‘ಟಿಲ್ಲು ಸ್ವ್ಕೇರ್’ ಬ್ಲಾಕ್‌ಬಸ್ಟರ್ ಆಗಿದ್ದೇ ತಡ, ತುಟಿಗೆ ತುಟಿ ಬೆಸೆದಿದ್ದ ಅನುಪಮಾ ಪರಮೇಶ್ವರನ್ ಸಂಭಾವನೆ ಈಗ ಡಬಲ್!
Anupama Parameswaran: ಅನುಪಮಾ ಪರಮೇಶ್ವರನ್ ಟಿಲ್ಲು ಸ್ಕ್ವೇರ್ ಚಿತ್ರದಲ್ಲಿ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ತೆಲುಗು ಪ್ರೇಕ್ಷಕರಿಗೆ ಶಾಕ್ ನೀಡಿದ್ದರು. ಲಿಪ್ ಲಾಕ್ ದೃಶ್ಯಗಳಲ್ಲಿ ಎದುರಾಗಿ, ಗ್ಲಾಮರಸ್ ಅವತಾರದಲ್ಲೂ ಮಿಂಚಿದ್ದರು. ಈಗ ಇದೇ ಚಿತ್ರದ ಯಶಸ್ಸಿನ ಬಳಿಕ ಸಂಭಾವನೆಯನ್ನೂ ಏರಿಸಿಕೊಂಡಿದ್ದಾರೆ.
(1 / 5)
ಟಿಲ್ಲು ಸ್ಕ್ವೇರ್ ಬಾಕ್ಸ್ ಆಫೀಸ್ ನಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ಇದು 130 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ವರ್ಷ ತೆಲುಗಿನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಈ ಚಿತ್ರವೂ ಒಂದಾಗಿದೆ.
(instagram/ Anupama Parameswaran )(2 / 5)
ಟಿಲ್ಲು ಸ್ಕ್ವೇರ್ ಚಿತ್ರದ ಮೂಲಕ ಅನುಪಮಾ ಪರಮೇಶ್ವರನ್ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂಬ ಮಾತೂ ಕೇಳಿಬರುತ್ತಿವೆ. ತೆಲುಗಿನಲ್ಲಿ ಅನುಪಮಾ ಅವರ ಕ್ರೇಜ್ ಗಮನದಲ್ಲಿಟ್ಟುಕೊಂಡು, ನಿರ್ಮಾಪಕರು ಅವರು ಕೇಳಿದ ಮೊತ್ತವನ್ನೇ ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
(3 / 5)
ಟಿಲ್ಲು ಸ್ಕ್ವೇರ್ ಸಿನಿಮಾಕ್ಕೂ ಮೊದಲು, ಪ್ರತಿ ಚಿತ್ರಕ್ಕೆ 50 ರಿಂದ 60 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು ಅನುಪಮಾ. ಈಗ ಟಾಲಿವುಡ್ ಮೂಲಗಳು ಹೇಳುವಂತೆ ಪ್ರತಿ ಚಿತ್ರಕ್ಕೆ 1 ಕೋಟಿ ರೂ.ಗಿಂತ ಹೆಚ್ಚು ಸಂಭಾವನೆ ಕೇಳುತ್ತಿದ್ದಾರೆ ಈ ನಟಿ.
(4 / 5)
ಈ ವರ್ಷದ ನಾಲ್ಕು ತಿಂಗಳಲ್ಲಿ ಅನುಪಮಾ ಪರಮೇಶ್ವರನ್ ಅಭಿನಯದ ಮೂರು ಚಿತ್ರಗಳು ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಿವೆ. ಆ ಪೈಕಿ ಟಿಲ್ಲು ಸ್ಕ್ವೇರ್ ತೆಲುಗಿನಲ್ಲಿ ಯಶಸ್ವಿಯಾದರೆ, ರವಿ ತೇಜಾ ಜತೆಗಿನ 'ಈಗಲ್' ಸಿನಿಮಾ ಪ್ಲಾಪ್ ಆಯಿತು.
ಇತರ ಗ್ಯಾಲರಿಗಳು