ಹೀರೋಗಳಿಗೆ ಸುಂದರ ಹುಡುಗಿರೇ ಬೇಕು ಎಂದಿದ್ದ ಆಂಕರ್ ಅನಸುಯಾ ಭಾರದ್ವಾಜ್ ಬತ್ತಳಿಕೆಯಿಂದ ಬಂದ್ವು ಬೋಲ್ಡ್ PHOTOS
ನಟಿ, ನಿರೂಪಕಿ ಅನಸೂಯಾ ಭಾರದ್ವಾಜ್ ಇತ್ತೀಚೆಗೆ ಗುಂಗುರು ಕೂದಲಿನೊಂದಿಗೆ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗಿನ ಹೊಸ ಶೋವೊಂದರ ಜಡ್ಜ್ ಆಗಿ ಅನಸೂಯಾ ಎಂಟ್ರಿಕೊಟ್ಟಿದ್ದು, ಖಡಕ್ ಗ್ಲಾಮರಸ್ ಆಗಿಯೇ ಮಿಂಚಿದ್ದಾರೆ. ಇಲ್ಲಿವೆ ನೋಡಿ ಫೋಟೋಸ್.
(1 / 7)
<p>ತೆಲುಗಿನ ಆಂಕರ್ ಅನಸೂಯಾ ಭಾರದ್ವಾಜ್ ನಿರೂಪಕಿಯಾಗಿ, ನಟಿಯಾಗಿಯೂ ಟಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದಾರೆ.
(All Photos @ Anasuya Bharadwaj Instagram)(2 / 7)
ಜೂನಿಯರ್ ಎನ್ಟಿಆರ್ ಅಭಿನಯದ ನಾಗಾ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅನಸೂಯಾ ಭಾರದ್ವಾಜ್ ನಂತರ ತೆಲುಗು ರಾಜ್ಯಗಳಲ್ಲಿ ಜಬರ್ದಸ್ತ್ ಕಾರ್ಯಕ್ರಮದ ನಿರೂಪಕಿಯಾಗಿ ಜನಪ್ರಿಯರಾದರು.
(3 / 7)
ಹಾಸ್ಯ ಕಾರ್ಯಕ್ರಮ ಜಬರ್ದಸ್ತ್ ಮೂಲಕ ಜನಪ್ರಿಯರಾದ ಅನಸೂಯಾ ಭಾರದ್ವಾಜ್ ನಂತರ ಚಿತ್ರರಂಗಕ್ಕೆ ಮರಳಿದರು. ಸೊಗ್ಗಡೆ ಚಿನ್ನಿ ನಯನ ಚಿತ್ರದಲ್ಲಿ ಅನಸೂಯಾ ಭಾರದ್ವಾಜ್ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡು ಫೇಮಸ್ ಆದರು.
(4 / 7)
ಅನಸೂಯಾ ಭಾರದ್ವಾಜ್ ಕ್ಷಣಂ, ರಂಗಸ್ಥಲಂ, ಯಾತ್ರಾ, ಕಥಾತಿ, ಥ್ಯಾಂಕ್ಯೂ ಬ್ರದರ್ ಮುಂತಾದ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಟಿಸಿದ್ದಾರೆ.
(5 / 7)
ಇತ್ತೀಚೆಗೆ 'ರಜಾಕರ್' ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದ ಅನಸೂಯಾ ಪ್ರಸ್ತುತ 'ಅರಿ' ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ,
(6 / 7)
ಅನಸೂಯಾ ಸಿನಿಮಾ ಮಾತ್ರವಲ್ಲದೆ, ತೆಲುಗಿನ ಸ್ಟಾರ್ ಮಾ ವಾಹಿನಿಯ ಕಿರಾಕ್ ಬಾಯ್ಸ್ ಖಿಲಾಡಿ ಗರ್ಲ್ಸ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಎಂಟ್ರಿಕೊಟ್ಟಿದ್ದಾರೆ. ಹಸಿರು ಉಡುಗೆಯಲ್ಲಿ ಗುಂಗುರು ಕೂದಲಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.
ಇತರ ಗ್ಯಾಲರಿಗಳು