ಆಗ ಸಾಯಿ ತೇಜ ಈಗ ಪ್ರಿಯಾಂಕಾ ಸಿಂಗ್; ಹೆಣ್ಣಿನ ಪಾತ್ರದಲ್ಲಿ ನಟಿಸುತ್ತಲೇ ಹೆಣ್ಣಾಗಿ ಬದಲಾದ ನಟ
ಪುರುಷರಾಗಿ ಜನಿಸಿ ಹೆಣ್ಣಿನ ಭಾವನೆಗಳನ್ನು ಹೊತ್ತು, ಕೊನೆಗೆ ಹೆಣ್ಣಗಿ ಬದಲಾಗಿರುವ ಅನೇಕರನ್ನು ನಾವು ನೋಡಿದ್ದೇವೆ. ಹಣವಿದ್ದವರು ಲಿಂಗ ಪರಿವರ್ತನೆ ಮಾಡಿಸಿಕೊಂಡರೆ, ಅಷ್ಟು ಹಣ ಖರ್ಚು ಮಾಡಲು ಸಾಧ್ಯವಾಗದವರು ಮನಸ್ಸಿನ ಭಾವನೆಗಳೊಂದಿಗೆ, ತಮಗಿಷ್ಟವಾದ ಡ್ರೆಸ್‌ಗಳನ್ನು ಧರಿಸಿ ಬದುಕುತ್ತಾರೆ.
(1 / 14)
ಈ ಫೋಟೋದಲ್ಲಿರುವುದು ಸಾಯಿ ತೇಜ ಅಲಿಯಾಸ್ ಪ್ರಿಯಾಂಕಾ ಸಿಂಗ್. ತೇಜ ಆಗಿ ಹುಟ್ಟಿದ ಈತ ಈಗ ಲಿಂಗ ಪರಿವರ್ತನೆ ಮಾಡಿಸಿಕೊಂಡು ಹೆಣ್ಣಾಗಿ ಬದಲಾಗಿದ್ದಾರೆ. (PC: Priyanka Singh Instagram)
(2 / 14)
ಕೆಲವು ದಿನಗಳ ಹಿಂದಷ್ಟೇ ತೆಲುಗು ಜಬರ್ದಸ್ತ್ ಕಾರ್ಯಕ್ರಮದ ಸಾಯಿಲೇಖ ಸುದ್ದಿಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು. ಆ ಸಾಯಿಲೇಖ ಹಾಗೂ ಸಾಯಿತೇಜ ಬೆಸ್ಟ್ ಫ್ರೆಂಡ್ಸ್.
(3 / 14)
ಸಾಯಿ ತೇಜ ಹುಟ್ಟಿ ಬೆಳೆದದ್ದು ಹೈದರಾಬಾದ್‌ನಲ್ಲಿ. ಬಾಲ್ಯದಿಂದಲೂ ತೇಜ ಹುಡುಗರಿಗಿಂತ ಹೆಚ್ಛಾಗಿ ಹುಡುಗಿಯರೊಂದಿಗೆ ಹೆಚ್ಛಾಗಿ ಬೆರೆಯುತ್ತಿದ್ದರು.
(4 / 14)
ತಮ್ಮ ಮನಸ್ಸಿನಲ್ಲಿದ್ದ ಭಾವನೆಗಳನ್ನು ಯಾರಿಗೂ ಹೇಳದೆ ತಮ್ಮಲ್ಲೇ ಬಚ್ಚಿಟ್ಟುಕೊಂಡಿದ್ದ ಸಾಯಿ ತೇಜ 2013ರಲ್ಲಿ ತೆಲುಗಿನ ಜಬರ್ದಸ್ತ್ ಶೋ ಮೂಲಕ ವೀಕ್ಷಕರಿಗೆ ಪರಿಚಯವಾದರು.
(5 / 14)
ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ಎಂಬ ಮಾತಿನಂತೆ. ಸಾಯಿ ತೇಜಗೆ ಜಬರ್ಸಸ್ತ್ ಕಾರ್ಯಕ್ರಮದಲ್ಲಿ ಲೇಡಿ ಗೆಟಪ್ ಧರಿಸುವ ಅವಕಾಶ ದೊರೆಯಿತು.
(6 / 14)
ಸಾಯಿ ತೇಜ ಎಷ್ಟೋ ಬಾರಿ ಲೇಡಿ ಗೆಟಪ್‌ನಲ್ಲೇ ಟಿಕ್ ಟಾಕ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಈ ವಿಡಿಯೋಗಳಿಗೆ ಜನರಿಂದ ಒಳ್ಳೆ ಪ್ರತಿಕ್ರಿಯೆ ದೊರೆಯುತ್ತಿತ್ತು.
(7 / 14)
2015 ರಲ್ಲಿ ತಮ್ಮ 20ನೇ ವಯಸ್ಸಿಗೆ ಸಾಯಿ ತೇಜ ಲಿಂಗ ಪರಿವರ್ತನೆ ಮಾಡಿಸಿಕೊಂಡರು. ನನ್ನ ನಿರ್ಧಾರವನ್ನು ನಾನು ಯಾರಿಗೂ ಹೇಳಿರಲಿಲ್ಲ. ಮೊದಲು ನಾನು ದೇವಸ್ಥಾನಕ್ಕೆ ಹೋಗಿ ದೇವರಲ್ಲಿ ಪ್ರಾರ್ಥನೆ ಮಾಡಿದೆ. 3 ದಿನಗಳ ಮುಂಚೆ ನನ್ನ ಕ್ಲೋಸ್ ಫ್ರೆಂಡ್ಸ್‌ಗೆ ವಿಚಾರ ಹೇಳಿದೆ.
(8 / 14)
ನನ್ನ ನಿರ್ಧಾರ ಕೇಳಿ ಎಲ್ಲರೂ ಶಾಕ್ ಆದರು. ನನ್ನ ಮನಸ್ಸು ಬದಲಿಸಲು ಪ್ರಯತ್ನಿಸಿದರು. ಆದರೆ ನಾನು ಯಾರ ಮಾತನ್ನೂ ಕೇಳಲು ರೆಡಿ ಇರಲಿಲ್ಲ ಎಂದು ಸಾಯಿ ತೇಜ ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
(9 / 14)
ತೇಜ, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅಭಿಮಾನಿ. ಹಾಗೇ ಅವರ ಮನೆತನದ ಹೆಸರು ಸಿಂಗ್ ಆಗಿದ್ದರಿಂದ ತಮ್ಮ ಹೆಸರನ್ನು ಪ್ರಿಯಾಂಕಾ ಸಿಂಗ್ ಎಂದು ಬದಲಿಸಿಕೊಂಡರು. ಕ್ಲೋಸ್ ಫ್ರೆಂಡ್ಸ್, ಇವರನ್ನು ಪಿಂಕಿ ಎಂದು ಕರೆಯುತ್ತಾರೆ.
(10 / 14)
ಲಿಂಗ ಪರಿವರ್ತನೆ ಮಾಡಿಸಿಕೊಂಡ ನಂತರ ಪ್ರಿಯಾಂಕಾ ಸಿಂಗ್ ಸಿನಿಮಾ, ಕಿರುತೆರೆಯಲ್ಲಿ ನಟಿಯಾಗಿ ಸಕ್ರಿಯರಾಗಿದ್ದಾರೆ.
(11 / 14)
ಬಾಲಕೃಷ್ಣುಡು, ಮನಸ್ಯನೊಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಿಂದಿ ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ.
(12 / 14)
2021ರಲ್ಲಿ ಪ್ರಿಯಾಂಕಾ ಸಿಂಗ್ ತೆಲುಗಿನ ಬಿಗ್ ಬಾಸ್ ಸೀಸನ್ 5ರಲ್ಲಿ ಭಾಗವಹಿಸಿದ್ದರು. ಟಾಪ್ 7ವರೆಗೂ ಉಳಿದಿದ್ದು ನಂತರ ಎಲಿಮಿನೇಟ್ ಆಗಿದ್ದರು. ಆ ಸಮಯದಲ್ಲಿ ತಮ್ಮ ತಂದೆಗೆ ವಿಡಿಯೋ ಕಾಲ್ ಮಾಡಿ ನನ್ನನ್ನು ಕ್ಷಮಿಸುವಂತೆ ಕಣ್ಣೀರಿಟ್ಟಿದ್ದರು.
(13 / 14)
ಪ್ರಿಯಾಂಕಾ ಸಿಂಗ್, ಇಟ್ಸ್ ಮಿ ಪ್ರಿಯಾಂಕಾ ಹೆಸರಿನ ಯೂಟ್ಯೂಬ್ ಕೂಡಾ ಆರಂಭಿಸಿದ್ದಾರೆ. ಹೋಂ ಟೂರ್, ಮೇಕಪ್, ಅಡುಗೆ ಸೇರಿದಂತೆ ಅನೇಕ ವಿಡಿಯೋಗಳನ್ನು ತಮ್ಮ ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಇತರ ಗ್ಯಾಲರಿಗಳು