರದ ಪಾತ್ರವನ್ನು ರಿಜೆಕ್ಟ್ ಮಾಡಿದ್ದಾರವರು.
(4 / 5)
ಶ್ರೀಲೀಲಾ ಪ್ರಸ್ತುತ ತೆಲುಗಿನಲ್ಲಿ ರವಿತೇಜ ಅವರೊಂದಿಗೆ ಒಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೊದಲು ಧಮಾಕಾ ಚಿತ್ರದಲ್ಲಿ ರವಿತೇಜ ಮತ್ತು ಶ್ರೀಲೀಲಾ ಕಾಂಬಿನೇಷನ್ ಹಿಟ್ ಆಗಿತ್ತು.
ಇತರ ಗ್ಯಾಲರಿಗಳು